ಮೈಸೂರು, ಮೇ. 08: ಕೆಎಸ್‌ಆರ್‌ಟಿಸಿ ಉಪನಗರ ಬಸ್ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕ ಮೂತ್ರವಿಸರ್ಜನೆ ಮಾಡುವವರನ್ನು ತಡೆಯುವ ಉದ್ದೇಶದಿಂದ ಬಸ್ ನಿಲ್ದಾಣದ ಎದುರಿನ ಬೆಂಗಳೂರು-ನೀಲಗಿರಿ ರಸ್ತೆ ಪಾದಚಾರಿ ಮಾರ್ಗದ ಮೇಲೆ ಪ್ರತಿಬಿಂಬ ಕನ್ನಡಿಯಂತಿರುವ ಸ್ಟೇನ್ಲೆಸ್ ಸ್ಟೀಲ್ ಶೀಟ್‌ಗಳನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅಳವಡಿಸಿದ್ದಾರೆ. 85 ಮೀಟರ್ ವ್ಯಾಪ್ತಿಯಲ್ಲಿ ಈ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್‌ಗಳನ್ನು ಕನ್ನಡಿಯಂತೆ ಅಳವಡಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡಲು ಯತ್ನಿಸುವವರು ಯೋಚಿಸಬೇಕಾಗಿದೆ. ಬಸ್ ನಿಲ್ದಾಣದೊಳಗಿನ ಸಾರ್ವಜನಿಕ ಶೌಚಾಲಯ ಬಳಸುವ ಬದಲು ಹಲವರು ರಸ್ತೆಯ ಪಕ್ಕದ ಮಳೆನೀರು ಕಾಲುವೆಯಲ್ಲೇ ಮೂತ್ರವಿಸರ್ಜನೆ ಮಾಡುತ್ತಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಅಲ್ಲಿ ಓಡಾಡಲು ಕಷ್ಟವಾಗುತ್ತಿತ್ತು. ಈ ಹಿಂದೆ ಎಚ್ಚರಿಕೆ ಫಲಕಗಳು ಹಾಗೂ ಸೂಚನೆಗಳನ್ನು ಹಾಕಿದ್ದರೂ ಸಮಸ್ಯೆ ಮುಂದುವರಿದಿತ್ತು. ಹೀಗಾಗಿ ಮಹಾನಗರ ಪಾಲಿಕೆ ಈ ಪ್ರದೇಶವನ್ನು ಪ್ರಮುಖ ‘ಯೆಲ್ಲೋ ಸ್ಪಾಟ್’ ಎಂದು ಗುರುತಿಸಿ ತುರ್ತು ಕ್ರಮ ಕೈಗೊಂಡಿದೆ. ಮೊದಲು ಕನ್ನಡಿಗಳನ್ನು ಅಳವಡಿಸುವ ಯೋಚನೆ ಇತ್ತು. ನಂತರ ಮೈಕಾ ಗ್ಲಾಸ್…
Author: UllalaVani
ಇಸ್ಲಾಮಾಬಾದ್,ಮೇ. 08 : ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ ಭಾರತೀಯ ಹಡಗನ್ನು ಪಾಕಿಸ್ತಾನ ನೌಕಾಪಡೆ ರಕ್ಷಿಸಿದೆ. ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಹಡಗಿನ ತುರ್ತು ಕರೆಗೆ ಪಾಕಿಸ್ತಾನಿ ನೌಕಾಪಡೆ ಸ್ಪಂದಿಸಿದೆ. ಸಿಬ್ಬಂದಿಗೆ ಆಹಾರ, ವೈದ್ಯಕೀಯ ಮತ್ತು ಇತರ ತುರ್ತು ಸಹಾಯವನ್ನು ನೀಡಿದೆ ಎಂದು ವರದಿಯಾಗಿದೆ.ಎಂವಿ ಗೌತಮ್ ಹೆಸರಿನ ಈ ಹಡಗು ಒಮಾನ್‌ನಿಂದ ಭಾರತಕ್ಕೆ ವಾಪಸ್ ಆಗುವಾಗ ತಾಂತ್ರಿಕ ವೈಫಲ್ಯವನ್ನು ಅನುಭವಿಸಿ ಸಮುದ್ರದಲ್ಲಿ ಸಿಲುಕಿಕೊಂಡಿತ್ತು ಎಂದು ಪಾಕಿಸ್ತಾನಿ ಮಿಲಿಟರಿ ತಿಳಿಸಿದೆ.ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯವನ್ನು ಕೋರಿತು. ನಂತರ ಪಾಕಿಸ್ತಾನ ನೌಕಾಪಡೆಯು ಆರು ಭಾರತೀಯರು ಮತ್ತು ಓರ್ವ ಇಂಡೋನೇಷ್ಯಾದ ಸಿಬ್ಬಂದಿ ರಕ್ಷಿಸಿದೆ. ಮನವಿಗೆ ಸ್ಪಂದಿಸಿದ ಪಾಕಿಸ್ತಾನ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆ ನಡೆಸಲು ಪಿಎಂಎಸ್ಎಸ್ ಕಾಶ್ಮೀರ್ ಎಂಬ ಹಡಗನ್ನು ನಿಯೋಜಿಸಿತ್ತು.
