ತೊಕ್ಕೊಟ್ಟು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ ಖರೀದಿಯಲ್ಲಿ 1,463 ಕೋಟಿ ರೂ ಔಷಧ ಹಗರಣದಲ್ಲಿ ಭಾಗಿಯಾಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಹಗರಣಗಳಲ್ಲಿ ನಂ.1 ಅನಿಸಿಕೊಂಡಿದ್ದು, ಶೀಘ್ರವೇ ರಾಜೀನಾಮೆಗೆ ಒತ್ತಾಯಿಸಿ ಮೇ.23 ರಂದು ಬಿಜೆಪಿ ಮಂಗಳೂರು ವಿಧಾನಸಭೆಯ ವತಿಯಿಂದ ತೊಕ್ಕೊಟ್ಟು ಬಸ್ ಇಲ್ದಾಣದಲ್ಲಿ ಸಂಜೆ 4.00 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಹೇಳಿದ್ದಾರೆ. ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆಸಿದ ಸುದ್ಧಿಗೋಷ್ಟಿಂiÀiಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನಂ.1 ಎಂದು ಹೇಳಿಕೊಳ್ಳುತ್ತಿರುವ ಸಚಿವ ಖಾದರ್ ಇದೀಗ ಹಗರಣಗಳಲ್ಲಿಯೂ ನಂ.1 ಆಗಿದ್ದಾರೆ. ಸಾವಿರಾರು ಕೋಟಿ ರೂ ಹಗರಣ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ. 2015-16ರ ಸಾಲಿನಲ್ಲಿ ಕೇಂದ್ರ ಸರಕಾರ ಎನ್.ಹೆಚ್.ಎಂ ಅಭಿಯಾನದಡಿ ರಾಜ್ಯಕ್ಕೆ ನೀಡಿದ 1,463 ಕೋಟಿ ರೂ.ಗಳನ್ನು ಸದ್ಬಳಕೆ ಮಾಡದೆ ದುರ್¨ಳಕೆ ಮಾಡುವ ಮೂಲಕ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಔಷಧಿಯ ಗುಣಮಟ್ಟದಲ್ಲೂ ರಾಜಿ ಮಾಡಿಕೊಂಡು ನಕಲಿ ಕಂಪೆನಿಗಳಿಂದ ಹೆಚ್ಚು ಕ್ರಯಕ್ಕೆ ಕಳಪೆ ಔಷಧಿ…
Author: UllalaVani
ಕೊಲ್ಯ: ಕೊಲ್ಯ ಸೈಂಟ್ ಜೋಸೆಫ್ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ 2015-16 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 90% ಫಲಿತಾಂಶ ಪಡೆದುಕೊಂಡಿದ್ದಾರೆ. ಇವರಲ್ಲಿ ಅನೀಶ್ ಭಟ್ (600), ನಿಶಾ ಪಿ.ನಾಯಕ್(597), ಅಭಿಷೇಕ್ ಶರ್ಮಾ(588), ಮಾಳವಿಕ ಪಿ.(583)ಎಸ್.ಡಿ.ಪ್ರಜ್ವಲ್(579),ರಕ್ಷಿತಾ(579), ತನ್ವಿ.ಜೆ.ಕೋಟೆಕಾರು(576),ಪ್ರಿಯಾ ಬಿ.ಕೆ(558) ಅಂಕ ಪಡೆದುಕೊಂಡಿದ್ದಾರೆ.
