Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ದರ್ಗಾ ವಠಾರದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಉಳ್ಳಾಲ ಧ್ವಜಾರೋಹಣಗೈದರು. ಈ ಸಂದರ್ಭ ಸಯ್ಯಿದ್ ಮದನಿ ಅರಬಿಕ್‍ಟ್ರಸ್ಟ್ ಮುಫತ್ತಿಶ್ ಸುಲೈಮಾನ್ ಸಖಾಫಿ, ಕಾಲೇಜು ಪ್ರಾಂಶುಪಾಲ ಇಬ್ರಾಹೀಮ್ ಅಹ್ಸನಿ, ಮಜೀದ್ ಸಖಾಫಿ, ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು. ಕೆ. ಇಲ್ಯಾಸ್, ಅಡಿಟರ್ ಯು. ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷರಾದ ಯು. ಎಚ್. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲೀ ಮೋನು, ಕುಂಞ ಅಹ್ಮದ್, ಮೊಯ್ದಿನಬ್ಬ ಪೇಟೆ. ಸೇರಿದಂತೆ ಹಲವು ಸಮಿತಿ ಸದಸ್ಯರು, ಜಮಾತ್ ಸದಸ್ಯರು ಉಪಸ್ಥಿತರಿದ್ದರು. ಖತೀಬರಾದ…

Read More

UN NETWORKS ಉಳ್ಳಾಲ: ದೇಶಕ್ಕಾಗಿ ಬದುಕೋಣ, ದೇಶದ ಸತ್ಪ್ರಜೆಯಾಗಿ ಬದುಕಿ ದೇಶ ಸೇವೆ ಮಾಡೋಣ, ಇತಿಹಾಸದಿಂದ ಸ್ಪೂರ್ತಿ ಪಡೆದು, ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳೋಣ, ಕ್ರಾಂತಿಕಾರಿಗಳಲ್ಲಿ ಒಬ್ಬರಾದ ವಾಸುದೇವ ಬಲವಂತ ಪಡ್ಕೆಯಂತಹ ಆದರ್ಶ ವ್ಯಕ್ತಿತ್ವವನ್ನು ನಮ್ಮದಾಗಿಸೋಣ ಎಂದು ಬೆಂಗಳೂರಿನ ಐಬಿಯಂ ಸಾಫ್ಟ್‍ವೇರ್ ಕಂಪನಿಯ ಉದ್ಯೋಗಿ ರವಿತೇಜ ಶಾಸ್ತ್ರಿ ಹೇಳಿದರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಜರುಗಿದ 71ನೇಯ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ವೀರ್ ಸಾವರ್ಕರ್ ರವರ ಜೀವನದ ಕುರಿತಾದ ನಾಟಕ, ದೇಶಭಕ್ತಿಗೀತೆಗಳು ಪ್ರದರ್ಶಿಸಲ್ಪಟ್ಟವು. ವಿದ್ಯಾರ್ಥಿನಿ ಮಾನಸಿ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ವರ್ಷ ಅಥಿತಿಗಳನ್ನು ಸ್ವಾಗತಿಸಿದರು ಮತ್ತು ವಿದ್ಯಾರ್ಥಿ ರುದ್ರ ಪಾಟೀಲ್ ವಂದಿಸಿದರು.

