ಮಂಗಳೂರು;ಉಳ್ಳಾಲ ಮೊಗವೀರಪಟ್ಣ ಮಾರುತಿ ಜನಸೇವಾ ಸಂಘ ಹಾಗೂ ಮಾರುತಿ ಯುವಕ ಮಂಡಲದ 40ನೇ ವರ್ಷದ ಆಚರಣೆಯ ಒಂದು ವರ್ಷದ ಸಮಾಜಮುಖಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಂಗಳೂರಿನ ಪುರಭವನದಲ್ಲಿ ಮಾರುತಿ ಮಾಣಿಕ್ಯ ಮಹೋತ್ಸವ ಸಮಾರೋಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಮಾತನಾಡಿ, ಮೊಗವೀರರು ಸಮುದ್ರವನ್ನು ನಂಬಿಕೊAಡ ಸಾಹಸಿಗರು. ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸೌಹಾರ್ದಮಯ ವಾತಾವರಣ ನಿರ್ಮಿಸುವ ನೆಲೆಯಲ್ಲಿ ಮೊಗವೀರರ ಪಾತ್ರ ಅಪಾರವಾಗಿದೆ. ಅದರಲ್ಲೂ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದ್ರು. ಇದೇ ವೇಳೆ ಶಾಸಕರಾದ ಯಶ್ಪಾಲ್ ಸುವರ್ಣ ಮಾತನಾಡಿದ್ದಾರೆ. ಬಳಿಕ ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದ್ರು.ಮುಖ್ಯ ಅತಿಥಿಗಳಾಗಿ ರಾಜ್ಯ ಅಲೈಡ್ ಹೆಲ್ತ್ ಕೌನ್ಸಿಲ್ ಚೇರ್ ಮ್ಯಾನ್ ಡಾ.ಯು.ಟಿ.ಇಫ್ತಿಕಾರ್, ಮೆಟಲ್ ಗ್ರೂಫ್ ಆಫ್ ಕಂಪೆನೀಸ್ ಬಹರೈನ್ ಚೇರ್‌ಮ್ಯಾನ್ ಅಬ್ದುಲ್ ರಝಾಕ್, ಮೊಗವೀರ ಬಹರೈನ್ ಅಧ್ಯಕ್ಷರಾದ ಶಿಲ್ಪಾ ಶಮಿತ್ ಕುಂದರ್, ದ.ಕ.ಮೊಗವೀರ ಮಹಾಜನ…
Author: UllalaVani
ಬಂಟ್ವಾಳ :ಮೂಡುಬಿದಿರೆಯ ಸೈಂಟ್ ಥಾಮಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆ ಯಲ್ಲಿ ಅನನ್ಯ ತಲೆಂಗಳ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ಕೊಣಾಜೆ ವಿಶ್ವಮಂಗಳ ಹೈಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿನಿ, ಪತ್ರಕರ್ತ ಕೃಷ್ಣಮೋಹನ ತಲೆಂಗಳ ಮತ್ತು ಶಿಕ್ಷಕಿ ವತ್ಸಲ ಅವರ ಪುತ್ರಿ.
