ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಮುಖ್ಯ ಗೇಟಿನ ಎದುರುಗಡೆ ಮಂಗಳವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ಪ್ರತೀಕ್ ಮಾತನಾಡಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಾಗಿ ಆತ್ಮಹತ್ಯೆ ನಡೆಸುತ್ತಿದ್ದಾರೆ. ಕ್ರೀಡಾಪಟುಗಳ ಜೀವಕ್ಕೆ ಬೆಲೆ ಇಲ್ಲದಿದ್ದಲ್ಲಿ ಕಾವ್ಯಾ ಸಾವು ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಬೇಸರದ ಸಂಗತಿಯಾಗಿದೆ. ಇಡೀ ಘಟನೆಯನ್ನು ಖಂಡಿಸುತ್ತೇವೆ. ವಿದ್ಯಾರ್ಥಿನಿ ಹೊರಗೆ, ಒಳಗೆ ಹೋಗುವ ಸಿಸಿಟಿವಿ ದೃಶ್ಯವನ್ನು ತೋರಿಸುತ್ತಾರೆ. ಆದರೆ ಮೃತದೇಹ ಕೊಂಡೊಯ್ಯುವ ದೃಶ್ಯವನ್ನು ತೋರಿಸುತ್ತಿಲ್ಲ. ಹಿಂದೆಯೂ ಹಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೈದಿದ್ದಾರೆ. ಬಲವಾದ ಕಾರಣಗಳಿಂದಲೇ ವಿದ್ಯಾರ್ಥಿನಿ ನಿಯಲದಲ್ಲೇಢ ಆತ್ಮಹತ್ಯೆಗಳು ನಡೆಯುತ್ತಿವೆ. ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರಿಸುವ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲದಿರುವುದು ಖಂಡನೀಯ. ಶೀಘ್ರವೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿದೆ. ವಿದ್ಯಾರ್ಥಿ ಸಿರಾಜ್ ಮಾತನಾಡಿ ಕಾವ್ಯಾ ಸಾವಿನ ಬಗ್ಗೆ ಸಂಶಯವಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿದ್ದು, ಜಿಲ್ಲೆಯಾದ್ಯಂತ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಛಾಯಾಗ್ರಹಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸಂಘಟನೆಯ ಮೂಲಕ ಒಗ್ಗಟ್ಟಾಗಿದ್ದಾಗ ಮಾತ್ರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಂಗಳೂರು ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಉಳ್ಳಾಲ ವಲಯದ ಚತುರ್ಥ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಕೆಲಸ ಮಾಡಿದಾಗ ಸಂಘಟಿತರಾಗಿ ಮುಂದೆ ನಡೆದಾಗ ಮಾತ್ರ ಯಶಸ್ವಿ ಸಾಧ್ಯ.ವೃತ್ತಿ ಸಂಬಂಧಪಟ್ಟ ಭಿನ್ನಾಭಿಪ್ರಾಯ ಬರುವುದು ಸಹಜ ಆದರೆ ಸಂಘಟಿತರಾಗಿ ಕೆಲಸ ಮಾಡಿದಾಗ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಕಳೆದ ನಾಲ್ಕು ವರ್ಷದಲ್ಲಿ ಉಳ್ಳಾಲ ವಲಯ ಉತ್ತಮ ಕಾರ್ಯವನ್ನು ಮಾಡಿದೆ.