Author: UllalaVani

Kannada News From Coastal Karnataka

ಉಳ್ಳಾಲ, ಜು.18: ತಲಪಾಡಿಯ 88 ವರ್ಷದ ಶ್ರೀಮತಿ ಭವಾನಿಯವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಅವರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್ ಮುಖಂಡೆ ಶ್ರೀಮತಿ ಸುರೇಖಾ ಚಂದ್ರಹಾಸ್ ಅವರ ತಾಯಿ. ಮೃತರು ಇಬ್ಬರು ಪುತ್ರಿಯರು, ಅಳಿಯಂದಿರು, ಮೂವರು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶ್ರೀಮತಿ ಭವಾನಿಯವರ ನಿಧನಕ್ಕೆ ಸಚಿವ ಯು.ಟಿ. ಖಾದರ್ ಸೇರಿದಂತೆ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Read More

ಮುಡಿಪು, ಜು.18: ರೈತ ಕುಡ್ಲ ಪ್ರತಿಷ್ಠಾನದ ಆಶ್ರಯದಲ್ಲಿ, ಕುರ್ನಾಡು ಗ್ರಾಮ ಪಂಚಾಯತ್, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಲಯನ್ಸ್ ಕ್ಲಬ್ ಮುಡಿಪು ಇವರ ಸಹಯೋಗದಲ್ಲಿ ‘ಹಲಸು–2026’ ಆಹಾರೋತ್ಸವವು ಜುಲೈ 24, 25 ಮತ್ತು 26ರಂದು ಮುಡಿಪು ಆಡಿಟೋರಿಯಂನಲ್ಲಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಆಹಾರೋತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮುಡಿಪುವಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಹಲಸು ಮೇಳವನ್ನು ಆಯೋಜಿಸಲಾಗುತ್ತಿದ್ದು, ಹಲಸಿನ ವೈವಿಧ್ಯಮಯ ಆಹಾರ ಪದಾರ್ಥಗಳು, ಸಾಂಪ್ರದಾಯಿಕ ಕಲೆ, ಗ್ರಾಮೀಣ ಆಟಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿವೆ. ಮೇಳದಲ್ಲಿ ಚೆನ್ನೆಮಣೆ ಆಟ, ಆಟಿಕಳೆಂಜ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಹಲಸಿನ ಬಿಸಿ ಬಿಸಿ ಹೋಳಿಗೆ, ಜಿಲೇಬಿ, ಗರಿಗರಿ ಹಪ್ಪಳ, ಚಿಪ್ಸ್, ಹಲಸಿನ ಕಬಾಬ್, ಮುಲ್ಕ, ಹಲಸಿನ ಶೀರಾ, ಪಾಯಸ, ಜಾಮ್, ನೈಸರ್ಗಿಕ ಹಣ್ಣುಗಳ ಐಸ್‌ಕ್ರೀಂ ಸೇರಿದಂತೆ ವಿವಿಧ ಹಲಸಿನ ಖಾದ್ಯಗಳನ್ನು ಸವಿಯುವ ಅವಕಾಶ ಇರಲಿದೆ. ಇದರ ಜೊತೆಗೆ…

Read More

ಮಂಗಳೂರು, ಜು.18: ಸಂಬಾರತೋಟ ಕುಟುಂಬದ ಸದಸ್ಯರ ಸೌಹಾರ್ದತೆ, ಒಗ್ಗಟ್ಟು ಹಾಗೂ ಕುಟುಂಬ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ‘ಸಂಬಾರತೋಟ ಫ್ಯಾಮಿಲಿ ಸ್ಪೋರ್ಟ್ಸ್ ಡೇ – 2026’ ಕಾರ್ಯಕ್ರಮವು ಜುಲೈ 19ರಂದು (ಭಾನುವಾರ) ಇನೋಳಿ ಲಾಲ್‌ಪತ್ತಾರ್ ರೆಸಾರ್ಟ್‌ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಕುಟುಂಬದ ಹಿರಿಯರಾದ ಅಹ್ಮದ್ ಅಜ್ಜ ಹಾಗೂ ಬೀಚಿಮ್ಮ ಅಜ್ಜಿ ಅವರ ಕುಟುಂಬದ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಗಲಿದ ಹಿರಿಯರಾದ ಅರಬಿ ಅಜ್ಜ, ಮೊಯ್ದೀನ್ ಅಜ್ಜ, ಔರಾನ್ ಅಜ್ಜ, ಇಸ್ಮಾಯಿಲ್ ಅಜ್ಜ, ಹಸೈನ್ ಅಜ್ಜ, ಮೂಸಾ ಅಜ್ಜ, ಇಬ್ರಾಹಿಂ ಅಜ್ಜ, ಖತೀಜುಮ್ಮ, ಉಮ್ಮನ್ಹಿಯುಮ್ಮ ಹಾಗೂ ಬೀಫಾತುಮ್ಮ ಅವರ ನೆನಪಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ಮನರಂಜನಾ ಆಟಗಳು, ಮಕ್ಕಳಿಗಾಗಿ ವಿಶೇಷ ಸ್ಪರ್ಧೆಗಳು ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. ಇದರೊಂದಿಗೆ ಕುಟುಂಬ ಸದಸ್ಯರ ಪರಸ್ಪರ…

