Author: UllalaVani

Kannada News From Coastal Karnataka

UN NETWORKS ಮಂಗಳೂರು : ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ. ನಗರದ ಕಮಿಷನರ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ರಾವ್ ಕೊಲೆ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಕೃತ್ಯ ನಡೆಸಿರುವ ಬಗ್ಗೆ ಮಾಹಿತಿಯನ್ನು ನಿಯಂತ್ರಣ ಕೊಠಡಿಯ ಮೂಲಕ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರಿಸಿರುವಂತೆಯೇ ಕಾರು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಮುಲ್ಕಿ ಠಾಣಾ ಪಿಎಸ್‌ಐ ಶೀತಲ್ ಅವರ ಎದುರಿನಿಂದ ಹಾದು ಹೋಗುತ್ತಿದ್ದಂತೆ ಶೀತಲ್ ಅವರು ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಕಾರು ನಿಲ್ಲಿಸದೆ ಶೀತಲ್ ಅವರ ಮೇಲೆ ನುಗ್ಗಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಅವರ ಬಲಗೈ ಮತ್ತು ಬೆರಳಿಗೆ ಗಾಯ ಉಂಟಾಗಿದೆ. ಬಳಿಕ ತನ್ನ ಆತ್ಮರಕ್ಷಣೆಗಾಗಿ ಕಾರಿನ ಕಡೆಗೆ ಐದು ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ್ದು, ಆರೋಪಿಗಳ ಪೈಕಿ ಕಿನ್ನಿಗೋಳಿ ಮೆನ್ನಬೆಟ್ಟುವಿನ…

Read More

UN NETWORKS ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿ, ಸವಾರ ಗಂಭೀರ ಗಾಯಗೊಂಡಿರುವ ಘಟನೆ ದೇರಳಕಟ್ಟೆಯ ಹೆಚ್.ಎನ್ ವಿದ್ಯಾರ್ಥಿನಿ ನಿಲಯ ಎದುರುಗಡೆ ಗುರುವಾರ ನಸುಕಿನ ಜಾವ ಸಂಭವಿಸಿದೆ. ತಮಿಳುನಾಡು ರದ್ದುನಗರ ತಾನ್ ಸೆಲ್ವಂ ಎಂಬವರ ಪುತ್ರ ಷಣ್ಮುಗನಾಥನ್(24) ಮೃತರು. ಸವಾರ ಮಿಲಿಂದ್ (22) ಗಂಭೀರ ಗಾಯಗೊಂಡವರಾಗಿದ್ದಾರೆ. ಮಿಲಿಂದ್ ಬಾಡಿಗೆ ಮನೆ ಪಂಪ್ ವೆಲ್ ನಲ್ಲಿದ್ದು, ಗೆಳೆಯ ಷಣ್ಮುಗನಾಥನ್ ಅವರನ್ನು ಮುಡಿಪುವಿಗೆ ಬಿಡಲು ಬೆಳಿಗ್ಗೆ ನಸುಕಿನ ಜಾವ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅತಿವೇಗದ ಚಾಲನೆಯಿಂದಾಗಿ ರಸ್ತೆಯಿಂದ ಬಲಭಾಗದಲ್ಲಿರುವ ಹಾಸ್ಟೆಲ್ ಕೆಳಕ್ಕೆ ಹಾರಿದ ಬೈಕ್, ಹಾಸ್ಟೆಲ್ ಕಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಿಂದ ಗೋಡೆಗೆ ಎಸೆಯಲ್ಪಟ್ಟ ಷಣ್ಮುಗನಾಥನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುವನ್ನು ವಿದ್ಯಾರ್ಥಿನಿ ನಿಲಯದ ಪ್ರಬಂಧಕರು ಸಮೀಪದ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸದ ಕೊನೆಯ ದಿನವಾಗಿತ್ತು : ಐದು ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಷನ್ಮುಗನಾಥನ್ ಇವರಿಗೆ ಚೆನ್ನೈ ಇನ್ಫೋಸಿಸ್ ಗೆ…