Read More

UN NETWORKS ಯೆನೆಪೋಯ: ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಬಳಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಂಟು ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳ ಗುಂಪೊಂದು ಪುಡಿಗೈದಿರುವ ಘಟನೆ ಶನಿವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಕಾರೊಳಗಡೆ ಕುಳಿತಿದ್ದ ರೋಗಿ ಸಂಬಂಧಿಯೋರ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಾಲಿಬ್ ಹುಸೈನ್ ಎಂಬವರು ಗಾಯಗೊಂಡಿದ್ದಾರೆ. ಯೆನೆಪೋಯ ಆಸ್ಪತ್ರೆ ವಠಾರದಲ್ಲಿ ವಾಹನಗಳು ನಿಲ್ಲಿಸಲು ಸ್ಥಳಾವಕಾಶ ಇಲ್ಲದಿರುವುದರಿಂದ ಸಮೀಪದಲ್ಲೇ ಖಾಸಗಿ ಸ್ಥಳವನ್ನು ಬಾಡಿಗೆಗೆ ಪಡೆಯಲಾಗಿದೆ. ಶನಿವಾರ ತಡರಾತ್ರಿ 2 ರಿಂದ 3 ರವೇಳೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿಡಲಾಗಿದ್ದ, ಕಾರಿನ ಬಳಿ ಮುಖಕ್ಕೆ ಬಟ್ಟೆ ಕಟ್ಟಿದ್ದ ಸ್ಥಿತಿಯಲ್ಲಿ ಬಂದ ದುಷ್ಕರ್ಮಿಗಳ ತಂಡ ಎಂಟು ಕಾರುಗಳ ಗಾಜುಗಳನ್ನು ಪುಡಿಗೈದಿರುವುದಲ್ಲದೆ, ವಾಹನಗಳಿಗೂ ಹಾನಿ ಮಾಡಿದೆ. ಈ ಸಂದರ್ಭ ಕಾರೊಳಗಡೆ ಮಲಗಿದ್ದ ರೋಗಿಯೋರ್ವರ ಸಂಬಂಧಿಕರು ಗಾಜು ತಗಲಿ ಗಾಯಗೊಂಡಿದ್ದಾರೆ. ಐದು ಕಾರುಗಳು ರೋಗಿಗಳ ಸಂಬಂಧಿಕರಿಗೆ ಸೇರಿದಲ್ಲಿ, ಇನ್ನು ಮೂರು ಕಾರುಗಳು ಆಸ್ಪತ್ರೆ ವೈದ್ಯರುಗಳಿಗೆ ಸೇರಿದ್ದಾಗಿದೆ. ಈ ಕುರಿತು ಅನೆಸ್ತೀಷಿಯಾ ವಿಭಾಗದ ಡಾ.ಶೈನಾ ಹಾಗೂ ಡಾ.ಅನಾ ಜೆಸಿಕಾ ಮರಿಯಂ ಹಾಗೂ…

Read More

UN NETWORKS ಬಾಯಾರು: ಸಹಸ್ರಾರು ಜನರು ಸೇರುವ ಬಾಯಾರು ಮುಜಮ್ಮಹ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜಲಿಸ್ ಆಗುಸ್ಟ್ 18 ನಾಳೆ ರಾತ್ರಿ ನಡಯಲಿರುದು. ನಾಳೆ ಮಗರಿಬ್ ನಮಾಝಿನ ನಂತರ ನಡೆಯುವ ಅಥ್ಮೀಯ ಸ್ವಲಾತ್ ಮಜಲಿಸಿನಲ್ಲಿ ಖ್ಯಾತ ವಾಗ್ಮಿ ಅಶ್ರಫ್ ಸಅದಿ ಮಲ್ಲೂರು ಪ್ರಭಾಷಣೆ ಗೆಯ್ಯುವರು. ಅಥ್ಮೀಯ ನೇತಾರ,ಮುಜಮ್ಮಹ್ ಸಾರಥಿ ಅಸ್ಸಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿ ಕೋಯಾ ಅಲ್ಬುಖಾರಿ ಬಾಯಾರ ತಂಗಳ್ ಸ್ವಲಾತ್ ಮಜಲಿಸಿಗೂ ಕೋಟೂಪ್ರಾರ್ಥನೆಗೂ ನೇತೃತ್ವ ನೀಡುವರು. ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಅಬ್ದುಲ್ ಮದನಿ, ಅಬ್ದುಲ್ ಲತೀಫ್ ಸಅದಿ ಪಯಷಿ, ರಫೀಕ್ ಸಅದಿ ದೇಲಂಪಾಡಿ, ಸಿದ್ದೀಕ್ ಹಾಜಿ ಮಂಗಳೂರು, ಅಬ್ಬಾಸ್ ಮಂಗಳೂರು ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸುವರು.

Read More

UN NETWORKS ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅವರ “ಮಳೆ ಹನಿ” ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನ ಸರಕಾರಿ ರಾಜ್ಯ ನೌಕರರ ಭವನದಲ್ಲಿ ನಡೆಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ದ.ಕ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್. ಎಂ. ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್, ದಿನೇಶ್ ಹೊಳ್ಳ, ಡಿ.ಐ. ಅಬೂಬಕರ್ ಕೈರಂಗಳ, ಫೈನ್ ಗೋಲ್ಡ್ ಡಿ.ಎಂ.ರಶೀದ್, ಯಂಶ ಬೇಂಗಿಲ, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆಗೆ ಹನೀಫ್ ಹಾಜಿ ಗೋಳ್ತಮಜಲು ಅವರನ್ನು ಹಾಗೂ ಕಲಾಕ್ಷೇತ್ರದ ಸಾಧನೆಗೆ ತಾರಾನಾಥ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿ ಮತ್ತು…

