Author: UllalaVani

Kannada News From Coastal Karnataka

ಮಂಗಳೂರು : ಬಸ್ ಸಿಬ್ಬಂದಿಗೆ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ “ರಾಜಲಕ್ಷ್ಮೀ ಚಾಂಪಿಯನ್ಸ್‌ ಟ್ರೋಫಿ” ಎಂಬ ಕ್ರೀಡಾ ಕೂಟವನ್ನು ಎರಡು ದಿನಗಳ ಕಾಲ ಭವ್ಯವಾಗಿ ಆಯೋಜಿಸಿರುವ ರಾಜಲಕ್ಷ್ಮೀ ಟ್ರಾವೆಲ್ಸ್‌ ಬಸ್‌ ಮಾಲೀಕರ ವಿಭಿನ್ನ ಪ್ರಯತ್ನಕ್ಕೆ ಬಸ್‌ ಸಿಬ್ಬಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನವನ್ನು ಸಾಗಿಸುವಲ್ಲಿ ಖಾಸಗಿ ಬಸ್ಸುಗಳ ಪಾತ್ರ ಅಪಾರ. ಪ್ರತಿಯೊಂದು ಹಳ್ಳಿಗೂ, ಪಟ್ಟಣಕ್ಕೂ, ಮಂಗಳೂರು ನಗರಕ್ಕೂ ಬಸ್‌ಗಳು ಜೀವನಾಡಿಯಂತಿವೆ. ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ದಿನನಿತ್ಯದ ಸಂಚಾರ – ಎಲ್ಲವೂ ಬಹುಮಟ್ಟಿಗೆ ಈ ಬಸ್‌ಗಳ ಮೇಲೆ ಅವಲಂಬಿತವಾಗಿದೆ. ಬಸ್ಸಿನ ಚಕ್ರ ತಿರುಗದಿದ್ದರೆ ಅನೇಕರ ಬದುಕೇ ಅಸ್ತವ್ಯಸ್ತವಾಗುತ್ತದೆ ಎಂದು ಹೇಳುವುದು ಅತಿರಂಜಿತವಲ್ಲ.ಇಂತಹ ಬಸ್ ಸೇವೆಯ ಹಿಂದೆ ಸಾವಿರಾರು ಕುಟುಂಬಗಳ ಬೆವರಿನ ಕಷ್ಟ, ಶ್ರಮ ಮತ್ತು ತ್ಯಾಗ ಅಡಗಿದೆ. ನಿರಂತರ ಒತ್ತಡದ ಕೆಲಸ, ಬೆಳಗ್ಗೆಯಿಂದ ರಾತ್ರಿ ವರೆಗೆ ಹೊರೆ ತುಂಬಿದ ಸೇವೆ, ವಾಹನ ಸಂಚಾರದ ಜಟಿಲತೆ, ಪ್ರಯಾಣಿಕರ ನಿರೀಕ್ಷೆ – ಇವೆಲ್ಲದರ ನಡುವೆ ಬಸ್ ಚಾಲಕರು ಮತ್ತು ನಿರ್ವಾಹಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.…