ಹರೇಕಳ, ಮೇ.08: ಹರೇಕಳ ಗ್ರಾಮ ಪಂಚಾಯತ್‌ನ ಪ್ರಸ್ತುತ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾದ ಬದ್ರುದ್ದೀನ್ ಫರಿದ್ ನಗರ ವಿರುದ್ಧ ಸಾರ್ವಜನಿಕ ನಿಧಿಗಳ ದುರುಪಯೋಗ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಕುರಿತು ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬAಧ ಡೆನ್ಜಿಲ್ ದಯಾ ಪಿಂಟೋ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದು, ದೂರಿನಲ್ಲಿ ಬದ್ರುದ್ದೀನ್ ಫರಿದ್ ನಗರ ಅವರು ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಒಳಸಂಚು ನಡೆಸಿ, ಟೆಂಡರ್ ಹಂಚಿಕೆ ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಅನಿಯಮಿತತೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 2025-26ನೇ ಸಾಲಿನ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಸಮಂಜಸ ಕಾರಣಗಳನ್ನು ದಾಖಲಿಸದೇ ಸ್ಪರ್ಧಾತ್ಮಕತೆ ಮತ್ತು ಪಾರದರ್ಶಕತೆಯ ತತ್ವಗಳನ್ನು ಉಲ್ಲಂಘಿಸಿ “ಹಿಂದುಸ್ತಾನ್ ಸೋಲಾರ್ ಇಂಡಸ್ಟ್ರೀಸ್” ಸಂಸ್ಥೆಗೆ ಕಾಮಗಾರಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕರ್ನಾಟಕ ಸಾರ್ವಜನಿಕ ಖರೀದಿ ನಿಯಮಾವಳಿ ಹಾಗೂ ಆಡಳಿತಾತ್ಮಕ ಪಾರದರ್ಶಕತಾ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದರೊಂದಿಗೆ, 2025-26ನೇ ಸಾಲಿನ…
ಮಂಗಳೂರು, ಮೇ. 08: ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾದರ್ ಅವರು, ಅನೇಕ ಕಡೆಗಳಲ್ಲಿ ನೀರಿನ ಟ್ಯಾಂಕ್‌ಗಳು ಮತ್ತು ಕೊಳವೆಬಾವಿಗಳ ನಿರ್ಮಾಣವಾಗಿದ್ದರೂ, ವಿದ್ಯುತ್ ಸಂಪರ್ಕದ ವಿಳಂಬದಿಂದಾಗಿ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳೀಯ ಸಂಸ್ಥೆಗಳಿಂದ ಠೇವಣಿ ಮೊತ್ತಕ್ಕಾಗಿ ಕಾಯದೆ ವಿದ್ಯುತ್ ಸಂಪರ್ಕ ನೀಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾದ ನಂತರ ಈ ಮೊತ್ತವನ್ನು ಹೊಂದಾಣಿಕೆ ಮಾಡುವಂತೆ ಅವರು ತಿಳಿಸಿದ್ದಾರೆ.ಕುಡಿಯುವ ನೀರಿನ ಯೋಜನೆಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬೇಕು. ಮುಂದಿನ 30 ವರ್ಷಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಸಿದ್ಧಪಡಿಸಬೇಕು. ಅಗತ್ಯವಿದ್ದರೆ ವಿಶೇಷ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದ್ದಾರೆಪೈಪ್‌ಲೈನ್ ಮೂಲಕ ನೀರು ಪೂರೈಸಲು ಸಾಧ್ಯವಾಗದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಟಾಸ್ಕ್ ಫೋರ್ಸ್ ಮೂಲಕವೂ ಇದಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದರು.…
ಮಂಗಳೂರು, ಮೇ 08: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟದ ಸಾಮಾಜಿಕ ಜಾಲತಾಣ ಸಭೆಯು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ನವಾಝ್, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದು, ಆ ಯೋಜನೆಗಳ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ವಿರೋಧ ಪಕ್ಷಗಳು ಹರಡುತ್ತಿರುವ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾರ್ಯಕರ್ತರು