Author: UllalaVani

Kannada News From Coastal Karnataka

ಮಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ (ಬೆಂಗಳೂರು)ಯ ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ “ಆಧುನಿಕ ಗೋಡಂಬಿ ಕೃಷಿ ತಂತ್ರಜ್ಞಾನಗಳು ಮತ್ತು ನೆಡುತೋಪು ಬೆಳೆಗಳಿಗೆ ಪರ್ಯಾಯ ಸಾವಯವ ಗೊಬ್ಬರಗಳ ಬಳಕೆ” ಕುರಿತ ವಿಚಾರ ಸಂಕಿರಣವು ಶನಿವಾರ (ಜು.18) ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರಿನಲ್ಲಿ ಬೆಳಿಗ್ಗೆ 10 ಕ್ಕೆ ನಡೆಯಲಿದೆ.ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಲಿದ್ದಾರೆ.  ಫುಡ್‌ ಚೈನ್‌ ಕ್ಯಾಂಪೇನ್‌ ಸಹಯೋಗದಲ್ಲಿ  ಕಾರ್ಯಕ್ರಮ ನಡೆಯಲಿದ್ದು, ಫುಡ್‌ ಚೈನ್‌  ಸ್ಥಾಪಕರು ಹಾಗೂ  ಕರ್ನಾಟಕ ರಾಜ್ಯ ರೈತ ಸಂಘ ಯುವವೇದಿಕೆ ಅಧ್ಯಕ್ಷರು  ಯತೀಶ್‌ ತುಕರಾಂ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. 1968ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಕೃಷಿ ತಂತ್ರಜ್ಞರ ಸಂಸ್ಥೆಯು ರಾಜ್ಯದಾದ್ಯಂತ ಸುಮಾರು 6,000ಕ್ಕೂ ಅಧಿಕ ಕೃಷಿ ಹಾಗೂ ಕೃಷಿ ಸಂಬಂಧಿತ ಪದವೀಧರರನ್ನು ಆಜೀವ ಸದಸ್ಯರನ್ನಾಗಿ ಹೊಂದಿದೆ. ರಾಜ್ಯದಲ್ಲಿ ಈಗಾಗಲೇ 22 ಜಿಲ್ಲಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಘಟಕವು 23ನೇ ಘಟಕವಾಗಿ…

Read More

ಮಂಗಳೂರು: ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ WP No.11083/2026 (GM–POLICE) ರಿಟ್ ಅರ್ಜಿಯಲ್ಲಿ ಕರ್ನಾಟಕ ರಾಜ್ಯ, ಮಂಗಳೂರು ನಗರ ಪೊಲೀಸ್ ಆಯುಕ್ತರು, ಕೊಣಾಜೆ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಆರು ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿದೆ. 2026ರ ಜುಲೈ 14ರಂದು ಮಾನ್ಯ ನ್ಯಾಯಮೂರ್ತಿ ಶ್ರೀ ಸುರಜ್ ಗೋವಿಂದರಾಜ್ ಅವರ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳ ಪರ ವಕೀಲರು ನೋಟಿಸ್ ಸ್ವೀಕರಿಸಿದ್ದಾರೆ. ಪ್ರಕರಣವನ್ನು 2026ರ ಜುಲೈ 29ರಂದು ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಅರ್ಜಿದಾರರಾದ ಆಶ್ವಿನಿ ಪೂಜಾರಿ ಅವರು, ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ವರದಿಯ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಇಂಜಿನಿಯರ್‌ಗಳು ಹಾಗೂ ಇತರ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 ಮತ್ತು 106 ಸೇರಿದಂತೆ ಅನ್ವಯವಾಗುವ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ…

Read More

ಕಿನ್ನಿಗೋಳಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ದೇವಾಡಿಗ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ 201-ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮಾರ್ಗದರ್ಶನದಂತೆ, ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ .ಎಂ. ರೈ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಅವರ ಶಿಫಾರಸಿನಂತೆ ನೇಮಕ ನಡೆದಿದೆ.ಕಳೆದ 20 ವರ್ಷಗಳಿಂದ ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯರಾಗಿ, ಪಂಚಾಯತ್ ಉಪಾಧ್ಯಕ್ಷರಾಗಿ, ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುವ ಸುರೇಶ್ ದೇವಾಡಿಗ ಅವರು ಪಕ್ಷ ಸಂಘಟನೆಯ ಜೊತೆಗೆ ಊರಿನ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪಂಜ ಕೊಯಿಕುಡೆ ಗ್ರಾಮದ…