Read More

ದೇರಳಕಟ್ಟೆ : ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ದೇರಳಕಟ್ಟೆ ಇದರ ದಶಮಾನೋತ್ಸವದ ಪ್ರಯುಕ್ತ ನೀಡಲಾಗುವ ಮೇಲ್ತೆನೆ ಪ್ರಶಸ್ತಿಗೆ ಹಿರಿಯ ಗಾಯಕ, ಕಲಾವಿದ ರಹೀಂ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ 30ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುವ ಮೇಲ್ತೆನೆ ಪತ್ತನೆ ವರ್ಸತ್ತೆ ಜಲ್ಸ್-ಲೇಸ್ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪರಿಚಯ : ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿಯಲ್ಲಿ ಬೋಳಿಯಾರು ಅಬ್ದುಲ್ ಖಾದರ್-ಫರಂಗಿಪೇಟೆಯ ಉಮ್ಮಾತುಮ್ಮ ದಂಪತಿಯ ಪುತ್ರನಾಗಿ 1957ರಲ್ಲಿ ಜನಿಸಿದ ಅಬ್ದುಲ್ ರಹೀಂ ಯಾನೆ ಅದ್ದಾಮ ಇನೋಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ಮತ್ತು ಮಡಿಕೇರಿಯ ಸರಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಕಲಿತರು. ಎಳೆಯ ಪ್ರಾಯದಲ್ಲೇ ಹಾಡುವ ಅಭಿರುಚಿ ಹೊಂದಿದ್ದ ರಹೀಂ ಬಳಿಕ ಗಾಯನವನ್ನೇ ಬದುಕನ್ನಾಗಿಸಿಕೊಂಡರು. ಮದುವೆ, ಮುಂಜಿ ಸಹಿತ ಬೀಡಿ ಉದ್ಯಮದ ಪ್ರಚಾರಕ್ಕೆ ಸಂಬಂಧಿಸಿ ಬ್ಯಾರಿ, ತುಳು, ಕನ್ನಡದಲ್ಲಿ ಗೀತೆ ರಚಿಸಿದ್ದ ರಹೀಂ ಬಿ.ಸಿ.ರೋಡ್ ಸುಮಾರು 1 ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಹಾಡಿದ್ದಾರೆ. ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಕರ್ನಾಟಕ…

Read More

ಕೊಣಾಜೆ: ಪ್ರವಾದಿ ಪೈಗಂಬರರ 15೦೦ನೇ ಜನ್ಮ ಮಾಸಾಚರಣೆ ಪ್ರಯುಕ್ತ ಮುಡಿಪು ಮಜ್ಲಿಸ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಫರ್ಹೇ ಮೀಲಾದ್’ ಸಂಭ್ರಮ ಸಮಾವೇಶ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ಶುಕ್ರವಾರ ನಡೆಯಿತು.ಇದೇ ಸಂದರ್ಭದಲ್ಲಿ ನಡೆದ ಬೃಹತ್ ಹುಬ್ಬುನ್ನಬೀ ಸಮ್ಮೇಳನದಲ್ಲಿ ನಾಗೂರು ದರ್ಗಾ ಶರೀಫ್ ಖಲೀಫಾ ಹಝ್ರತ್ ಸಯ್ಯಿದ್ ಮುಹಮ್ಮದ್ ಆಶೀರ್ವಚನ ನೀಡಿದರು. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿಶ್ವಪ್ರವಾದಿಯವರ ಸಂದೇಶ, ತತ್ವವನ್ನು ಪಾಲಿಸಿಕೊಂಡು ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದೇವರು ನಮ್ಮನ್ನು ಪ್ರೀತಿಸಿಸಲು ಆರಂಭಿಸಿದರೆ ಅದನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ.‌ ಯಾರಾದರೂ ಕಷ್ಟದಲ್ಲಿದ್ದಾಗ ಜಾತಿಬೇಧ ಮರೆತು ಸಹಾಯ ಮಾಡುವ ಮನೋಭಾವ ನಮ್ಮದಾಗಬೇಕು. ಆದೂರು ತಂಙಳ್ ಅವರ ಮೂಲಕ ಮುಡಿಪುವಿನ ಎಜ್ಯುಪಾರ್ಕ್ ನಲ್ಲಿ ಧಾರ್ಮಿಕ ಶಿಕ್ಷಣ, ಲೌಕಿಕ ಶಿಕ್ಷಣ ನೀಡುತ್ತಾ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂದು ವಿಕಲಚೇತನರಿಗೆ ಕೃತಕ ಕೈಕಾಲು ಉಚಿತವಾಗಿ ನೀಡುವ ಮೂಲಕ ಈ ಕಾರ್ಯಕ್ರಮವು ಮಾನವೀಯತೆಯ, ಸಮಾನತೆಯ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.ಮಜ್ಲಿಸ್ ಎಜು…