Read More

UN NETWORKS ಬಂಟ್ವಾಳ : ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಳೆಯ ಟೋಲ್ ಗೇಟ್ ಬಳಿ ನೆಹರೂನಗರ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರನ್ನು ಸಜೀಪನಡು ಗ್ರಾಮದ ಬಸ್ತಿಗುಡ್ಡೆ ನಿವಾಸಿ ಮುಹಮ್ಮದ್ ಅಝೀಝ್ ಎಂಬವರ ಪುತ್ರ ಅಝಾಝ್ ಯಾನೆ ಅದ್ದ (20) ಹಾಗೂ ಸಜೀಪನಡು ಗ್ರಾಮದ ಮುಹಿಯುದ್ದೀನ್ ನಗರದ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ಮುಹಮ್ಮದ್ ಹರ್ಷಿದ್ (18) ಎಂದು ಗುರುತಿಸಲಾಗಿದೆ. ಸಜೀಪ ನಡು ಜಂಕ್ಷನ್ ನಿಂದ ಕೆಲಸದ ನಿಮಿತ್ತ ಬಿ.ಸಿ.ರೋಡಿಗೆ ಮ್ಯಾಸ್ಟ್ರೋದಲ್ಲಿ ಬಂದಿದ್ದ ಇಬ್ಬರು ಬಳಿಕ ಪಾಣೆಮಂಗಳೂರು, ಅಕ್ಕರಂಗಡಿ ಹಳೆಯ ಹೆದ್ದಾರಿಯಲ್ಲಿ ವಾಪಾಸಾಗಿದ್ದರು. ಮೆಲ್ಕಾರ್ ಕಡೆಗೆ ಚಲಿಸುವ ವೇಳೆ ಮ್ಯಾಸ್ಟ್ರೋಗೆ ಕೆ.ಎಸ್.ಆರ್.ಟಿ.ಸಿ. ಬಸ್ ಢಿಕ್ಕಿಯಾಗಿದ್ದು, ಅಪಘಾತ ಸಂಭವಿಸಿದೆ ಎಂದು ಬಂಟ್ವಾಳ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೊಳಗಾದ ಮ್ಯಾಸ್ಟ್ರೋ ಭಾಗಶಃ ನುಜ್ಜು-ಗುಜ್ಜಾಗಿದ್ದು, ಇಬ್ಬರು ಕೂಡ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ವರೂಪದಲ್ಲಿ ಗಾಯಗೊಂಡರು. ಘಟನಾ ಸ್ಥಳಕ್ಕೆ ಧಾವಿಸಿದ…

Read More

UN NETWORKS ದೇರಳಕಟ್ಟೆ: ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ಸೆಕ್ಟರ್ ಮಟ್ಟದ ಪ್ರತಿಭೋತ್ಸವವು ಇತ್ತೀಚೆಗೆ ಅಲ್ ಜಮಾಲಿಯ್ಯ ಮದ್ರಸ ಹಿದಾಯತ್ ನಗರ  ಅಸೈಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಹಸನ್ ಸಅದಿ ವಹಿಸಿದರು. ಉದ್ಘಾಟನೆಯನ್ನು ಮಸ್ಜಿದ್ ಸ್ವಹಾಬ ಇದರ ಖತೀಬರಾದ ಝಕರಿಯ್ಯ ಲತ್ವೀಫಿ ನಿರ್ವಹಿಸಿದರು. ಸೆಕ್ಟರ್ ಪ್ರ.ಕಾರ್ಯದರ್ಶಿ ಶಫೀರ್ ರೆಂಜಾಡಿ ಸ್ವಾಗತಿಸಿದರು. ಸುನ್ನೀ ನಾಯಕರು ಗುರುವರ್ಯರೂ ಆದ ಇಸ್ಹಾಖ್ ಝುಹ್ರಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್, ಸೆಕ್ಟರ್ ಉಸ್ತುವಾರಿ ಸಿದ್ದೀಖ್ ಕೋಮರಂಗಳರವರು ಶುಭಹಾರೈಸಿದರು. ಸೆಕ್ಟರ್ ವ್ಯಾಪ್ತಿಯ 13 ಶಾಖೆಗಳ ನಡುವೆ 5 ವಿಭಾಗಳ ಮೂಲಕ 96 ವಿಷಯಗಳಲ್ಲಿ ನಡೆದ ಈ ಸ್ಪರ್ದೆಯು ಸುಮಾರು 300ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದರು. ಅಮೋಘ ರೀತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ನಾಟೆಕಲ್ ಶಾಖೆಯು ಚಾಂಪಿಯನ್ ಆಗಿ ಮೂಡಿಬಂತು. ದ್ವಿತೀಯ ಮತ್ತು ತೃತೀಯ ಸ್ಥಾನವು ಕ್ರಮವಾಗಿ ಕಲ್ಪಾದೆ ಮತ್ತು ರೆಂಜಾಡಿ ಶಾಖೆಗಳ ಪಾಲಾಯಿತು. ಕಾರ್ಯಕ್ರಮವು ಯಶಸ್ವಿಗೊಳಿಸಲು ಸೆಕ್ಟರ್‍ನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಸಂಜೆ…

