ಉಳ್ಳಾಲ: ಕೋಟೆಕಾರ್ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದರಸ ಅಜ್ಜಿನಡ್ಕ ವತಿಯಿಂದ ದೇಶದ 77ನೇ ಗಣ ರಾಜೋತ್ಸವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಸುಲ್ಯೆಮಾನ್ ಹಾಜಿ ನೆರವೇರಿಸಿದರು. ದಿನದ ಮಹತ್ವದ ಬಗ್ಗೆ ಮಸೀದಿ ಖತೀಬರಾದ ಝುಬೈರ್ ಫ್ಯೆಝಿ,ಮಸೀದಿ ಕಾರ್ಯದರ್ಶಿ ಅಹಮ್ಮದ್ ಅಜ್ಜಿನಡ್ಟ ಮಾತನಾಡಿದರು. ದೇಶದ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷರಾದ ಬಶೀರ್ ಮೊಹಮ್ಮದ್,ಖಾಸಿಂ ಹಿತ್ತಿಲು,ಮಾಜಿ ಅದ್ಯಕ್ಷರಾದ ಕುಂಞ ಅಹಮ್ಮದ್ ಹಾಜಿ,ಕಮಿಟಿ ಸದಸ್ಯರಾದ ಅಬ್ದಲ್ ರಝಕ್,ಅಬ್ದಲ್ಲಾ, ಇಬ್ರಾಹಿಮ್ ಕೋಟೆಕಾರ್ ಗ್ಲೋಬಲ್ ಚಾರಿಟೇಬಲ್ ಟ್ರಸ್ಟಿನ ಸಂಚಾಲಕರಾದ ಇಸ್ಮಾಯಿಲ್ ಸಿ.ಎಚ್ ಮುಂತಾದವರ ಉಪಸ್ಥಿತರಿದ್ದರು.
ಮದರಸ ವಿದ್ಯಾರ್ಥಿಗಳಿಗೆ ಮತ್ತು ಸೇರಿದವರಿಗೆ ಗ್ಲೋಬಲ್ ಅದ್ಯಕ್ಷರಾದ ಸಿ.ಎ ಮಹಮ್ಮದ್ ರವರ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.



