ದೇರಳಕಟ್ಟೆ; ದೇರಳಕಟ್ಟೆಯ ದೆ ಮೆರ್ಸಿದೆ ಮಕ್ಕಳ ಆಶ್ರಮಕ್ಕೆ ಮಂಗಳೂರು ತಾಲೂಕು ಧ್ವನಿ ಮತ್ತು ಬೆಳಕು ಮಾಲಕರ ಸಂಘದ ವತಿಯಿಂದ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂ. ಮೌಲ್ಯದ 60 ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭ ಸುಮಾರು 100 ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಸಿಸ್ಟರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೂಸಿ ಪಿಂಟೊ ಅವರು ಮಾತನಾಡಿ, ಬಿಸಿಲ ಬೇಗೆಗೆ ಮಕ್ಕಳಿಗೆ ಕೊಂಚ ಸಮಸ್ಯೆಯಾಗುತ್ತಿತ್ತು. ಆದ್ರೆ ಇಂದು ತಣ್ಣಗಾಗುವ ನಿಟ್ಟಿನಲ್ಲಿ ಫ್ಯಾನ್‌ಗಳನ್ನು ಧ್ವನಿ ಮತ್ತು ಬೆಳಕು ಮಾಲಕರ ಸಂಘ ನೀಡಿದ್ದಾರೆ. ಇದರ ಜೊತೆಗೆ ಮಕ್ಕಳ ಹುಟ್ಟುಹಬ್ಬವನ್ನು ಸಿಹಿತಿಂಡಿಗಳನ್ನು ಹಂಚುವ ಮೂಲಕ ಆಚರಿಸಿಕೊಂಡಿದ್ದು, ಇವರ ಈ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಶುಭಹಾರೈಸಿದ್ರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬೆನೆಟ್ ಡಿಸಿಲ್ವ ಅವರು ಮಾತನಾಡುತ್ತಾ, ಸಂಘದ ವತಿಯಿಂದ ಸುಮಾರು 60 ಫ್ಯಾನ್‌ಗಳನ್ನು ನೀಡಿದ್ದೇವೆ. ಇದರ ಜೊತೆಗೆ ಅಂದಾಜು 100 ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಿದ್ದು, ಊಟದ ವ್ಯವಸ್ಥೆಯನ್ನು ಸಂಘದ ಮೂಲಕ ಮಾಡಿದ್ದೇವೆ. ಸಂಘದ ಸದಸ್ಯರು ಹಾಗೂ ಕಾರ್ಯಕಾರಿಣಿ ಸದಸ್ಯರ ಸಹಕಾರದಿಂದ ಈ ಮುಗ್ದ ಮಕ್ಕಳಿಗಾಗಿ ಇಂತಹದೊAದು ವ್ಯವಸ್ಥೆಯನ್ನು ಕಲ್ಪಿಸಲಾಯಿತು ಎಂದು ಶ್ಲಾಘನೆ ವ್ಯಕ್ತಪಡಿಸಿದ್ರು.
ಇನ್ನು ದೆ ಮೆರ್ಸಿದೆ ಮಕ್ಕಳ ಆಶ್ರಮದ ಸಿಸ್ಟರ್ ಲೀಡಿಯಾ ಅವರು ಮಾತನಾಡಿ, ಇಲ್ಲಿ ಕಲಿತು,ಬೆಳೆದ ಮಕ್ಕಳು ಮುಂದೆ ಸಮಾಜದಲ್ಲಿ ತಮ್ಮಂತಹ ನೂರಾರು ಮಕ್ಕಳಿಗೆ ದಾರಿ ದೀಪವಾಗಬೇಕು ಎನ್ನುತ್ತಾ ಒಂದು ಇಸ್ಲಾಂ ಮಹಿಳೆಯ ಜೀವನದ ಘಟನೆಯನ್ನು ವಿವರಿಸಿದ್ರು.’
ಕಾರ್ಯಕ್ರಮದಲ್ಲಿ ಮಕ್ಕಳು ಕುಣಿದು, ಕುಪ್ಪಳಿಸಿದರು. ಮಂಗಳೂರು ತಾಲೂಕು ಧ್ವನಿ ಮತ್ತು ಬೆಳಕು ಮಾಲಕರ ಸಂಘದ ಅಧ್ಯಕ್ಷರು ರಸಪ್ರಶ್ನೆ ಹಾಗು ಇನ್ನಿತರ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಿದರು.
ಈ ಸಂದರ್ಭ ಪ್ಲಾವಿಯಾ, ಟ್ರಿಝಾ, ರೆನಿಟ, ಸುನಿತ, ಧ್ವನಿ ಮತ್ತು ಬೆಳಕು ಮಾಲಕರ ಸಂಘದ ಉಪಾಧ್ಯಕ್ಷ ಮಹೇಶ್ ಬೊಳಾರ್, ವಿನೋದ್ ಕುಂಪಲ ಹಾಗೂ ಸದಸ್ಯರಾದ ಅರುಣ್ ನೊರೊನ್ನಾ, ಸಂದೀಪ್ ಡಿಸಿಲ್ವ, ಸಂದೀಪ್ ಉಳ್ಳಾಳ್, ರಾಜೇಶ್, ಮಾಕ್ಸಿಮ್, ರವಿ, ವಿಜಿತ್, ರಂಜನ್, ಯಶ್ಪಾಲ್, ಗಣೇಶ್ ಎ ಉಪಸ್ಥಿತರಿದ್ದರು.
ರಿಶೆಲ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ಧನ್ಯವಾದವಿತ್ತರು.