ಮೊಂಟೆಪದವು: ಉಮ್ರಾ ಯಾತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ಮೊಂಟೆಪದವು ಮೂಲದ ತಾಯಿ ಹಾಗೂ ಮಗ ಝುಬೈಲ್ ನ ಖಸೀಂ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಅದೇ ಕಾರಿನಲ್ಲಿದ್ದ ಮೃತ ಯುವಕನ ತಂದೆ ಹಾಗೂ ಪತ್ನಿ ಗಾಯಗೊಂಡು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಂಟೆಪದವು ನಿವಾಸಿ ಅಬ್ಬಾಸ್ (29) ಹಾಗೂ ಅವರ ತಾಯಿ ಖತೀಜಮ್ಮ (50) ಮೃತಪಟ್ಟವರು. ಅದೇ ಕಾರಿನಲ್ಲಿದ್ದ ತಂದೆ ಮಹಮ್ಮದ್(60) ಹಾಗೂ ಪತ್ನಿ ಮೈನಾಝ್ (20) ಗಾಯಗೊಂಡು ಖಸೀಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿ ಅರೆಬಿಯಾದ ಝುಬೈಲ್ ನಲ್ಲಿ ಕನ್ ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಬಾಸ್ ಅವರು ಕಳೆದ 15 ದಿನಗಳ ಹಿಂದೆ ಪತ್ನಿ ಹಾಗೂ ಹೆತ್ತವರನ್ನು ಉಮ್ರಾ ಯಾತ್ರೆಗೆ ತೆರಳಲು ಅಲ್ಲಿಗೆ ಕರೆಯಿಸಿದ್ದರು. ಅಲ್ಲಿಂದ ಉಮ್ರಾ ಯಾತ್ರೆಗೆ ಕೇರಳ ಮೂಲದ ಸ್ನೇಹಿತನ ಕುಟುಂಬದ ನಾಲ್ಕು ಮಂದಿ ಹಾಗೂ ಅಬ್ಬಾಸ್ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿ ತೆರಳಿದ್ದರು. ಭಾನುವಾರ ರಾತ್ರಿ ಉಮ್ರಾದಿಂದ ಮತ್ತೆ ವಾಸಸ್ಥಳ ಝುಬೈಲ್‍ಗೆ ಮರಳುತ್ತಿದ್ದಾಗ ತಡರಾತ್ರಿ…
ಬಬ್ಬುಕಟ್ಟೆ: ಪೆರ್ಮನ್ನೂರು ಬಬ್ಬುಕಟ್ಟೆಯ ಹಿರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ 2015-16 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡಾ 98.6 ಫಲಿತಾಂಶ ಪಡೆದುಕೊಂಡಿದ್ದಾರೆ. 72 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು,11 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ,50 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಫೈಝಾ ಸುಲ್ತಾನ (610), ಫಾತಿಮಾ ರುಖ್ಯಾನಾ (595), ಫಾತಿಮಾ ಸಫಾ ಅಬ್ಬಾ (595), ಫರೀದಾ ಜಾಸ್ಮಿನ್ (592), ಸಾರಾ ನಿಮ್ರಾ (585), ಆಯಿಷಾ ಅಫ್ರಾ ( 571)
ತೊಕ್ಕೊಟ್ಟು: ಎತ್ತಿನಹೊಳೆ ಯೋಜನೆ ಮೂಲಕ ಜಿಲ್ಲೆಯನ್ನು ಬರಡುಗೊಳಿಸುವ ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ ಎಂದು ಮೇ.19 ರಂದು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಹೇಳಿದ್ದಾರೆ. ಅವರು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೇ.17,18,19 ರಂದು ನಡೆಯಲಿರುವ ಪ್ರಥಮ ವರ್ಷಾಚರಣೆ ಹಾಗೂ ಮಹಾಗಣಪತಿಯಾಗ, ಮಹಾರುದ್ರಯಾಗ, ಭಾಗ್ಯಸೂತ್ರಯಾಗ ಹಾಗೂ ಚಂಡಿಕಾಯಾಗದ ಕುರಿತು ತೊಕ್ಕೊಟ್ಟುವಿನಲ್ಲಿ ಸೋಮವಾರ ಕರೆದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಶತಮಾನಗಳ ಇತಿಹಾಸ ಹೊಂದಿದ್ದ ಕ್ಷೇತ್ರ ದುರುಳರ ಆಕ್ರಮಣಕ್ಕೆ ಒಳಗಾಗಿ ನಾಶದ ಅಂಚಿನಲ್ಲಿತ್ತು. ಇದನ್ನು ಊರ ಪರವೂರ ಭಕ್ತಾಧಿಗಳ ಶ್ರಮದಾನದಿಂದ ಪುನರ್ ನಿರ್ಮಿಸಿ , ಕಳೆದ ವರ್ಷ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರಗಿತ್ತು. ಇದೀಗ ಪ್ರಥಮ ವರ್ಷಾಚರಣೆ ಪ್ರಯುಕ್ತ ಶ್ರೀದಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಮಹಾಗಣಪತಿಯಾಗ, ಮಹಾರುದ್ರಯಾಗ, ಭಾಗ್ಯಸೂತ್ರಯಾಗ , ಚಂಡಿಕಾಯಾಗ ಇನೋಳಿ ಶ್ರೀ ಸುಬ್ರಹ್ಮಣ್ಯ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ. ಜಿಲ್ಲೆಗೆ…
ಉಳ್ಳಾಲ: ಅಕ್ಷರವಂಚಿತ, ಅನ್ನವಂಚಿತ, ಆರೋಗ್ಯ ವಂಚಿತ ಮಹಿಳಾ ಸಮಾಜ ಇಂದು ನಿರ್ಮಾಣಗೊಂಡಿದ್ದು, ಈ ಬಗ್ಗೆ ಅಬ್ಬಕ್ಕ ಉತ್ಸವದ ವೇದಿಕೆಗಳಲ್ಲಿ ಚರ್ಚೆಗಳು ನಡೆದು ಅದರ ಕುರಿತ ವರದಿಯನ್ನು ಸರಕಾರದ ಮುಂದಿಡಬೇಕಿದೆ ಎಂದು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ವಿ. ಮಂಜುಳಾ ಮಾನಸ ಹೇಳಿದ್ದಾರೆ. ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯಲ್ಲಿ ನಡೆಯುತ್ತಿರುವ ರಾಣಿ ಅಬ್ಬಕ್ಕ ಉತ್ಸವ -2016ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರ ಹೆಸರಿನಲ್ಲಿ ಉತ್ಸವಗಳು ಮಾತ್ರ ಸೀಮಿತವಾಗಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡುವಂತಹ ಕೆಲಸ ಸರಕಾರದಿಂದ ಆಗಬೇಕಿದೆ. ಇದರಿಂದ ವೀರ ಮಹಿಳೆಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದ ಮುಖ್ಯ ವಾಹಿನಿಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಇದರಿಂದ ಹಿಂದಿನ ವೀರ ವನಿತೆಯರ ಇತಿಹಾಸ ಮರುಕಳಿಸುತ್ತಿಲ್ಲ. ಸಾಂಸ್ಕøತಿಕ ಹಿನ್ನೆಲೆಯ ದೇಶದಲ್ಲಿ ಗರ್ಭದಲ್ಲಿ ಹೆಣ್ಣು ಭ್ರೂಣವನ್ನು ಕೊಲ್ಲುವ ಸಂಸ್ಕಾರ ಬೆಳೆಯುತ್ತಿದ್ದರೆ, ಬೆಳೆದು ನಿಂತ ಮಹಿಳೆಯರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಜಂಕ್ಷನಿನಲ್ಲಿರುವ ಆರ್.ಇ.ಬಿ.