Author: UllalaVani

Kannada News From Coastal Karnataka

ತೊಕ್ಕೊಟ್ಟು; ತೊಕ್ಕೊಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಅಮೂಲ್ ಐಸ್‌ಕ್ರೀಂ ಪಾರ್ಲರ್ 6ನೇ ವರ್ಷವನ್ನು ಪೂರೈಸಿದೆ. ಈ ಹಿನ್ನಲೆ ಪಾರ್ಲರ್ ಮಾಲಕರಾದ ಜಯಪ್ರಕಾಶ್, ನಮಿತಾ ದಂಪತಿ ನೇತೃತ್ವದಲ್ಲಿ ಲಕ್ಕಿ ಕೂಪನ್ ಡ್ರಾ ನಡೆದಿದೆ. ಹೌದು, ಸದಾ ಗ್ರಾಹಕರ ನೆಚ್ಚಿನ ಐಸ್‌ಕ್ರೀಂ ಪಾರ್ಲರ್ ಆಗಿರುವ ಅಮೂಲ್ ಐಸ್‌ಕ್ರೀಂ ಪಾರ್ಲರ್ ತನ್ನ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಆಫರ್ ಇಟ್ಟಿತ್ತು. ಫ್ರೀ ಕೂಪನ್ ಪಡೆದ ಗ್ರಾಹಕರ ಪೈಕಿ ಮೊದಲ ಅದೃಷ್ಟಶಾಲಿ ಬಹುಮಾನವನ್ನು ಗ್ರಾಹಕರಾದ ವಜ್ರ ಅವರು ಪಡೆದುಕೊಂಡಿದ್ದಾರೆ. ಎರಡನೇ ಅದೃಷ್ಟಶಾಲಿ ಬಹುಮಾನವನ್ನು ಮೊಹಮ್ಮದ್ ಸಮದ್ ಅವರು ತಮ್ಮದಾಗಿಸಿಕೊಂಡರೆ, ಮೂರನೇ ಬಹುಮಾನವನ್ನು ರೋದಿ ಮೋತೆರೋ ಅವರು ಪಡೆದುಕೊಂಡಿದ್ದಾರೆ. ಇನ್ನುಳಿದಂತೆ 10 ಅದೃಷ್ಟಶಾಲಿ ಗ್ರಾಹಕರು ಗಿಫ್ಟ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮೂಲ್ ಐಸ್‌ಕ್ರೀಂ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲಾ..? ಸಣ್ಣಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಅಮೂಲ್ ಬ್ರಾö್ಯಂಡ್ ಐಸ್‌ಕ್ರೀಂ ಅಂದರೆ ಬಲುಇಷ್ಟ. ಸಂತಸದ ಕ್ಷಣಗಳನ್ನು ಅಮೂಲ್ ಐಸ್‌ಕ್ರೀಂ ಜೊತೆ ಕಳೆಯಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; 7349238233, 9611263985

Read More

ಮಂಗಳೂರು, ಡಿ. 23: ನವ ಮಂಗಳೂರು ಬಂದರು ಪ್ರಾಧಿಕಾರ (NMPA) 2025–26ರ ಕ್ರೂಸ್‌ ಋತುವಿನ ಆರಂಭಕ್ಕೆ ಅಧಿಕೃತ ಚಾಲನೆ ನೀಡಿದ್ದು, ಮೊದಲ ಐಷಾರಾಮಿ ಕ್ರೂಸ್ ಹಡಗು ಎಂಎಸ್ ಸೆವೆನ್ ಸೀಸ್ ನ್ಯಾವಿಗೇಟರ್ ಶನಿವಾರ ಮಂಗಳೂರಿಗೆ ಆಗಮಿಸಿದೆ. ಹಡಗು ಬೆಳಿಗ್ಗೆ 6.15ಕ್ಕೆ ಬಂದರು ತಲುಪಿದ್ದು, 7.15ಕ್ಕೆ ಬರ್ತ್ ಸಂಖ್ಯೆ-4ರಲ್ಲಿ ಲಂಗರು ಹಾಕಿತು. ಬಹಾಮಾಸ್ ಧ್ವಜದ ಅಡಿಯಲ್ಲಿ ಸಂಚರಿಸುತ್ತಿರುವ ಈ ಕ್ರೂಸ್ ಹಡಗು ಒಟ್ಟು 172.50 ಮೀಟರ್ ಉದ್ದ, 7.50 ಮೀಟರ್ ಡ್ರಾಫ್ಟ್ ಮತ್ತು 28,803 ಗ್ರಾಸ್ ಟನ್ನೇಜ್ ಹೊಂದಿದೆ. ಮೊರ್ಮುಗಾವೊ ಬಂದರಿನಿಂದ ಮಂಗಳೂರಿಗೆ ಆಗಮಿಸಿದ ಈ ಹಡಗಿನಲ್ಲಿ 450 ಪ್ರಯಾಣಿಕರು ಹಾಗೂ 360 ಸಿಬ್ಬಂದಿ ಸದಸ್ಯರು ಪ್ರಯಾಣಿಸುತ್ತಿದ್ದರು.ಅಂತರರಾಷ್ಟ್ರೀಯ ಕ್ರೂಸ್ ಪ್ರವಾಸಿಗರಿಗೆ ನವ ಮಂಗಳೂರು ಬಂದರು ಪ್ರಾಧಿಕಾರವು ಹಾರ್ದಿಕ, ಸಾಂಪ್ರದಾಯಿಕ ಸ್ವಾಗತ ನೀಡಿತು. ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಪ್ರವಾಸಿಗರಿಗೆ ಸುಗಮ ಹಾಗೂ ಸ್ಮರಣೀಯ ಅನುಭವ ಒದಗಿಸುವ ನಿಟ್ಟಿನಲ್ಲಿ NMPA ಹಾಗೂ ಸಂಬಂಧಿತ ಎಲ್ಲಾ ಇಲಾಖೆಗಳು ವ್ಯಾಪಕ…

