Author: UllalaVani

Kannada News From Coastal Karnataka

UN NETWORKS ಮಂಜನಾಡಿ: ಮಂಜನಾಡಿ ಗ್ರಾಮದ ಗೋಪಾಲ‌ ಎಂಡೇಲ್ ಕಲ್ಕಟ್ಟ ( 58)ಯವರು ನಿಧನರಾದ್ದಾರೆ. ಅವರು ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರಾಗಿ ದುಡಿಯುತ್ತಿದು. ಅರ್ ಎಸ್ಎಸ್ ಲ್ಲಿ ತನ್ನನು ತೊಡಗಿಸಿಕೊಂಡಿದರು. ಬಿಜೆಪಿ ಪಕ್ಷದಲ್ಲಿ‌ ಸಕ್ರಿಯವಾಗಿದರು. ಇವರು ಎರಡು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

Read More

UN NETWORKS ಕೊಣಾಜೆ: : ರಾಜ್ಯದಲ್ಲೇ ಸ್ಕೌಟಿಂಗ್ ಗೈಡಿಂಗ್ ಚಟುವಟಿಕೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯು ಸತತವಾಗಿ ಉತ್ತಮ ಜಿಲ್ಲೆಗೆ ಕೊಡಮಾಡುವ ಅಬ್ದುಲ್ ಗಫಾರ್ ಪಾರಿತೋಷಕವನ್ನು ಪಡೆಯುವಲ್ಲಿ ಎಲ್ಲರ ಶ್ರಮ ಮತ್ತು ಉತ್ಸಾಹದ ಜತೆಗೆ ಅವಿರತ ಪ್ರಯತ್ನವೇ ಕಾರಣ ಎಂದು ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಡಾ| ಎನ್. ಜಿ. ಮೋಹನ್ ಅಭಿಪ್ರಾಯಪಟ್ಟರು. ಕೊಣಾಜೆಯ ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಠೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದರು.ಜಿಲ್ಲೆ ಮತ್ತು ಉಳ್ಳಾಲ ಸಂಸ್ಥೆಯ ಉತ್ತಮವಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಇನ್ನೂ ಹೆಚ್ಚೆಚ್ಚು ತೊಡಗಿಸಿಕೊಂಡು ಸಂಸ್ಥೆಯ ಕೀರ್ತಿ ಹೆಚ್ಚಿಸಿ ಎಂದರು. ಜಿಲ್ಲಾ ಕಾರ್ಯದರ್ಶಿ ಯು.ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಜಿಲ್ಲಾ ಸಂಸ್ಥೆಯು ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಹಾಗೂ ರಾಜ್ಯ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು. ಅಲ್ಲದೇ ಚಿಂತನಾ ದಿನಾಚರಣೆಯನ್ನು ಎಲ್ಲಾ ಶಾಲೆಯಲ್ಲೂ ಹಮ್ಮಿಕೊಳ್ಳುವಂತೆ ಕರೆ ನೀಡಿದರು. ಮತ್ತ್ತೊಬ್ಬ ಅತಿಥಿ ಜಿಲ್ಲಾ ಸ್ಕೌಟ್ ಆಯುಕ್ತ ರಾಮಶೇಷ…

Read More

UN NETWORKS ಮಂಗಳೂರು: ದಿ.03/07/2018ನೇ ಮಂಗಳವಾರದಂದು ಸುರಕ್ಷಾ ದಂತ ಚಿಕಿತ್ಸಾಲಯ ರಿಫಾ ಸೆಂಟರ್ ಹೊಸಂಗಡಿ ಇದರ 22ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು. 1997ನೇ ಜುಲೈ ತಿಂಗಳ 3ರಂದು ಮಾನ್ಯ ಬಿ. ರಮಾನಾಥ ರೈ ಅವರಿಂದ ಹೊಸಂಗಡಿಯ ಹಿಲ್‍ಸೈಡ್ ಕಾಂಪ್ಲೆಕ್ಸ್ ನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಉದ್ಘಾಟಿಸಲ್ಪಟ್ಟಿತ್ತು.ಡಾ| ಮುರಲೀ ಮೋಹನ್ ಚೂಂತಾರು ಮತ್ತು ಡಾ| ರಾಜಶ್ರೀ ಮೋಹನ್ ಇದರ ಸಾರಥ್ಯದಲ್ಲಿ ಆರಂಭಗೊಂಡ ಸುರಕ್ಷಾ ದಂತ ಚಿಕಿತ್ಸಾಲಯವಾಗಿ ಅಭಿವೃದ್ಧಿಗೊಂಡು ಇದೀಗ ಯಶ್ವಸಿ 21 ಸಂವತ್ಸರಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದೆ. 22ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ವತಿಯಿಂದ ದಿನಾಂಕ 03/07/2018ರಂದು ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು. ಈ ದಿನದಂದು ದಂತ ಚಿಕಿತ್ಸಾಲಯಕ್ಕೆ ಬಂದ ಎಲ್ಲಾ ರೋಗಿಗಳಿಗೆ ಒಂದೊಂದು ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ವನ ಮಹೋತ್ಸವ ಆಚರಿಸಿ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ…