ಕಾಂಪ್ಲೆಕ್ಸ್ ಸಮೀಪದ ಕಾಂಪೌಂಡಿನಲ್ಲಿದ್ದ ಟಯರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ತೊಕ್ಕೊಟ್ಟು ಜಂಕ್ಷನಿನಲ್ಲಿರುವ ಅಬ್ದುಲ್ ರೆಹಮಾನ್ ಎಂಬವರಿಗೆ ಸೇರಿದ ಟಯರ್ ಅಂಗಡಿಯಲ್ಲಿ ದುರಂತ ಸಂಭವಿಸಿದೆ. ಘಟನೆಯಿಂದಾಗಿ ಇಡೀ ಜಂಕ್ಷನ್‍ನಲ್ಲಿ ಹೊಗೆ ತುಂಬಿ ಕತ್ತಲ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುಮಾರಿಗೆ ಆಕಸ್ಮತಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಜ್ವಾಲೆ ಎತ್ತರಕ್ಕೆ ಉರಿದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು. ಈ ವೇಳೆ ಅಂಗಡಿಯೊಳಗಿದ್ದ ಟಯರ್, ಟಯರ್ ರಿಸೋಲ್ವಿಂಗ್ ಯಂತ್ರ ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿರಬಹುದೆಂದು ಆಂದಾಜಿಸಲಾಗಿದೆ. ಅಂಗಡಿಯೊಳಗೆ ಯಾರು ಇಲ್ಲದೇ ಇರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಮೀಪದಲ್ಲೇ ಡಿಸೇಲ್ ಜನರೇಟರ್, ವಾಣಿಜ್ಯ ಕಟ್ಟಡ, ಗೂಡಂಗಡಿಗಳಿದೆ. ಆದರೆ ಅಗ್ನಿಶಾಮಕ ದಳದ ಸಕಾಲಿಕ ಆಗಮನದಿಂದ ನಡೆಯುತ್ತಿದ್ದ ದೊಡ್ಡ ದುರಂತ ತಪ್ಪಿದೆ. ಅಗ್ನಿಶಾಮಕ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದಾಗಿ ನೂರಕ್ಕೂ ಅಧಿಕ ಕೂತೂಹಲಿಗರು ಸ್ಥಳದಲ್ಲಿ ಜಮಾಯಿಸಿದ್ದಾರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪಿಕಪ್ ವಾಹನದ ಟಯರ್ ಕಳಚಿದ ಪರಿಣಾಮ ಅರ್ಧತಾಸು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ಸಂಜೆ ನಡೆಯಿತು. ಮಂಗಳೂರಿನಿಂದ ತಲಪಾಡಿ ಕಡೆಗೆ ಇಂಟರ್‍ಲಾಕ್ ಹೇರಿಕೊಂಡು ಸಾಗುತ್ತಿದ್ದ ಪಿಕಪ್ ವಾಹನದ ಟಯರ್ ತೊಕ್ಕೊಟ್ಟು ಜಂಕ್ಷನ್‍ನಲ್ಲಿನ ರಾ.ಹೆ.ಯಲ್ಲಿ ಕಳಚಿತು. ಪರಿಣಾಮ ಪಿಕಪ್ ವಾಹನ ರಸ್ತೆಯಲ್ಲೇ ಉಳಿದು , ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ರಾ.ಹೆ.ಯಲ್ಲಿ ರಸ್ತೆ ಕಿರಿದಾಗಿದ್ದು, ಅಧಿಕ ವಾಹನ ಸಂಚಾರವಿರುವ ಪ್ರದೇಶದಲ್ಲಿ ಆಗಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಮಂಗಳವಾರ ಸಂಜೆ ವೇಳೆ ಪಿಕಪ್ ವಾಹನದ ಕೆಟ್ಟು ನಿಂತ ಪರಿಣಾಮದಿಂದ ಒಂದು ತಾಸು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಎರಡು ಕಿ.ಮೀ ದೂರವನ್ನು ತಲುಪಲು ವಾಹನ ಸವಾರರಿಗೆ ಅರ್ಧ ತಾಸು ಬೇಕಾಯಿತು. ಬಳಿಕ ಉಳ್ಳಾಲ ಪೊಲೀಸರು ಕ್ರೇನ್ ಮೂಲಕ ಪಿಕಪ್ ವಾಹನವನ್ನು ಮೇಲಕ್ಕೆತ್ತುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಾಂತಿಸಭೆಯಲ್ಲಿ ಕೇವಲ ಮುಖಂಡರುಗಳು ಮಾತ್ರ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದರಿಂದ ಗಲಭೆ ನಿಯಂತ್ರಿಸಲು ಅಸಾಧ್ಯ . ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಶಾಂತಿ ಸಂದೇಶವನ್ನು ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು , ಮುಖಂಡರುಗಳ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಮೇ. 5 ರಂದು ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮಧ್ಯಾಹ್ನ 3.00 ಗಂಟೆಗೆ ಉಳ್ಳಾಲದಾದ್ಯಂತ ಶಾಂತಿಗಾಗಿ ಪಾದಯಾತ್ರೆ ನಡೆಯಲಿದೆ ಎಂದು ಉಳ್ಳಾಲದಲ್ಲಿ ತಾತ್ಕಾಲಿಕವಾಗಿ ನಿಯುಕ್ತಿಗೊಂಡ ಠಾಣಾಧಿಕಾರಿ ಶಿವಪ್ರಕಾಶ್ ಹೇಳಿದ್ದಾರೆ. ಅವರು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಕೊಲೆ , ಕೊಲೆಯತ್ನ ಹಾಗೂ ಮತೀಯ ಗಲಭೆಗೆ ಪ್ರಚೋದಿಸುವ ಘಟನೆಗಳನ್ನು ಹತ್ತಿಕ್ಕುವ ಸಲುವಾಗಿ ವಿವಿಧ ಮುಖಂಡರುಗಳ ಸಮ್ಮುಖದಲ್ಲಿ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಶಾಂತಿಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಉಳ್ಳಾಲದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯದಂತೆ ಶಾಂತಿ ಸಂದೇಶವನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಲು ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಉಳ್ಳಾಲದ ಕೋಡಿ, ಕೋಟೆಪುರ, ತೊಕ್ಕೊಟ್ಟು, ಮೊಗವೀರಪಟ್ನ ಪ್ರದೇಶದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಬ್ಬಕ್ಕ ಉತ್ಸವಕ್ಕೆ ಸರಕಾರ ಬಜೆಟ್‍ನಲ್ಲಿ ಅನುದಾನಕ್ಕೆ ಅವಕಾಶ ಕಲ್ಪಿಸಿದ್ದು ಈ ಉತ್ಸವವನ್ನು ಸೌಹಾರ್ಧ, ಸಾಮರಸ್ಯದ ಉತ್ಸವವವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಮೇ 7ಹಾಗೂ 8ರಂದು ತೊಕ್ಕೊಟ್ಟಿನ ಖಾಸಗಿ ಸಭಾಂಗಣದಲ್ಲಿ ನಡೆಯಲಿರುವ ಅಬ್ಬಕ್ಕ ಉತ್ಸವ ಪ್ರಯುಕ್ತ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಣಿ ಅಬ್ಬಕ್ಕ ಕ್ರೀಡೋತ್ಸವ ಮತ್ತು ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಅಂತಾರಾಷ್ಟಿ ್ರೀಯ ವೈಟ್‍ಲಿಫ್ಟರ್‍ಶ್ಯಾಮಲಾ ಶೆಟ್ಟಿ ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016 ಉದ್ಘಾಟಿಸಿದರು. ರಾಣಿ ಅಬ್ಬಕ್ಕ ಕಲಾವೈಭವ 2016ಕ್ಕೆ ಶಿಕ್ಷಣ ಸಿರಿ ಪ್ರಶಸ್ತಿ ಪುರಸ್ಕ ೃತ ನಿವೃತ್ತ ಶಿಕ್ಷಕಿ ಸಾವಿತ್ರಿ ಎಸ್. ರಾವ್ ಚಾಲನೆ ನೀಡಿದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ…

