ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ಬುಧವಾರ ತಡರಾತ್ರಿ ವೇಳೆ ನೇತ್ರಾವತಿ ಸೇತುವೆಯ ತಡೆಗೆ ಢಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ತಡೆಯಲ್ಲಿ ನೀರಿನ ಪೈಪ್ ಇದ್ದುದರಿಂದ ನದಿಗೆ ಉರಳುವ ಸಂಭಾವ್ಯವಿದ್ದ ಲಾರಿ ದೊಡ್ಡದೊಂದು ಅನಾಹುತದಿಂದ ತಪ್ಪಿದಂತಾಗಿದೆ. ಕಣ್ಣೂರು ನಿವಾಸಿ ಸಂಶುದ್ದೀನ್ ಎಂಬವರಿಗೆ ಸೇರಿದ ಲಾರಿ ಇದಾಗಿದ್ದು, ಉಮೇಶ್ ಎಂಬಾತ ಲಾರಿ ಚಾಲಕನಾಗಿದ್ದಾನೆ. ಕಲ್ಲಾಪು ಭಾಗದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಳೇಯ ನೇತ್ರಾವತಿ ಸೇತುವೆಯ ಎಡಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ತಡೆ ಸಂಪೂರ್ಣ ಮುರಿದುಬಿದ್ದಿದ್ದು, ಢಿಕ್ಕಿ ಹೊಡೆದ ಲಾರಿ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ತಪ್ಪಿದೆ. ಕುಡಿಯುವ ನೀರಿನ ಪೈಪ್ ಲೈನ್ ಸೇತುವೆಯ ತಡೆಯಲ್ಲಿದ್ದುದರಿಂದಾಗಿ ತಡೆ ಮುರಿದರೂ ಕೆಳಗೆ ಬೀಳದೆ ಲಾರಿಯೂ ನದಿ ನೀರಿಗೆ ಉರುಳುವುದರಿಂದ ತಪ್ಪಿದಂತಾಗಿದೆ. ತಡರಾತ್ರಿ ಅಪಘಾತ ನಡೆದಿರುವ ಮಾಹಿತಿ ಠಾಣೆಗೆ ಬಂದಿದೆ. ಕೂಡಲೇ ಹೈವೇ ಮೊಬೈಲ್ ಪ್ಯಾಟ್ರಲಿಂಗ್‍ನಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೆ.ಸಿ ರೋಡು: ತಾಯಿ ಮೊದಲ ಪಾಠ ಶಾಲೆ ಎಂಬಂತೆ ಮಹಿಳೆಯರಿಗೆ ಉನ್ನತ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ನೀಡಿದಾಗ ಇಡೀ ಕುಟುಂಬ ಶಿಕ್ಷಿತರಾಗಲು ಸಾಧ್ಯ ಎಂದು ಅಸ್ಸಯ್ಯಿದ್ ಇಸ್ಮಾಈಲ್ ಮದನಿ ತಂಙಳ್ ಅಲ್-ಹಾದಿ ಉಜಿರೆ ಆಭಿಪ್ರಾಯಪಟ್ಟರು. ಅವರು ತಲಪಾಡಿ ಕೆ.ಸಿ ರೋಡು ತಾಜ್ ನಗರದಲ್ಲಿ ಮಿನ್‍ಹಾಜುಸುನ್ನ ಫೌಂಡೇಶನ್ ನಿರ್ಮಿಸಿದ ಮಿನ್ ಹಾಜು ಸ್ವಾಲಿಹತ್ ಮಹಿಳಾ ಶರೀಅತ್ ಕಾಲೇಜ್ ಕಟ್ಟಡ ಉದ್ಘಾಟಿಸಿ ಮತನಾಡಿದರು. ಮುಸ್ಲಿಂ ಮಹಿಳೆಯರು ಅಸುರಕ್ಷತೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಮೊಟಕುಗೊಳಿಸಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಹಿಳಾ ಸಂಸ್ಥೆಯಿಂದ ಸುರಕ್ಷಿತವಾಗಿ ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ಮಹಿಳಾ ಉಪನ್ಯಾಸಕರಾಗಿದ್ದುಕೊಂಡು, ಇನ್ನಷ್ಟು ಮಹಿಳೆಯರಿಗೆ ತರಬೇತಿ ನೀಡುವಂತಾಗಬೇಕು ಎಂದು ಶುಭಹಾರೈಸಿದರು. ಎಸ್ ವೈ ಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆ ಎರಡು ರೀತಿಯ ಉನ್ನತ ಶಿಕ್ಷಣ ನೀಡಿದಾಗ ನಿಮ್ಮ ಕುಟುಂಬದ ಜೀವನ ಉತ್ತಮವಾಗುವುದು. ಇಂದು ಲೌಕಿಕ ಶಿಕ್ಷಣಕ್ಕಾಗಿ ಮಕ್ಕಳ ಹೆತ್ತವರು ಪ್ರೋತ್ಸಾಹ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಮಂಗಳೂರು ಕರಾವಳಿ ಸಾಂಸ್ಕøತಿಕ ಪರಿಷತ್ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿವಸದ ಪ್ರಯುಕ್ತ ಶತಾಯುಷಿ ಹಾಗೂ ಹಿರಿಯ ಯೋಧ ಸೋಮೇಶ್ವರ ನಿವಾಸಿ ಕ್ಯಾಪ್ಟನ್ ಬಿ.ಎಸ್.ಬಾಲಕೃಷ್ಣ ರೈ ಇವರಿಗೆ ಸನ್ಮಾನ ಕಾರ್ಯಕ್ರಮ ಸ್ವಗೃಹದಲ್ಲಿ ಬುಧವಾರ ನಡೆಯಿತು. ಹವಾಲ್ದಾರರಾಗಿ, ಹಿರಿಯ ಅಧಿಕಾರಿಯಾಗಿ, ಸುಬೇದಾರರಾಗಿ, ಮೇಜರ್, ಲೆಪ್ಟಿನೆಂಟ್ ಆಗಿ ಸೇವೆ ಸಲ್ಲಿಸಿರುವ ಬಾಲಕೃಷ್ಣ ರೈ ಇವರು 1972ರಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದರು. ಸ್ವಾತ್ರಂತ್ಯ ಪೂರ್ವದಲ್ಲಿ ಬರ್ಮಾ, ಪಾಕಿಸ್ತಾನದ ರಾವಲ್ಪಿಂಡಿ, ಅಬಾಟಾಬಾದ್‍ನಲ್ಲಿದ್ದುಕೊಂಡು ದೇಶಸೇವೆ ಸಲ್ಲಿಸಿರುತ್ತಾರೆ. ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿ ದೇಹದ ಅಂಗಾಂಗಗಳನ್ನು ಕಳೆದುಕೊಂಡವರಲ್ಲಿ ಇವರು ಒಬ್ಬರು. ಇದೀಗ 100ನೇ ವಯಸ್ಸಿನಲ್ಲಿ ಪತ್ನಿ ಮಕ್ಕಳು ಹಾಗೂ ಕುಟುಂಬಿಕರೊಂದಿಗೆ ಅತ್ಯಂತ ಕ್ರೀಯಾಶೀಲರಾಗಿ, ಕುಟುಂಬದ ಹಿರಿಯರಾಗಿ, ಸಮಾಜಕ್ಕೆ ಉನ್ನತಸ್ತರದ ವ್ಯಕ್ತಿಯಾಗಿ ಆದರ್ಶಪ್ರಾಯರಾಗಿರುವ ಇವರು ಸನ್ಮಾನವನ್ನು ಸ್ವೀಕಲಿಸಿದ್ದಾರೆ. ಮಂಗಳೂರು ಕರಾವಳಿ ಸಾಂಸ್ಕøತಿಕ ಪರಿಷತ್ ಇದರ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರುಗಳಾದ ಚಂದ್ರಹಾಸ್ ಉಚ್ಚಿಲ್, ರವೀಂದ್ರ ರೈ ಉಳಿದೊಟ್ಟು, ಜಯರಾಮ್ ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ನೀಡುವ ವಿದ್ಯಾರ್ಥಿ ವೇತನದ ಅರ್ಜಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಕಾರ್ಡು ವಿತರಿಸುವ ಮೂಲಕ ದಯಾಮಾತೆ ಪಾನೀರು ಚರ್ಚ್ ವಿನಲ್ಲಿ ಹೊಸ ಆಂದೋಲನ ರೂಪಿಸಲಾಗಿದೆ ಎಂದು ಕೆಥೋಲಿಕ್ ಸಭಾ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಹೇಳಿದ್ದಾರೆ. ಅವರು ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಪಾನೀರು ಘಟಕದ ವತಿಯಿಂದ ಭಾನುವಾರ ಪಾನೀರು ದಯಾಮಾತೆ ಚರ್ಚ್ ವಠಾರದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿನ ಸೇರ್ಪಡೆಗೆ ನೋಂದಾವಣೆ ಆಂದೋಲನವನ್ನು ಮಾಡಲಾಗಿದೆ. ಈ ಮೂಲಕ 60 ವಿದ್ಯಾರ್ಥಿಗಳು ಈ ಬಾರಿಯ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಪಸಂಖ್ಯಾತ ಇಲಾಖೆ, ಜಿಂದಾಲ್, ರಿಲಾಯನ್ಸ್ ವತಿಯಿಂದ ನೀಡಲ್ಪಡುವ ವಿದ್ಯಾಥಿವೇತನದ ಅರ್ಜಿಗಳನ್ನು ವಿತರಿಸಲಾಗಿದೆ. ಇದರ ಜತೆಗೆ ವಿವಿಧ ಆಸ್ಪತ್ರೆಗಳ ಆರೋಗ್ಯ ಕಾರ್ಡನ್ನು ವಿತರಿಸಲಾಗಿದ್ದು, ಈ ಮೂಲಕ ಚರ್ಚ್ ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಚರ್ಚ್ ವತಿಯಿಂದ ಹೊಸ ಆಂದೋಲನವನ್ನು ರೂಪಿಸಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ಧರ್ಮಗುರು ಫಾ.ಡೆನಿಸ್…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದರ್ಗಾ ಸಮಿತಿಯಲ್ಲಿ 38 ವರ್ಷ ಸುದೀರ್ಘ ಅವಧಿಗೆ ಸದಸ್ಯರಾಗಿದ್ದು, ಇತ್ತೀಚೆಗೆ ನಿಧನರಾದ ಬಾವಾ ಫಕೀರ್ ಸಾಹೇಬ ಅವರ ಅನುಸ್ಮರಣಾ ಕಾರ್ಯಕ್ರಮ ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, 30 ವರ್ಷ ಮೇಲಂಗಡಿ ಹೊಸಪಳ್ಳಿ ಮುಹ್ಯಿದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ, 38 ವರ್ಷ ದರ್ಗಾ ಸಮಿತಿ ಸದಸ್ಯರಾಗಿ ಸುದೀರ್ಘ ಅವಧಿಯಲ್ಲಿ ಬಾವಾ ಫಕೀರ್ ಅವರು ಮಸೀದಿ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅನನ್ಯ, ಇದರ ಜೊತೆಗೆ ಸಾಮಾಜಿಕ ಕಳಕಳಿಯ ಹೊಂದಿದ್ದ ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮೇಲಂಗಡಿ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ಮರಣ ಹೊಂದಿದ ದಿನವೂ ಬಾವಾ ಫಕೀರ್ ಅವರು ಊರಿನವರಿಗಾಗಿ ಕೆಲಸ ನಿರ್ವಹಿಸಿದ್ದಾರೆಯೇ ಹೊರತು ತನ್ನ ಚಾಕರಿ ಮಾಡುವಂತಹ ಅವಕಾಶ ಕಲ್ಪಿಸದೇ ಸುಖ ಮರಣ ಕಂಡಿದ್ದಾರೆ ಎಂದು ತಿಳಿಸಿದರು. ಮೇಲಂಗಡಿ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ…
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತುಳು ಧಾರಾವಾಹಿ ನಿರ್ಮಾಪಕ ಕುಂಪಲ ಮೂರುಕಟ್ಟೆ ನಿವಾಸಿ ಪ್ರವೀಣ್ ಕುಮಾರ್ ಬಿ (50) ಮನೆಯಲ್ಲಿ ನೇಣು ಬಿಗಿದು ಬುಧವಾರ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮೂವರು ಪುತ್ರರು ಹಾಗೂ ಪತ್ನಿ ಇದ್ದ ಸಂದರ್ಭದಲ್ಲೇ ಕೋಣೆಯೊಳಗೆ ಬಾಗಿಲು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ಹೊತ್ತಾದರೂ ಕೋಣೆಯಿಂದ ವಾಪಸ್ಸಾಗದೇ ಇದ್ದಾಗ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ಪಕ್ಷದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪ್ರವೀಣ್ ಇವರು ಕಳೆದ ಒಂದು ವರ್ಷದಿಂದ ಚಿತ್ರೀಕರಣಗೊಳ್ಳುತ್ತಿದ್ದ ‘ದೇವೆರೆನ ದಯೆ ‘ ಎಂಬ ತುಳು ದಾರವಾಹಿಯನ್ನು ನಿರ್ಮಾಣ ಹಾಗೂ ನಿರ್ದೇಶಿಸುತ್ತಿದ್ದರು. ಹಣದ ಅಡಚಣೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಯೆನೆಪೋಯ: ದೇಶದಲ್ಲಿ ಮೊದಲ ಬಾರಿಗೆ ದಂತ ಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಇದರ ಸದುಪಯೋಗವನ್ನು 10,000 ಮಂದಿ ಈಗಾಗಲೇ ಪಡೆದುಕೊಂಡಿದ್ದು ಇದು ದಂತ ವೈದ್ಯಕೀಯ ಕ್ಷೇತ್ರಕ್ಕೆ ಉತ್ತಮ ಸಂದೇಶವಾಗಿದೆ ಎಂದು ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಸಾರ್ವಜನಿಕ ದಂತ ಚಿಕಿತ್ಸಾ ವಿಭಾಗ, ದೇರಳಕಟ್ಟೆ ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಇದರ ವತಿಯಿಂದ ಯೆನೆಪೋಯ ವೈದ್ಯಕೀಯ ಕಾಲೇಜಿನ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ನಡೆದ ಆನ್ ಆಪ್‍ಡೆಟ್ ಆನ್ ಓರಲ್ ಹೆಲ್ತ್ ಫಾಲಿಸಿ(ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿಯಮಾವಳಿಯನ್ನು ನವೀಕರಣ) ಎಂಬ ವಿಷಯದ ಕುರಿತ ನಡೆದ ಒಂದು ದಿನದ ವಿಚಾರ ಸಂಕೀರ್ಣದ ಸಮಾರೋಪ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಬಾಯಿ ಆರೋಗ್ಯ ನೀತಿಯಡಿ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಭಾಗವಾಗಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ವೆ ಕೈಗೊಂಡಾಗ ವೈದ್ಯರ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹೈನುಗಾರಿಕೆ ನಡೆಸುವವರಲ್ಲದ ಆ ಪ್ರದೇಶದಲ್ಲಿ ಕೆಲವು ಸಮಯಗಳಿಂದ ಹಲವು ವರ್ಷಗಳಿಂದ ಮಕ್ಕಳಂತೆ ಸುಮಾರು ದನಗಳನ್ನು ಸಾಕುತ್ತಾ ಬಂದ ಬಾರ್ ಮಾಲೀಕರ ಮೇಯಲು ಹೋದ ಮೂರು ಹಸುಗಳನ್ನು ಕಳ್ಳರು ಕಳವುಗೈದು ಪರಾರಿಯಾದ ಘಟನೆ ಕುಂಪಲದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಮೇಯಲೆಂದು ಬಿಟ್ಟಿದ್ದ ದನಗಳಲ್ಲಿ ದುರ್ಗಿ, ಕಪಿಲ ಹಾಗೂ ಬಾಲಕ್ಕ ಹೆಸರಿನ ಗರ್ಭಿಣಿ ಹಸುಗಳು ಕಾಣೆಯಾಗಿದ್ದವು ಕುಂಪಲದ ಕೇಸರಿ ಮಿತ್ರ ಮಂಡಳಿ ಎದುರುಗಡೆ ತಡರಾತ್ರಿವರೆಗೆ ಕುಳಿತಿದ್ದ ಜಾನುವಾರುಗಳನ್ನು ಬುಧವಾರ ಬೆಳಗ್ಗಿನ ಜಾವ ಕಳವುಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಬಂದಿರುವ ಆಗಂತುಕರು ಕೃತ್ಯವನ್ನು ಎಸಗಿದ್ದಾರೆ. ಕಾರು ತೆರಳುವ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಸ್ಪಷ್ಟವಾಗಿರದ ಕಾರಣ ಪೊಲೀಸರ ತನಿಖೆಗೂ ತೊಂದರೆಯಾಗಿದೆ.