Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಬಗಂಬಿಲ: 19ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

UllalaVaniBy UllalaVaniJuly 19, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬಗಂಬಿಲ : ಧರ್ಮ, ಜಾತಿ, ರಾಜಕೀಯ ಅಥವಾ ಅಧಿಕಾರದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಸಾಗಿದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ನಮ್ಮ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿ ಕೈಜೋಡಿಸಿದರೆ, ಬಗಂಬಿಲ ಇನ್ನಷ್ಟು ಸದೃಢವಾಗಿ ಬೆಳೆಯುತ್ತದೆ ಎಂದು ಚಿತ್ರನಟ ಕುಸಲ್ದರಸೆ ನವೀನ್‌ ಡಿ ಪಡೀಲ್‌ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಜೆ ಬಗಂಬಿಲದ ಶ್ರೀ ಸತ್ಯನಾರಾಯಣ ಸಭಾಭವನದಲ್ಲಿ ಬಗಂಬಿಲದ ಶ್ರೀ ಸತ್ಯನಾರಾಯಣ ಮಂದಿರ (ರಿ) ಹಾಗೂ ಸಾರ್ವಜನಿಕ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ವತಿಯಿಂದ 19ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.
ಬಗಂಬಿಲ ಸಂಸ್ಕೃತಿಯ ಊರು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸೋಣ. ಸಂಕಷ್ಟದಲ್ಲಿ ನೆರವಾದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬರೂ ತಮ್ಮ ಕುಟುಂಬದ ಜವಾಬ್ದಾರಿಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಅರಿತು ಕೆಲಸ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡಿದ್ದ ಈ ಊರು, ಇಂದು ದೈವ-ದೇವರ ಆಶೀರ್ವಾದದಿಂದ ಜಿಲ್ಲೆಯಲ್ಲೇ ಉತ್ತಮ ಹೆಸರು ಗಳಿಸಿದೆ. ಕುಂಪಲ–ಬಗಂಬಿಲ ಇಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಗುರುತಿಸಿಕೊಂಡಿದೆ.ಬರುವ ಗೌರಿ-ಗಣೇಶ ಉತ್ಸವದಲ್ಲಿ ಪ್ರತಿಯೊಂದು ಮನೆಯ ಸದಸ್ಯರೂ ಭಾಗವಹಿಸಬೇಕು. ನಮ್ಮ ಉತ್ಸವವು ಶಿಸ್ತು, ಭಕ್ತಿ ಮತ್ತು ಸಾಂಸ್ಕೃತಿಕ ವೈಭವದಿಂದ ಜಿಲ್ಲೆಯ ಗಮನ ಸೆಳೆಯುವಂತಾಗಲಿ. ಮಂಗಳೂರಿನ ಜನರೂ ಮೆಚ್ಚುವಂತಹ ಮಾದರಿ ಉತ್ಸವವನ್ನು ನಾವು ಎಲ್ಲರೂ ಸೇರಿ ನಡೆಸೋಣ.ಇತ್ತೀಚೆಗೆ ‘ಇಂಬು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇದು ತುಳು ಹಾಗೂ ಕನ್ನಡ ಕಲಾರಂಗಕ್ಕೆ ದೊರೆತ ಗೌರವವಾಗಿದೆ. ಇಂತಹ ಸಾಧನೆಗಳು ನಮ್ಮ ಯುವ ಕಲಾವಿದರಿಗೆ ಮತ್ತಷ್ಟು ಸ್ಫೂರ್ತಿಯಾಗಲಿ. ಬಗಂಬಿಲದ ಈ ಗೌರಿ-ಗಣೇಶ ಉತ್ಸವ ಅತ್ಯಂತ ಯಶಸ್ವಿಯಾಗಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಗಂಬಿಲ ಸತ್ಯನಾರಾಯಣ ಮಂದಿರ ಸಭಾಂಗಣ ಶೀಘ್ರದಲ್ಲೇ ಪೂರ್ಣಗೊಂಡು, ಸ್ಥಳೀಯರು ಸಹಕರಿಸುವ ಜೊತೆಗೆ ಊರಿನ ಅಭಿವೃದ್ಧಿಯ ಜೊತೆಗೆ ತಾನು ನಿಲ್ಲುತ್ತೇನೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಅವರ ಗೌರವವನ್ನು ಉಳಿಸುವ ಹಿನ್ನೆಲೆಯಲ್ಲಿ ಶೀಘ್ರವೇ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿ.ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿರುವ ಖ್ಯಾತ ಕಲಾವಿದ ನವೀನ್ ಪಡೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಅನೇಕರು ಮಾತನಾಡುತ್ತಾರೆ. ಆದರೆ ಅದನ್ನು ತಮ್ಮ ಕಲಾ ಜೀವನದ ಮೂಲಕ ರಾಷ್ಟ್ರ ಹಾಗೂ ವಿಶ್ವ ಮಟ್ಟಕ್ಕೆ ಪರಿಚಯಿಸುವಲ್ಲಿ ನವೀನ್ ಪಡೀಲ್ ಅವರ ಕೊಡುಗೆ ಅನನ್ಯವಾಗಿದೆ. ತುಳು ಚಿತ್ರರಂಗದ ಬೆಳವಣಿಗೆಗೆ ತಮ್ಮ ಬದುಕನ್ನೇ ಸಮರ್ಪಿಸಿರುವ ಅವರು, ತುಳು ಭಾಷೆಗೆ ವಿಶ್ವ ಮಟ್ಟದಲ್ಲಿ ಗೌರವ ತಂದುಕೊಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಷ್ಟೇ ದೊಡ್ಡ ಕಲಾವಿದ ಹಾಗೂ ಸೆಲೆಬ್ರಿಟಿಯಾಗಿದ್ದರೂ ತಾವು ಬೆಳೆದು ಬಂದ ಮಾರ್ಗವನ್ನು ಎಂದಿಗೂ ಮರೆಯದ ವ್ಯಕ್ತಿತ್ವ ಅವರದು. ತಮ್ಮ ಹುಟ್ಟೂರು ಬಗಂಬಿಲದ ಹಿಂದಿನ ಸ್ಥಿತಿ ಹಾಗೂ ಇಂದಿನ ಅಭಿವೃದ್ಧಿಯನ್ನು ಹೆಮ್ಮೆಯಿಂದ ಸ್ಮರಿಸುವ ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಚಿತ್ರದ ಚಿತ್ರೀಕರಣ ಮುಗಿದ ನಂತರವೂ ಹೊಸ ಕಲಾವಿದರಿಗೆ ಮಾರ್ಗದರ್ಶನ ನೀಡುವುದು, ಅಭಿನಯದ ಸೂಕ್ಷ್ಮತೆಗಳನ್ನು ಕಲಿಸಿಕೊಡುವುದು ಅವರ ವಿಶೇಷ ಗುಣ. ಒಬ್ಬ ಉತ್ತಮ ನಟನಷ್ಟೇ ಅಲ್ಲ, ಉತ್ತಮ ಗುರುವಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವೀನ್ ಪಡೀಲ್ ನಟಿಸುವ ತುಳು ಹಾಗೂ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಬೆಂಬಲಿಸುವ ಮೂಲಕ ನಮ್ಮ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಚಿತ್ರರಂಗವನ್ನು ಬೆಳೆಸಬೇಕಾಗಿದೆ. ಕುಂಪಲದಲ್ಲಿದ್ದಾಗ ಸ್ಥಳೀಯ ಜನರ ಅಭಿವೃದ್ಧಿಯ ಬಗ್ಗೆ ಯೋಚಿಸಲಾಗುತಿತ್ತು. ಇಂದು ಜಿಲ್ಲೆಯ ಮಟ್ಟದ ಜವಾಬ್ದಾರಿಗಳಿರುವುದರಿಂದ ಅನೇಕ ಜವಾಬ್ದಾರಿಗಳ ನಡುವೆಯೂ ಸಮಯ ನೀಡಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಶೀಘ್ರದಲ್ಲೇ ಬಗಂಬಿಲದ ಸಭಾಂಗಣದ ಕಾರ್ಯಕ್ಕೆ ಸಮಯ ನೀಡಿ ಲೋಕಾರ್ಪಣೆ ನೆರವೇರಿಸಬೇಕಿದೆ. ಇಂದು ಬಗಂಬಿಲವು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿಯ ಹಾದಿಯಲ್ಲಿದ್ದು, ಇಂತಹ ಬೆಳವಣಿಗೆಗೆ ನವೀನ್ ಪಡೀಲ್ ಅವರಂತಹ ವ್ಯಕ್ತಿತ್ವಗಳ ಪ್ರೋತ್ಸಾಹವೂ ಮತ್ತಷ್ಟು ಬಲ ತುಂಬಲಿ ಎಂಬುದು ನಮ್ಮ ಆಶಯ ಎಂದರು.
ಸಮಾರಂಭದಲ್ಲಿ ತುಳುನಾಡ ಮಾಣಿಕ್ಯ ನವೀನ್ ಡಿ. ಪಡೀಲ್, ವಕೀಲರಾದ ಶರಣ್ ಕುತ್ತಾರ್, ಸೋಮೇಶ್ವರ ಪುರಸಭೆ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂದಿರದ ಮಹಾಪೋಷಕ ದಿವಾಕರ್ ಎಂ. ಬಗಂಜಬಿಲ, ಪ್ರವೀಣ್ ಎಸ್. ಸುವರ್ಣ, ಉದಯ್ ರಾಜ್ ಶೆಟ್ಟಿ, ಹರೀಶ್ ಬಗಂಬಿಲ ಹಾಗೂ ಪ್ರಶಾಂತ್ ಅಮೃತನಗರ , ಶಿವಪ್ರಸಾದ್ ಬಗಂಬಿಲ, ರವಿಪ್ರಸಾದ್ ಬಗಂಬಿಲ ಉಪಸ್ಥಿತರಿದ್ದು, ಉತ್ಸವದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭ ವಕೀಲ ಶರಣ್ ಕುತ್ತಾರ್, ಸೋಮೇಶ್ವರ ಪುರಸಭೆ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂದಿರದ ಮಹಾಪೋಷಕ ದಿವಾಕರ್ ಎಂ. ಬಗಂಬಿಲ, ಪ್ರವೀಣ್ ಎಸ್. ಸುವರ್ಣ, ಉದಯ್ ರಾಜ್ ಶೆಟ್ಟಿ, ಹರೀಶ್ ಬಗಂಬಿಲ ಹಾಗೂ ಪ್ರಶಾಂತ್ ಅಮೃತನಗರ , ಶಿವಪ್ರಸಾದ್ ಬಗಂಬಿಲ, ರವಿಪ್ರಸಾದ್ ಬಗಂಬಿಲ ಉಪಸ್ಥಿತರಿದ್ದರು.
ಶಿವ-ಪಾರ್ವತಿಯವರು ಕೈಲಾಸದಿಂದ ಭೂಲೋಕಕ್ಕೆ ಆಗಮಿಸುತ್ತಿರುವ ದಿವ್ಯ ಪರಿಕಲ್ಪನೆಯನ್ನು ಒಳಗೊಂಡ ವಿಶಿಷ್ಟ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸಲಾಯಿತು. ಧಾರ್ಮಿಕ ಭಾವನೆ, ಸಾಂಸ್ಕೃತಿಕ ವೈಭವ ಮತ್ತು ಕಲಾತ್ಮಕತೆಯನ್ನು ಒಂದೇ ಚಿತ್ರಣದಲ್ಲಿ ಮೂಡಿಸಿರುವ ಈ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆಯಿತು. ಶಿವ-ಪಾರ್ವತಿಯ ದಿವ್ಯ ಸಾನ್ನಿಧ್ಯವನ್ನು ಪ್ರತಿಬಿಂಬಿಸುವ ಈ ವಿನ್ಯಾಸವು ಉತ್ಸವದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿತು.
ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ನವೀನ್‌ ಡಿ ಪಡೀಲ್‌ ಅವರನ್ನು ಸನ್ಮಾನಿಸಲಾಯಿತು. ಬಗಂಬಿಲ ಸತ್ಯನಾರಾಯಣ ಮಂದಿರದ ಯುಟ್ಯೂಬ್‌ ಚಾನೆಲ್‌ ನ ಬಿಡುಗಡೆಯೂ ನಡೆಯಿತು.

ಬಗಂಬಿಲದ ಶ್ರೀ ಸತ್ಯನಾರಾಯಣ ಮಂದಿರ ಹೊಸ ಕಟ್ಟಡ ಸ್ಥಾಪನೆಯಾಗಿ ಈಗ ಹತ್ತು ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಮಂದಿರವು ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಸಾಮಾಜಿಕ ಸೇವಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಸಭಾಂಗಣ ನಿರ್ಮಾಣಕ್ಕಾಗಿ ಜಾಗವನ್ನು ಖರೀದಿಸಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಪುನರಾರಂಭಗೊಂಡಿದ್ದು, ಸುಮಾರು ಶೇ.50ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಊರಿನ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನಿಕ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಬಗಂಬಿಲದಿಂದ ಬೈಪಾಸ್‌ವರೆಗಿನ ಪ್ರದೇಶದ ಸಾರ್ವಜನಿಕರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಸಭಾಂಗಣವನ್ನು ಬಳಸಿಕೊಳ್ಳಬಹುದಾಗಿದೆ.ಒಂದೇ ಸಮಯದಲ್ಲಿ ಸುಮಾರು 1,000 ಜನರು ಸೇರಬಹುದಾದ ವಿಶಾಲ ಸಭಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದು ಈ ಭಾಗದ ಜನರಿಗೆ ಬಹು ಉಪಯುಕ್ತವಾಗಲಿದೆ.
ಪ್ರವೀಣ್‌ ಐ ಬಗಂಬಿಲ
ಉಪಾಧ್ಯಕ್ಷರು
ಕೋಟೆಕಾರು ಪಟ್ಟಣ ಪಂಚಾಯತ್‌

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಂಸತ್‌ ಚಲೋ ಪ್ರತಿಭಟನಾ ರ‍್ಯಾಲಿ ವೇಳೆ ಲಾಠಿಚಾರ್ಜ್‌, ಅಶ್ರುವಾಯು ಪ್ರಯೋಗ – ಅಭಿಜಿತ್‌ ದೀಪ್ಕೆ ಪೊಲೀಸರ ವಶಕ್ಕೆ

July 20, 2026

ಮಂಗಳೂರು ವಿವಿ ನೂತನ ಕುಲಸಚಿವರಾಗಿ ಸಂತೋಷ್ ಬಿ ಜಗಲಸಾರ ಅಧಿಕಾರ ಸ್ವೀಕಾರ

July 20, 2026

ಕುತ್ತಾರು: ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವ

July 19, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಸಮಾಜಸೇವಕ ಎ.ಕೆ. ರೆಹಮಾನ್ ಕೋಡಿಜಾಲ್‌ಗೆ ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್‌ನಿಂದ ಸನ್ಮಾನ

By UllalaVaniJuly 20, 20260

ಮಂಗಳೂರು, ಜು.20: ಮಂಗಳ ಗ್ರಾಮೀಣ ಯುವಕ ಸಂಘ (ರಿ.), ಕೊಣಾಜೆ ಪದವು ಇದರ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಎ.ಕೆ. ರೆಹಮಾನ್…

ಸಂಸತ್‌ ಚಲೋ ಪ್ರತಿಭಟನಾ ರ‍್ಯಾಲಿ ವೇಳೆ ಲಾಠಿಚಾರ್ಜ್‌, ಅಶ್ರುವಾಯು ಪ್ರಯೋಗ – ಅಭಿಜಿತ್‌ ದೀಪ್ಕೆ ಪೊಲೀಸರ ವಶಕ್ಕೆ

