ಮಂಗಳೂರು: ರಸ್ತೆ ಬದಿಯಲ್ಲಿ ಶೇಖರಣೆಯಾದ ಜಲ್ಲಿಕಲ್ಲುಗಳ ಮಧ್ಯೆ ಕಾಲಿನ ಬೆರಳುಗಳು ಸಿಲುಕಿ ಇಬ್ಬರು ಮಕ್ಕಳ ಜತೆಗಿದ್ದ ತಾಯಿ ಕೆಳಗೆ ಬಿದ್ದು, ಬೆರಳಿಗೆ ಗಾಯಗೊಂಡಿದ್ದು, ಆಕೆಯ ಶುಶ್ರೂಷೆ ನಡೆಸಿ ಪಂಪ್ವೆಲ್ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಹಾಗೂ ಟೈಂ ಕೀಪರ್ ಮಾನವೀಯತೆ ಮೆರೆದಿರುವ ಪ್ರಸಂಗ ಪಂಪ್ವೆಲ್ ನಲ್ಲಿ ಮಾ.೧೪ರ ೭.೩೦ರ ಸುಮಾರಿಗೆ ಸಂಭವಿಸಿದೆ. ತಾಯಿ ತನ್ನಿಬ್ಬರು ಮಕ್ಕಳನ್ನು ತೋಳಿನಲ್ಲಿ ಮತ್ತು ಕೈಯಲ್ಲಿ ಹಿಡಿದುಕೊಂಡು ಬರುವಾಗ ಪಂಪ್ವೆಲ್ ರಸ್ತೆಬದಿಯಲ್ಲಿ ಸೇರಿರುವ ಜಲ್ಲಿಕಲ್ಲಿಗೆ ಕಾಲ ಬೆರಳುಗಳು ಸಿಲುಕಿ ಮಗು ಸಹಿತ ಕೆಳಗೆಬಿದ್ದಿದ್ದಾರೆ. ತೊಕ್ಕೊಟ್ಟು ಕಡೆಗೆ ಸಂಚರಿಸುವ ಬಸ್ಸುಗಳು ನಿಲ್ಲುವ ಸ್ಥಳದಲ್ಲೇ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ತಾಯಿ ಮಗು ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ತಾಯಿಯ ಕಾಲು ಬೆರಳಿಗೆ ಆದ ಗಂಭೀರ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ಮಾಡಿ, ರಿಕ್ಷಾದಲ್ಲೇ ಕುಳ್ಳಿರಿಸಿ ಬ್ಯಾಂಡೇಜ್ ಸುತ್ತಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ರಾತ್ರಿ ೯ ಗಂಟೆಯಾಗುತ್ತಿರುವಂತೆ ಒನ್ ಆಂಡ್ ಹಾಫ್ ಹೆಸರಿನಲ್ಲಿ ಅಧಿಕ ಬಾಡಿಗೆ ಪಡೆಯುವ ನಗರದ…
Author: UllalaVani
ಮಂಗಳೂರು, ಮಾ. 14 : ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದ ಕರಾವಳಿ ಭಾಗದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ಮಲ್ಲಿಗೆ ಹೂವುಗಳ ಬೇಡಿಕೆ ಕಮರಿದರೆ, ಮೀನುಗಳ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಇದು ಕರಾವಳಿಯ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ವಿಶೇಷವಾಗಿ ಕಸ್ಟಮ್ಸ್ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ. ದುಬೈ, ಅಬುಧಾಬಿ, ಕುವೈಟ್, ಸೌದಿ, ಕತಾರ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಸಂಖ್ಯೆ 8 ಲಕ್ಷಕ್ಕೂ ಅಧಿಕವಿದೆ. ಅವರ ಬೇಡಿಕೆಯ ಮೇರೆಗೆ ಮಂಗಳೂರಿನಿಂದ ಹೂ, ಮೀನು, ತರಕಾರಿ, ಹಣ್ಣುಹಂಪಲು, ಬಿಡಿಭಾಗಗಳು ಕಾರ್ಗೋ ಮುಖಾಂತರ ಸಾಗಾಟ ಮಾಡಲಾಗುತ್ತಿತ್ತು. ಮುಂಬಯಿ ಏಜೆಂಟರು, ಮಂಗಳೂರು ಮತ್ತು ಉಡುಪಿಯಿಂದ ತಮಗೆ ಬೇಕಾದಷ್ಟು ಮಲ್ಲಿಗೆ ಹೂ ಆರ್ಡರ್ ಮಾಡುತ್ತಾರೆ. ದಿನಕ್ಕೆ 250-300 ಅಟ್ಟೆ ಮಲ್ಲಿಗೆ ಮುಂಬಯಿಗೆ ಕಳುಹಿಸಿದರೆ ಅದರಲ್ಲಿ 150-200 ಆಟ್ಟೆ ಮಲ್ಲಿಗೆ ಕೊಲ್ಲಿ ರಾಷ್ಟ್ರಕ್ಕೆ ಕಳುಹಿಸಿಕೊಡುತ್ತಾರೆ ಎಂದು ರಖಂ ಮಲ್ಲಿಗೆ ವ್ಯಾಪಾರಿ ವಿನ್ಸೆಂಟ್ ..ವಿಮಾನ ಮೂಲಕ ಅಂಚೆ, ಬಯೋ ಸ್ಯಾಂಪಲ್, ಚಿನ್ನಾಭರಣ, ಏಡಿಗಳು, ಮೀನು, ಕನ್ಸಲ್ ಕಾರ್ಗೊ, ಮುದ್ರಿತ ಸಾಮಗ್ರಿ, ದಾಖಲೆಗಳು,…