ಸದಾ ಸನ್ನದ್ಧರಾಗಿರಬೇಕು. ವಾಸ್ತವಾಂಶಗಳನ್ನು ಜನರ ಮುಂದಿಡುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಭೆಯಲ್ಲಿ ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ದೊರೆಯುತ್ತಿರುವ ನೆರವು ಹಾಗೂ ಮುಂದಿನ ದಿನಗಳಲ್ಲಿ ಯುವ ಸಬಲೀಕರಣಕ್ಕಾಗಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದ ತಂಡವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಪ್ರತಿ ಬೂತ್…
ಕುತ್ತಾರು ಮೇ 7: ಮುನ್ನೂರು ಗ್ರಾಮದ ಕುತ್ತಾರು ಪ್ರದೇಶದ ಕಂಪ ಮನೆತನದ ದೇವಪ್ಪ ಕಂಪ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರಳ ಸ್ವಭಾವ, ಸಹನಶೀಲತೆ ಹಾಗೂ ಸ್ನೇಹಪರ ನಡೆನುಡಿಗಳಿಂದ ದೇವಪ್ಪ ಕಂಪ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಅವರು ಜನಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದರು. ಸಿಪಿಎಂ ಪಕ್ಷದ ಹಿತೈಷಿಯಾಗಿ ಕಾರ್ಯನಿರ್ವಹಿಸಿದ್ದ ದೇವಪ್ಪ ಕಂಪ ಅವರು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಾರ್ಯಕರ್ತರಿಗಿಂತಲೂ ಹೆಚ್ಚು ಸಮರ್ಪಣಾಭಾವದಿಂದ ಪಕ್ಷದ ಹೋರಾಟ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಪಕ್ಷದ ಆಶಯಗಳ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದ ಅವರು ಪ್ರತಿಯೊಂದು ಹೋರಾಟ ಕಾರ್ಯಕ್ರಮದಲ್ಲೂ ತಮ್ಮ ಹಾಜರಾತಿ ನೀಡುತ್ತಿದ್ದರು. ಇದಲ್ಲದೆ, ಈ ಭಾಗದ ಸಾಮಾಜಿಕ ಸಂಸ್ಥೆಗಳಾದ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಹಾಗೂ ಮುನ್ನೂರು ಯುವಕ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಡಿ.ವೈ.ಎಫ್.ಐ ಹಾಗೂ ರೈತ ಸಂಘದ ಸಮಿತಿ ಸದಸ್ಯರಾಗಿ ಸಾಮಾಜಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ದೇವಪ್ಪ ಕಂಪ ಅವರು ಪ್ರಸ್ತುತ…
ಮಂಗಳೂರು: ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬ ಆಶಯದೊಂದಿಗೆ ಕಾರ್ಯಾಚರಿಸುತ್ತಿರುವ ವಿಆರ್ ಡಿಎಫ್ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಳೆದ 36 ವರ್ಷಗಳಿಂದ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಇದೀಗ ಶಿವಮೊಗ್ಗ ಹಾಗೂ ಹಾಸನ ವಿಸ್ತರಣೆಗೆ ಮುಂದಾಗಿದೆ. ಗ್ರಾಮೀಣ ಮಟ್ಟದಿಂದಲೇ ಅಭಿವೃದ್ಧಿ ಕಾರ್ಯಗಳು, ಜ್ಞಾನ ವೃದ್ಧಿ ಹಾಗೂ ಸಮಾಜ ಸೇವೆಯ ಕೆಲಸಗಳಾಗಬೇಕು ಅನ್ನುವ ಉದ್ದೇಶದೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ ತಿಳಿಸಿದರು. ಅವರು ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಇಂದು ಹಮ್ಮಿಕೊಂಡ “ಸ್ವಾವಲಂಬಿ 2026” ಮಹಿಳಾ ಉದ್ದಿಮೆದಾರರ ಸಮಾವೇಶ ಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತ ಸರ್ಕಾರದ ಮುಖ್ಯ ಉದ್ದೇಶ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಯಾಗಿದೆ. ನಾರಿ ಶಕ್ತಿಯ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. “ನಾರಿ ಸರ್ವತ್ರ ಪೂಜ್ಯತೆ” ಎಂಬ ತತ್ವದ ಆಧಾರದ ಮೇಲೆ ಸಮಾಜದ ಸಮಗ್ರ…