Read More

ಕೊಣಾಜೆ‌ : ಪ್ರವಾಸೋದ್ಯಮ ಕ್ಷೇತ್ರವು ವಿಜ್ಞಾನ,‌ ತಂತ್ರಜ್ಞಾನಗಳ ಪ್ರಭಾವದೊಂದಿಗೆ ಆಧುನಿಕ ಕಾಲಘಟ್ಟದಲ್ಲಿ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಭಾಷಾ ಪ್ರೌಡಿಮೆಯೊಂದಿಗೆ ಸ್ಥಳೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಹೆಚ್ಚೆಚ್ಚು ಅರಿವನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಪ್ರವಾಸೋದ್ಯಮ ಹಾಗೂ ಟ್ರಾವೆಲ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಟೂರಿಸಂ ಕ್ಲಬ್ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಇಗ್ನಿಸಿಯಾ’ ಕ್ಕೆ ಚಾಲನೆ ‌ನೀಡಿ ಅವರು ಮಾತನಾಡಿದರು.ಭಾರತವು ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿವೆ. ವಿದೇಶಿ ಪ್ರವಾಸಿಗಳಿಗೆ ಉತ್ತಮ ಸೌಲಭ್ಯಗಳು ಇಂದು ಸಿಗುತ್ತಿವೆ. ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಇಂದಿನ ಆಧುನಿಕತೆಯ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ ಎಂದರು.ವಾಣಿಜ್ಯ ವಿಭಾಗದ ಡೀನ್ ಪ್ರೊ.ಪುಟ್ಟಣ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಆಧುನಿಕ ತಂತ್ರಜ್ಞಾನಗಳು ದುರುಪಯೋಗವಾಗದೆ, ಉಪಯೋಗಕಾರಿಯಾಗಿ ಸದ್ಬಳಕೆಯೊಂದಿಗೆ ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ನಮ್ಮದಾಗಬೇಕು.ಬಆದರೆ ಮಕ್ಕಳಲ್ಲಿ ಯುವಜನತೆಯಲ್ಲಿ ಮೊಬೈಲ್…

Read More

ಉಳ್ಳಾಲ: ಹಿಂದಿನ ಕಾಲದಲ್ಲಿ ಮಕ್ಕಳೆಷ್ಟು ಬೇಕೆನ್ನುವ ಪ್ರಶ್ನೆಯೇ ಇರಲಿಲ್ಲ. ಕಾಲ ಬದಲಾಗಿ ನಮ್ಮ‌ ದೃಷ್ಟಿಯೂ ಬದಲಾಗಿರುವುದು ದುರಂತ. ವಿವಾಹದ ನಂತರ ಮಕ್ಕಳು ಬೇಕು ಬೇಡ ಎಂಬ ಪ್ರಶ್ನೆಯೇ ಬರಲ್ಲ, ಮಕ್ಕಳನ್ನು ಪಡೆಯುವುದೇ ವಿವಾಹದ ಉದ್ದೇಶವಾಗಿದೆ. ನಮ್ಮ ವಂಶವು ನಿರ್ವಂಶವಾಗದೆ ಉಳಿಯಬೇಕಾದರೆ, ನಮ್ಮ ಮನೆತನದ ಫರ್ಟಿಲಿಟಿ ರೇಟ್ 2.1 ರಷ್ಟಾದರೂ ಇರಬೇಕೆಂಬುದು ವೈಜ್ಞಾನಿಕ ಸತ್ಯವಾಗಿದೆಯೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರು ಅಖಿಲ ಭಾರತೀಯ ಪರಿವಾರ ಪ್ರಭೋದನದ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು. ಕಿನ್ಯಾ ಕೇಶವ ಶಿಶು ಮಂದಿರದ ಆಶ್ರಯದಲ್ಲಿ ತಲಪಾಡಿ ದೇವಿಪುರದ ಶ್ರೀ ದುರ್ಗಾ ಧ್ಯಾನ ಮಂದಿರದಲ್ಲಿ ಭಾನುವಾರದಂದು ನಡೆದ 22 ನೇ ವರುಷದ ನವದಂಪತಿಗಳ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಹೆಣ್ಣು ಗಂಡಿನ ನಡುವೆ ಪರಸ್ಪರ ಆಕರ್ಷಣೆಯು ಸಹಜ ಪ್ರಕ್ರಿಯೆಯಾಗಿದ್ದು, ಅಂತಹ ಆಕರ್ಷಣೆಗೆ ನೀಡುವ ಸುಸಂಸ್ಕೃತ ಸ್ವರೂಪವೇ ವಿವಾಹ ಬಂಧವಾಗಿದೆ. ಕರ್ತವ್ಯ ಪ್ರಜ್ನೆಯೊಂದಿಗೆ ಜವಬ್ದಾರಿ ಮೆರೆಯುವ ಗೃಹಸ್ಥಾಶ್ರಮಮೇ ಶ್ರೇಷ್ಟವೆಂದು ಚಾಣಕ್ಯನೆ ವರ್ಣಿಸಿದ್ದಾನೆ.ಧರ್ಮ ಮತ್ತು ಪ್ರಜಾ ಅಭಿವೃದ್ಧಿಯೆಂಬ ಸಂಕಲ್ಪದೊಂದಿಗೆ ಪತಿ…