ಪುತ್ತೂರು,ಮಾ. 14 : ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ಕು ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಡಂಬೆಟ್ಟು ಗ್ರಾಮದ ಮುಗೇರ ಮನೆಯ ಅಂಕಿತ್, ಉರುಡಾಯಿ ನಿವಾಸಿ ಯಶೋಧರ, ಮುಗೇರ ಮನೆಯ ಶಿವಪ್ಪ, ತಣ್ಣೀರುಪಂಥ ಗ್ರಾಮದ ಮುಂದಿ ಮನೆಯ ಕರುಣಾಕರ ಪೂಜಾರಿ, ಮಚ್ಚಿನ ಗ್ರಾಮದ ಮಡಕ್ಕಿಲ ಮನೆಯ ಉಮೇಶ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಿಂದ ನಾಲ್ಕು ಅಂಕದ ಹುಂಜ, ಜೂಜಾಟಕ್ಕೆ ಬಳಸಿದ 2,500 ರೂ. ನಗದು, ಎರಡು ಕೋಳಿ ಬಾಳು, ಒಂದು ಅಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಶೆಟ್ಟಿಕೋಡಿ ಎಂಬಲ್ಲಿ ಮೈದಾನವೊಂದರಲ್ಲಿ ಮಾ.13ರಂದು ಕೋಳಿ ಅಂಕ ನಡೆಯುತ್ತಿದ್ದ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರೊಬೆಷನರಿ ಐಪಿಎಸ್ ಅನನ್ಯ ಶ್ರೀವತ್ಸವ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಉಳ್ಳಾಲ, ಮಾ.14: ಡಾ. ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಆಯ್ದ ಐಟಿಇಎಸ್ ಕಂಪನಿಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಇರುವ ಪರಿಣಾಮ: ಒಂದು ಅಧ್ಯಯನ’ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನಿಸಿದೆ. ಇತ್ತೀಚೆಗೆ ನಡೆದ ವೈವಾ ವೋಸ್ ಪರೀಕ್ಷೆಯಲ್ಲಿ ಅವರು ತಮ್ಮ ಮಹಾಪ್ರಬಂಧವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಈ ಸಂಶೋಧನಾ ಕಾರ್ಯವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಡಾ| ಶೇಖರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು. ಡಾ| ರೋವಿನಾ ಸೋನ್ಸ್ ಅವರು ಪ್ರಸ್ತುತ ಯೆನೇಪೊಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್‍ಸ್ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋನಿ ಸೋನ್ಸ್ ಮತ್ತು ರೋಝಿನಾ ಸೋನ್ಸ್ ಅವರ ಸುಪುತ್ರಿ ಆಗಿದ್ದಾರೆ. ಸಂತೋಷ್ ಬಂಗೇರ ಅವರ ಪತ್ನಿಯೂ ಆಗಿದ್ದಾರೆ.
