Author: UllalaVani

Kannada News From Coastal Karnataka

ಮಂಗಳೂರು : ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ‘ನೆರವು’ ಸಹಾಯಹಸ್ತ ಪ್ರದಾನ ಕಾರ್ಯಕ್ರಮವು ಡಿ. 25ರಂದು ಮಧ್ಯಾಹ್ನ 2 ಗಂಟೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯ ಲ್ಲಿ ನಡೆಯಲಿದೆ.ಈ ವರ್ಷ ಒಟ್ಟು 9.5ಕೋ.ರೂಗಳಿಗೂ ಅಧಿಕ ಮೊತ್ತ ವಿತರಿಸಲಾಗುವುದು ಎಂದು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ಪ್ರತೀ ವರ್ಷ ಡಿಸೆಂಬರ್ 25 ರಂದು ನಾವು ಗೋಲ್ಡ್ ಫಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ವರ್ಷದಿಂದ ವರ್ಷಕ್ಕೆ ನಾವು ಬೆಂಬಲಿಸುತ್ತಿರುವ ಕುಟುಂಬಗಳು ಮತ್ತು ಸಂಘಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ಪರಿವರ್ತನೆಯೊಂದು ನಮ್ಮ ನೆರವು ಕಾರ್ಯಕ್ರಮದಿಂದ ಆಗಿದೆ ಎಂಬುದನ್ನು ನಮಗೆ ದೊರಕಿರುವ ಹಿಮ್ಮಾಹಿತಿ ಹೇಳುತ್ತದೆ ಎಂದು ಎಂ.ಜಿ.ಆರ್ ಗ್ರೂಪ್ ನ ಚೆರ್ಮಾನ್ ಡಾ.ಕೆ.ಪ್ರಕಾಶ್ ಶೆಟ್ಟಿಯವರು ತಿಳಿಸಿದ್ದಾರೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ ಎಂಬುದೇನೋ ನಿಜ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ.…

Read More

ಮುಡಿಪು : ಜ.2,3,4 ರಂದು ಮುಡಿಪುವಿನ ರಾಜೀವ್ ಗಾಂಧಿ ಪಂಚಾಯತ್ ಮೈದಾನದಲ್ಲಿ ಆಯೋಜಿಸಲಾದ ೮ ನೇ ಬಾರಿಯ ರಾಜ್ಯಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾಜಬಾಂಧವರ ಹೊನಲು ಬೆಳಕಿನ ಪ್ರತಿಷ್ಠಿತ ಲೀಗ್ ಕಮ್ ನಾಕೌಟ್ ಮಹಾನಾಯಕ ಜೈ ಭೀಮ್ ಟ್ರೋಫಿ-೨೦೨೬ ಕ್ರಿಕೆಟ್ ಪಂದ್ಯಾಟದ ಪೂರ್ವಭಾವಿ ಸಭೆ ಮುಡಿಪು ಕುಲಾಲ ಭವನದಲ್ಲಿ ಭಾನುವಾರ ನಡೆಯಿತು. ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರ ನೇತೃತ್ವದಲ್ಲಿ ನಡೆಯಲಿರುವ ಪಂದ್ಯಾಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಆಲಿ ಫರೀದ್ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭ ಮಾತನಾಡಿದ ಅವರು ಮಹಾನಾಯಕ ಜೈಭೀಮ್ ಕ್ರಿಕೆಟ್ ಪಂದ್ಯಾಟ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯ ಬಾಂಧವರಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮೂರು ದಿನದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವುದು ಅತ್ಯಂತ ಸಂತೋಷ. ಸಭಾಧ್ಯಕ್ಷರ ಆಪ್ತ ಸಹಾಯಕರಾದ ಪ್ರವೀಣ್ ಕುಮಾರ್ ಜೆ ಪಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮಾಜದ…

