ಬೆಂಗಳೂರು, ಜು.22: ದೇಶಾದ್ಯಂತ ಮತ್ತೆ ಕೊರೋನಾ, ಡೆಂಗ್ಯೂ ಹಾಗೂ H1N1 ನಂತಹ ವೈರಲ್ ರೋಗಗಳ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ, ಭಯಕ್ಕಿಂತ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಯ ನೀಡಿದ್ದಾರೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಲಸಿಕೆ ಹಾಗೂ ಸಾರ್ವಜನಿಕ ಆರೋಗ್ಯದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, “ಸಾವಿರ ವರ್ಷ ಕಳೆದರೂ ಈ ವೈರಸ್ ಇದ್ದೇ ಇರುತ್ತದೆ. ಕೆಲವೊಂದು ವೈರಸ್‌ಗಳು ಗಾಳಿಯಲ್ಲಿ ನಿರಂತರವಾಗಿ ಇರುತ್ತವೆ. ನಾವು ಟೆಸ್ಟಿಂಗ್ ಹೆಚ್ಚಿಸಿದಾಗ ಕೆಲವೊಂದು ಪ್ರಕರಣಗಳು ಪಾಸಿಟಿವ್ ಬಂದೇ ಬರುತ್ತವೆ. ಇದಕ್ಕಾಗಿ ಯಾರೂ ಭಯಪಡುವ ಅಗತ್ಯವಿಲ್ಲ” ಎಂದರು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗ ಬೇಗ ತಗುಲುತ್ತದೆ. ವೈರಸ್‌ಗಿಂತ ನಾವು ಗಟ್ಟಿಯಾಗಬೇಕು ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು…
Author: UllalaVani
ಬಂಟ್ವಾಳ, ಜು. 22 : ಫರಂಗಿಪೇಟೆಯ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಬಂಟ್ವಾಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್‌ಪಿ) ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.ಜುಲೈ 12ರ ರಾತ್ರಿ ಫರಂಗಿಪೇಟೆಯ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ದುಷ್ಕರ್ಮಿಗಳು ಕಟ್ಟಡದ ಮೇಲ್ಛಾವಣಿಯನ್ನು ಕೊರೆದು ಬ್ಯಾಂಕ್ ಒಳನುಗ್ಗಿದ್ದರು. ಆದರೆ ಬ್ಯಾಂಕ್‌ನ ಲಾಕರ್ ತೆರೆಯಲು ವಿಫಲರಾದ ಅವರು ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡದೇ ಸ್ಥಳದಿಂದ ಪರಾರಿಯಾಗಿದ್ದರು.ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಮಹತ್ವದ ಸುಳಿವು ದೊರೆತ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.ಘಟನೆ ನಡೆದ ದಿನದ ಮರುದಿನ ಎರಡನೇ ಶನಿವಾರದ ರಜೆ ಹಿನ್ನೆಲೆ ಬ್ಯಾಂಕ್ ಮುಚ್ಚಲಾಗಿತ್ತು. ಹೀಗಾಗಿ ಶನಿವಾರ ರಾತ್ರಿ ಮತ್ತು ಭಾನುವಾರದ ನಡುವಿನ…
ನವದೆಹಲಿ, ಜು. 22 : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಹಾಗೂ ಸಂಸತ್ತಿನಲ್ಲಿ ಗೊಂದಲ ಸೃಷ್ಟಿಸಲು ವಿದ್ಯಾರ್ಥಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.”ನೀಟ್ ವಿಚಾರವಾಗಿ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರೂ, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಚರ್ಚೆಯನ್ನು ಬಿಟ್ಟು ರಾಜಕೀಯ ನಾಟಕಕ್ಕೆ ಆದ್ಯತೆ ನೀಡಿದೆ. ನಾವು ವಿದ್ಯಾರ್ಥಿಗಳಿಗೆ ಬರಿ ಘೋಷಣೆಗಳನ್ನು ನೀಡುವುದಲ್ಲ. ಅವರಿಗೆ ನಿಖರ ಉತ್ತರಗಳು, ಶೈಕ್ಷಣಿಕ ಸುಧಾರಣೆಗಳು ಮತ್ತು ಹೊಣೆಗಾರಿಕೆಯನ್ನು ತಲುಪಿಸುವ ಅಗತ್ಯವಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣ…