July 20, 2026

ಬೈಂದೂರು: ಶಿರೂರು ಸಮುದ್ರ ತೀರದಲ್ಲಿ ದೋಣಿ ಪಲ್ಟಿ; ಐವರು ಮೀನುಗಾರರು ಪಾರು

July 20, 2026

ಬ್ಯಾರಿ ವಿದ್ಯಾರ್ಥಿಗಳಿಗೆ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸುವರ್ಣಾವಕಾಶ

July 20, 2026
1 2 3 … 2,026 Next
Automatic YouTube Gallery

||Congress press meet || ಜಿಲ್ಲೆಯಲ್ಲಿ ಅಪ*ರಾಧ ಕೃ#ತ್ಯಗಳು ಹೆಚ್ಚಳ ;ಕಾಣದ ಕೈಗಳ ಕೈವಾಡದ ಶಂಕೆ : ಎಸ್. ಅಪ್ಪಿ

ಲಾವಣ್ಯ ಹ#ತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಕಾಂಗ್ರೆಸ್ ಆಗ್ರಹ;"ಲಾವಣ್ಯ ಪ್ರಕ*ರಣದಿಂದ ಕಾನೂನು ತಿದ್ದುಪಡಿ ಅಗತ್ಯ"

ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ: ಎಸ್. ಅಪ್ಪಿ




📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||Congress press meet || ಜಿಲ್ಲೆಯಲ್ಲಿ ಅಪ*ರಾಧ ಕೃ#ತ್ಯಗಳು ಹೆಚ್ಚಳ ;ಕಾಣದ ಕೈಗಳ ಕೈವಾಡದ ಶಂಕೆ : ಎಸ್. ಅಪ್ಪಿ
Now Playing
||Congress press meet || ಜಿಲ್ಲೆಯಲ್ಲಿ ಅಪ*ರಾಧ ಕೃ#ತ್ಯಗಳು ಹೆಚ್ಚಳ ;ಕಾಣದ ಕೈಗಳ ಕೈವಾಡದ ಶಂಕೆ : ಎಸ್. ಅಪ್ಪಿ
ಲಾವಣ್ಯ ಹ#ತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಕಾಂಗ್ರೆಸ್ ...
ಲಾವಣ್ಯ ಹ#ತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಮಹಿಳಾ ಕಾಂಗ್ರೆಸ್ ಆಗ್ರಹ;"ಲಾವಣ್ಯ ಪ್ರಕ*ರಣದಿಂದ ಕಾನೂನು ತಿದ್ದುಪಡಿ ಅಗತ್ಯ"

ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ: ಎಸ್. ಅಪ್ಪಿ




📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| NAVEEN PADIL COMEDY || ನವೀನ್ ಡಿ ಪಡೀಲ್ ಡೈಲಾಗ್ ಕೇಳಿ ಮರ‍್ರೆ..... ಎಂಚಿನ ಕಾಮಿಡಿಯೇ
Now Playing
|| NAVEEN PADIL COMEDY || ನವೀನ್ ಡಿ ಪಡೀಲ್ ಡೈಲಾಗ್ ಕೇಳಿ ಮರ‍್ರೆ..... ಎಂಚಿನ ಕಾಮಿಡಿಯೇ
ಯಾನೊರಿ ಬರೊಲಿಯಾ... ಇಲ್ಲಿ ಬಾ ನೀನು... ಶಾಲೆಯಂಗಳದಲ್ಲಿ ಗುಲಾಬಿ ಹೂ.....-ನವೀನ್ ...
ಯಾನೊರಿ ಬರೊಲಿಯಾ... ಇಲ್ಲಿ ಬಾ ನೀನು... ಶಾಲೆಯಂಗಳದಲ್ಲಿ ಗುಲಾಬಿ ಹೂ.....-ನವೀನ್ ಪಡೀಲ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version