Read More

ಉಳ್ಳಾಲ: ಡಿ-22ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಎಮ್ ಡಿಎಮ್ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ಮಾರಾಟದಲ್ಲಿ ತೊಡಗಿದ್ದ ಕೇರಳದ ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ (22)ಎಂಬಾತನನ್ನು ಉಳ್ಳಾಲ ಪೊಲೀಸರು ಸೋಮವಾರದಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ,ಕೃತ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಪೆಡ್ಲರ್ ಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಕೈಫ್ ನಿಂದ 55,000/- ರೂಪಾಯಿ ಬೆಲೆ ಬಾಳುವ ನಿಷೇಧಿತ 11 ಗ್ರಾಂ ಎಮ್ ಡಿಎಮ್ಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ 1 ತೂಕ ಮಾಪನ,500 ರೂ.ನಗದು ಮತ್ತು 1 ಮೊಬೈಲ್ ಫೋನನ್ನು ಪೊಲೀಸರು ಜಪ್ತಿಗೊಳಿಸಿದ್ದಾರೆ.ಸ್ಥಳದಲ್ಲಿದ್ದ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳಾದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರು ಪರಾರಿಯಾಗಿದ್ದಾರೆ.ಮೊಹಮ್ಮದ್ ಕೈಫ್ ಎಂಬಾತನು ವಿಲಾಸಿ ಜೀವನ ನಡೆಸಲು ಉಪ್ಪಳದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರೊಂದಿಗೆ ಸೇರಿ ಕೆಸಿ ರೋಡ್ ಫಲಾಹ್ ಶಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ…

Read More

ಮಂಗಳೂರು : ಸಂಘಟನೆಯನ್ನು ಬಲಪಡಿಸಿ, ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಹೆಚ್ಚಿಸಿಕೊಂಡು, ಸಮಾಜದಲ್ಲಿ ದೊರಕುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರಮಪಟ್ಟು ದುಡಿದರೆ, ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸಮೂಹದ ಪ್ರಗತಿಗೂ ದಾರಿ ತೆರೆದು, ಸಮಾಜವು ಒಗ್ಗಟ್ಟಿನ ಶಕ್ತಿಯಾಗಿ ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಭಾನುವಾರ ನಗರದ ಶ್ರೀಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕೀರ್ತಿಶೇಷ ದಾಮೋದರ ಆರ್ ಸುವರ್ಣ ಅವರ 101ನೇ ಜನ್ಮ ಜಯಂತಿ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರಂತೆ ಬದುಕಬೇಕು ಅಂತ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುತ್ತೇನೆ ಅಂತ ಒಂದು ಕುಟುಂಬ ಯೋಜನೆ ಮಾಡಿದರೆ, ಆ ಕುಟುಂಬ ಬದುಕಲಿಕ್ಕೆ ಪೂರ್ಣ ಅವಕಾಶಗಳಿರುವಂತಹ ವ್ಯವಸ್ಥೆಗಳು ಇವತ್ತು ಸಮಾಜದಲ್ಲಿದೆ. ಅದಕ್ಕೆ ಕೀಳರಿಮೆಯನ್ನು ಬಿಟ್ಟು ಈ ಸಮಾಜದಲ್ಲಿ ನಾನೊಬ್ಬ ಸ್ಪರ್ಧಿ, ಎಲ್ಲರಂತೆ ನಾನು ತಲೆ ಎತ್ತಿ ಬದುಕಬೇಕು ಅಂತ…

Read More

ನವದೆಹಲಿ ಡಿ. 22 : ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಲಭಾಗದ ಇಂಜಿನ್ ಹಾರಾಟದ ವೇಳೆ ಸ್ಥಗಿತಕೊಂಡಿದೆ. ಪರಿಣಾಮ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಲ್ಲೇ ದೆಹಲಿಗೆ ಮರಳಿದೆ. ಇಂದು ಬೆಳಿಗ್ಗೆ 6:10ಕ್ಕೆ ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ 887 ವಿಮಾನವು 6:52ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಕುರಿತು ಡಿಜಿಸಿಎ ಮಾಹಿತಿ ನೀಡಿದ್ದು, ವಿಮಾನ ಹಾರಾಟದ ವೇಳೆ ಒಂದು ಇಂಜಿನ್‌ನ ಕಾರ್ಯ ಸ್ಥಗಿತಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅವಳಿ ಇಂಜಿನ್ ಹೊಂದಿರುವ ವಿಮಾನಗಳು ಒಂದು ಇಂಜಿನ್ ಮೂಲಕ ಲ್ಯಾಂಡ್ ಆಗಬಹುದು. ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