Read More

UN NETWORKS ಉಳ್ಳಾಲ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಸೈ ಇದರ ದಶಮಾನೋತ್ಸವ ಸಂಭ್ರಮ ಇತ್ತೀಚೆಗೆ ಶಾಲಾ ವಠಾರದಲ್ಲಿ‌ ನಡೆಯಿತು. ಜಿ.ಪಂ ಸದಸ್ಯೆ ರಶೀದಾ ಬಾನು ಹರೇಕಳ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಅಸೈ ಅಕ್ಕರೆ ವಳಚ್ಚಿಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲೆಯಿಂದ ವರ್ಗಾವಣೆ ಗೊಂಡ ಶಿಕ್ಷಕರಿಗೆ ಮತ್ತು ಪ್ರಸ್ತುತ ಕಾರ್ಯನಿರ್ವಾಹಿಸುತ್ತಿರುವ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಮುನ್ನೂರು ಸಮೂಹ ಸಂಪನ್ಮೂಲ ವ್ಯಕ್ತಿ ವತ್ಸಲ ಜೋಗಿ, ಮಂಜನಾಡಿ ಗ್ರಾ.ಪಂ ಸದಸ್ಯರಾದ ಅಬ್ಬಾಸ್ ಮದ್ಪಾಡಿ, ಕೌಸರ್ ಬಾನು, ಸೀತಾ ವಿ.ನಾಯ್ಕ, ಮಂಜನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜಪ್ಪ ಎಚ್.ಎಚ್, ಉಳ್ಳಾಲ ಮದನಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಆನಂದ್, ಬೆಳ್ಮ ಗ್ರಾ.ಪಂ ಸದಸ್ಯ ಮುಹಮ್ಮದ್ ಕಬೀರ್, ನಮ್ಮ ನಾಡು ನಮ್ಮದು ವಾಟ್ಸ್ಆ್ಯಫ್ ಗುಂಪಿನ ಕಾರ್ಯನಿರ್ವಾಹಕ ಬಶೀರ್, ನಿವೃತ್ತ ಮುಖ್ಯೋಪಾಧ್ಯಾಯ ರಾಜೀವ, ಪಾಣೆಲಬರಿಕೆ ಮುಖ್ಯೋಪಾಧ್ಯಾಯಿನಿ ಯೋಗಿನಿ, ಹಿರಿಯ ನಾಗರಿಕರಾದ ಎ.ಐ ಹಮೀದ್, ಮುಹಮ್ಮದ್‌ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.…

Read More

UN NETWORKS ತೊಕ್ಕೊಟ್ಟು: ಕಾಂಗ್ರೆಸ್ ಸರಕಾರದ ಕಾನೂನಿಂದ ಜಿಲ್ಲೆಯಾದ್ಯಂತ ಅಮಾಯಕ ಜೀವಗಳ ಬಲಿಯಾಗುತ್ತಿದ್ದು, ಈ ಕೂಡಲೇ ಜಿಲ್ಲಾ ಉಸ್ತುವಾರಿ, ಆಹಾರ ಸಚಿವರು ಸೇರಿದಂತೆ ಸುರತ್ಕಲ್, ಮೂಡಬಿದ್ರೆ ಶಾಸಕರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ. ಸುರತ್ಕಲ್ ನಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ಗುರುವಾರ ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ಅರ್ಧ ತಾಸುಗಳವರೆಗೆ ತಡೆ ನಡೆಸಿ ಮಾತನಾಡಿದರು. ಸುರತ್ಕಲ್ ನ ಅಮಾಯಕ ಯುವಕನನ್ನು ಅಮಾನುಷವಾಗಿ ಹತ್ಯೆ ನಡೆಸಲಾಗಿದೆ. ಕಾಂಗ್ರೆಸ್ ಸರಕಾರಕ್ಕೆ ಸ್ವಲ್ಪವಾದರೂ ಕನಿಕರ ಇರುತ್ತಿದ್ದಲ್ಲಿ ಇಂತಹ ಹತ್ಯೆಗಳು ನಡೆಯುತ್ತಿರಲಿಲ್ಲ. ಕಾಂಗ್ರೆಸ್ ಸರಕಾರದ ಕಾನೂನಿಂದಾಗಿ ರಾಜ್ಯಾದ್ಯಂತ ಅಮಾಯಕರ ಹತ್ಯೆಯಾಗುತ್ತಿದೆ. ಯುವಕರ ಜತೆಗೆ ನಿಷ್ಠಾವಂತ ಪೊಲೀಸರ ಮೇಲೆಯೂ ಹತ್ಯೆಗೆ ಯತ್ನಿಸುವಂತಹ ದುಷ್ಕರ್ಮಿಗಳಿಗೆ ಸರಕಾರ ಪ್ರೋತ್ಸಾಹಿಸುತ್ತಿರುವುದು ದುರಾದೃಷ್ಟ ಎಂದ ಅವರು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಾಗದ ಇಬ್ಬರು ಶಾಸಕರು , ಉಸ್ತುವಾರಿ ಮತ್ತು ಆಹಾರ ಸಚಿವರು ಈ…