Read More

ಸುಳ್ಯ: ಮಧ್ಯದ ಅಮಲಿನಲ್ಲಿದ್ದ ನಾಲ್ವರು ಸ್ನೇಹಿತರು ಪರಸ್ಪರ ಹೊಡೆದಾಡಿಕೊಂಡು ರಸ್ತೆಯಲ್ಲೇ ಎಳೆದಾಟ ನಡೆಸಿದ ಘಟನೆ ಜುಲೈ 17ರಂದು ಸಂಜೆ ಸುಳ್ಯದ ಬಾಲೆಮಕ್ಕಿ ಟ್ಯಾಕ್ಸಿ ಕಾರು ನಿಲ್ದಾಣದ ಸಮೀಪ ನಡೆದಿದೆ. ಹೊಡೆದಾಟದಲ್ಲಿ ತೊಡಗಿದ್ದ ನಾಲ್ವರೂ ಕೂಲಿ ಕಾರ್ಮಿಕರಾಗಿದ್ದು, ದಿನದ ಕೆಲಸ ಮುಗಿಸಿಕೊಂಡು ವಾಪಸಾಗುವ ವೇಳೆ ಮದ್ಯ ಸೇವಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸಣ್ಣ ಮಾತಿನ ಚಕಮಕಿ ತೀವ್ರಗೊಂಡು ಪರಸ್ಪರ ಹೊಡೆದಾಟಕ್ಕೆ ತಿರುಗಿದೆ. ಅಮಲಿನಲ್ಲಿದ್ದ ನಾಲ್ವರು ರಸ್ತೆಯಲ್ಲೇ ಪರಸ್ಪರ ತಳ್ಳಾಟ, ಎಳೆದಾಟ ನಡೆಸಿ ಗಲಾಟೆ ಮಾಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ಗಮನಿಸಿದ ಸ್ಥಳೀಯ ಟ್ಯಾಕ್ಸಿ ಚಾಲಕರು ತಕ್ಷಣ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದರು. ಬಳಿಕ ನಾಲ್ವರಿಗೂ ಬುದ್ಧಿವಾದ ಹೇಳಿ ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯಿಂದಾಗಿ ಕೆಲಕಾಲ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ನಂತರ ಪರಿಸ್ಥಿತಿ ಸಹಜಗೊಂಡಿತು.

Read More

ಮಂಗಳೂರು, ಜು. 18 : ನಗರದ ಬೆಂದೂರ್‌ನ ಸೇಂಟ್ ಆಗ್ನೆಸ್ ಕಾಲೇಜು ಸಮೀಪದ ಬಸ್ ತಂಗುದಾಣದ ಬಳಿ ಕಳೆದ ಹಲವು ದಿನಗಳಿಂದ ಒಡೆದ ಗಾಜಿನ ಚೂರುಗಳು ಬಿದ್ದಿದ್ದು, ಇದುವರೆಗೆ ಅವುಗಳನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಪ್ರಮುಖ ಬಸ್ ತಂಗುದಾಣಗಳಲ್ಲಿ ಒಂದಾಗಿರುವ ಈ ಸ್ಥಳದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಬಸ್‌ಗಾಗಿ ಕಾಯುತ್ತಾರೆ. ಆದರೆ ತಂಗುದಾಣದ ಪಕ್ಕ ಹಾಗೂ ಜನರು ನಿಲ್ಲುವ ಸ್ಥಳದಲ್ಲೇ ಗಾಜಿನ ಚೂರುಗಳು ಹರಡಿಕೊಂಡಿರುವುದರಿಂದ ಅಪಾಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರ ಪ್ರಕಾರ, ಕಳೆದ ಹಲವು ದಿನಗಳಿಂದ ಗಾಜಿನ ಚೂರುಗಳು ಅದೇ ರೀತಿ ಬಿದ್ದಿದ್ದರೂ ಸಂಬಂಧಪಟ್ಟ ಇಲಾಖೆ ಅಥವಾ ಮಹಾನಗರ ಪಾಲಿಕೆ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಈ ಗಾಜಿನ ಚೂರುಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.ಮಳೆಗಾಲದಲ್ಲಿ ಗಾಜಿನ ಚೂರುಗಳು ನೀರಿನಲ್ಲಿ ಕಾಣಿಸದೇ ಇರುವ ಕಾರಣ ಅಪಾಯ ಇನ್ನಷ್ಟು ಹೆಚ್ಚಾಗುವ…