ಇದರೊಂದಿಗೆ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಸಹಕಾರಿ ಸಂಘ ಉತ್ತಮ ವ್ಯವಹಾರ ನಡೆಸುತ್ತಿದ್ದು ಸುಮಾರು 2 ಕೋಟಿಗೂ ಮಿಕ್ಕಿ ಸಾಲವನ್ನು ನೀಡಿದ್ದು ಎಲ್ಲಾ ಸದಸ್ಯರು ಪ್ರಯತ್ನಿಸಿದರೆ ಜಿಲ್ಲೆಯಲ್ಲಿ ಒಂದು ಉತ್ತಮ ಬ್ಯಾಂಕ್ ಆಗಿ ಪರಿವರ್ತನೆ ಮಾಡಲು ಸಾಧ್ಯ ಎಂದರು. ಮಹಾಸಭೆಯ ಅಧ್ಯಕ್ಷತೆಯನ್ನು ಎಸ್‍ಕೆಪಿಎ ಉಳ್ಳಾಲ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಸೋಮೆಶ್ವರ: ಸೋಮೆಶ್ವರ ಆನಂದಾಶ್ರಮ ಫ್ರೌಢಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಆನಂದಾಶ್ರಮ ಪ್ರೌಢಶಾಲೆ, ಪರಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಪರಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿ ತಂದ ಆಟಿತಿಂಗಳ ವಿಶೇಷ ತಿನಿಸುಗಳಾದ ಪತ್ರೊಡೆ, ಉಪ್ಪಡ್ ಪಚ್ಚಿಲ್, ಮೆಂತೆ ಉಂಡೆ, ಪೋಡಿ, ಪತ್ತೋಳಿ, ಗಾರಿಗೆ, ಹುರುಳಿ ಚಟ್ನಿ, ಸೇಮೆದಡ್ಯಾ, ಸೊಪ್ಪು ಪಲ್ಯ ಇತ್ಯಾದಿ ಇಪ್ಪತ್ತಕ್ಕೂ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿ ಉತ್ತಮ ಆರೋಗ್ಯಕ್ಕಾಗಿ ಅವುಗಳ ಸೇವನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಶಾರೀರಿಕ್ ಪ್ರಮುಖ್ ನಾಗೇಶ್ ಕುಂಪಲ, ಸಾರಸ್ವತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್. ಬೊಂಡಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎ.ಎಸ್. ರಾಮಚಂದ್ರ ರಾವ್, ಪರಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಕ್ರಮ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ಪಿ. , ಪರಿಜ್ಞಾನ ವಿದ್ಯಾಲಯದ ಪುಟಾಣಿ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯಂದಿರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವನಮಹೋತ್ಸವ ಮತ್ತು ಸಾವಯವ ಗೊಬ್ಬರ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಇತ್ತೀಚೆಗೆ ಉಳ್ಳಾಲ ಬಿ.ಎಂ.ಶಾಲೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸುಮನ್ ಶೆಟ್ಟಿ, ನಂದಿನಿ ರಘುಚಂದು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ, ಸಾವಯಾವ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಕಸ ಸಂಗ್ರಹಿಸುವ ಟೆರಕೂಟ ಮಡಕೆಯ ಬಳಕೆಯನ್ನು ವಿವರಿಸಲಾಯಿತು. ಫಾಸ್ಟಿನ್ ಸ್ವಾಗತಿಸಿದರು. ಸ್ಮಿತಾ ವಂದಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವೈಜ್ಞಾನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಬದಲಾವಣೆಗಳು ನಡೆಯುತ್ತಿದ್ದು, ಹೊಸ ಬದಲಾವಣೆಗೆ ತಕ್ಕಂತೆ ವೈದ್ಯರು ತಮ್ಮಲ್ಲಿರುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು ಇಂತಹ ಕಾರ್ಯಾಗಾರಗಳು ಇದಕ್ಕೆ ಪೂರಕ ಎಂದು ಅಮೇರಿಕಾದ ಬೋಸ್ಟನ್ನಿನ ಮಸ್ಯಾಚುಸೆಟ್ಸ್ಯುನಿವರ್ಸಿಟಿಯ ನರಶಸ್ತ್ರ ಚಿಕಿತ್ಸೆಯ ಅನಸ್ಥೇಷಿಯ ವಿಭಾಗದ ಮುಖ್ಯಸ್ಥರಾದ ಡಾ| ಸ್ಟ್ಯಾನ್ಲಿ ಡಿ’ಸೋಜ ಅಭಿಪ್ರಾಯಪಟ್ಟರು ಅವರು ನಿಟ್ಟೆ ವಿಶ್ವವಿದ್ಯಾನಿಲಯದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯ ಅರಿವಳಿಕೆಯಲ್ಲಿನ ನವೀನ ಬೆಳವಣಿಗೆಗಳ ಕುರಿತು ಒಂದು ದಿನದ ನಿರಂತರ ವೈದ್ಯಕೀಯ ಕಲಿಕಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಧಾರವಾಡದ ಡಿಮ್ಹಾನ್ಸ್‍ನ ಪ್ರಾಧ್ಯಾಪಕ ಡಾ| ಉಮೇಶ್ ಜಿ., ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನರರೋಗ ತಜ್ಞ ಡಾ| ರಾಘವೇಂದ್ರ ಬಿ.ಎಸ್, ಕ್ಷೇಮ ಕಾಲೇಜಿನ ಡಾ| ಶ್ರೀಪಾದಜಿ ಮೆಹೆಂದಳೆ, ಶ್ರೀನಿವಾಸ ಮೆಡಿಕಲ್ ಕಾಲೇಜಿನ ಅರಿವಳಿಕೆಯ ವಿಭಾಗದ ಮುಖ್ಯಸ್ಥ ಡಾ| ಸತ್ಯಜಿತ್ ಕಾರಂತ್ ಉಪನ್ಯಾಸ ನೀಡಿದರು. ಕ್ಷೇಮದ ಡೀನ್ ಫ್ರೊಫೆಸರ್ ಡಾ| ಸತೀಶ್ ಕುಮಾರ್ ಭಂಂಡಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಸೋಮವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದಿದ್ದು, ಸಭೆಯಲ್ಲಿ ತೆರಿಗೆ ಪರಿಷ್ಕಣೆ, ತ್ಯಾಜ್ಯ, ಅಕ್ರಮ ಬೋರ್‍ವೆಲ್, ಪಡಿತರ ಚೀಟಿ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಕೊಣಾಜೆ ಗ್ರಾಮದಲ್ಲಿ ತೆರಿಗೆ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಲಾಗಿದು ಆದರೆ ತೆರಿಗೆ ಪರಿಷ್ಕರಣೆಯ ಸಮರ್ಪಕ ಮಾಹಿತಿ ನೀಡಿ ಅಲ್ಲದೆ ಸರಕಾರದ ತೆರಿಗೆ ಪರಿಷ್ಕರಣೆಯ ಬಗ್ಗೆ ಸರಕಾರದ ಮಾನದಂಡ ಏನು ಎಂಬುದರ ಎಂದು ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷರನ್ನು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶೌಕತ್ ಆಲಿ ಅವರು ಈಗಾಗಲೇ ತೆರಿಗೆ ಪರಿಷ್ಕರಣೆಯ ಬಗ್ಗೆ ಸರಕಾರದ ನಿಯಮದಂತೆ ಯೋಜನೆ ರೂಪಿಸಲಾಗಿದ್ದು, ಉದಾಹರಣೆಗೆ ಹೆಂಚಿನ ಮನೆ ಇದ್ದು ಬಳಿಕ ಅವರು ಆರ್‍ಸಿಸಿ ಮನೆ ಕಟ್ಟಿದ್ದರೆ ನೂತನ ತೆರಿಗೆ ಜಾರಿಯಾಗುತ್ತದೆ ಎಂದು ಹೇಳಿದರು. ಪೋಡಿಮುಕ್ತ ಗ್ರಾಮ ಯೋಜನೆಯಡಿ ಸರ್ವೇಗೆ ಬಂದಿರುವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಬದಲು ನಾವು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ಗಿಡ ನಡುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಶಾಲೆಯ ಒಂದು,ಒಂದು ವಿದ್ಯಾರ್ಥಿ ಒಂದೊಂದು ಗಿಡ ನಟ್ಟು ಬೆಳೆಸಿದರೆ ಉಳ್ಳಾಲ ಪರಿಸರಕ್ಕೆ ಅದುವೇ ನೀವು ಕೊಡುವ ದೊಡ್ಡ ಸಂಪತ್ತಾಗಿದೆ ಎಂದರು. ಮಂಚಿಲ ಫಿದಾಗೈಸ್ ಸದಸ್ಯರು ಶಾಲೆಯ ಮಕ್ಕಳಿಗೆ ಉಚಿತವಾಗಿ 100 ಬ್ಯಾಗ್‍ಗಳನ್ನು ನೀಡಿದರು. ಉಳ್ಳಾಲ ನಗರ ಸಭೆ ಸದಸ್ಯ ಫಾರೂಕ್.ಯು.ಎಚ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಫೀಕ್ ಹಳೆಕೋಟೆ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಆಡಳಿತಾಧಿಕಾರಿ ಅಬ್ದುಲ್ ಲತೀಫ್,ಕೋಶಾಧಿಕಾರಿ ಕರೀಮ್.ಯು.ಎಚ್,ಶಾಲಾ ಸಂಚಾಲಕ ಮುಹಮ್ಮದ್ ಇಸ್ಮಾಯಿಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಇಬ್ರಾಹಿಂ,ದರ್ಗಾ ಸಮಿತಿ ಸದಸ್ಯರಾದ ಇಬ್ರಾಹಿಂ ಕಕ್ಕೆತೋಟ, ಶಿಕ್ಷಣ ಸಂಯೋಜಕ ಶ್ರೀಮತಿ ಹಿಲ್ಡಾ, ಫ್ರಾನ್ಸಿಸ್, ಫಿದಾ ಗೈಸ್ ಅಧ್ಯಕ್ಷ ಅರ್ಫಾಝ್, ಸದಸ್ಯರಾದ ನೌಫಲ್,ಫೈಝಲ್,ರಿಫಾತ್,ನಹೀಮ್,ಫಯಾಝ್,ಅಕ್ರಮ್,ಅಫೀಜ್,ಶಾಲಾ ಹಳೆ ವಿದ್ಯಾರ್ಥಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮವು ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಜರಗಿತು. ಉಳ್ಳಾಲದಲ್ಲಿ ಪ್ರಸಕ್ತ ಪಠ್ಯಪುಸ್ತಕದಿಂದುಂಟಾಗಿರುವ ಗೊಂದಲದಿಂದಾಗಿ ಮದ್ರಸ ಪ್ರಾರಂಭವಾಗಿ 25 ದಿನ ಕಳೆದಿದ್ದರೂ, ಇನ್ನೂ ಪಠ್ಯ ಶುರುವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಹೆತ್ತವರು ದಿನನಿತ್ಯ ಮದ್ರಸಕ್ಕೆ ಅಗಮಿಸುತ್ತಿದ್ದು, ಗೊಂದಲ ಮುಕ್ತ ಮಾಡಬೇಕಾದವರು ನಮ್ಮ ಹೆತ್ತವರನ್ನು ಮಾನಹಾನಿಯಾಗುವಂತೆ ಅಪಹಾಸ್ಯ ಮಾಡುವುದು, ನಮ್ಮ ಉಸ್ತಾದರುಗಳನ್ನು ಹೆಸರೆತ್ತಿ ಕರೆಯುವುದು ನಮಗೆ ಅತೀವ ದು:ಖವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆತ್ತವರ ಕುರಿತು ನಿಂದಿನಾತ್ಮಕ ಸಂದೇಶಗಳನ್ನ ಹರಿಯ ಬಿಡುವುದನ್ನು ಕಾನೂನು ಪಾಲಕರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ನಿಂದನಾತ್ಮಕ ಧ್ವನಿ ಸಂದೇಶ ಹರಿಯಬಿಟ್ಟವರ ವಿರುಧ್ಧ ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕು. ಆಡಳಿತ ಸಮಿತಿ ಮತ್ತು ನಮ್ಮ ಹೆತ್ತವರ ನಡುವೆ ತರ್ಕ ತಾರಕ್ಕೇರುತ್ತಿದ್ದು, ದಿನನಿತ್ಯ ನಾವು ಮದ್ರಸಗಳಲ್ಲಿ ಬೊಬ್ಬೆ, ಗಲಾಟೆಗಳನ್ನು ನೋಡಬೇಕಾಗಿದೆ. ನಾಗರಿಕರ ಮತ್ತು ಅಡಳಿತ ಸಮಿತಿಗಳ ವರ್ತನೆಯಿಂದಾಗಿ ನಮ್ಮ ಶಿಕ್ಷಕರು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬಿಕಾರೋಡ್ : ಸಾಮಾಜಿಕ ಸೇವಾ ಮನೋಭಾವೆನಯಿಂದ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಗಟ್ಟಿ ಸಮಾಜ ಸೇವಾ ಸಂಘದ ನಿರ್ಗಮಿತ ಅಧ್ಯಕ್ಷ ಹಾಗೂ ಸೋಮೇಶ್ವರ ಸೋಮನಾಥ ದೇಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ಹೇಳಿದರು. ಅವರು ಅಂಬಿಕಾರೋಡ್‍ನ ಗಟ್ಟಿ ಸಮಾಜ ಭವನದಲ್ಲಿ ಗಟ್ಟಿ ಸಮಾಜ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಗಟ್ಟಿ ಸಮಾಜದ ಹಿರಿಯರಾದ ನಾರಾಯಣ ಗಟ್ಟಿ ಮೇಲ್ಡರು, ನಾಯ್ಗರ ಪ್ರತಿನಿ„ ಪದ್ಮನಾಭ ಗಟ್ಟಿ ಕಟ್ಟಪುಣಿ, ಗಟ್ಟಿ ಸಮಾಜ ಸೋಮನಾಥ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಗಟ್ಟಿ ಕೊರಂತೋಡಿ, ಮಹಿಳಾ ಸಂಘದ ಅಧ್ಯಕ್ಷೆ ಹಿತಾಕ್ಷಿ ಹರೀಶ್ ಗಟ್ಟಿ ಜಪ್ಪು, ಯುವಜನ ವಿಭಾಗದ ಅಧ್ಯಕ್ಷ ಪದ್ಮನಾಭ ಗಟ್ಟಿ ಬಜಿಲಕೇರಿ, ಧಾರ್ಮಿಕ ಪರಿಷತ್‍ನ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ , ಒಂಭತ್ತು ಮಾಗಣೆ ಸೀಮೆ ಗಟ್ಟಿ ಸಮಾಜದ ಗುರಿಕಾರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಟ್ಟಿ ಸಮಾಜ ಸೇವಾ ಸಂಘದ 2017-19ನೇ ಸಾಲಿನ ನೂತನ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಟೀಲು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕಾವ್ಯ ಎಂಬ ಬಾಲಕಿಯ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿ ಕೊಡುವಂತೆ ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಇಂದು ನಡೆಯಿತು. ಬಾಲಕಿಯ ಸಾವಿಗೆ ಕಾರಣಕರ್ತರಾದವರನ್ನ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಈ ತನಿಖೆಯಲ್ಲಿ ಸೂಕ್ತ ನ್ಯಾಯ ದೊರಕದಿದ್ದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರೇ ಆ ಪಾಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.ಒಂದು ವೇಳೆ ಪ್ರಕರಣವನ್ನ ಮುಚ್ಚಿಹಾಕಲು ಪ್ರಯತ್ನಿಸಿದರೆ ನಾವು ಯಾವುದೇ ತರಹದ ಪ್ರತಿಭಟನೆಗೆ ಸಿದ್ದ ಹಾಗೂ ಈ ವಿಷಯದಲ್ಲಿ ಯಾವುದೇ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡರೆ ನಮ್ಮ ಬೆಂಬಲ ಯಾವಾಗಲೂ ಅವರಿಗೆ ಇದೆ ಎಂದು ತಿಳಿಸಿದರು. ಸಂಪತ್ ಮಡ್ಯಾರ್ ಪ್ರ.ಕಾರ್ಯದರ್ಶಿ ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ. ಚಂದ್ರಹಾಸ್ ರೈ ಪಿಲಾರ್ ಕಾರ್ಯದ್ಯಕ್ಷರು ಕ.ರ.ವೇ ದ.ಕ ಜಿಲ್ಲೆ…