Read More

ಮಂಗಳೂರು: ‘ಭಾರತ್ ಜೋಡೋ ಯುವ ಸಂಘ’ದ ಕುರಿತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಯು ರಾಜ್ಯದ ಇಡೀ ಯುವ ಸಮುದಾಯಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದ ಯುವಕರನ್ನು ಒಗ್ಗೂಡಿಸಿ, ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಯನ್ನು ರಾಜಕೀಯ ದುರುದ್ದೇಶದಿಂದ ಟೀಕಿಸಿರುವುದು ಆರ್. ಅಶೋಕ ಅವರ ಯುವ ವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ. ವಿರೋಧ ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯುವ ಸಮುದಾಯದ ಆಶೋತ್ತರಗಳನ್ನು ಲೇವಡಿ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರಿಗೆ ಶೋಭಿಸುವುದಿಲ್ಲ. ಸಮಾಜವನ್ನು ಜೋಡಿಸುವ ಕೆಲಸವನ್ನು ಸಹಿಸದ ಬಿಜೆಪಿ ನಾಯಕರು, ಸದಾ ಒಡೆಯುವ ರಾಜಕಾರಣಕ್ಕಷ್ಟೇ ಆದ್ಯತೆ ನೀಡುತ್ತಿದ್ದಾರೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಆರ್. ಅಶೋಕ ಅವರು ತಕ್ಷಣವೇ ರಾಜ್ಯದ ಯುವ ಸಮುದಾಯದ ಕ್ಷಮೆಯಾಚಿಸಬೇಕು. ಯುವಕರ ಏಳಿಗೆಯನ್ನು ಸಹಿಸದ ಇಂತಹ ನಾಯಕರಿಗೆ ಮುಂಬರುವ ದಿನಗಳಲ್ಲಿ ರಾಜ್ಯದ ಯುವಶಕ್ತಿ ತಕ್ಕ ಪಾಠ ಕಲಿಸಲಿದೆ. ಯುವಕರ…

Read More

ಬಂಟ್ವಾಳ: ಬಿಸಿ ರೋಡ್‌ನಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ ಬಜರಂಗದಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಕೇಶವ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಯುವತಿ ಹತ್ಯೆ ಪ್ರಕರಣದ ಆರೋಪಿಯ ತಿರುಚಿದ ಭಾವಚಿತ್ರದೊಂದಿಗೆ, ಆತ ಬಜರಂಗದಳದ ಮುಖಂಡ ಚೇತನ ಹಾಗೂ ಬಜರಂಗದಳದ ಶಾಖೆಯಲ್ಲಿ ತರಬೇತಿ ಪಡೆದಿದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಆರೋಪಿಯ ತಿರುಚಿದ ಭಾವಚಿತ್ರ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ವಿವಿಧ ವಾಟ್ಸ್‌ಆ್ಯಪ್ ಗುಂಪುಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದ್ದು, ಇದರಿಂದ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಹಾಗೂ ಕೋಮು ಉದ್ವಿಗ್ನತೆ ಮತ್ತು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ…