Read More

ಬೆಂಗಳೂರು,ಡಿ. 23: ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ವಿಧಾನಸಭೆಯಲ್ಲಿ ಆತುರದಲ್ಲಿ ಅಂಗೀಕರಿಸಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು ಸೋಮವಾರ ವಿಧಾನಸೌಧದಲ್ಲಿ ಅಧಿವೇಶನದ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಲ್ಲಿ ಬೇರೆ ಬೇರೆ ವಿಷಯದ ಬಗ್ಗೆ ಚರ್ಚೆಗಳನ್ನು ಮಾಡಿದ್ದರಿಂದ ಗೊಂದಲ ಉಂಟಾಯಿತು ಎಂದು ಹೇಳಿದರು.ಅತ್ಯಂತ ಮಹತ್ವದ ವಿಧೇಯಕದ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆಯಲ್ಲಿ ತೊಡಗಿದರೆ ಏನು ಮಾಡುವುದು. ಇದೇ ವಿಧೇಯಕದ ಕುರಿತು ವಿಧಾನಪರಿಷತ್ತಿನಲ್ಲಿ ವಿವರವಾಗಿ ಚರ್ಚೆ ನಡೆದಿದೆ. ವಿಧಾನಸಭೆಯಲ್ಲೂ ಚರ್ಚೆಗೆ ಮುಕ್ತ ಅವಕಾಶವಿದ್ದರೂ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದರು.

Read More

ಕಾಸರಗೋಡು, ಡಿ. 23: ಬೇಕಲ ಠಾಣಾ ವ್ಯಾಪ್ತಿಯ ಪಾಲಕುನ್ನು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾದ ಬಗ್ಗೆ ಬೇಕಲ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ತನಿಖೆ ಆರಂಭಿಸಿದ್ದಾರೆ. ರಾತ್ರಿ ಎಂಟೂವರೆ ಸುಮಾರಿಗೆ ಕೋಟಿ ಕುಳಂ ರೈಲ್ವೆ ನಿಲ್ದಾಣದ ಸಮೀಪ ಹಳಿಯಲ್ಲಿ ಕಾಂಕ್ರೀಟ್ ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ. ರೈಲ್ವೆ ಯ ಅಗತ್ಯ ಕ್ಕಾಗಿ ತಂದಿರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್ ನ್ನು ಕಿಡಿಗೇಡಿಗಳು ರೈಲ್ವೆ ಹಳಿ ಮೇಲೆ ಇರಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ತಲಪಿದ ರೈಲ್ವೆ ಅಧಿಕಾರಿಗಳು ಸ್ಲ್ಯಾಬ್ ನ್ನು ತೆರವು ಗೊಳಿಸಿದರು.ರೈಲ್ವೆ ನಿಲ್ದಾಣ ಸಮೀಪದ ಕ್ವಾಟರ್ಸ್ ನಲ್ಲಿ ವಾಸವಾಗಿರುವ ಪ್ರವೀಣ್ ಹಾಗೂ ಮುಹಮ್ಮದ್ ಶಾನಿದ್ ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಲ್ಯಾಬ್ ಪತ್ತೆಯಾಗುವ ಹದಿನೈದು ನಿಮಿಷದ ಮೊದಲು ಸರಕು ರೈಲು ಇದೆ ಹಳಿಯಲ್ಲಿ ಚಲಿಸಿತ್ತು. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Read More