Read More

ಉಳ್ಳಾಲ‌ : ಪ್ರವಾದಿವರ್ಯರ ಮೇಲಿನ ಸ್ನೇಹ ಕೇವಲ ತೋರಿಕೆಗೆ ಮಾತ್ರ ಸೀಮಿತವಾಗದೆ, ಹೃದಯಾಂತರಾಳದಲ್ಲಿ ಇರಬೇಕು. ಆಗ ಮಾತ್ರ ನಾವು ಮಾಡುವ ಎಲ್ಲಾ ಕಾರ್ಯಗಳಲ್ಲೂ ವಿಜಯ ಗಳಿಸಲು ಸಾಧ್ಯ ಎಂದು ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಬಾಸಿತ್ ಬಾಅಲವೀ ತಂಙಳ್ ಅಲ್ ಅನ್ಸಾರಿ ಅಭಿಪ್ರಾಯಪಟ್ಟರು. ಇನೋಳಿ ಜಾಮಿಅಃ ಮುಬಾರಕ್ ಜುಮಾ ಮಸೀದಿ ಅಧೀನದ ಇನೋಳಿ ಬಿ.ಸೈಟ್ ಮಸ್ಜಿದುರ್ರಹ್ಮಾನ್ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸಾ ವತಿಯಿಂದ ಭಾನುವಾರ ಮದ್ರಸಾ ವಠಾರದಲ್ಲಿ ನಡೆದ ಸಾಹಿತ್ಯ ಸಂಗಮ, ಬುರ್ದಾ ಬೈತ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಸೀದಿಗಳು ದೊಡ್ಡದಾಗಿ ಇರಬೇಕಿಲ್ಲ, ಸಣ್ಣದಾಗಿದ್ದರೂ ಆ ಊರಿನ ಧಾರ್ಮಿಕತೆಯ ಕೇಂದ್ರ ಆಗಿರುತ್ತದೆ. ಜಾಗ ಸಣ್ಣದಿದ್ದರೂ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವುದು ಅಗತ್ಯ ಎಂದರು.ಈ ಸಂದರ್ಭ ಇನೋಳಿ ಬಿ.ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸಾದ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ ಹಾಗೂ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಆಲಡ್ಕ ಇವರನ್ನು ಸನ್ಮಾನಿಸಲಾಯಿತು.ಇನೋಳಿ ಜಾಮಿಅಃ ಮುಬಾರಕ್ ಜುಮಾ ಮಸೀದಿ ಖತೀಬ್ ಉಸ್ಮಾನ್ ಫೈಝಿ ತೆಕ್ಕಾರ್ ಅಧ್ಯಕ್ಷತೆ…