ಬಳ್ಳಾರಿ, ಜುಲೈ 22 : ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಿನ್ನೆ (ಜುಲೈ 16) ರಾತ್ರಿ ನಡೆದಿದೆ. ನಬಿ ರಸೂಲ್ ಮೃತ ವ್ಯಕ್ತಿಯಾಗಿದ್ದು, ದುರ್ದೈವ ಅಂದರೆ ಮದುವೆಯ ರಿಸೆಪ್ಷನ್ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಇವರ ಉಸಿರು ನಿಂತಿದೆ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋಗಿದ್ದ ರಸೂಲ್ ಶವವಾಗಿ ಪತ್ತೆಯಾಗಿದ್ದಾರೆ. ನಬಿ ರಸೂಲ್ ವಿಚ್ಛೇದಿತ ಮಹಿಳೆಯೋರ್ವಳನ್ನು ಪ್ರೀತಿಸುತ್ತಿದ್ದು, 15 ದಿನಗಳ ಹಿಂದೆ ಆಕೆಯನ್ನು ಕರೆದೊಯ್ದಿದ್ದರು. ಕೆಲವು ದಿನಗಳ ಬಳಿಕ ಇಬ್ಬರು ಮನೆಗೆ ವಾಪಸ್ ಆಗಿದ್ದರು. ಈ ವೇಳೆ ರಸೂಲ್ ಸಂಬಂಧಿಕರು ಒಪ್ಪಿ ಇವರ ಮದುವೆ ಮಾಡಿಸಿದ್ದರು. ನಿನ್ನೆ ಮನೆಯಲ್ಲಿಯೇ ರಸೂಲ್ ಮದುವೆ ನಡೆದಿತ್ತು. ಸಂಭ್ರಮದಿಂದ ಮದುವೆ ಮತ್ತು ರಿಸೆಪ್ಷನ್ ಕಾರ್ಯಕ್ರಮ ನಡೆದ ಕೆಲ ಸಮಯದ ಬಳಿಕ ಅಂದರೆ, ರಾತ್ರಿ 11.30ರ ಸುಮಾರಿಗೆ ಸ್ನೇಹಿತ ಕರೆದ ಅಂತಾ ರಸೂಲ್ ಹೊರಹೋಗಿದ್ದರು. ಆದರೆ ಅವರು ರಾತ್ರಿ 2 ಗಂಟೆ ಆದ್ರೂ ಬಂದಿರಲಿಲ್ಲ. ಹೀಗಾಗಿ ಮನೆ ಸುತ್ತ…
ಮಂಗಳೂರು/ಉಡುಪಿ, ಜು. 22 : ಸಾಮಾನ್ಯವಾಗಿ ರಾಜ್ಯದ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಗಣನೀಯವಾಗಿ ಕೊರತೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ವರ್ಷದ ಜನವರಿ 1ರಿಂದ ಜುಲೈ 19ರವರೆಗೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ 39 ಶೇಕಡಾ ಮಳೆ ಕೊರತೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯಲ್ಲಿ 1,929.8 ಮಿ.ಮೀ. ಮಳೆ ಬೀಳಬೇಕಾಗಿದ್ದರೆ, ಕೇವಲ 1,174.9 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 2,203.4 ಮಿ.ಮೀ. ಸಾಮಾನ್ಯ ಮಳೆಯ ಬದಲಾಗಿ 1,348.2 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಶೇ.39ರಷ್ಟು ಕೊರತೆ ಕಂಡುಬಂದಿದೆ.ಭತ್ತದ ನಾಟಿ ಮತ್ತು ಕೃಷಿ ಚಟುವಟಿಕೆಗಳಿಗೆ ಅತ್ಯಂತ ಮಹತ್ವದ ಜೂನ್ ತಿಂಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ದಕ್ಷಿಣ ಕನ್ನಡದಲ್ಲಿ ಜೂನ್ ತಿಂಗಳಲ್ಲಿ 57 ಶೇಕಡಾ, ಉಡುಪಿಯಲ್ಲಿ 50 ಶೇಕಡಾ ಮಳೆ ಕೊರತೆ ದಾಖಲಾಗಿದ್ದು, ಇದು ರೈತರ…