Read More

UN NETWORKS ಕುವೈತ್: ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ದುವಾದೊಂದಿಗೆ ಆರಂಭವಾಯಿತು. ಕೇಂದ್ರ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ. ಹೋರಾಟ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ಎಂದು ತಿಳಿಸಿದರು. ಅಧ್ಯಕ್ಷ ಭಾಷಣದಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿಯವರು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿ ದರು.ಜನಾಬ್ ಝಕ್ರಿಯಾ ಆನೆಕಲ್ ಮಾತನಾಡಿ ನಾವು ನಮ್ಮ ರಾಷ್ಟ್ರದ ಬಗ್ಗೆ ಪ್ರೀತಿಯನ್ನು ತೊರಿಸಬೇಕಾಗಿದೆ ಹುಬ್ಬುಲ್ ವತನ್ ಮಿನಲ್ ಈಮಾನ್(ಸ್ವರಾಜ್ಯ ಪ್ರೇಮವು ಈಮಾನಿನ…

Read More

UN NETWORKS ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು, ಅಡ್ಕರೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹುಮಾನ್ಯ ಹಂಝ ಸಖಾಫಿ ಅಲ್ ಅಝ್ಹರಿ ದುವಾ ನೆರವೇರಿಸಿದರು. ಸಂಘದ ಅದ್ಯಕ್ಷ ರಾದ ಮಹಮ್ಮದ್ ನಿಯಾಝ್ ಧ್ವಜಾರೋಹಣ ಮಾಡಿದರು. ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿ ಮಾತಾನಾಡುತ್ತಾ ಪ್ರಸಕ್ತ ಸನ್ನಿವೇಶದಲ್ಲಿ ನಾವು ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ಇನ್ನೊಬ್ನರಿಗೆ ತೋರ್ಪಡಿಸುವ ಅನಿವಾರ್ಯತೆ ಬಂದಿದೆ, ದೇಶಕ್ಕಾಗಿ ಹಿಂದು ಮುಸಲ್ಮಾನರು ಒಗ್ಗಟ್ಟಾಗಿ ಹೋರಾಟ ಮಾಡಿ ತ್ಯಾಗ ಬಲಿದಾನದಿಂದ ನಮಗೆ ನಾವು ಸ್ವತಂತ್ರವಾಗಿ ಜೀವಿಸುವಂತೆ ಮಾಡಿರುತ್ತಾರೆ, ಆದರೆ ಇಂದು ನಾವು ಧರ್ಮದ ಹೆಸರಿನಲ್ಲಿ ಕಾದಾಡುತಿದ್ದೇವೆ, ಕೋಮುವಾದಿಗಳಿಗೆ ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ, ಅದು ನಮ್ಮ ರಕ್ತದ ಕಣಕಣದಲ್ಲೂ ಇದೆ , ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸದಾ ಸಿದ್ದ, ಎಂದರು, ವೇದಿಕೆಯಲ್ಲಿ ಅಡ್ಕರೆ ಪಡ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ರಾದ ಕೆ.ಯು. ಮುಹಮ್ಮದ್, ರಹ್ಮಾನಿಯಾ ಮದ್ರಸ ಅಡ್ಕರೆ ಪಡ್ಪು ಇದರ ಮುಖ್ಯೊಪಾದ್ಯಯರಾದ…