Read More

ಸೇವಾ ಕಾರ್ಯ ಚುರುಕು ಗೊಳಿಸಲು ಉಳ್ಳಾಲಕ್ಕೆ ಪೂರ್ಣ ಅವಧಿಯ ಉತ್ತಮ ಪೌರಾಯುಕ್ತರ ನೇಮಕ ಮಾಡಿ ಎಂದು ನಾಗರಿಕರ ಆಗ್ರಹಕ್ಕೆ ಸ್ಪಂದಿಸಿರುವ ಮಾನ್ಯ ಸಭಾಧ್ಯಕ್ಷ UT ಖಾದರ್ ರವರ ಶಿಫಾರಸು ಮೇರೆಗೆ ಸರ್ಕಾರ ಇದೀಗ ಉಳ್ಳಾಲ ನಗರ ಸಭೆಗೆ ಪೌರಾಯುಕ್ತರಾಗಿ ಸಂತೋಷ್ ರನ್ನು ನೇಮಕ ಮಾಡಿದೆ . ಮೂಲತಃ ತೀರ್ಥಹಳ್ಳಿಯ ಸಂತೋಷ್ ರವರು ಈ ಮೊದಲು ಕುಂದಾಪುರ, ಕಾಪು ಪುರ ಸಭೆ ಮುಖ್ಯಾಧಿಕಾರಿ, ಉಡುಪಿ ನಗರ ಸಭೆಯ ಕಂದಾಯ ಅಧಿಕಾರಿ ಯಾಗಿ (RO) ಹೀಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 15 ವರ್ಷ ಗಳ ಕಾಲ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಅಲ್ಲಿನ ಜನರ ಪ್ರೀತಿ,ವಿಶ್ವಾಸ, ಗೌರವಕ್ಕೆ ಪಾತ್ರರಾಗಿದ್ದಾರೆ. ಉಳ್ಳಾಲಕ್ಕೆ ಓರ್ವ ಉತ್ತಮ KMAS (Karnataka municipal administrative service) ಅಧಿಕಾರಿಯ ಹುಡುಕಾಟದಲ್ಲಿದ್ದ ಮಾನ್ಯ ಶಾಸಕರಿಗೆ ಸಂತೋಷ ರವರ ಕಾರ್ಯ ವೈಖರಿ ಬಗ್ಗೆ ತಿಳಿದು ಕೊಂಡು ಉಳ್ಳಾಲಕ್ಕೆ ಇವರೇ ಸೂಕ್ತ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿ ಇವರನ್ನು ನೇಮಕ ಮಾಡುವಲ್ಲಿ…