ಟೋಂಕ್, ಜು. 21 : ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ. ಬಳಿಕ ಚಿರತೆ ಮದ್ಯದಂಗಡಿಯೊಳಗೆ ಆಶ್ರಯ ಪಡೆದಿದ್ದು, ಸುಮಾರು ಐದು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಅದನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. ಸೋಮವಾರ ಬೆಳಗ್ಗೆ ಸುಮಾರು 8.45ರ ವೇಳೆಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಮಾಲಿ ಸ್ಥಳಕ್ಕೆ ತೆರಳಿದಾಗ, ಚಿರತೆ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಕಾಲಿಗೆ ಗಾಯಗೊಳಿಸಿತು.ಬಳಿಕ ಚಿರತೆ ಅಲ್ಲಿಂದ ಸುಮಾರು 400 ಮೀಟರ್ ದೂರದಲ್ಲಿರುವ ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿತು. ಅಲ್ಲಿನ ಮದ್ಯದಂಗಡಿ ಎದುರು ಕುಳಿತಿದ್ದ ಫತೇಹ್ ಲಾಲ್ ಕೋಲಿ ಅವರ ಮೇಲೂ ದಾಳಿ ನಡೆಸಿದ ಚಿರತೆ, ನಂತರ ನೇರವಾಗಿ ಅಂಗಡಿಯೊಳಗೆ ನುಗ್ಗಿತು. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರ ಮೂಗು…
ಮಂಜೇಶ್ವರ, ಜು. 21 : ಮಂಜೇಶ್ವರ ಸಮೀಪದ ಉಪ್ಪಳದ ಜೋಡುಕಲ್ಲು-ಮಡಂದೂರು ದೇರಂಬಳದಲ್ಲಿ ಅಡಿಕೆ ಮರದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ದಾಟುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರು ನದಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯುವಕನ ಸಮಯೋಚಿತ ಸಾಹಸದಿಂದ ವಿದ್ಯಾರ್ಥಿನಿಯ ಜೀವ ಉಳಿದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಿಶ್ಮಿತಾ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ನಿಶ್ಮಿತಾ ಅವರು ತಮ್ಮ ಸಹೋದರಿ ಸುಷ್ಮಿತಾ ಅವರೊಂದಿಗೆ ಬಸ್‌ನಿಂದ ಇಳಿದು ಮೀಂಜ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿದ್ದ ಅಡಿಕೆ ಮರದ ತಾತ್ಕಾಲಿಕ ಸೇತುವೆಯನ್ನು ಇಬ್ಬರೂ ಕೈಹಿಡಿದು ಜಾಗರೂಕತೆಯಿಂದ ದಾಟುತ್ತಿದ್ದ ವೇಳೆ ನಿಶ್ಮಿತಾ ಅವರು ಆಯತಪ್ಪಿ ಕೆಳಗೆ ಹರಿಯುತ್ತಿದ್ದ ನದಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ದೇರಂಬಳದ ಉದಯ ಕುಮಾರ್ ಶೆಟ್ಟಿ ಯಾವುದೇ ಕ್ಷಣವೂ ವ್ಯರ್ಥ ಮಾಡದೆ ನದಿಗೆ ಧುಮುಕಿದರು. ಅಪಾಯವನ್ನು ಲೆಕ್ಕಿಸದೆ ಹರಿಯುತ್ತಿದ್ದ ನೀರಿನ ನಡುವೆ ಸಾಹಸಮಯವಾಗಿ ಕಾರ್ಯಾಚರಣೆ ನಡೆಸಿ ನಿಶ್ಮಿತಾ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ಜೀವ ಉಳಿಸಿದರು.ಘಟನೆಯಲ್ಲಿ ವಿದ್ಯಾರ್ಥಿನಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ…
ಕಾಸರಗೋಡು, ಜು. 21 : ಉಕ್ರೇನ್‌ನ ದಕ್ಷಿಣ ಬಂದರು ನಗರ ಒಡೆಸಾ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡಿನ ನಾವಿಕ ಯುವಕ ಸೇರಿದಂತೆ 10 ನಾವಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು, ಜು.21: ಗಗನದೆತ್ತರಕ್ಕೆ ಹಾರುವ ಗಾಳಿಪಟದಂತೆ ರೋಟರಿಯ ಸೇವೆಯೂ ಅತ್ಯುನ್ನತ ಮಟ್ಟಕ್ಕೇರಬೇಕು. ಸಮಾಜದ ಪ್ರತಿಯೊಬ್ಬರ ಹೃದಯವನ್ನು ತಟ್ಟುವ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೋಟರಿ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ರೊ. ಡಾ. ಅರವಿಂದ ಭಟ್ ಹೇಳಿದರು. ನಗರದ ಈಡನ್ ಕ್ಲಬ್‌ನಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್‌ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್ ಜಿಲ್ಲೆಯಲ್ಲಿ ಅತ್ಯುತ್ತಮ “ಡೈಮಂಡ್ ಪ್ಲಸ್” ಪ್ರಶಸ್ತಿಯನ್ನು ಪಡೆದಿರುವುದು ಕ್ಲಬ್‌ನ ಉತ್ತಮ ಸೇವಾ ಚಟುವಟಿಕೆಗಳಿಗೆ ದೊರೆತ ಮಾನ್ಯತೆಯಾಗಿದೆ ಎಂದು ಅವರು ಪ್ರಶಂಸಿಸಿದರು.ಈ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೊ. ಎ. ಉಮೇಶ್ ಗಟ್ಟಿ, ಕಾರ್ಯದರ್ಶಿಯಾಗಿ ರೊ. ಪಿ.ವೈ. ಪವಿತ್ರ ಕುಮಾರ್ ಗುರುಕ್ಕಲ್, ಕೋಶಾಧಿಕಾರಿಯಾಗಿ ರೊ. ಸಂದೀಪ್ ಹಂದೆ, ಉಪಾಧ್ಯಕ್ಷರಾಗಿ ರೊ. ಜಯರಾಜ್ ಕೆ., ಜೊತೆ ಕಾರ್ಯದರ್ಶಿಯಾಗಿ ರೊ. ಪ್ರಶಾಂತ್ ನಾಯಕ್, ಸಾರ್ಜೆಂಟ್ ಅಟ್ ಆರ್ಮ್ಸ್…
ಮಂಗಳೂರು, ಜು.20: ಮಂಗಳ ಗ್ರಾಮೀಣ ಯುವಕ ಸಂಘ (ರಿ.), ಕೊಣಾಜೆ ಪದವು ಇದರ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಎ.ಕೆ. ರೆಹಮಾನ್ ಕೋಡಿಜಾಲ್ ಅವರನ್ನು ಅಸೈಗೋಳಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ಕಚೇರಿಗೆ ನಾಲ್ಕನೇ ಬಾರಿ ಭೇಟಿ ನೀಡಿದ ಎ.ಕೆ. ರೆಹಮಾನ್ ಕೋಡಿಜಾಲ್ ಅವರು, ಟ್ರಸ್ಟ್ ಆಯೋಜಿಸುವ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, ಹಲವು ರೀತಿಯ ಸಹಕಾರವನ್ನು ನೀಡುತ್ತ ಬಂದಿದ್ದಾರೆ. ಅವರ ಸಮಾಜಮುಖಿ ಸೇವೆ ಹಾಗೂ ಶಿಕ್ಷಣದ ಮೇಲಿನ ಕಾಳಜಿಯನ್ನು ಗುರುತಿಸಿ ಟ್ರಸ್ಟ್ ವತಿಯಿಂದ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಯಾದವ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ನೆರವು ನೀಡುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ. ಇಂತಹ ಸಮಾಜಮುಖಿ ಚಿಂತನೆ ಹೊಂದಿರುವ ವ್ಯಕ್ತಿಗಳ ಸಹಕಾರದಿಂದ ಟ್ರಸ್ಟ್ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಬಳಿಕ ಎ.ಕೆ. ರೆಹಮಾನ್ ಕೋಡಿಜಾಲ್ ಅವರಿಗೆ…