Read More

UN NETWORKS ಉಳ್ಳಾಲ: ತ್ಯಾಜ್ಯ ಘಟಕವಾಗಿರುವ ಕೆಲವೇ ಕೆಲವು ಗ್ರಾಮ ಪಂಚಾಯತ್‍ಗಳಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಒಂದಾಗಿದ್ದು, ತ್ಯಾಜ್ಯ ಮುಕ್ತ ಮುನ್ನೂರು ನಿರ್ಮಾಣಕ್ಕೆ ಗ್ರಾಮದ ಜನರ ಸಹಕಾರ ಅಗತ್ಯವಿದ್ದು, ತ್ಯಾಜ್ಯವನ್ನು ಎಲ್ಲೆಲ್ಲಿ ಬಿಸಾಡದೆ ತ್ಯಾಜ್ಯ ಸಂಗ್ರಾಹಕರಿಗೆ ನೀಡಿ ಮಾಸಿಕ ಶುಲ್ಕವನ್ನು ಸರಿಯಾಗಿ ನೀಡಿದರೆ ತ್ಯಾಜ್ಯ ಮುಕ್ತದೊಂದಿಗೆ ಸ್ವಚ್ಛ ಮುನ್ನೂರು ನಿರ್ಮಾಣ ಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುಡ್ತಡ್ಕ ತಿಳಿಸಿದರು. ಸುಭಾಷ್‍ನಗರದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ ಮುನ್ನೂರು ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮಸಭೆಯಲ್ಲಿ ತ್ಯಾಜ್ಯ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಮಾತನಾಡಿ ಮುನ್ನೂರು ಗ್ರಾಮ ಪಂಚಾಯತ್‍ನಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯ ಘಟಕಕ್ಕೆ ಪ್ರಾರಂಭಿಕ ಹಂತದಲ್ಲೇ ಜನರು ಪ್ರೋತ್ಸಾಹ ನೀಡುತ್ತಿಲ್ಲ ದಿನಕ್ಕೆ ಒಂದು ರೂಪಾಯಿಯಂತೆ ಮಾಸಿಕ 30 ರೂ. ಶುಲ್ಕ ವಿಧಿಸಿದರೂ ಆ ಹಣವನ್ನು ಸರಿಯಾಗಿ ಜನರು ಭರಿಸುತ್ತಿಲ್ಲ. ಈ ಹಿಂದೆ ಕಸ ವಿಲೇವಾರಿ ಗುತ್ತಿಗೆ ವಹಿಸಿಕೊಂಡವರು ಹಿಂದೆ ಸರಿದಿದ್ದು, ಗ್ರಾಮದ ಯುವಕರೊಬ್ಬರು ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಕಸ…

Read More

UN NETWORKS ಜಪ್ಪಿನಮೊಗರು : ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದೇವೋಜಿ ರಾವ್‍ಜಾಧವ್ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ವಿಶೇಷ ಮಹಾಸಭೆಯನ್ನು ಜು. 29ರಂದು ನಡೆಸಲು ತೀರ್ಮಾನಿಸಲಾಯಿತು. ಜಪ್ಪಿನ ಮೊಗರು ಶಿವಾಜಿ ನಗರದ ಆರ್ಯ ಮರಾಠ ಭವನದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಧರೇಕರ್ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ದ್ವಿತೀಯ ಮಾಸಿಕ ಸಭೆಯಲ್ಲಿ . ಸಂಘದ ಅಧ್ಯಕ್ಷ ದೇವೋಜಿ ರಾವ್ ಜಾಧವ್ ಅವರು ಸಂಘದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ವಿಶೇಷ ಮಹಾಸಭೆಯ ಚುನಾವಣಾ ಅಧಿಕಾರಿಯಾಗಿ ಸದಾನಂದ ಕಟ್ವಾಟ್ ಅವರನ್ನು ನೇಮಿಸಲಾಯಿತು.ಕಾರ್ಯದರ್ಶಿ ರಾಜೇಶ್ ರಾವ್ ಪಾಟೀಲ್ ಹಿಂದಿನ ಸಭೆಯ ವರದಿ ವಾಚಿಸಿ ಸದಸ್ಯರ ಅನುಮೋದನೆ ಪಡೆದುಕೊಂಡರು. ಕೋಶಾಧಿಕಾರಿ ಶ್ರೀಧರ ಬಹುಮಾನ್ ಸಮುದಾಯ ಭವನದ ಮಾಸಿಕ ಆದಾಯ ಮತ್ತು ಖರ್ಚು ವೆಚ್ಚದ ವಿವರ ನೀಡಿದರು. ಪ್ರತಿಭಾ ಪುರಸ್ಕಾರ, ಸಹಾಯಧನ ಅರ್ಜಿ ಅಹ್ವಾನ : ಸಂಘದ…