Read More

ಉಳ್ಳಾಲ : ಮೇಕ್ ಎ ಚೇಂಜ್ ಪೌಂಢೇಶನ್ ಇದರ ಆಶ್ರಯದಲ್ಲಿ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್, ಎನ್ ಎಸ್ ಎಸ್ , ಜನಪ್ರಿಯ ಆಸ್ಪತ್ರೆ, ಎಂಎಫ್ ಸಿ ಗ್ರೂಫ್ ಆಫ್ ಹೋಟೆಲ್ಸ್ ಹಾಗೂ ಎನ್ ಎಸ್ ಯು ಐ ಇವುಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಉಳ್ಳಾಲ ಬೀಚ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೇಕ್ ಎ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್‌ ಮಾತನಾಡಿ, ಸ್ವಚ್ಛತೆ ಕೇವಲ ಒಂದು ಅಭಿಯಾನವಲ್ಲ, ಇದು ಪ್ರತಿಯೊಬ್ಬರ ಜವಾಬ್ದಾರಿ. ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದರು.ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡರು.

Read More

ಆಂಧ್ರಪ್ರದೇಶ ಸರ್ಕಾರವು 2025 ಜನವರಿ 30ರಂದು ಭಾರತದ ಮೊದಲ ವಾಟ್ಸ್‌ಅಪ್ ಆಧಾರಿತ ಇ-ಆಡಳಿತ ಸೇವೆಯಾದ “ಮನ ಮಿತ್ರ” (Mana Mitra) ಆರಂಭಿಸಿತು. ಈ ಸೇವೆಯ ಮೂಲಕ ನಾಗರಿಕರು 161 ಸರ್ಕಾರಿ ಸೇವೆಗಳನ್ನು (ಜಾತಿ, ಆದಾಯ, ಜನ್ಮ-ಮರಣ ಪ್ರಮಾಣಪತ್ರಗಳು, ವಿದ್ಯುತ್ ಬಿಲ್, ಆರ್ಟಿಸಿ ಟಿಕೆಟ್ ಬುಕಿಂಗ್ ಇತ್ಯಾದಿ) ವಾಟ್ಸ್‌ಅಪ್‌ನಲ್ಲಿ 9552300009 ಸಂಖ್ಯೆಗೆ “ಇ/ನಮಸ್ಕಾರ” ಸಂದೇಶ ಕಳುಹಿಸಿ ಪಡೆಯಬಹುದು. ಮೆಟಾ ಜೊತೆಗಿನ ಸಹಯೋಗದಲ್ಲಿ ಆರಂಭವಾದ ಈ ಯೋಜನೆಯು QR ಕೋಡ್ ಒಳಗೊಂಡ ಪ್ರಮಾಣಪತ್ರಗಳನ್ನು ಒದಗಿಸುತ್ತದೆ. ಮಾರ್ಚ್ 2025 ರ ವೇಳೆಗೆ 200 ಸೇವೆಗಳು ಲಭ್ಯವಾಗಿದ್ದು, ಆಗಸ್ಟ್ 2025 ರೊಳಗೆ 700 ಸೇವೆಗಳನ್ನು ಸೇರಿಸುವ ಗುರಿಯಿದೆ. ತಮಿಳುನಾಡಿನಲ್ಲಿ ವಾಟ್ಸ್‌ಅಪ್ ಇ-ಆಡಳಿತ ಸೌಲಭ್ಯ :ತಮಿಳುನಾಡು ಸರ್ಕಾರವು 2025 ಆಗಸ್ಟ್ 22 ರಂದು ವಾಟ್ಸ್‌ಅಪ್ ಚಾಟ್‌ಬಾಟ್ ಆಧಾರಿತ ಇ-ಆಡಳಿತ ಸೇವೆಯನ್ನು ಆರಂಭಿಸಿತು. ಇದರ ಮೂಲಕ 50ಕ್ಕೂ ಹೆಚ್ಚು ಸೇವೆಗಳು (ರೇಷನ್ ಕಾರ್ಡ್, ಜಾತಿ-ಆದಾಯ ಪ್ರಮಾಣಪತ್ರ, ತೆರಿಗೆ ಪಾವತಿ, ವಿದ್ಯುತ್ ಬಿಲ್, ಬಸ್ ಟಿಕೆಟ್ ಬುಕಿಂಗ್) ಲಭ್ಯವಿದೆ. ತಮಿಳು ಮತ್ತು…