ತಿನ್ನುವವರು ಜಾನುವಾರುಗಳನ್ನು ಸಾಕಿ ತಿನ್ನಲಿ, ಅದರ ನೋವು ತಿಳಿಯುತ್ತದೆ. ಅದನ್ನು ಬಿಟ್ಟು ಮಕ್ಕಳಂತೆ ಸಾಕಿ ಸಲಹುವ ಜಾನುವಾರುಗಳನ್ನು ಕ್ರೂರ ಮನಸ್ಸಿನವರು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಾರ್ ಮಾಲೀಕರ ಜಾನುವಾರು ಪ್ರೀತಿ : ಮೂಲತಃ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ನಗರದ ವಿದ್ಯಾರ್ಥಿನಿಯರೆಂದರೆ ಉಡುಗೆ ತೊಡುಗೆಗೆ ಹೆಚ್ಚಿನ ಗಮನ ಕೊಡುವವರು, ಚಪ್ಪಲಿಯಿಂದ ಹಿಡಿದು ಕೊಡೆಯವರೆಗೆ ಒಂದೇ ಬಣ್ಣದ ಮ್ಯಾಚಿಂಗ್ ಉಡುಗೆಯನ್ನು ತೊಟ್ಟು ಹೋಗುವವರು, ತಿನ್ನುವ ಅನ್ನ ಯಾವ ರೀತಿಯಲ್ಲಿ ಆಗುತ್ತದೋ ಎಂದು ಪ್ರಶ್ನೆ ಮುಂದಿಟ್ಟರೂ ಹೇಳಲು ಸಾಧ್ಯವಾಗದ ವಿದ್ಯಾರ್ಥಿನಿಯರೇ ಹೆಚ್ಚು, ಆದರೆ ಇದನ್ನು ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯರು ಅಲ್ಲಗಳೆದಿದ್ದಾರೆ. 40ರಷ್ಟು ವಿದ್ಯಾರ್ಥಿನಿಯರು ಅಂಬ್ಲಮೊಗರು ಗ್ರಾಮದ ಖಂಡಿಲ ಎಂಬಲ್ಲಿನ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು. ಅಂಬ್ಲಮೊಗರು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಆಚಾರ್ಯ ಹಾಗೂ ಪುತ್ತುಬಾವ ಎಂಬವರ ಹಡಿಲು ಬಿದ್ದ ಗದ್ದೆಯಲ್ಲಿ ಈ ಕಾರ್ಯವನ್ನು ವಿದ್ಯಾರ್ಥಿನಿಯರು ಕೈಗೊಂಡರು. ಸಮುದಾಯದತ್ತ ಆಗ್ನೇಸ್ ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿನಿಯರು ಪ್ರತಿ ಶನಿವಾರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶನಿವಾರ ದಿನ 15 ವಿದ್ಯಾರ್ಥಿನಿಯರಲ್ಲಿ 40 ರಂತೆ ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ನಾರ್ಯಗುತ್ತು ಜಯರಾಮ ಕೊಂಡೆ(75) ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಇವರು ಕಣಂತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರರಾದ ನಾರ್ಯಗುತ್ತು ಯಜಮಾನ್ ಎಂ.ತಿಮ್ಮಪ್ಪ ಕೊಂಡೆ ಅವರ ಕಿರಿಯ ಸಹೋದರರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ನಾರ್ಯಗುತ್ತು ಕುಟುಂಬಿಕರ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ,ಕೃಷ್ಣ ರೈ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