Read More

UN NETWORKS ಮಕ್ಕಾ: ಭಾರತದ 71ನೇ ಸ್ವಾತಂತ್ರೋತ್ಸವನ್ನು ಭಾರತದ ಹಜ್ಜಾಜಿಗಳೊಂದಿಗೆ ಪವಿತ್ರ ಮಕ್ಕಾದ ಮಣ್ಣಿನಲ್ಲಿ ಕರ್ನಾಟಕ ಕಲ್ಚರಲ್ ಪೌoಡೇಷನ್ ವಿಜೃಂಭಣೆಯಿಂದ ಆಚರಿಸಿತು.ಮಂಗಳೂರು ಈದ್ಗಾ ಜುಮಾ ಮಸ್ಜಿದ್ ಖತೀಬ್ ಸ್ವದಕತ್ತುಲ್ಲಾ ಮುಸ್ಲಿಯಾರ್ ಅವರು ಧ್ವಜಾರೋಹಣ ನಿರ್ವಹಿಸಿದರು . ಧ್ವಜಾರೋಹಣ ವೇಳೆ ಕೆಸಿಎಫ್ ಕಾರ್ಯಕರ್ತರು ಭಾರತ ರಾಷ್ಟ್ರ ಗೀತೆ ಹಾಡಿದರು. ಈ ವೇಳೆ ಮಾತನಾಡಿದ ದಾರುಲ್ ಇರ್ಶಾದ್ ಎಜುಕೇಶನ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫೀ ಪರಪ್ಪು ಮಾತನಾಡಿ ಭಾರತ ಸ್ವತಂತ್ರ ಕ್ಕಾಗಿ ಮಡಿದ ಮಹಾತ್ಮ ಗಾಂದೀಜಿ, ಮೌಲಾನ ಸೌಕತ್ ಅಲಿ, ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ (ರ.ಅ) ಹೀಗೇ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆರೆದಿಟ್ಟರು. ಭಾರತೀಯರಾದ ನಾವು ಜಾತಿ, ಮತ, ಬೇಧ ಭಾವವನ್ನು ಮೆರೆತು ಐಕ್ಯತೆಯ ಭಾರತವನ್ನು ಕಟ್ಟುವಂತೆ ಕರೆ ನೀಡಿದರು. ಕೆಸಿಎಫ್ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾನಾಡಿ ನಾವು ವಿದೇಶದಲ್ಲಿದ್ದರೂ, ಭಾರತದ ಮೇಲಿನ ಪ್ರೀತಿ, ಪ್ರೇಮ ನಮ್ಮ ಮನದಲ್ಲಿ ಎಂದೆಂದಿಗೂ ಅಮರವಾಗಿದೆ ಎಂದರು.ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ…

Read More

UN NETWORKS ಮೊಂಟೆಪದವು: ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಮುಡಿಪು ಸಮೀಪದ ಮೊಂಟೆಪದವಿನಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಗೆ ಮುಸ್ಲಿಮರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಕೋಮುಸೂಕ್ಷ್ಮ ಪ್ರದೇಶ ಉಳ್ಳಾಲ ಹಾಗೂ ಮುಡಿಪುವಿನಲ್ಲಿ  ಇಂತಹ  ಸುಸಂದರ್ಭಗಳು ಮರುಕಳಿಸುತ್ತಿರುವುದರಿಂದ ಜನರಲ್ಲಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತಿದೆ.  ಶ್ರೀ ಶಾರದಾಂಬ ಭಜನಾ ಮಂದಿರ ಮೊಂಟೆಪದವು  ಇವರು ಆಚರಿಸಿದಂತಹ ಶ್ರೀ ಕೃಷ್ಣ ಜನಮಾಷ್ಟಮಿ ಉತ್ಸವದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ  ಮೊಂಟೆಪದವಿನ ಮಠದಿಂದ  ಭಜನಾ ಮಂದಿರಕ್ಕೆ ಶೋಭಾಯಾತ್ರೆ ನಡೆದಿತ್ತು. ಇದರಲ್ಲಿ  ಭಾಗವಹಿಸಿದ್ದ  ನೂರಕ್ಕೂ ಅಧಿಕ ಹಿಂದು ಬಾಂಧವರಿಗೆ, ಮೊಂಟೆಪದವು ಜಂಕ್ಷನ್ನಿನಲ್ಲಿ  ಮುಸ್ಲಿಂ ಬಾಂಧವರು ಸಿಹಿತಿಂಡಿ ಜತೆಗೆ  ತಂಪು ಪಾನೀಯ ವಿತರಿಸಿದರು. ಶೋಭಾಯಾತ್ರೆಯಲ್ಲಿ  ಭಾಗವಹಿಸಿ ದನಿದ ಹಿಂದು ಬಾಂಧವರಿಗೆ  ತಂಪು ಪಾನೀಯ ಬಹಳ ಸಹಕಾರಿಯಾಯಿತು. ಈ ಹಿಂದೆ  ಮುಸ್ಲಿಂ ಸಮುದಾಯದ ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ  ಮೋಂಟುಗೋಳಿ ಪ್ರದೇಶದಲ್ಲಿ  ಹಿಂದು ಬಾಂಧವರು ಸಿಹಿತಿಂಡಿಯನ್ನು ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಂದಿಗೆ ವಿತರಿಸಿದ್ದರು.  ಎರಡು ಸಮುದಾಯದ ಅನ್ಯೋನ್ಯತೆಯೂ…

Read More