ಒಬ್ಬರ ಜೀವ ಉಳಿಸುವುದು, ನೊಂದವರ ಕಣ್ಣೀರು ಒರೆಸುವುದು, ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಪುಣ್ಯದಾಯಕ ಕಾರ್ಯ. ಇದನ್ನು ಎಸ್ಕೆಎಸ್ಸೆಸ್ಸೆಫ್ ವಿವಿಧ ಶಾಖೆಗಳ ಮೂಲಕ ನಿರಂತರ ಮಾಡುತ್ತಾ ಬಂದಿದೆ. ಸಮಸ್ತ ನೂರನೇ ವರ್ಷಾಚರಣೆ ಪ್ರಯುಕ್ತ ರಕ್ತದಾನ ಸಹಿತ ವಿವಿಧ ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಆನೆಕಲ್ ಮಸೀದಿಯ ಖತೀಬ್ ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಅಲ್ ಬುಖಾರಿ ಅಭಿಪ್ರಾಯಪಟ್ಟರು. ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ.ಜಿಲ್ಲಾ ಪಶ್ಚಿಮ ರಕ್ತದಾನಿ ಬಳಗ ಹಾಗೂ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಸಮಸ್ತ ನೂರನೇ ವಾರ್ಷಿಕ ಪ್ರಚಾರ ಹಾಗೂ ದಿವಂಗತ ಅಬ್ದುಲ್ ರಹಿಮಾನ್ ಕೊಳತ್ತಮಜಲು ಸ್ಮರಣಾರ್ಥ ಇನೋಳಿ ಕಂಬಳ ಪದವು ಅಂಬೇಡ್ಕರ್ ಭವನದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಯಾವುದೇ ವಸ್ತು ಹಣ ಕೊಟ್ಟರೆ ಸಿಗುತ್ತದೆ, ಆದರೆ ರಕ್ತವನ್ನು ಹಣಕೊಟ್ಟು ಪಡೆಯುವುದಾಗಲೀ, ಕೃತವಾಗಿ ಸೃಷ್ಟಿಸುವುದಾಗಲೀ…

Read More

ಉಡುಪಿ, ಡಿ.23: ಕೆಲವೊಂದನ್ನು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ನೋಡಿದ ತಕ್ಷಣ ಅದನ್ನು ನಿರ್ಧಾರಿಸುವುದಲ್ಲ. ಅದರ ಬಗ್ಗೆ ವಿಚಾರ ಮಾಡಬೇಕು. ಅದರಲ್ಲೂ ಈ ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಂಬಬಾರದು. ಕೆಲವೊಂದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಎಲ್ಲವೂ ಸತ್ಯವಾಗಿರುವುದಿಲ್ಲ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ.  ಇತ್ತೀಚಿಗೆ ಉಡುಪಿಗೆ ಸಂಬಂಧಿಸಿದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿತ್ತು. ಆದರೆ ಈ ವೈರಲ್​​ ಆಗಿರುವ ವಿಡಿಯೋದಲ್ಲಿರುವ ಸತ್ಯವೇ ಬೇರೆ. ಅಷ್ಟಕ್ಕೂ ವೈರಲ್​​​ ಆಗಿರುವ ವಿಡಿಯೋ ಯಾವುದು? ಅದರಲ್ಲಿ ಇರುವ ನಿಜವಾದ ಅಂಶವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ. ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಇತ್ತಿಚಿಗೆ ವಿಗ್ರಹವೊಂದು ತೇಲಿ ಬಂದಿತ್ತು. ಇದು ದೇವರ ಪವಾಡ ಎಂದು ಜನ ನಂಬಿದ್ದರು. ಆದರೆ ಇದರ ಹಿಂದೆ ಇರುವ ಅಸಲಿ ಸತ್ಯ ಬೇರೆಯೇ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್​​ ಆಗಿರುವ ಈ ವಿಡಿಯೋದಲ್ಲಿ ಉಡುಪಿಯ ಮಲ್ಪೆ ಬೀಚ್​​ನಲ್ಲಿ ಕೃಷ್ಣನ ವಿಗ್ರಹವೊಂದು ತೇಲಿ ಬಂದಿದೆ.…

Read More

ಬೆಂಗಳೂರು.ಡಿ. 23: ತಿನ್ನುವ ಬ್ರೆಡ್‌ಲ್ಲಿ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಕೊಕೇನ್ ಸಾಗಾಟ ಮಾಡುತ್ತಿದ್ದಳು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ.ಯಾರಿಗೂ ಅನುಮಾನ ಬಾರದಂತೆ ಬ್ರೆಡ್‌ನ ಒಳಭಾಗದ ಪೀಸ್ ಕಟ್ ಮಾಡಿ, ಅದರೊಳಗೆ ಕೊಕೇಕ್ ಇಟ್ಟು ಡ್ರಗ್ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಸದ್ಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