Read More

UN NETWORKS ತಲಪಾಡಿ: ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ `ಇತ್ತನಾತ್ ದಿನ’ ಮತ್ತು ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ಬಂಜಿಗ್ ಹಾಕೊಡ್ಚಿ ನಾಟಕಗಳ ಶುಭ ಮುಹೂರ್ತವು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಭಯ, ಭಕ್ತಿ, ಶ್ರದ್ಧೆ, ಶಿಸ್ತು, ಸಮಯ ಪ್ರಜ್ಞೆಗಳಿಂದ ಕಲಾವಿದರು ರಂಗಭೂಮಿಯಲ್ಲಿ ಕಲಾಸೇವೆ ಮಾಡಿದರೆ ಎಂದು ಸೋಲಾಗದು. ಉನ್ನತ ಶಿಬಿರಕ್ಕೆ ಏರಿ ಸಮಾಜ ಮುಖಿಯಾಗುವನು. ತುಳುನಾಡಿನಲ್ಲಿ ಅಳಿಸಿ ಹೋಗುವ ತುಳು ಸಂಸ್ಕೃತಿಯನ್ನು ಉಳಿಸುವಲ್ಲಿ ಪಾತ್ರರಾಗಬೇಕು. ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರು ನಾಟಕವೆಂದರೆ ಸಮಾಜದ ಕನ್ನಡಿ ಇದ್ದಂತೆ. ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವಲ್ಲಿ ಕಲಾವಿದರ ಕಲಾ ಸೇವೆಯ ಶ್ರಮ ಮೆಚ್ಚುವಂತದ್ದು, ಅಂತಹ ಸಂದೇಶಗಳನ್ನು ನೀಡಿ ಕಳೆದ 19 ವರ್ಷಗಳಿಂದ ಶಾರದಾ ಮತ್ತು ಐಸಿರಿ ಕಲಾವಿದರು ಸಮಾಜದಲ್ಲಿ ಮನೆ ಮಾತಾಗಿದ್ದಾರೆ. ಸಮಾರಂಭದ…

Read More

UN NETWORKS ಉಳ್ಳಾಲ:ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಯುವಕ ಮಂಡಲ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಅಂಬ್ಲಮೊಗರು ಜನಸೇವಾ ಯುವಕ ಮಂಡಲ ಅಂಬ್ಲಮೊಗರುವಿನ ಕಾರ್ಯಾಲಯದಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಆರೋಗ್ಯ ಕಾರ್ಡ್ ವಿತರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ಕಾಳಜಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತುತ್ತಿರುವ ಜನಸೇವಾ ಯುವಕ ಮಂಡಲದ ಕಾರ್ಯ ಶ್ಲಾಘನೀಯ.ಯುವಕ ಮಂಡಲದ ಸಹಕಾರದಿಂದ ಕೊಡ ಮಾಡುವ ಜಸ್ಟೀಸ್ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಈ ಆರೋಗ್ಯ ಕಾರ್ಡ್‍ನ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತಾಗಬೇಕು ಎಂದರು. ಅಂಬ್ಲಮೊಗರು ಜನಸೇವಾ ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಶೆಟ್ಟಿ ಅಂಬ್ಲಮೊಗರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಗೌರವ ಸಲಹಾಗಾರ ಎ.ವಿಜಯ ಮತ್ತು ಮಾಜಿ ಅಧ್ಯಕ್ಷರುಗಳಾದ ಜಯಶೀಲ ಶೆಟ್ಟಿ ಪಡ್ಯಾರಮನೆ, ಮತ್ತು ಸ್ಟೀವನ್ ಕ್ರೂಜ್ ಭಾಗವಹಿಸಿದ್ದರು. ಇದೇ ವೇಳೆ ಸಂಘದ ಪಧಾದಿಕಾರಿಗಳು ಸದಸ್ಯರುಗಳು…

