ಕೋಟೆಕಾರ್; ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಕರ್ನಾಟಕ ಮುಸ್ಲಿಂ ಜಮಾತ್ ಎಸ್ ವೈ ಎಸ್, ಎಸ್ಸೆಸ್ಸಫ್, ಜಂಟಿ ಆಶ್ರಯದಲ್ಲಿ ವಾರ್ಷಿಕ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ಸೋಮವಾರ ಸಂಜೆ 4-30 ಗಂಟೆಗೆ ಮಸೀದಿ ಯಲ್ಲಿ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಶಬೀರ್ ಅಶ್ ಅರಿ ಅಲ್ ಹಂದಾನಿ ಉದ್ಘಾಟನೆ ಮಾಡಿದರು. ಕೆ ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಬಾಷಣ ಮಾಡಿದರು ಹುಸೈನಿಯಾ ದರ್ಸ್ ವಿಧ್ಯಾರ್ಥಿಗಳ ವಾರ್ಷಿಕ ಕಾರ್ಯಕ್ರಮ ಮಗ್ರಿಬ್ ನಮಾಝ್ ಬಳಿಕ ಜರಗಿತು ಮಸೀದಿಯಲ್ಲಿ ಖಿಳ್ರ್ ಮೌಲಿದ್ ಪಾರಾಯಣ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಕೂರ್ ಸಅದಿ ಮುಹಧ್ಸಿನ್, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ನೌಫಲ್ ಅಹ್ಸನಿ ಸದರ್ ಝುಬೈರ್ ಝುಹ್ರಿ, ಅಬ್ದುಲ್ ಕರೀಂ, ಬಶೀರ್ ಅಹ್ಸನಿ ತೋಡಾರ್ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಯು ಎಮ್ ಉಮರಬ್ಬ ಮಂಗಳೂರು ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ವಂದಿಸಿದರು