Read More

ತೊಕ್ಕೊಟ್ಟು; ತೊಕ್ಕೊಟ್ಟಿನ ಅಯ್ಯಪ್ಪ ವೃತಧಾರಿಗಳು ಸಾಯಿ ಪರಿವಾರ್ ಸೇವಾಲಯಕ್ಕೆ ಆಗಮಿಸಿ, ಬಾಬಾರಿಗೆ ಆರತಿ ಬೆಳಗಿ, ಫಲಹಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ 108 ದಿನಗಳ ಕಾಲ ಸಾಯಿ ಪರಿವಾರ್‌ನಲ್ಲಿ ವೃತಾಚರಣೆಗೈದು, ಕೊಲ್ಲೂರಿನಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡ ವಿಜಯ ಪಂಡಿತ್ ಹೌಸ್‌ರವರನ್ನು ಗೌರವಿಸಲಾಯಿತು. ಸಾಯಿ ಪರಿವಾರ್‌ನ ಟ್ರಸ್ಟಿ ಪುರುಷೋತ್ತಮ ಕಲ್ಲಾಪು ಸಾಯಿ ಪರಿವಾರ್ ನಿಂದ ಶಬರಿಮಲೆ ಯಾತ್ರೆ ಕೈಗೊಂಡರು. ಪುಟ್ಟಪ್ಪ ಗುರುಸ್ವಾಮಿ ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ಪ್ರವೀಣ್ ಮೆಸ್ಕಾಂ ಮತ್ತು ವೃತಧಾರಿಗಳು, ಸಾಯಿ ಪರಿವಾರ್ ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Read More

ಉಳ್ಳಾಲ: ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ. ಕಳೆದ 25 ವರ್ಷಗಳಲ್ಲಿ ಮಕ್ಕಳ ಪಂಚೇಂದ್ರಿಯಗಳನ್ನು ಹರಿತಗೊಳಿಸುವ ಕಾರ್ಯವನ್ನು ರತ್ನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದೆ. ವರ್ಷಕ್ಕೆ ಕೇವಲ ಎರಡು ಬಾರಿ ನಡೆದರೂ ಸಹ, ಇದರ ಪರಿಣಾಮ ಮಕ್ಕಳ ಮನಸ್ಸಿನ ಮೇಲೆ ಆಳವಾಗಿ ಬೀರುತ್ತದೆ ಎಂದು ಜನಪದ ವಿದ್ವಾಂಸ ಹಾಗೂ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ದೇರಳಕಟ್ಟೆ ಗ್ರೀನ್‌ ಗ್ರೌಂಡ್‌ ನ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ವೇದಿಕೆ, ಡಾ.ವಾಮನ ನಂದಾವರ ಸಭಾಂಗಣದ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ವೇದಿಕೆಯಲ್ಲಿ ಜರಗಿದ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ ೨೦೨೫ ಅನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಸಾಂಸ್ಕೃತಿಕ ನೀತಿ ಅತ್ಯಂತ ಮಹತ್ವದ್ದಾಗಿದೆ. ಯಾವ ರೀತಿಯ…

Read More

ಉಳ್ಳಾಲ ; ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ, ಕ್ರೀಡೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ (ರಿ.), ಮಾರುತಿ ಯುವಕ ಮಂಡಲ (ರಿ.) 40ನೇ ವರ್ಷಾಚರಣೆ ‘ಮಾರುತಿ ಮಾಣಿಕ್ಯ ಮಹೋತ್ಸವ -2025, ಸಮಾರೋಪ ಸಂಭ್ರಮ ಡಿ. 25ರಂದು ಸಂಜೆ 3.00 ಗಂಟೆಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 40 ನೇ ವರ್ಷಾಚರಣೆಯ ಪ್ರಯುಕ್ತ ಸುಮಾರು 40ಕ್ಕೂ ಹೆಚ್ಚು ಕಾರ್ಯಕ್ರಮಗಳು 2025 ಜನವರಿಯಿಂದ ಡಿಸೆಂಬರ್ ವರೆಗೆ ಹಮ್ಮಿಕೊಂಡಿದ್ದು, ಡಿ. 25ರಂದು ನಡೆಯುವ ಸಮಾರೋಪ ಸಂಭ್ರಮದಲ್ಲಿ ವಿಶ್ವಕಪ್ ಚಿನ್ನದ ಪದಕ ವಿಜೇತ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ ವಳಕುಂಜ, 2024 -25ನೇ ಸಾಲಿನ ಪಿಯುಸಿ ವಾಣಿಕ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತೆ ದೀಪಾಶ್ರೀ ಎಸ್., ಗೋಲ್ಡನ್ ಬುಕ್…

Read More