ಕೊಣಾಜೆ: ವಿವೇಕಾನಂದರು ಕಟ್ಟಿದ ಪ್ರತಿಪಾದನೆಯ ಮೂಲವೇ ಮನುಷ್ಯ, ಮನುಷ್ಯತ್ವ. ಮಾನವಿಯತೆಯಲ್ಲಿ ಸುಪ್ತವಾದ ದೈವೀಕತೆಯೇ ಮನುಷ್ಯತ್ವ ಎಂದು ನಂಬಿದ ಅವರು ಇದರಿಂದಲೇ ಮನುಷ್ಯನ ಆಂತರಿಕ ವಿಕಾಸವನ್ಜು ಅರಿಯುವ ಪ್ರಯತ್ನ ಮಾಡಿ ಏಕತೆಯ ಮೂಲಕ ದೈವೀಕತೆಯನ್ನು ಕಂಡರು ಎಂದು ಸ್ವಾಮೀ ವಿವೇಕಾನಂದ ಶೈಕ್ಷಣಿಕ ಅನುಸಂಧಾನ ಗೊಟ್ಟಿಗೆರೆ ಬೆಂಗಳೂರು ಇದರ ಗೌರವ ಶೈಕ್ಷಣಿಕ ನಿರ್ದೇಶಕ ಡಾ.ಹೆಚ್ .ಎನ್ ಮುರಳೀಧರ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಪ್ರೊ.ವಿವೇಕ್ ರೈ ವಿಚಾರವೇದಿಕೆಯಲ್ಲಿ ನಡೆದ ವಿವೇಕವಾಣಿ ‘ ಸ್ವಾಮೀ ವಿವೇಕಾನಂದರ ವಿಶ್ವಧರ್ಮ ಆದರ್ಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.ಪ್ರಪಂಚದಲ್ಲಿ ಧರ್ಮದ ಹೆಸರಿನಲ್ಲಿ ಆದ ರಕ್ತಪಾತ ಬೇರೆ ಯಾವುದೇ ವಿಷಯದಲ್ಲಿ ಆಗಿಲ್ಲ ಎಂದಿದ್ದ ಅವರು ಧರ್ಮದ ಕರಾಳಮುಖವನ್ನು ಮೊತ್ತಮೊದಲ ಬಾರಿಗೆ ಗುರುತಿಸಿದವರು ವಿವೇಕಾನಂದರು. ವೈವಿಧ್ಯತೆಯ ಮೂಲಕವೇ ವಿಶ್ವಮಾನವತೆಯನ್ನು ಕಟ್ಟುವ ಪ್ರಯತ್ನಗಳಾಗಬೇಕು. ವೈವಿದ್ಯತೆಯ ಮೂಲಕವೇ ಏಕಸೂತ್ರತೆಯನ್ನು ಕಂಡುಕೊಳ್ಳಬೇಕಿದೆ ಎಂಬುದು ಅವರ ನಿಲುವಾಗಿತ್ತು ಎಂದರು. ಸಮಾರಂಭದ…
ಮುಲ್ಕಿ: ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಅವರು, “ನಮ್ಮ ಸಮಾಜದ ಓರ್ವ ಕಣ್ಮಣಿ, ಮುಲ್ಕಿ ಕಂಡಂತಹ ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ರು ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ. ಅವರಿಂದ…
ಬಂಟ್ವಾಳ, ಮಾ. 14 : ಪಾಣೆಮಂಗಳೂರು ಎಂಬಲ್ಲಿ ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ ನಡೆದಿದೆ. ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ರಾತ್ರಿ ಪಾಣೆಮಂಗಳೂರು ಎಂಬಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಗ್ಗೆ ಪೋಲೀಸ್ ಇಲಾಖೆ ಮಾಹಿತಿ ನೀಡಿದೆ. ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯದ ಸಕ್ರೀಯ ಸದಸ್ಯನಾಗಿದ್ದ ಇವರು ಅತ್ಯುತ್ತಮ ವಿಡಿಯೋಗ್ರಾಫರ್ ಆಗಿದ್ದರು. ರಕ್ಷಿತ್ ಅವರ ಮಗಳ 10 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ನಾಳೆ ಮಾ.15 ರಂದು ಮನೆಯಲ್ಲಿ ನಡೆಯಲು ತಯಾರಿಗಳು ಮಾಡಲಾಗಿತ್ತು. ಮಗಳ ಹುಟ್ಟು ಹಬ್ಬದ ಸಂಭ್ರಮದ ಮನೆಯೀಗ ತಂದೆಯ ಸಾವಿನಿಂದ ಮೌನವಾಗಿ ರೋಧಿಸುತ್ತಿದೆ. ರಕ್ಷಿತ್ ಸಹೋದರ ರಂಜಿತ್ ಅವರು ಕೂಡ ಸುಮಾರು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಅತ್ಯಂತ ಬಡ ಕುಟುಂಬ…