Read More

 ಬಿ.ಸಿ.ರೋಡ್‌ :  ಸಂಬಂಧಿ ಇಯುವಕ, ತನಗೆ ನಿತ್ಯ ಕಿರುಕುಳ ನೀಡುತ್ತಿದ್ದ ಚೇತನ್‌ ಕೆಎಸ್‌ ಆರ್‌ ಟಿಸಿ ಬಸ್ಸಿನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದಾನೆ ಅನ್ನುತ್ತಾ ಮನೆಮಂದಿಗೆ ಯುವತಿ ಲಾವಣ್ಯ ಮೊಬೈಲ್‌ ಮೂಲಕ ತಿಳಿಸುತ್ತಿದ್ದಂತೆ  ತಲವಾರು ಎತ್ತಿದ್ದನು ಎಂಬುದು ಬಸ್ಸಿನಲ್ಲಿದ್ದ ಪ್ರತ್ಯಕ್ಷದರ್ಶಿಗಳು  ಮಾಹಿತಿ ಹಂಚಿಕೊಂಡಿದ್ದಾರೆ. ಕಲ್ಲಡ್ಕದಲ್ಲಿ ಕೆಲಸ ಮುಗಿಸಿ ಬಂಟ್ವಾಳ ಕಕ್ಯೆಪದವು ನಿವಾಸಿ ಲಾವಣ್ಯ(೨೫) ವಾಪಸ್ಸಾಗುತ್ತಿದ್ದಾಗ, ಅದೇ ಬಸ್ಸನ್ನು ಸಂಬಂಧಿ ಚೇತನ್‌ ಕೂಡಾ ಹತ್ತಿದ್ದಾನೆ. ಬೇರೆ ಕಡೆಯಲ್ಲಿ ಸೀಟು ಇದ್ದರೂ, ಲಾವಣ್ಯ ಸಮೀಪವೇ ಬಂದು ಕಿರಾತಕ ಕುಳಿತಿದ್ದನು. ಬಿ.ಸಿ.ರೋಡ್‌ ಹತ್ತಿರವಾಗುತ್ತಿದ್ದಂತೆ  ಗಾಬರಿಗೊಂಡಿದ್ದ ಲಾವಣ್ಯ ಮೊಬೈಲ್‌ ಮೂಲಕ ಮನೆಮಂದಿಗೆ ಕರೆ ಮಾಡಿ ಆತ ತನ್ನ ಬಳಿಯೇ ಕುಳಿತಿದ್ದಾನೆ ಅಂದಿದ್ದಾಳೆ. ಅಷ್ಟರಲ್ಲಿ   ತನ್ನಲ್ಲಿದ್ದ ತಲವಾರು ಹೊರತೆಗೆದ ಚೇತನನ್ನು ಕಂಡು ಬೆಚ್ಚಿಬಿದ್ದ ಲಾವಣ್ಯ, ಬಸ್ಸಿನಿಂದ ಇಳಿಯಲು ಮುಂದಾಗಿದ್ದಾಳೆ. ಆಕೆ ಇಳಿಯುತ್ತಿದ್ದಂತೆ  ಸಾರ್ವಜನಿಕರೆದುರೇ ಆಕೆಯನ್ನು ಅಟ್ಟಾಡಿಸಿಕೊಂಡು  ತಲೆ ಮತ್ತು ಬೆನ್ನಿನ ಭಾಗಕ್ಕೆ ಯದ್ವಾತದ್ವ ಕಡಿದು  ಹತ್ಯೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ಸೆರೆಹಿಡಿದಿದ್ದಾರೆ.  ಕೊನೇ ಘಳಿಗೆಯಲ್ಲಿ  ಲಾವಣ್ಯಳಿಗೆ…

Read More

ಮಂಗಳೂರು, ಜು.16 : ಜುಲೈ 6 ರಿಂದ ಕಾಣೆಯಾಗಿರುವ ಜಾರ್ಖಂಡ್ ಮೂಲದ 35 ವರ್ಷದ ವ್ಯಕ್ತಿಯ ಬಗ್ಗೆ ಮಾಹಿತಿ ಕೋರಿ ಕೊಣಾಜೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ, ಸಮೀರ್ ದತ್ ಅವರ ಪುತ್ರ ಬಿಸಲ್ ದತ್, ಕೊಣಾಜೆಯ ಅಭಯ ಆಶ್ರಮದ ಪಕ್ಕದಲ್ಲಿರುವ ರಾಮಣ್ಣ ಅವರ ಕ್ಯಾಂಟೀನ್‌ನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು.ಜುಲೈ 6 ರಂದು, ಬಿಸಲ್ ದತ್ ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಅಭಯ ಆಶ್ರಮದಲ್ಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 12.30 ರ ಸುಮಾರಿಗೆ, ಅವರು ಅಸೈಗೋಲಿಯಲ್ಲಿರುವ ಬ್ಯಾಂಕ್‌ಗೆ ಹೋಗುತ್ತಿರುವುದಾಗಿ ಮತ್ತು ಶೀಘ್ರದಲ್ಲೇ ಹಿಂತಿರುಗುವುದಾಗಿ ಇತರರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ. ಆದರೆ, ಅವರು ಹಿಂತಿರುಗಲಿಲ್ಲ ಮತ್ತು ಅಂದಿನಿಂದ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಪತ್ನಿ ಪೂಜಾ ದತ್ ದೂರು ನೀಡಿದ್ದು, ವಿವಿಧ ಸ್ಥಳಗಳಲ್ಲಿ ಅವರನ್ನು ಹುಡುಕಿದರು, ಸಂಬಂಧಿಕರನ್ನು ಸಂಪರ್ಕಿಸಿದರೂ, ಸ್ನೇಹಿತರನ್ನು ಸಂಪರ್ಕಿಸಿ ವಿಚಾರಿಸಿದರೂ ಅವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎಂದು…

Read More

ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಹೈದರ್ ಕೈರಂಗಳ ಅವರು ನೇಮಕಗೊಂಡಿರುವುದು ಅವರ ಸಂಘಟನಾ ಸಾಮರ್ಥ್ಯ, ಜನಸೇವೆಯ ಬದ್ಧತೆ ಹಾಗೂ ಪಕ್ಷದ ಮೇಲಿನ ನಿಷ್ಠೆಗೆ ಸಂದ ಗೌರವವಾಗಿದೆ. ಸಾಮಾಜಿಕ, ರಾಜಕೀಯ ಹಾಗೂ ಜನಪರ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಅವರು, ಪಕ್ಷದ ಸಂಘಟನೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ನೇಮಕದೊಂದಿಗೆ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿದೆ. ಅವರ ನಾಯಕತ್ವದಲ್ಲಿ ಪಕ್ಷವು ಹೊಸ ಚೈತನ್ಯವನ್ನು ಪಡೆದು ಜನಸೇವೆಯ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲಿದೆ. ಪಕ್ಷದ ಸಂಘಟನೆ ಹಾಗೂ ಜನಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೈದರ್ ಕೈರಂಗಳ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಹಲವಾರು ಮುಖಂಡರು ಮತ್ತು ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ. ಹೊಸ ಜವಾಬ್ದಾರಿಯ ಮೂಲಕ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಇನ್ನಷ್ಟು…

Read More

ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾದಲ್ಲಿ ಒಂದು ದಿನದ ಮೌಲ್ಯಶಿಕ್ಷಣ ತರಬೇತಿ ಕಾರ್ಯಾಗಾರವು ರಜತ್ ಶೈಲೇಶ್ ಲೋಬೊ ನೇತೃತ್ವದಲ್ಲಿ ಒಟ್ಟು 12 ಮಂದಿಯ ತಂಡದಿಂದ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವು ನಡೆಯಿತು. ದೀಪ ಬೆಳಗಿಸುವುದರೊಂದಿಗೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರು ಮತ್ತು ಉರ್ವ ಇಮ್ಯಾನಿಕ್ ಚರ್ಚ್ ಧರ್ಮ ಗುರುಗಳಾದ ವಂ ಗುರು ಬೆಂಜಮೀನ್ ಪಿಂಟೊರವರು ನೆರವೇರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಉತ್ತಮ ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿ ಹಾಗೂ ಈ ಕಾರ್ಯಗಾರದ ಸದುಪಯೋಗವನ್ನು ಪಡೆದು ಉತ್ತಮ ಮೌಲ್ಯಗಳನ್ನು ಅಳವಡಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಗಾರ ನಡೆಸಿಕೊಡಲು ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಅಲೋಶಿಯಸ್ ಡಿಸೋಜರವರು ಸ್ವಾಗತಿಸಿ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡು ಮೌಲ್ಯಯುತ ಜೀವನ ನಡೆಸೋಣ ಎಂಬುದಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಜತ್ ಶೈಲೇಶ್ ಲೋಬೊ , ಶಾಲೆಯ ಹಿರಿಯ ಶಿಕ್ಷಕಿ ಲವೀನಾ ಡಿಕುನ್ಹಾ, ಶಾಲಾ…

Read More

ಮಂಗಳೂರು, ಜು.15: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ ನಡೆಯಲಿರುವ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ಹಾಗೂ ಸಂಘಟನಾ ಕಾರ್ಯಕ್ರಮಗಳು ನಡೆದವು. ಈ ಪ್ರಯುಕ್ತ ಶರವು ರಾಧಾಕೃಷ್ಣ ದೇವಸ್ಥಾನದಲ್ಲಿ ಶ್ರೀ ಗಣಪತಿ ದೇವರ ವಿಗ್ರಹದ ಮುಹೂರ್ತ ಸಮಾರಂಭವು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಡಾ. ಆಶಾಜ್ಯೋತಿ ರೈ ದಂಪತಿ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಬಳಿಕ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಕೃಷ್ಣಪ್ರಸಾದ್ ರೈ, ಶೆಡ್ಡೆ ಮಂಜುನಾಥ ಭಂಡಾರಿ ಹಾಗೂ ಬಾಲಕೃಷ್ಣ ಶೆಟ್ಟಿ ಲಾನ್ಸ್ ವೇ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ…

Read More