UN Networks ಉಳ್ಳಾಲ: ಆಲೋಪತಿ ಔಷಧ ಪದ್ಧತಿಗೆ ಯುವಸಮುದಾಯ ಹೊಂದಿಕೊಂಡಿದೆ, ಮಕ್ಕಳು ಕೂಡಾ ಸಣ್ಣ ನ್ಯೂನತೆಗೂ ಆಲೋಪತಿ ಮಾತ್ರೆಗಳಿಗೆ ಅವಲಂಬಿತರಾಗುವಂತೆ ಹೆತ್ತವರು ಕಲಿಸಿಕೊಡುತ್ತಿದ್ದಾರೆ. ಆದರೆ ಆಲೋಪತಿ ಔಷಧಿ ಕೇಂದ್ರವನ್ನು ಹೊರತುಪಡಿಸಿ ಪ್ರಕೃತಿಯಲ್ಲೇ ಔಷಧವಿದೆ. ಇದರಿಂದ ರೋಗಗಳನ್ನು ದೂರವಾಗಿಸಬಹುದು ಅನ್ನುವ ಸಂದೇಶದೊಂದಿಗೆ ಮಂಗಳೂರಿನ ಬೆಂದೂರಿನ ಸಂತ ಆಗ್ನೇಸ್ ಸ್ವಾಯುತ್ತ ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಳ್ಳಾಲ ವ್ಯಾಪ್ತಿಯ ಬಬ್ಬುಕಟ್ಟೆ, ಕುತ್ತಾರು, ಪಿಲಾರು, ಬಗಂಬಿಲ ಸರಕಾರಿ ಶಾಲೆಗಳಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿಶಿಷ್ಟ ಅನುಭವವನ್ನು ನೀಡಿತು. ` ಸಮುದಾಯದತ್ತ ಆಗ್ನೇಸ್’ ಕಾರ್ಯಕ್ರಮದಡಿ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ವಾರಗಳಿಂದ ಪ್ರತಿ ಶನಿವಾರ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಗಿಡ ನೆಡುವ ಮತ್ತು ಇಂಗು ಗುಂಡಿಗಳ ನಿರ್ಮಾಣ, ಗದ್ದೆಗಳಲ್ಲಿ ಕೃಷಿ ಕೆಲಸದಲ್ಲಿ ಭಾಗವಹಿಸುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದ ವಿದ್ಯಾರ್ಥಿಗಳು, ಈ ಬಾರಿ ಶಾಲೆಗಳಲ್ಲಿ ಹಮ್ಮಿಕೊಂಡ ಔಷಧೀಯ ಗಿಡ ನೆಡುವ ಮತ್ತು ಗಿಡದ ಮಾಹಿತಿ…
Author: UllalaVani
UN Networks ಕೊಣಾಜೆ: ವಿದೇಶಗಳಲ್ಲಿರುವಂತೆ ದೇಶದ ಪೊಲೀಸ್ ಇಲಾಖೆಗಳಲ್ಲಿಯೂ ಸುಧಾರಿತ ವ್ಯವಸ್ಥೆ ಜಾರಿಯಾಗಬೇಕಿದ್ದು, ಇದರಿಂದ ಪೊಲೀಸರು ಸಮಯ ಪಾಲನೆಯ ಜತೆಗೆ ಕರ್ತವ್ಯಗಳಲ್ಲಿಯೂ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಅಭಿಪ್ರಾಯಪಟ್ಟರು. ಅವರು ಕೊಣಾಜೆ ಪೊಲೀಸ್ ಠಾಣೆ ವತಿಯಿಂದ ಕೊಣಾಜೆಯ ಮಂಗಳ ಆಡಿಟೋರಿಯಂನಲ್ಲಿ ಭಾನುವಾರ ಜರಗಿದ ಸುಧಾರಿತ ಗಸ್ತು ವ್ಯವಸ್ಥೆ ( ಜನಸ್ನೇಹಿ ಪೊಲೀಸ್ – ಪ್ರದೇಶಕ್ಕೊಬ್ಬ ಪೊಲೀಸ್ ) ಕೊಣಾಜೆ ವ್ಯಾಪ್ತಿಯ ಸರ್ವ ಗಸ್ತು ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಪೊಲೀಸ್ ವ್ಯವಸ್ಥೆಯಡಿ ಸರಿಯಾದ ಅನುಕೂಲತೆಗಳನ್ನು ಹಾಗೂ ತಾಂತ್ರಿಕ ಜ್ಞಾನವನ್ನು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದೆ, ಡಿಸಿಪಿ ಮೇಲ್ಮಟ್ಟಕ್ಕೆ ಉತ್ತಮ ವ್ಯವಸ್ಥೆಯಿದ್ದರೂ, ಅವರಿಂದ ಕೆಳ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ದೊರೆಯುತ್ತಿಲ್ಲ. ವಿದೇಶಗಳಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಹೋಲಿಸಿದರೆ ದೇಶದಲ್ಲಿನ ವ್ಯವಸ್ಥೆ ಬಹಳ ಕುಂಠಿತವಾಗಿದೆ. ಇದನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮವಹಿಸಬೇಕಿದೆ ಎಂದರು. ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಮಾತನಾಡಿ ` ಕೇಂದ್ರ ಸರಕಾರದ ಯೋಜನೆಯಂತೆ ಮಂಗಳೂರು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮಕ್ಕಳನ್ನು ಶಾಲೆಗೆ ಬರಲು ಪ್ರೇರೇಪಿಸುವ ಯೋಜನೆಗಳು ಸರಕಾರದಿಂದ ನಡೆಯುತ್ತಿರುವುದು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸುವ ಮೂಲಕ ಉತ್ತಮ ಕಲಿಕೆಯನ್ನು ನಡೆಸಬೇಕಿದೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಅಭಿಪ್ರಾಯಪಟ್ಟರು. ಅವರು ತಲಪಾಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 2017-18 ನೇ ಸಾಲಿನ ಸೈಕಲ್, ಸಮವಸ್ತ್ರ ಹಾಗೂ ಸ್ಯಾಂಡಲ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಮತ್ತು ಶಾಲೆ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಅವಶ್ಯಕತೆ ಬಿದ್ದಲ್ಲಿ ಸೈಕಲ್ ಅನ್ನು ಜಾಗರೂಕರಾಗಿ ಉಪಯೋಗಿಸುವಂತೆ ಸಲಹೆ ನೀಡಿದ ಅವರು, ಸರಕಾರಿ ಶಾಲೆ ವಿದ್ಯಾರ್ಥಿಗಳು ಉತ್ತಮವಾಗಿ ಶಿಕ್ಷಣ ಪಡೆಯುವಂತೆ ಸರಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು ವಿದ್ಯಾರ್ಥಿಗಳಿಗೆ ಸಿಗುವಂತೆ ಶಿಕ್ಷಕರು ಹಾಗೂ ಹೆತ್ತವರು ಶ್ರಮ ವಹಿಸಬೇಕಿದೆ ಎಂದರು. ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಸಿದ್ದೀಖ್ ಕೊಳಂಗೆರೆ, ತಲಪಾಡಿ ಗ್ರಾ.ಪಂ ಸದಸ್ಯ ಇಬ್ರಾಹಿಂ, ಉದ್ಯಮಿಗಳಾದ ಮೂಸ ತಲಪಾಡಿ,…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯ: ಕೇಶವ ಶಿಶು ಮಂದಿರ ಕಿನ್ಯ ಇವರ ಮಾತೃ ಮಂಡಳಿ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ವೃತಾಚರಣೆ ಶುಕ್ರವಾರ ನಡೆಯಿತು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬಿಕಾರೋಡ್: ಪೊಲದವರ ಯಾನೆ ಗಟ್ಟಿ ಸಮುದಾಯ ಇವರ ಮಹಿಳಾ ಘಟಕದ ವತಿಯಿಂದ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ವರ ಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರಗಿತು. ವಿಶೇಷ ಪೂಜೆಯಲ್ಲಿ ಮಹಿಳೆಯರು ಪಾಲ್ಗೊಂಡರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕಿನ್ಯ:ತುಳುನಾಡಿನ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕೆಲಸ ಸಂಘಟನೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಪರಂಪರೆಯನ್ನು ಬಿಂಬಿಸುವ ಕೂಟವನ್ನು ಆಯೋಜಿಸುವ ಮೂಲಕ ಮಹತ್ವದ ಪಾತ್ರ ವಹಿಸಬೇಕು ಎಂದು ಬಾಬು ಶಾಸ್ತಾ ಕಿನ್ಯ ಅಭಿಪ್ರಾಯ ಪಟ್ಟರು. ಅವರು ಶ್ರೀ ಮಹಮ್ಮಾಯಿ ಮಾತೃ ಮಂಡಳಿ ಕಿನ್ಯ ಬೆಳರಿಂಗೆ ಇದರ ದ್ವಿತೀಯ ವರ್ಷದ ಆಟಿದ ಕೂಟ ಗೌಜಿ ಗಮ್ಮತ್ತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಲ್ಕಟ್ಟ ಶಾಲೆ ಇದರ ಶಿಕ್ಷಕಿ ನಂದನ ಅಧ್ಯಕತೆ ವಹಿಸಿದ್ದರು.ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಭಂಡಾರಮನೆಯ ಪಾತ್ರಿಗಳಾದ ರವಿ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಿನ್ಯ ಭಂಡಾರಮನೆಯ ಪಾತ್ರಿಗಳಾದ ಯಾದವ ಪೂಜಾರಿ, ಕಿಶೋರ್ ಪೂಜಾರಿ, ಶಿಕ್ಷಕ ಪ್ರಭಾಕರ ಜೋಗಿ, ವಾಮನಪೂಜಾರಿ ಕಿನ್ಯ, ಜಯಂತ ಪೂಜಾರಿ, ನಾರಾಯಣ ಪೂಜಾರಿ, ಸದಾಶಿವ ಬಟ್ಯಡ್ಕ, ಹರೀಶ್ ಕಿನ್ಯ, ಸ್ವರ್ಣಲತಾ ಕಿನ್ಯ ಉಪಸ್ಥಿತರಿದ್ದರು. ರವಿ ಕಿನ್ಯ ಸ್ವಾಗತಿಸಿದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ತುಳು ಸಂಸ್ಕೃತಿಯಲ್ಲಿ ಆಷಾಡ ಮಾಸಕ್ಕೆ ವಿಷೇಶವಾದ ಸ್ಥಾನಮಾನವಿದೆ. ತಲಪಾಡಿಯ ಶಾರದಾವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಜ್ಞಾನಾರ್ಜನೆಗೈಯುತ್ತಿರುವ ದೇಶ ವಿದೇಶಗಳ ವಿದ್ಯಾರ್ಥಿಗಳಿಗೆ ತುಳುನಾಡಿನ ವೈಶಿಷ್ಠ್ಯತೆಯನ್ನು ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಆಟಿ ಅಮಾವಾಸ್ಯೆಯ ದಿನದಂದು ವಿದ್ಯಾರ್ಥಿಗಳಿಗೆ ಹಾಲೆ ಮರದ ತೊಗಟೆಯ ಕಷಾಯವನ್ನು ನೀಡಿ ಅದರ ಮಹತ್ವವನ್ನು ತಿಳಿಸಲಾಯಿತು. ವಿದ್ಯಾರ್ಥಿಗಳಿಗೆ ಆಷಾಡ ಮಾಸದ ವಿಶೇಷ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮದ್ಯಾಹ್ನ ವಿದ್ಯಾರ್ಥಿಗಳಿಗೆ ಆಟಿ ತಿಂಗಳ ವಿಶೇಷ ಖಾದ್ಯ, ತಿನಿಸುಗಳ ಮನೆ ಆಡಿಗೆಯ ಸವಿಯನ್ನು ಉಣಬಡಿಸಲಾಯಿತು. ಆ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಮಕ್ಕಳು ಪಾಲ್ಗೊಂಡರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರಕಾರ 25 ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಜನರಿಗೆ ಸಮರ್ಪಕವಾಗಿ ಉಪಯೋಗವಾಗುವ ರೀತಿಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಅನುದಾನ ಸಮರ್ಪಕವಾಗಿ ಉಪಯೋಗವಾಗುವ ನಿಟ್ಟಿನಲ್ಲಿ ಉಳ್ಳಾಲ ನಗರ ಸಭಾ ವ್ಯಾಪ್ತಿಯ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಿದರು. ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ವಿಶೇಷ ಅನುದಾನ ಭಾಗದ ಜನರಿಗೆ ಉಪಯೋಗವಾಗಬೇಕು. ವಿಶೇಷವಾಗಿ ನೀರಿನ ಅಭಾವವಿರುವ ಪ್ರದೇಶ ಹಾಗೂ ರಸ್ತೆ ಸಮಸ್ಯೆ ಯನ್ನು ಮನಗಂಡು ಯಾವ ಭಾಗದಲ್ಲಿ ಈ ಸಮಸ್ಯೆಯೇ ಹೆಚ್ಚಿದೇ ಎಂದು ಪರಿಶೀಲನೆ ನಡೆಸಿ ಮೊದಲಿಗೆ ಆ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಈಗಾಗಲೇ ಉಳ್ಳಾಲ ಭಾಗದ ಚೆಂಬುಗುಡ್ಡೆ, ಕಾಪಿಕಾಡು, ಕಲ್ಲಾಪು, ಸೇವಂತಿಗುಡ್ಡೆ ಉಳ್ಳಾಲಬೈಲು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ಥಳೀಯ ಪ್ರತಿನಿಧಿಗಳು ಹಾಗೂ ಜನರ ಸಹಕಾರದಂದಿಗೆ ಮುಂದಿನ ದಿನಗಳಲ್ಲಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕುತ್ತಾರು: ಮೂಡಬಿದಿರೆಯಲ್ಲಿ ಅನುಮಾನಾಸ್ಪದ ಸಾವಿಗೀಡಾಗಿರುವ ಕಾವ್ಯಾಳ ಪ್ರಕರಣ ನಡೆದು ಹಲವು ದಿನಗಳಾದರೂ ಪೋಷಕರ ಅನುಮಾನಗಳಿಗೆ ಉತ್ತರವೂ ಸಿಕ್ಕಿಲ್ಲ, ತನಿಖೆ ಕೂಡ ನಡೆದಿಲ್ಲ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಹೇಳಿದ್ದಾರೆ. ಅವರು ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಅಸಹಜ ಸಾವು ಪ್ರಕರಣ ಸೂಕ್ತ ತನಿಖೆಗೆ ಒತ್ತಾಯಿಸಿ ಎಸ್ ಎಫ್ ಐ ಹಾಗೂ ಡಿ ವೈ ಎಫ್ ಐ ವತಿಯಿಂದ ಕುತ್ತಾರು ಜಂಕ್ಷನ್ನಿನಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾವ್ಯಾ ಆತ್ಮಹತ್ಯೆಗೈದ ನಂತರ ಪೊಲೀಸರು ಹಾಗೂ ಹೆತ್ತವರು ಸ್ಥಳಕ್ಕೆ ಬರುವ ಮುನ್ನವೇ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಇಲ್ಲಿ ಕಾವ್ಯಾ ಆತ್ಮಹತ್ಯೆ ನಡೆಸಲು ಉಪಯೋಗಿಸಿದ ಸೀರೆ ಹಾಸ್ಟೆಲ್ಲಿನಲ್ಲಿ ಎಲ್ಲಿಂದ ಬಂದಿದೆ ಮತ್ತು ಕಾವ್ಯ ದಿನನಿತ್ಯ ಬರೆಯುತ್ತಿದ್ದ ಡೈರಿ ಕೂಡಾ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ನಡೆದು ಹಲವು ದಿನಗಳಾದರೂ ಪೊಲೀಸರು ಮಾತ್ರ ತನಿಖೆಯನ್ನು ನಡೆಸದೆ ಪ್ರಕರಣವನ್ನು ಮುಚ್ಚಿ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬಿಕಾರೋಡ್: ಪೊಲೀಸ್ ಬೀಟ್ ವ್ಯವಸ್ಥೆಯಡಿ ಅವರಿಗೆ ಮಾಹಿತಿದಾರರನ್ನಾಗಿ ನೇಮಿಸುವ ಕಮಿಟಿಯಲ್ಲಿ ಯಾವುದೇ ಅಪರಾಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಕೈಬಿಡಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಹೇಳಿದ್ದಾರೆ. ಅವರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆ – ಜನಸ್ನೇಹಿ ಪೊಲೀಸ್ ಹಾಗೂ ಪ್ರದೇಶಕ್ಕೊಬ್ಬ ಪೊಲೀಸ್ ಕುರಿತು ಸೋಮವಾರ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉಳ್ಳಾಲ ಠಾಣಾ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ 55 ಬೀಟ್ ಗಳನ್ನು ರಚಿಸಲಾಗಿದೆ. ಆಯಾಯ ಬೀಟ್ ಗಳ ಜವಾಬ್ದಾರಿ ಸಿಬ್ಬಂದಿಗೆ ನೀಡಲಾಗಿದೆ. ಅವರಡಿ ಬರುವ ಪ್ರದೇಶದ ಜನರ ಕಮಿಟಿಗಳಲ್ಲಿ ಯಾವುದೇ ಅಪರಾಧ ಹಿನ್ನೆಲೆ ಉಳ್ಳವರನ್ನು ಸೇರಿಸಲಾಗುವುದಿಲ್ಲ. ಇದರಿಂದ ಜನರು ಮುಕ್ತವಾಗಿ ಆಯಾಯ ಬೀಟ್ ಗಳಲ್ಲಿ ಕಾರ್ಯಾಚರಿಸುವ ಸಿಬ್ಬಂದಿಯಲ್ಲಿ ಮಾಹಿತಿ ನೀಡಬಹುದು. ಈ ಮೂಲಕ ಇಲಾಖೆ ಸೂಕ್ತ ಕ್ರಮಕೈಗೊಳ್ಳಬಹುದು ಎಂದರು. ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಅವರು ಬೀಟ್ ವ್ಯವಸ್ಥೆಯಡಿಯಲ್ಲಿ ಅಪರಾಧಿಗಳನ್ನು ಕಮಿಟಿಯಲ್ಲಿ ಸೇರ್ಪಡೆ ಮಾಡಿದಲ್ಲಿ ಮಾಹಿತಿಗಳು ಸೋರಿಕೆಯಾಗುವ…