ಬಾರೆಬೈಲ್; ಕಾಂತಾರ ಚಿತ್ರ ನಟ ರಿಷಬ್ ಶೆಟ್ಟಿ ಹರಕೆಯ ನೇಮದ ವಿಚಾರವಾಗಿ ತುಳುನಾಡು ದೈವ ವಿಮರ್ಶಕ ತಮ್ಮಣ್ಣ ಶೆಟ್ಟಿ ಹಾಗೂ ಯೆಯ್ಯಾಡಿ ಬಾರೆಬೈಲ್ ವಾರಾಹಿ ಪಂಜುರ್ಲಿ ಕ್ಷೇತ್ರದ ಗೌರವಾಧ್ಯಕ್ಷ ರವಿಪ್ರಸನ್ನ ತಂತ್ರಿ ನಡುವಿನ ವಿವಾದ ಕೊಂಡಾಣ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕುವ ಮೂಲಕ ಅಂತ್ಯಗೊಮಡಿತ್ತು. ರವಿ ಪ್ರಸನ್ನ ಅವರು ಕೊಂಡಾಣ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿದ್ದು, ಇದರ ಬೆನ್ನಲ್ಲೇ ತಮ್ಮಣ್ಣ ಶೆಟ್ಟಿ ಕೂಡಾ ಬಾರೆಬೈಲ್ ಕ್ಷೇತ್ರಕ್ಕೆ ಆಗಮಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ತಾನು ದೈವದ ಮುಂದೆ ಪ್ರಾರ್ಥಿಸಿದ ವಿಡಿಯೋವನ್ನು ಸೋಷಿಯಾಲ್ ಮೀಡಿಯಾಗಳಲ್ಲಿ ಹಂಚಿ, ವಿಕೃತ ರೀತಿಯಲ್ಲಿ ಕಾಮೆಂಟ್ ಹಾಕುತ್ತಿರುವವರ ಬಗ್ಗೆ ತಮ್ಮಣ್ಣ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಕೊಂಡಾಣ ಕ್ಷೇತ್ರದಲ್ಲಿ ವಿವಾದ ತಾರ್ಕಿಕ ಅಂತ್ಯಗೊ0ಡಿದ್ದರೂ ಕೆಲವರು ಇದನ್ನು ಇನ್ನೂ ಜೀವಂತವಾಗಿ ಉಳಿಸಲು ಪ್ರಯತ್ನಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಅಷ್ಟು ಮಂದಿ ಕೊಂಡಾಣ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕುವಾಗ ಬಾರೆಬೈಲ್ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಕ್ಷೇತ್ರಕ್ಕೆ ಹೋಗಿ, ದೈವಗಳಿಗೆ…
ಬಂಟ್ವಾಳ : ಮೂಡುಬಿದಿರೆಯ ಸೈಂಟ್ ಥಾಮಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆ ಯಲ್ಲಿ ಅನನ್ಯ ತಲೆಂಗಳ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ಕೊಣಾಜೆ ವಿಶ್ವಮಂಗಳ ಹೈಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿನಿ, ಪತ್ರಕರ್ತ ಕೃಷ್ಣಮೋಹನ ತಲೆಂಗಳ ಮತ್ತು ಶಿಕ್ಷಕಿ ವತ್ಸಲ ಅವರ ಪುತ್ರಿ.
ಉಳ್ಳಾಲ : ಕುಂಪಲದ ಶ್ರೀ ಬಾಲಕೃಷ್ಣ ಮಂದಿರದ ಅಂಗ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ಇದೇ ಡಿ.28 ರಂದು ಕುಂಪಲ ಬಾಲಕೃಷ್ಣ ಮಂದಿರದ ಕೃಷ್ಣಾಂಗಣದಲ್ಲಿ “ರಜತ ರುಕ್ಮಿಣಿ” ಸಮಾರಂಭ ನಡೆಯಲಿದೆಯೆಂದು ಕುಂಪಲ ಬಾಲಕೃಷ್ಣ ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ ಹೇಳಿದರು.ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.