ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಛಾಯಾಗ್ರಹಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸಂಘಟನೆಯ ಮೂಲಕ ಒಗ್ಗಟ್ಟಾಗಿದ್ದಾಗ ಮಾತ್ರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಂಗಳೂರು ಅಭಿಪ್ರಾಯಪಟ್ಟರು.
ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಉಳ್ಳಾಲ ವಲಯದ ಚತುರ್ಥ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಕೆಲಸ ಮಾಡಿದಾಗ ಸಂಘಟಿತರಾಗಿ ಮುಂದೆ ನಡೆದಾಗ ಮಾತ್ರ ಯಶಸ್ವಿ ಸಾಧ್ಯ.ವೃತ್ತಿ ಸಂಬಂಧಪಟ್ಟ ಭಿನ್ನಾಭಿಪ್ರಾಯ ಬರುವುದು ಸಹಜ ಆದರೆ ಸಂಘಟಿತರಾಗಿ ಕೆಲಸ ಮಾಡಿದಾಗ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಕಳೆದ ನಾಲ್ಕು ವರ್ಷದಲ್ಲಿ ಉಳ್ಳಾಲ ವಲಯ ಉತ್ತಮ ಕಾರ್ಯವನ್ನು ಮಾಡಿದೆ.ಇದರೊಂದಿಗೆ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಸಹಕಾರಿ ಸಂಘ ಉತ್ತಮ ವ್ಯವಹಾರ ನಡೆಸುತ್ತಿದ್ದು ಸುಮಾರು 2 ಕೋಟಿಗೂ ಮಿಕ್ಕಿ ಸಾಲವನ್ನು ನೀಡಿದ್ದು ಎಲ್ಲಾ ಸದಸ್ಯರು ಪ್ರಯತ್ನಿಸಿದರೆ ಜಿಲ್ಲೆಯಲ್ಲಿ ಒಂದು ಉತ್ತಮ ಬ್ಯಾಂಕ್ ಆಗಿ ಪರಿವರ್ತನೆ ಮಾಡಲು ಸಾಧ್ಯ ಎಂದರು.
ಮಹಾಸಭೆಯ ಅಧ್ಯಕ್ಷತೆಯನ್ನು ಎಸ್‍ಕೆಪಿಎ ಉಳ್ಳಾಲ ವಲಯ ಅಧ್ಯಕ್ಷ ಉಮೇಶ್ ಉಳ್ಳಾಲ್ ವಹಿಸಿದ್ದರು.
ಅಸೋಸಿಯೇಶನ್‍ನ ಜಿಲ್ಲಾ ಸಂಚಾಲಕ ವಿಠಲ್ ಚೌಟ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಉಳ್ಳಾಲ ವಲಯ ಸ್ಥಾಪಕಾಧ್ಯಕ್ಷ ಯು. ಅರುಣ್ ಕುಮಾರ್, ಎಸ್‍ಕೆಪಿ ವಿವಿಧೋದ್ಧೇಶ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಮಾರ್ಲ ಭಾಗವಹಿಸಿದ್ದರು.
ಉಪಾಧ್ಯಕ್ಷ ಚಿದಾನಂದ್, ಜೊತೆ ಕಾರ್ಯದರ್ಶಿಗಳಾದ ಸಿದ್ಧಿಕ್, ರಾಜೇಶ್ ಓವರ್ ಬ್ರಿಡ್ಜ್, ಕ್ರೀಡಾ ಕಾರ್ಯದರ್ಶಿಗಳಾದ ನಾಗರಾಜ್ ಪ್ರವೀಣ್, ರಾಜೇಶ್ ಉಚ್ಚಿಲ, ಸಾಂಸ್ಕೃತಿ ಕಾರ್ಯದರ್ಶಿಗಳಾದ ಹರೀಶ್ ನಾಯ್ಕ್, ಸುರೇಶ್, ಹರೀಶ್ ಕೊಣಾಜೆ, ಪತ್ರಿಕಾ ಪ್ರತಿನಿಧಿಗಳಾದ ಧರಣೇಶ್ ಕೊಣಾಜೆ, ರಾಕೇಶ್ ಕೊಣಾಜೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ವಲಯ ಛಾಯಾಗ್ರಹಕರಿಗೆ ಏರ್ಪಡಿಸಲಾಗಿದ್ದ ಮದುವೆ ಛಾಯಾಗ್ರಣ ಸ್ಪರ್ಧಾ ವಿಜೇತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಪಾಧ್ಯಕ್ಷ ಗೋಪಿನಾಥ್ ಬಗಂಬಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತನುಂಜಯ ರಾವ್, ವಾರ್ಷಿಕ ವರದಿ ಮಂಡಿಸಿದರು. 2016-17ನೇ ಸಾಲಿನ ಜಮಾಖರ್ಚಿನ ಮಾಹಿತಿಯನ್ನು ಕೋಶಾಧಿಕಾರಿ ತೀರ್ಥನಾಥ್ ಕಣಂತೂರು, ಡೆಮಾಟ್ರಿಕ್ ಡಿ.ಸೋಜ ಕಾರ್ಯಕ್ರಮ ನಿರ್ವಹಿಸಿದರು.