ಬೆಂಗಳೂರು, ಮಾರ್ಚ್ 14: ಮ್ಯೂಲ್ ಅಕೌಂಟ್ಗಳ ವಿರುದ್ಧದ ಕಾರ್ಯಾಚರಣೆ ವೇಳೆ ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಸೈಬರ್ ವಂಚಕರಿಬ್ಬರನ್ನು ರಾಜ್ಯ ಸೈಬರ್ ಕಮಾಂಡ್ ಯೂನಿಟ್ ಬಂಧಿಸಿದೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್ರನ್ನ ಬಂಧಿಸಲಾಗಿದೆ. ಬಂಧಿತ ವಂಚಕರು ಟ್ರೇಡಿಂಗ್ ಬಿಸಿನೆಸ್ ಹೆಸರಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿದ್ದರು. ಬಳಿಕ ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ನಿಖರ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 18 ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಹೇಗೆ ನಡೆಯುತ್ತಿತ್ತು? ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಚೀನಾದ ಸೈಬರ್ ವಂಚಕರಿಗೆ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿ ಬೇಕಾಗಿದ್ದರಿಂದ,…
ಮಂಗಳೂರು, ಮಾರ್ಚ್ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಬಂದ್ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು 5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಹೋಟೆಲ್ ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆಯಿಂದ ಈ ಭರ್ಜರಿ ಆಫರ್ ನೀಡಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಸ್ಥೆ ತನ್ನ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್ಗೆ ಹೋದರೆ ಈ ಆಫರ್ ಸಿಗುತ್ತದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಗ್ಯಾಸ್ ಅಭಾವ ಹಿನ್ನೆಲೆ ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್…
ಉಳ್ಳಾಲ; ಇಲ್ಲಿನ ಠಾಣಾ ವ್ಯಾಪ್ತಿಯ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗ್ರೌಂಡ್ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಪ್ಪಳದ ಶೇಕ್ ಅರ್ಬಾಜ್ ಮತ್ತು ರಶೀದ್ ಆಲ್ವಿನ್ ಎಂದು ಗುರುತಿಸಲಾಗಿದೆ. ಇವರು ಮಾದಕ ವಸ್ತು ಗಾಂಜಾವನ್ನು ತಂದು ತನ್ನ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 51,500 ರೂ.ಮೌಲ್ಯದ 1.110 ಕೆಜಿ ಗಾಂಜಾ, 520 ರೂ.ನಗದು, ಮೊಬೈಲ್ ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