Read More

ಕೊಚ್ಚಿ, ಜು. 18 : ಕೇರಳದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆ ‘ಆಪರೇಷನ್ ತೂಫಾನ್’ ಅಡಿಯಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಹೆರಾಯಿನ್ ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ ಇದುವರೆಗೆ ದಾಖಲಾಗಿರುವ ಅತಿದೊಡ್ಡ ಹೆರಾಯಿನ್ ವಶಪಡಿಸಿಕೊಳ್ಳುವಿಕೆ ಪ್ರಕರಣದ ತನಿಖೆ ವೇಳೆ ಈ ಬಂಧನ ನಡೆದಿದೆ. ಬಂಧಿತನನ್ನು ಅಸ್ಸಾಂನ ನಾಗಾಂವ್ ಜಿಲ್ಲೆಯ ನಿವಾಸಿ ಶಫೀಕುಲ್ ಇಸ್ಲಾಂ (38) ಎಂದು ಗುರುತಿಸಲಾಗಿದ್ದು, ಮಾದಕವಸ್ತು ಕಳ್ಳಸಾಗಣೆ ವಲಯದಲ್ಲಿ ಆತ ‘ದಾದಾ’ ಎಂಬ ಹೆಸರಿನಿಂದ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರ ನೇತೃತ್ವದ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.ಕೆಲ ದಿನಗಳ ಹಿಂದೆ ಅಂಗಮಾಲಿಯಲ್ಲಿ ಮೂವರು ಅಂತರರಾಜ್ಯ ವಲಸೆ ಕಾರ್ಮಿಕರನ್ನು ಬಂಧಿಸಿದ್ದ ಪೊಲೀಸರು, ಅವರಿಂದ ಸುಮಾರು 609 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದರು. ಇದು ಎರ್ನಾಕುಲಂ ಜಿಲ್ಲೆಯಲ್ಲಿ ಇದುವರೆಗೆ ನಡೆದ ಅತಿದೊಡ್ಡ ಹೆರಾಯಿನ್ ವಶಪಡಿಸಿಕೊಳ್ಳುವಿಕೆ ಎಂದು ಪೊಲೀಸರು…

Read More

ಬಂಟ್ವಾಳ, ಜು. 18 ಆರೋಪಿಯೋರ್ವನ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಠಾಣಾ ಅ.ಕ್ರ 95/2026 U/S 78 126,103 ಬಿ.ಎನ್.ಎಸ್, 2023 ಮತ್ತು ಕಲಂ: 25, 27, ಆರ್ಮ್ಸ್ ಆಕ್ಟ್ ಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣ ಕುರಿತು ವಿವಿಧ ವಾಟ್ಸಾಪ್ ಗ್ರೂಪ್‌ಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಲಾಗಿರುತ್ತದೆ. ಈ ರೀತಿ ಫೋಟೋ ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂಧಿಸಿದಂತೆ 1) troll_master.__Instagram Account 2) Yuva Belthangady Whatsappgroup 3) PPadmaraj Padmarajpari Whatsapp group 4) Padmaraj Padmaraj pariWhatsapp group 5)Yuva CongressBelthangady Whatsappgroup 6) Facts and Justice Whatsappgroup ಗಳ ವಿರುದ್ಧ ಅ.ಕ್ರ:…

Read More

ಮಲಪ್ಪುರಂ,: ಮಿಕ್ಸ್‌ಚರ್ ತಿನ್ನುತ್ತಿದ್ದ ವೇಳೆ ಕಡಲೆಕಾಯಿ ಗಂಟಲಲ್ಲಿ ಸಿಲುಕಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ವೆಂಗರಾ ಪ್ರದೇಶದ ಕುನ್ನುಂಪುರಂನಲ್ಲಿ ನಡೆದಿದೆ. ಬಾಲಕ ಮನೆಯಲ್ಲಿ ಮಿಕ್ಸ್‌ಚರ್ ತಿನ್ನುತ್ತಿದ್ದ ವೇಳೆ ಅದರಲ್ಲಿದ್ದ ಕಡಲೆಕಾಯಿ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿದೆ. ಪರಿಣಾಮ ಬಾಲಕನಿಗೆ ಉಸಿರಾಡಲು ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಕುಟುಂಬದವರು ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Read More