Read More

ಉಳ್ಳಾಲ: ಶಾಲೆಗಳಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳೂ ಅಮೂಲ್ಯ. ಇತರ ಶಿಕ್ಷಣ ಸಂಸ್ಥೆಗಳಲ್ಲಿರುವ ವ್ಯವಸ್ಥೆಗಿಂತಲೂ ಹೆಚ್ಚಿನ ವ್ಯವಸ್ಥೆ ನಮ್ಮ ಸಂಸ್ಥೆಗಳಲ್ಲೂ ಇರಬೇಕೆನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಿ.25ರಂದು ಕ್ರೀಡಾಂಗಣದ ಉದ್ಘಾಟನೆ ನಡೆಯಲಿದೆ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಸಯ್ಯದ್ ಮದನಿ ಜಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಬಿ.ಜಿ ಹನೀಫ್ ಅಭಿಪ್ರಾಯಪಟ್ಟರು.ಉಳ್ಳಾಲ‌ದ ಮಾಸ್ತಿಕಟ್ಟೆ ಹಝ್ರತ್ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಸಯ್ಯದ್ ಮದನಿ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ರೀಡೆ ಬದುಕಿನುದ್ದಕ್ಕೂ ಆರೋಗ್ಯ ಮತ್ತು ಮನಸ್ಸಿಗೆ ಸಂತೋಷ ನೀಡುತ್ತದೆ. ಹಝ್ರತ್ ಶಾಲೆಯಲ್ಲಿ ವಿಶಾಲ ಕ್ರೀಡಾಂಗಣ ನಿರ್ಮಿಸುವ ಮೂಲಕ ಟ್ರಸ್ಟ್ ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಕ್ರೀಡಾಂಗಣ ಕೊರತೆ ನಿವಾರಿಸಲಾಗಿದೆ ಎಂದು ತಿಳಿಸಿದರು. ‌ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹುಸೈನ್, ದರ್ಗಾ ಕೋಶಾಧಿಕಾರಿ ನಾಝಿಂ, ಉಳ್ಳಾಲ‌ ಗುಚ್ಚ ಸಂಪನ್ಮೂಲ ವ್ಯಕ್ತಿ ಮೋಹನ್…

Read More

ಮಂಗಳೂರು: ಅಡ್ಯಾರು ಗ್ರಾಮ ಪಂಚಾಯತ್‌, ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಅಡ್ಯಾರು ಗ್ರಾಮೋತ್ಸವ – 2025’ ಕಾರ್ಯಕ್ರಮವು ಡಿ.20ರ ಶನಿವಾರ ಸಹ್ಯಾದ್ರಿ ಕಾಲೇಜು ಮೈದಾನ, ಅಡ್ಯಾರಿನಲ್ಲಿ ವಿಜೃಂಭಣೆಯಿಂದ ಜರುಗಿತು. ‘ಸೌಹಾರ್ದಯುತ ಗ್ರಾಮ – ಸೌಹಾರ್ದಯುತ ಭಾರತ’ ಎಂಬ ಸಂದೇಶದೊಂದಿಗೆ ಆಯೋಜಿಸಲಾಗಿರುವ ಈ ಗ್ರಾಮೋತ್ಸವದ ಮುನ್ನ ವಿವಿಧ ಶಾಲಾ ಮಕ್ಕಳ ಆಕರ್ಷಕ ಪಥ ಪಸಂಚಲನ, ಡ್ರೋನ್ ಹಾರಾಟ, ಜಾನಪದ ನೃತ್ಯ ನಡೆಯಿತು. ಕಾರ್ಯಕ್ರಮವನ್ನು ಪಾರಿವಾಳ ಹಾರಿಸುವ ಮೂಲಕ ಚಾಲನೆ ಗಣ್ಯರು ಚಾಲನೆ ನೀಡಿದರು‌.ಎಕ್ಸ್ ಪರ್ಟ್ ಪರ್ಟ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ನರೇಂದ್ರ‌ ನಾಯಕ್ ರಿಬ್ಬನ್ ಕತ್ತರಿಸುವ ಮೂಲಕ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮಸ್ಥರ ಸ್ವಸಹಾಯ ಗುಂಪುಗಳ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದರಲ್ಲದೆ, ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಉದ್ಘಾಟನಾ ಸಮಾರಂಭ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, “ಮಕ್ಕಳು ಎಳವೆಯಲ್ಲೇ ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು. ಗ್ರಾಮಗಳ ಜನರು ಒಗ್ಗಟ್ಟಾಗಿ…