Read More

UN NETWORKS ಉಳ್ಳಾಲ: ಟಯರ್ ಅಂಗಡಿ ಬೆಂಕಿಗೆ ಸಂಪೂರ್ಣ ಆಹುತಿಯಾಗಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ತೊಕ್ಕೊಟ್ಟು ನಿವಾಸಿ ಶರೀಫ್ ಎಂಬವರಿಗೆ ಸೇರಿದ ಟಯರ್ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಿಂದ ರೂ. 6 ಲಕ್ಷ ನಷ್ಟ ಅಂದಾಜಿಸಲಾಗಿದೆ. ಮಧ್ಯರಾತ್ರಿ 2.20ರ ಸುಮಾರಿಗೆ ಅಂಗಡಿ ಬೆಂಕಿಗೆ ಆಹುತಿಯಾಗುವುದನ್ನು ಗಮನಿಸಿದ ವಾಹನ ಸವಾರರೊಬ್ಬರು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನಿಂದ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ತಪ್ಪಿದ ಭಾರೀ ಅವಘಢ: ಬೆಂಕಿ ಬಿದ್ದ ಟಯರ್ ಅಂಗಡಿ ಸಮೀಪವೇ ಹೊಟೇಲ್ ಕಾರ್ಯಾಚರಿಸುತಿತ್ತು. ಹೊಟೇಲಿನ ಅಡುಗೆ ಕೋಣೆಯಲ್ಲಿ ಆರು ಅನಿಲ ಸಿಲಿಂಡರ್ ಗಳಿದ್ದು, ಇದನ್ನು ಗಮನಿಸಿದ ಅಗ್ನಿ ಶಾಮಕ ಸಿಬ್ಬಂದಿ ಪ್ರಥಮವಾಗಿ ಆರು ಸಿಲಿಂಡರ್ ಗಳನ್ನು ಹೊರಹಾಕಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ. ಸ್ಥಳದಲ್ಲಿ ಅನೇಕ ಮನೆಗಳಿದ್ದು, ಅನಿಲ ಸಿಲಿಂಡರ್ ಗಳಿಗೆ…

Read More

UN NETWORKS ಮಂಗಳೂರು: ನಿನ್ನೆ ಕಾಟಿಪಳ್ಳದಲ್ಲಿ ನಡೆದ ಯುವಕ ದೀಪಕ್ ರಾವ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಬಂದ್ ವಾತಾವರಣ ನೆಲೆಸಿದೆ. ಸಂಘ ಪರಿವಾರವು ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ವಾಹನ ಸಂಚಾರ ಸಾಕಷ್ಟು ವಿರಳವಾಗಿದೆ.ಈ ನಡುವೆ ದೀಪಕ್ ಮೃತದೇಹವನ್ನು ಪೊಲೀಸರು ಕಾಟಿಪಳ್ಳದ ಅವರ ಮನೆಗೆ ಸಾಗಿಸಿದ್ದಾರೆ. ಆದರೆ ಮೃತದೇಹವನ್ನು ಆ್ಯಂಬುಲೆನ್ಸ್‌ನಿಂದ ಇಳಿಸಲು ದೀಪಕ್ ಮನೆಯೆದುರು ಜಮಾಯಿಸಿರುವ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಪೋಷಕರು ಅವಕಾಶ ನೀಡುತ್ತಿಲ್ಲ. ಘಟನಾ ಸ್ಥಳಕ್ಕೆ ರಾಜ್ಯ ಗೃಹ ಸಚಿವರು ಭೇಟಿ ನೀಡುವಂತೆ ಸ್ಥಳದಲ್ಲಿ ಜಮಾಯಿಸಿರುವ ಜನರು ಒತ್ತಾಯಿಸುತ್ತಿದ್ದಾರೆ. ಇದರಿಂದ ಸದ್ಯ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ. ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುರತ್ಕಲ್, ಕಾಟಿಪಳ್ಳದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