ಡಿ.28ರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡು ಬಳಿಕ ದಕ್ಷಿಣ ಕನ್ನಡ-ಕಾಸರಗೋಡು ಉಭಯ ಜಿಲ್ಲಾ ಮಟ್ಟದ “ಮಾತೃವಾಣಿ” ಮಹಿಳಾ ಭಜನಾ ಸ್ಫರ್ಧೆ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಮತಾನಂದಮಯೀ ಆಶೀರ್ವಚನ ನೀಡಲಿದ್ದು, ಅನ್ವಿತ್ ಇಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಇದರ ನಿರ್ದೇಶಕಿ ಮೋಹನ ಕುಮಾರಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ದ. ಕ ಬಿ ಜೆಪಿ ಮಹಿಳಾ ಮೋರ್ಚಾ ದ ಅಧ್ಯಕ್ಷರಾದ ಡಾ. ಮಂಜುಳಾ ಎ. ರಾವ್ ವಹಿಸಲಿದ್ದಾರೆ.ಪ್ರಗತಿಪರ…
ಉಳ್ಳಾಲ: ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28 ನೇ ಸಾಲಿನ ಅಧ್ಯಕ್ಷರಾಗಿ ಅಬ್ಬಕ್ಕ ಟಿ.ವಿಯ ಶಶಿಧರ್ ಪೊಯ್ಯತ್ತಬೈಲ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಹೊಸದಿಗಂತ ಪತ್ರಿಕೆಯ ದಿನೇಶ್ ನಾಯಕ್ ತೊಕ್ಕೊಟ್ಟು, ಉಪಾಧ್ಯಕ್ಷರುಗಳಾಗಿ ವಿಜಯಕರ್ನಾಟಕ ಪತ್ರಿಕೆ ಸತೀಶ್ ಕುಮಾರ್ ಪುಂಡಿಕಾಯಿ ಮತ್ತು ಪೊಸಕುರಲ್ ಚಾನೆಲ್ ಆಸೀಫ್ ಬಬ್ಬುಕಟ್ಟೆ ಪೊಸಕುರಲ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನಾಯಕ್, ಕಾರ್ಯದರ್ಶಿಗಳಾಗಿ ಹೊಸದಿಗಂತ ಪತ್ರಿಕೆಯ ಸತೀಶ್ ಕೊಣಾಜೆ ಹಾಗೂ ವಾರ್ತಾಭಾರತಿ ಪತ್ರಿಕೆಯ ಬಶೀರ್ ಕಲ್ಕಟ್ಟ, ಕೋಶಾಧಿಕಾರಿಯಾಗಿ ಕನ್ನಡಪ್ರಭ ಪತ್ರಿಕೆಯ ವಜ್ರ ಗುಜರನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉದಯವಾಣಿಯ ವಸಂತ್ ಎನ್ ಕೊಣಾಜೆ, ಪ್ರಜಾವಾಣಿಯ ಮೋಹನ್ ಕುತ್ತಾರ್, ಅಬ್ಬಕ್ಕ ಟಿ.ವಿಯ ಶಿವಶಂಕರ್ ಎಂ., ನಮ್ಮೂರ ವಾರ್ತೆಯ ಗಣೇಶ್ ತಲಪಾಡಿ, ಅಬ್ಬಕ್ಕ ಟಿ.ವಿಯ ರಜನಿಕಾಂತ್ ಸಿ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಉದಯವಾಣಿಯ ಸತೀಶ್ ಇರಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅಶೋಕ್ ಶೆಟ್ಟಿ ಬ್ರಹ್ಮರಕೂಟ್ಲು ಉಪಸ್ಥಿತರಿದ್ದರು. ಚುನಾವಣಾ ಸಂದರ್ಭ ಪೊಸಕುರಲ್…
ಮಂಗಳೂರು, ಡಿ. 24 :ಪಾರ್ಕ್ ಮಾಡಿದ್ದ ಕಾರೊಂದು ಚಾಲಕನಿಲ್ಲದೇ ಸ್ವಯಂಚಾಲಿತವಾಗಿ ಚಲಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರು ಜೈಲ್ ರೋಡ್ ನಲ್ಲಿ ನಡೆದಿದೆ. ಮುಂದೆಯೇ ಇಳಿಜಾರು ರಸ್ತೆ ಇದ್ದು, ಸದ್ಯ ಸಂಭಾವ್ಯ ಅಪಾಯ ತಪ್ಪಿದೆ. ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟ ಹೆಚ್ಚಿರುವುದರಿಂದ, ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಘಟನೆ ಸಂದರ್ಭ ಕಾರಿನಲ್ಲೂ ಯಾರೂ ಇಲ್ಲದಿರುವುದರಿಂದ ಅಪಾಯ ತಪ್ಪಿದಂತಾಗಿದೆ.
