ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಫುಟ್ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನವೆಂಬರ್ 25 ರಿಂದ 30 ರ ತನಕ ಛತ್ತೀಸ್‍ಘಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಜೂನಿಯರ್ ಫುಟ್ಬಾಲ್ ಬಾಲ್ ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಶಾಝಿನ್ ( ಕ್ಯಾಪ್ಟನ್), ಅಬ್ದುಲ್ ಮುಫಿಝ್, ಮುಹಮ್ಮದ್ ತಶ್ರೀಪ್ ಕೆ , ಮುಹಮ್ಮದ್ ಝಾಫಿûಕ್, ಮುಹಮ್ಮದ್ ರಾಶಿಕ್ , ಮುಹಮ್ಮದ್ ಅರ್ಫಾಝ್ , ಅರ್ಫಾನ್ ಅಕ್ರಮ್ ಹಸನ್ , ಹಸನ್ ಶಾಮಿಲ್, ಮೊದಲಾದವರನ್ನು ಹಾಗೂ ತರಬೇತಿದಾರ ಖಾಲಿದ್ ಇವರನ್ನು ಉಳ್ಳಾಲ ಸಯ್ಯಿದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಯು.ಎಸ್.ಹಂಝ, ಉಪಾಧ್ಯಕ್ಷರಾದ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ಹಾಗೂ ಸಮಿತಿ ಸದಸ್ಯರು , ಮುಖ್ಯ ಆಡಳಿತ ಅಧಿಕಾರಿ , ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿದರು.