Read More

ಉಳ್ಳಾಲ,ಡಿ.20: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧೀನಕ್ಕೊಳಪಟ್ಟ ಉಳ್ಳಾಲ ಘಟಕದ ಅಧ್ಯಕ್ಷರಾಗಿ ಪ್ರವೀಣ್ ಕುಂಪಲ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ದ.ಕ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರವೀಣ್ ಕೊಡಿಯಾಬೈಲ್ ಅವರು ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊAಡಿದ್ದಾರೆ. ಜಾನಪದ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಪ್ರವೀಣ್ ಕುಂಪಲ ಅವರು ಜಿಲ್ಲಾ ಘಟನಕದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸನ್ನದ್ದರಾಗಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಘಟಕದ ಮಾರ್ಗದರ್ಶನದೊಂದಿಗೆ ಉಳ್ಳಾಲ ಭಾಗದಲ್ಲಿ ಜಾನಪದದೊಂದಿಗೆ ಉಳ್ಳಾಲ ಭಾಗದಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಉಳ್ಳಾಲ ಘಟಕದ ವತಿಯಿಂದ ವಿವಿಧ ಜಾನಪದ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯಲಿವೆ ಎಂಬ ನಿರೀಕ್ಷೆಯಿದೆ. ಉಳ್ಳಾಲ ಭಾಗದಲ್ಲಿ ಜಾನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಅಭಿವೃದ್ಧಿಗೆ ಪೂರಕವಾಗಿ ಈ ಆಯ್ಕೆಯನ್ನು ಮಾಡಲಾಗಿದೆ. ಪ್ರವೀಣ್ ಕುಂಪಲ ಅವರ ನೇಮಕಾತಿಯು ಉಳ್ಳಾಲ ಘಟಕದ ವ್ಯಾಪ್ತಿಯಲ್ಲಿ ಜಾನಪದ ಚಟುವಟಿಕೆಗಳಿಗೆ ಹೊಸ ಚೈತನ್ಯ…

Read More

ಮುಡಿಪು,ಡಿ.20: ಬೆಳಕು ಚಾರಿಟೇಬಲ್ ಟ್ರಸ್ಟ್ ಮುಡಿಪು ಇವರ ಮುಂದಾಳತ್ವದಲ್ಲಿ ಲಯನ್‌ಕ್ಲಬ್ ಮುಡಿಪು-ಕಿನಾಡು ಫಾ.ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಕಂಕನಾಡಿ-ಮ0ಗಳೂರು ಇದರ ಸಹಯೋಗದೊಂದಿಗೆ ಡಿ.21ರಂದು ಮುಡಿಪು ಭಾರತಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಶಿಬಿರವನ್ನು ಎಐಸಿಯು ರಾಜ್ಯಧ್ಯಕ್ಷರು ಹಾಗೂ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ನಿಕಟಪೂರ್ವ ಅಧ್ಯಕ್ಷರಾದ ಸಲ್ವಿನ್ ಡಿ,ಸೋಜ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳಕು ಚಾಡಿಟೇಬಲ್ ಟ್ರಸ್ಟ್ (ರಿ.) ಮುಡಿಪು ಇದರ ಅಧ್ಯಕ್ಷರಾದ ಪ್ರಸನ್ನ ಎಂ ಕೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸುನ್ನೀ ಯುವಜನ ಸಂಘ ಮುಡಿಪು ಝೋನ್ ಇದರ ಅಧ್ಯಕ್ಷರಾದ ಬಿಎ ಉಸ್ಮಾನ್ ಸಖಾಫಿ ಕಡ್ವಾಯಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು ಇದರ ಅಧ್ಯಕ್ಷರಾದ ಅಜಿತ್ ಪಜೀರು, ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ ಸಿರಾಜ್, ಮುಡಿಪು ವಿಶ್ವಕರ್ಮ ಸಂಘದ ನಿಕಟಪೂರ್ವ ಅಧ್ಯಕ್ಷರಾದ ನವೀನ ಆಚಾರ್ಯ, ನಟ್ಟಿಹಿತ್ಲು ಕನ್ಸಸ್ಟçಕ್ಷಮ್ ಮುಡಿಪು ಇದರ ಅರುಣ್ ಡಿಸೋಜ, ಭಾರತಿ ಶಾಲೆ ಮುಡಿಪುವಿನ ಅಧ್ಯಕ್ಷರಾದ ಕೆ.ಎಸ್.ಭಟ್, ಸಾಮಾಜಿಕ ಕಾರ್ಯಕರ್ತರಾದ…

Read More