ಮಂಗಳೂರು/ಉಡುಪಿ, ಡಿ. 24; ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ನೀಡುವ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಇಬ್ಬರು ಸಾಧಕಿಯರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊರಗರ ಡೋಲು ವಾದಕಿ ಸುಮತಿ ಕೊರಗ ಮತ್ತು ಉಡುಪಿ ಜಿಲ್ಲೆಯ ನಾಟಿ ವೈದ್ಯೆ ಗುಲಾಬಿ ಗೌಡ್ತಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಹೆಬ್ರಿಯ ನಾಟಿ ವೈದ್ಯೆ ಗುಲಾಬಿ ಗೌಡ್ತಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಮಲೆಕುಡಿಯ ಸಮುದಾಯದ 89 ವರ್ಷದ ಗುಲಾಬಿ ಗೌಡ್ತಿ ಅವರು ಬಾಲ್ಯದಿಂದಲೇ ನಾಟಿ ವೈದ್ಯ ಪದ್ಧತಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಅಂದಿನ ಕಾಲದಲ್ಲಿ ಶಿಕ್ಷಣದ ಅರಿವಿನ ಕೊರತೆ ಮತ್ತು ಬಡತನದ ಕಾರಣದಿಂದ ಅವರು ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಗಲಿಲ್ಲ. ಆದರೆ, ಕಳೆದ 50 ವರ್ಷಗಳಿಂದ ಅವರು ಕಾಡಿನ ಗಿಡಮೂಲಿಕೆಗಳು, ಬೇರು, ತೊಗಟೆ ಮತ್ತು ಬಳ್ಳಿಗಳನ್ನು ಸಂಗ್ರಹಿಸಿ ಸಾಂಪ್ರದಾಯಿಕ ಔಷಧಗಳನ್ನು ತಯಾರಿಸುವ ಮೂಲಕ ಜನಸೇವೆಯಲ್ಲಿ ತೊಡಗಿದ್ದಾರೆ.ಜೊತೆಗೆ ಗುಲಾಬಿ ಗೌಡ್ತಿ ಅವರು ಹೆರಿಗೆ ಮಾಡಿಸುವಲ್ಲಿ…
ನವದೆಹಲಿ, ಡಿ. 24 : ಅಮೆರಿಕಾದ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ ಅನ್ನು ಇಸ್ರೋದ ಅತ್ಯಂತ ಭಾರವಾದ ಎಲ್‌ವಿಎಂ3-ಎಂ ರಾಕೆಟ್ ನಭಕ್ಕೆ ಯಶಸ್ವಿಯಾಗಿ ಸೇರಿಸಿದೆ. ಇದರ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಬ್ಲೂಬರ್ಡ್ -2 ಯಶಸ್ವಿ ಉಡಾವಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿರುವ ಪ್ರಧಾನಿ ಮೋದಿ, “ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಒಂದು ಪ್ರಮುಖ ಸಾಧನೆಯಾಗಿದೆ. ಇದರೊಂದಿಗೆ ದೇಶದ ಅತಿ ಭಾರದ ಉಡ್ಡಯನ ಸಾಮರ್ಥ್ಯವನ್ನು ಮತ್ತಷ್ಟು ಬಲಗೊಳಿಸಿದೆ. ಜಾಗತಿಕ ವಾಣಿಜ್ಯ ಉಡ್ಡಯನ ಮಾರುಕಟ್ಟೆಯಲ್ಲಿ ನಮ್ಮ ಪ್ರಗತಿಯನ್ನು ಬಲಿಷ್ಠಗೊಳಿಸುತ್ತಿದೆ” ಎಂದು ತಿಳಿಸಿದ್ದಾರೆ. “ಆತ್ಮನಿರ್ಭರ ಭಾರತ ಉಪಕ್ರಮದತ್ತ ನಮ್ಮ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಇದರ ಹಿಂದೆ ಶ್ರಮ ವಹಿಸಿರುವ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳಿಗೆ ಅಭಿನಂದನೆಗಳು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇದೆ” ಎಂದು ಹೇಳಿದ್ದಾರೆ.”ಯುವಜನರ ಪ್ರಯತ್ನದಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಹೆಚ್ಚು ಪರಿಣಾಮಕಾರಿಯೆನಿಸಿದೆ. ಅತಿ…
ಮಂಗಳೂರು, ಡಿ. 24: ನಮೋ ಖೇಲ್ ಸರಣಿ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಡಿ. 25ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹ ಹಾಗೂ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಜಿಲ್ಲೆಯಲ್ಲಿ ನ. 23 ರಿಂದ ಈ ಸಂಸದ್ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾ ಮಹೋತ್ಸವದಲ್ಲಿ ಚೆಸ್, ಕಬ್ಬಡ್ಡಿ, ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮುಂತಾದ ಸ್ಪರ್ಧೆಗಳು ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಮಕ್ಕಳು, ಮಹಿಳೆಯರು ಯುವಕರು ಸೇರಿ ಸಾವಿರಾರು ಕ್ರೀಡಾಸಕ್ತರು ಆಸಕ್ತರು ಈ ಮಹೋತ್ಸವದಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.ಇದೀಗ ಈ ಕ್ರೀಡೋತ್ಸವದ ಸಮಾರೋಪವು ಭಾರತದ ಹೆಮ್ಮೆಯ ಪುತ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದೇ…