Read More

ಮಂಗಳೂರು : ಮಂಗಳೂರಿನ ಪಡೀಲ್ ನಲ್ಲಿ ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಮೂಲಕವಾಗಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಪಡೀಲ್ ಇದರ ಸಹಯೋಗದೊಂದಿಗೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆಶಕ್ತರಿಗೆ, ಅಸಹಾಯಕರಿಗೆ ಧನ ಸಹಾಯವನ್ನು ವಿತರಿಸಲಾಯಿತು. ಟ್ರಸ್ಟ್ ನ ಗೌರವಾಧ್ಯಕ್ಷರಾದ ವಾಮನ್ ಕುದ್ರೋಳಿ ಮಾತನಾಡಿ, ಟ್ರಸ್ಟ್ ತನ್ನ ಸೇವಾಕಾರ್ಯಗಳನ್ನು ಕಳೆದ 23 ವರುಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿ ವೇತನ, ಅಶಕ್ತರಿಗೆ ಸಹಾಯ ಹಸ್ತ, ಆರೋಗ್ಯ ಶಿಬಿರ, ಕನ್ನಡಕ ವಿತರಣೆ ಪ್ರಮುಖವಾಗಿವೆ, ಜೊತೆಗೆ ಮಾಹಿತಿ ಆಧಾರಿತ ಮಾಧ್ಯಮವಾಗಿ ಆತ್ಮಶಕ್ತಿ ಪತ್ರಿಕೆಯನ್ನು ಹೊರತರಲಾಗುತ್ತಿದೆ, ಈ ಕಾರ್ಯಕ್ರವನ್ನು ನಡೆಸುವುದರಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ಪಾತ್ರವೂ ಉಲ್ಲೇಖನೀಯವೆಂದರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ, ಟ್ರಸ್ಟ್ ನ ಕಾರ್ಯಧ್ಯಕ್ಷರೂ ಆದ ಸಹಕಾರ ರತ್ನ ಚಿತ್ತಾರಂಜನ್ ಬೋಳಾರ್ ಮಾತನಾಡುತ್ತಾ ಇಂತಹ ಸೇವಾ ಕಾರ್ಯಗಳಲ್ಲೂ ಸಂಘ ತನ್ನ ಹಸ್ತವನ್ನು ದೀರ್ಘವಾಗಿಸಿ ಟ್ರಸ್ಟ್ ನ ಈ ಎಲ್ಲಾ ಸಮಾಜ…

Read More

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ 2024-25ನೇ ಸಾಲಿನ 14ನೇ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಛೇರಿ “ಆತ್ಮಶಕ್ತಿ ಸೌಧ”ದ ಸಭಾಂಗಣದಲ್ಲಿ ಜರುಗಿತು. ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್‌ರವರು ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 33 ಶಾಖೆಗಳನ್ನು ಹೊಂದಿದ್ದು, 2025-26ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹೊಸ ಶಾಖೆಗಳನ್ನು ತೆರೆದು, ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಪಾಲು ಬಂಡವಾಳವನ್ನು ರೂ. 2.5 ಕೋಟಿಗೆ ಹೆಚ್ಚಿಸಿ, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.300 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ. 240 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ…

Read More