ಸೋಮೋಶ್ವರ: ಜೊತೆಗೆ ಟೈಲ್ಸ್ ಕೆಲಸ ಮಾಡುತ್ತಿದ್ದವನೇ ಮನೆಯೊಳಗೆ ನಿಲ್ಲಿಸಿದ್ದ ಸ್ಕೂಟರ್‌ನ್ನು ಎಗರಿಸಿದ ಘಟನೆ ಸೋಮೋಶ್ವರ ದ್ವಾರಕಾನಗರದಲ್ಲಿ ನಡೆದಿದೆ.

ಸ್ಕೂಟರ್ ಮಾಲೀಕ ಎಂದಿನ0ತೆ ಸಂಜೆ ಸುಮಾರು 6 ಗಂಟೆ ಅಸುಪಾಸಿನಲ್ಲಿ ವಾಹನವನ್ನು ನಿಲ್ಲಿಸಿದ್ದರು. 7 ಗಂಟೆ ವೇಳೆ ವಾಹನ ನಾಪತ್ತೆಯಾಗಿದೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಜೊತೆಗೆ ಕೆಲಸ ಮಾಡುತ್ತಿದ್ದ ಪರಿಚಿತನಾಗಿರುವ ಮುಕ್ಕಚ್ಚೇರಿ ನಿವಾಸಿ ಶಮೀಮ್ ಯಾನೆ ಶಮ್ಮಿ ಎಂಬಾತ ವಾಹನವನ್ನು ಕದ್ದಿರುವ ಬಗ್ಗೆ ತಿಳಿದುಬಂದಿದೆ.

ಅದಲ್ಲದೇ ಇಂದು ವಾಹನವನ್ನು ಕದ್ದು ಕೊಂಡೊಯ್ಯುತ್ತಿದ್ದ ವೇಳೆ ಶಮೀನ್‌ನನ್ನು ಯುವಕರು ಹಿಂಬಾಲಿಸಿ,ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆತ ತಪ್ಪಿಸಿಕೊಂಡು ಹೋಗಿದ್ದಾನೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.