ಎಸ್ ವೈ ಎಸ್, ಎಸ್ ವೈ ಎಸ್‌ಎಸ್‌ಎಫ್ ಹಾಗೂ ಕೆ ಎಮ್ ಜೆ ಕೆ ಸಿ ನಗರ ಯುನಿಟ್ ವತಿಯಿಂದ “ಸುನ್ನೀ ಆದರ್ಶ ಸಂಗಮ” ಕಾರ್ಯಕ್ರಮವು ಮೇ 8ರಂದು ಶುಕ್ರವಾರ ಸಂಜೆ 5 ಗಂಟೆಗೆ ಕೆ ಸಿ ನಗರ ಜಂಕ್ಷನ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣವನ್ನು ವಹ್ಹಾಬ್ ಸಖಾಫಿ ಮಾಂಬಾಡ್ ನೆರವೇರಿಸಲಿದ್ದಾರೆ. ಅಬ್ದುರ್ರಶಿದ್ ಝೈನಿ ಸಖಾಫಿ ತಲಪಾಡಿ ಹಾಗೂ ಮುನೀರ್ ಸಖಾಫಿ ಕೆ ಸಿ ರೋಡ್ ಉಪಸ್ಥಿತರಿರುವರು. ಸಲಫಿಗಳ ಪೊಳ್ಳು ವಾದಗಳಿಗೆ ತಕ್ಕ ಉತ್ತರ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನವದೆಹಲಿ, ಮೇ. 07; ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಮೂಲದ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ವಿಶೇಷ ಕಾರ್ಯಾಚರಣೆಗೆ 1 ವರ್ಷ ಪೂರ್ಣಗೊಂಡಿದೆ. ಈ ಹೊತ್ತಿನಲ್ಲೇ ಪಾಕ್ ವಿರುದ್ಧ ತೀರಿಸಿಕೊಂಡ ಪ್ರತೀಕಾರ ಹಾಗೂ ಭಾರತೀಯ ಮೂರು ಸೇನೆಗಳ ಪರಾಕ್ರಮವನ್ನು ನೆನಪಿಸುವ ವಿಶೇಷ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಹಂಚಿಕೊಂಡಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಭಾರತೀಯ ವಾಯುಪಡೆ, ಆಪರೇಷನ್ ಸಿಂಧೂರ ನ್ಯಾಯ ದೊರಕಿಸಿದೆ. ಈ ಕಾರ್ಯ ನಿಖರವಾಗಿದ್ದು, ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದೆ. ಅಲ್ಲದೇ, ಭಾರತ ಯಾವುದನ್ನೂ ಮರೆಯುವುದಿಲ್ಲ-ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ, ಆಪರೇಷನ್ ಸಿಂಧೂರ ಮುಂದುವರಿಯುತ್ತದೆ ಎಂದು ವಾಯುಪಡೆ ಎಚ್ಚರಿಸಿದೆ.ಅಲ್ಲದೇ ವಾಯುಪಡೆ ಹಂಚಿಕೊಂಡ ಇದೇ ವಿಡಿಯೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಉಗ್ರರ ವಿರುದ್ಧ ಗುಡುಗಿದ್ದಾರೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನ ಗುರುತಿಸಿ, ಪತ್ತೆಮಾಡಿ ಶಿಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಉಳ್ಳಾಲ: ಹಜ್ ಯಾತ್ರೆ ದೇವನ ಮೇಲೆ ವಿಶ್ವಾಸದಿಂದ ಕೂಡಿರಬೇಕಿದ್ದು ಅದರ ಹೊರತು ತೋರ್ಪಡಿಕೆಗೆ ಸೀಮಿತವಾದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಯಾತ್ರಿಕರನ್ನು ಬೀಳ್ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಳೆಕೋಟೆ ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಹಿಮಮಿ ಉಸ್ತಾದ್ ಹೇಳಿದರು. ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಗೂ ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ ಅವರಿಗೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಗಳ ವತಿಯಿಂದ ಹಳೆಕೋಟೆ ಸಯ್ಯದ್ ಮದನಿ ಶಾಲಾ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ದೇವಭಯದಿಂದ ಹಜ್ ನಿರ್ವಹಿಸಿದರೆ ಆಗತಾನೇ ಹುಟ್ಟಿದ ಮಗುವಿನಂತೆ ಆಗುತ್ತಾನೆ ಎಂದು ಇಸ್ಲಾಮಿನಲ್ಲಿ ತಿಳಿಸಲಾಗಿದೆ ಎಂದರು.ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಮಾತನಾಡಿ, ಹಜ್ ಯಾತ್ರೆ ಅಥವಾ ಯಾವುದೇ ಕಾರ್ಯ ಕೈಗೊಳ್ಳುವ ಸಂದರ್ಭ ಸನ್ಮಾನ ಕಾರ್ಯಕ್ರಮ ನಡೆಸುವಾಗ ಅಹಂಕಾರ ಬಂದರೆ ಆತನ ಎಲ್ಲ ಕರ್ಮಗಳೂ ನಿಷ್ಪ್ರಯೋಜಕ…