Read More

UN NETWORKS ಸುರತ್ಕಲ್: ನಿನ್ನೆ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮೃತ  ದೇಹವನ್ನು ಇಂದು ಬೆಳಿಗ್ಗೆ ಪೊಲೀಸರು ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ. ಇದೀಗ ದೀಪಕ್ ಅವರ ಮನೆ ಎದುರು ಮೃತ ದೇಹ ಹೊತ್ತ ಅಂಬ್ಯುಲೆನ್ಸ್ ತಲುಪಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಮೃತನ ಸಂಬಂಧಿಕರು ಮೃತ ದೇಹವನ್ನು ಅಂಬ್ಯುಲೆನ್ಸ್ ನಿಂದ ಕೆಳಗಿಳಿಸಲು ನಿರಾಕರಿಸಿದ್ದಾರೆ.ಈ ನಡುವೆ ನಿನ್ನೆ ರಾತ್ರಿ ನಗರದ ಕೆಲವು ಕಡೆ ಅಹಿತಕರ ಘಟನೆಗಳು ನಡೆದ ಹಿನ್ನಲೆಯಲ್ಲಿ ಪೊಲೀಸರು ಕರ್ನಾಟಕ ಪೊಲೀಸ್ ಆಕ್ಟ್ ಕಲಂ 35 ರ ಅನ್ವಯ ನಿರ್ಬಂಧಕಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯೇ ಪೊಲೀಸರು ಮೃತ ದೇಹವನ್ನು ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ.

Read More

UN NETWORKS ಮಂಗಳೂರು : ಸಮುದ್ರದ ಆಳಕ್ಕಿಳಿದು ಅಲ್ಲಿಯ ಪ್ರಾಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಕನಸು ಹೊತ್ತ ಸಾಹಸಿ ಗಳಿಗೆ ಒಂದು ಸಂತಸದ ಸುದ್ದಿ.ಸ್ಕೂಬಾ ಡೈವಿಂಗ್ ನ ರೋಮಾಂಚಕ ಅನುಭವ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ನೆತ್ರಾಣಿ ಅಥವಾ ಉಡುಪಿಯ ಕಾಪು ಗೆ ಹೋಗಬೇಕಾಗಿಲ್ಲ. ಸ್ಕೂಬಾ ಡೈವಿಂಗ್ ನ ಸಾಹಸಿ ಅನುಭವ ಮಂಗಳೂರಿನಲ್ಲಿ ದೊರೆಯಲಿದೆ. ಸ್ಕೂಬಾ ಡೈವಿಂಗ್ ಸಾಹಸ ಜಲ ಕ್ರೀಡೆ ಮಂಗಳೂರಿನ ಉಳ್ಳಾಲ ಸಮುದ್ರ ತೀರದಲ್ಲಿ ಆರಂಭಗೊಳ್ಳಲಿದೆ. ಈ ಮೂಲಕ ಇನ್ನು ಮುಂದೆ ಸಾಹಸಿಗರು ಉಳ್ಳಾಲದ ಅರಬ್ಬಿ ಸಮುದ್ರದಾಳದ ಬೆರಗುಗಳಿಗೆ ಸಾಕ್ಷಿಯಾಗಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪಣತೊಟ್ಟಿರುವ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಆರಂಭಿಸಲು ಯೋಜನೆ ರೂಪಿಸಿದೆ. ಕಳೆದ ಆನೇಕ ತಿಂಗಳುಗಳಿಂದ ಮಂಗಳೂರಿನಲ್ಲಿ ಈ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗಕ್ಕಾಗಿ ಹುಡುಕಾಡ ನಡೆಯುತ್ತಿತ್ತು.ಅಂತಿಮವಾಗಿ ಉಳ್ಳಾಲದ ಸ್ಥಳ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಗೆ ಆಯ್ಕೆಯಾಗಿದೆ. ಸ್ಕೂಬಾ ಡೈವಿಂಗ್ ನಡೆಯುವ ಉಳ್ಳಾಲ ಪ್ರದೇಶದಲ್ಲಿ ಹವಳದ…

Read More