ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಜಗದ್ಗುರುಗಳಾದ ಫೋಪ್ ಪ್ರಾನ್ಸಿಸ್ ಅವರು ಈ ವರ್ಷವನ್ನು ಕರುಣಾಮಯ ವರ್ಷವೆಂದು ಘೋಷಿಸಿದ್ದು, ಆ ಪ್ರಕಾರ ಜನರು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ರೆ| ಡಾ| ಎಲೋಷಿಯಸ್ ಪಾವ್ಲ್ ಡಿ.ಸೋಜ ಅಭಿಪ್ರಾಯಪಟ್ಟರು.
ಅವರು ಮುಡಿಪುವಿನ ಸಂತ ಮುಕ್ತಿಧರ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಕೃತಜ್ಞತಾ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂತ ಜೋಸೆಫ್ ವಾಝರ ಕ್ಷೇತ್ರವನ್ನು ಅ„ಕೃತ ಪುಣ್ಯ ಕ್ಷೇತ್ರವಾಗಿ ಘೋಷಣೆ ಮಾಡಿದ ಅವರು ಇಲ್ಲಿಗೆ ಬರುವ ಭಕ್ತರಿಗೆ ವಿಶೇಷ ಆಶಿರ್ವಾದ ಕೃಪೆ ಲಭಿಸಲಿದೆ ಎಂದರು. ಮಹೋತ್ಸವದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಭಕ್ತಾ„ಗಳು ಭಾಗವಹಿಸಿ ಅನ್ನ ಪ್ರಸಾದವನ್ನನು ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಮಂಗಳೂರು ದಕ್ಷಿಣ ವಲಯದ ಪ್ರದಾನ ಧರ್ಮ ಗುರುಗಳಾದ ವಂದನೀಯ ಫಾ| ಜೆ.ಬಿ. ಸಲ್ದಾನ, ಮುಕ್ತಿಧರ ಸಂತ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ| ಬೆಂಜಮೀನ್ ಪಿಂಟೋ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ರೋಶನ್ ಡಿ.ಸೋಜ ಉಪಸ್ಥಿತರಿದ್ದರು.
