ನಮ್ಮ ಜೀವನದಲ್ಲಿ ತಂದೆ, ತಾಯಿ ಜೊತೆ ಗುರುಗಳ ಪಾ ತ್ರವೂ ಮಹತ್ವದ್ದಾಗಿರುವುದರಿಂದ ಮೂವರ ಹೆಸರಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದು ಹಳೆಕೋಟೆ ಮಸ್ಜಿದುಲ್ ಕರೀಂ ಅಧ್ಯಕ್ಷ ಮೊಹಮ್ಮದ್ ತ್ವಾಹ ಹೇಳಿದರು. ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ವಿದ್ಯಾಸಂಸ್ಥೆಯಲ್ಲಿ ನಡೆದ ವನಮಹೋತ್ಸವ, ವಿದ್ಯಾರ್ಥಿ ಸರ್ಕಾರದ ಪದಗ್ರಹಣ, ವಿವಿಧ ಸಂಘಗಳ ಉದ್ಘಾಟನೆ, ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲ ನಗರಸಭಾ ಪೌರಾಯುಕ್ತ ಸಂತೋಷ್ ಎಸ್.ಡಿ. ಮಾತನಾಡಿ, ನಾವಿಂದು ಪ್ರಕೃತಿ ಉಳಿಸುವ ಕಾರ್ಯ ಮಾಡಿದರೆ ಮುಂದಿನ ಪೀಳಿಗೆಯನ್ನು ಪ್ರಕೃತಿ ಉಳಿಸುತ್ತದೆ. ಮುಂದಿನ ಜೀವನ ರೂಪಿಸಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.ಯೂನಿಯನ್ ಬ್ಯಾಂಕ್ ಮುಖ್ಯ ಕಚೇರಿಯ ಮಾರುಕಟ್ಟೆ ವ್ಯವಸ್ಥಾಪಕಿ ಗ್ರೇಸಿ ಲೋಬೋ, ಫಳ್ನೀರ್ ಶಾಖಾ ವ್ಯವಸ್ಥಾಪಕ ಅಭಿಲಾಷ್ ಟಿ., ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್,…

Read More

ಪಜೀರು : ಸರ್ವೋದಯ ಯುವಕ ಮಂಡಲ (ರಿ.) ಸುದರ್ಶನ ನಗರ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಲೋಹಿತ್ ಪಜೀರು ಸರ್ವಾನುಮತದಿಂದ ಆಯ್ಕೆಗೊಂಡರು.ವಾರ್ಷಿಕ ಮಹಾಸಭೆಯು ನಿರ್ಮಲ್ ಭಟ್ ಇವರ ಅಧ್ಯಕ್ಷತೆಯಲ್ಲಿ ಮಂಡಲದಲ್ಲಿ ಜರುಗಿತು. ಇದೇ ವೇಳೆ ಉಪಾಧ್ಯಕ್ಷರು – ಉದಯ ಕುಮಾರ್ ಸುದರ್ಶನ್ ನಗರಕಾರ್ಯದರ್ಶಿ – ರಮೇಶ್ ಪಜೀರು, ಜೊತೆ ಕಾರ್ಯದರ್ಶಿ – ಮೋಹನ್ ಕಾಪಿಕಾಡ್, ಕೋಶಾಧಿಕಾರಿ – ಭವಾನಿ ಶಂಕರ್ ಕಂಬಳಪದವು, ಲೆಕ್ಕ ಪರಿಶೋಧಕರು – ಯಶೋಧರ್ ಜೋಗಿ ಬೆಟ್ಟುಸಾಂಸ್ಕೃತಿಕ ಕಾರ್ಯದರ್ಶಿ – ಸತೀಶ್ ಪಜೀರು, ಕ್ರೀಡಾ ಕಾರ್ಯದರ್ಶಿ – ಗುಣಪಾಲ್, ಸಂಘಟನಾ ಕಾರ್ಯದರ್ಶಿ – ಮಿಥುನ್ ಪಜೀರು , ಮನೋಜ್ ಜೋಗಿಬೆಟ್ಟು ಆಯ್ಕೆಗೊಂಡರು,.ಗೌರವ ಸಲಹೆಗಾರರಾಗಿ – ಸೇಸಪ್ಪ ಟೈಲರ್, ವಸಂತ ಜಿ, ತಾರಾನಾಥ ವರ್ಮಾ, ಜಯಾನಂದ ಶೆಟ್ಟಿ, ಮತ್ತು ನಿರ್ಮಲ್ ಭಟ್ ಇದ್ದರು.

Read More