Read More

UN NETWORKS ಮಂಗಳೂರು: ಅಲ್‍ ಇಂಡಿಯಾ ಐಡಿಯಲ್‍ ಟೀಚರ್ಸ್ ಎಸೋಸಿಯೇಶನ್, ದಕ್ಷಿಣಕನ್ನಡ ಜಿಲ್ಲೆ ಇದರ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಕಾರ್ಯಗಾರ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಜಮಿಯ್ಯಾತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು. ಕಾರ್ಯಾಗಾರಕ್ಕೆ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಜ.ಅಬ್ದುಲ್‍ಖಾದರ್ ಪ್ರಾಂಶುಪಾಲರು, ಕರ್ನಾಟಕ ಸರಕಾರಿ ಸಂಧ್ಯಾ ಪಾಲಿಟೆಕ್ನಿಕ್, ಮಂಗಳೂರು “ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವಾಗ ಯಾವೆಲ್ಲಾ ವಿಷಯಗಳನ್ನು ಗಮನದಲ್ಲಿಡಬೇಕು ಎಂಬುದರ ಬಗ್ಗೆ ಪಿ.ಪಿ.ಟಿ ಪ್ರಸಂಟೇಶನ್ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಶಿಕ್ಷಕರು ಸ್ವಾರ್ಥಚಿಂತನೆಗೆಕಟ್ಟು ಬೀಳದೆ ಇತರರ ದೃಷ್ಟಿಕೋನವನ್ನು ಒಪ್ಪಿಕೊಂಡು ಕಲಿಕೆಯ ವಿಧಾನವನ್ನು ಅನುಕರಿಸಬೇಕು ಎಂದರು. ಕಾರ್ಯಕ್ರಮವನ್ನು ನಾಗರಾಜಪ್ಪ, ಪಿ.ಯು ಇಲಾಖೆ ಉಪನಿರ್ದೇಶಕರವರು ಉದ್ಘಾಟಿಸಿ ಶಿಕ್ಷಕರ ಗುರಿ ಹಾಗೂ ಜವಬ್ದಾರಿಯ ಬಗ್ಗೆ ಶಿಕ್ಷಕರಿಗೆ ಉಪಯುಕ್ತ ಮಾಹಿತಿ ನೀಡಿದರು. ನಿವೃತ್ತ ಹೊಂದಿರುವ ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್‍ ಇಸ್ಮಾಯಿಲ್‍ ರವರನ್ನು ಸನ್ಮಾಯಿಸಲಾಯಿತು.ಜೊತೆಗೆ ಪಿಹೆಚ್ ಪಡೆದಡಾ ಮುಬೀನ್ ಉಳ್ಳಾಲ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕಿ ಶಹನಾಜ್‍ಭಾನು(ನಿವೃತ್ತಿ ಮುಖ್ಯೋಪಾಧ್ಯಾಯಿನಿ ಬದ್ರಿಯಾ ಪ್ರಾಥಮಿಕ ಶಾಲೆ) ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ. ಮುಖ್ತಾರ್ ಅಹ್ಮದ್‍ಖೊತ್ವಾಲ್‍…

Read More

UN NETWORKS ಮೈಸೂರು: ಎಸ್.ಡಿ.ಪಿ.ಐಕರ್ನಾಟಕದ ನೂತನರಾಜ್ಯಾಧ್ಯಕ್ಷರಾಗಿಇಲ್ಯಾಸ್ ಮಹಮ್ಮದ್‍ ತುಂಬೆ ಆಯ್ಕೆಯಾಗಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಆಫ್‍ಇಂಡಿಯಾ (ಎಸ್‍ಡಿಪಿಐ) ಕರ್ನಾಟಕ ರಾಜ್ಯ ನೂತನ ಪದಾಧಿಕಾರಿಗಳನ್ನು ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್‍ರವರು 2018 ರಜುಲೈ 2ರಂದು ಮೈಸೂರಿನ ಹೋಟೆಲ್ ನಲಪಾಡ್ ರೆಸಿಡೆನ್ಸಿಯಲ್ಲಿ ನಡೆದ ಎಸ್.ಡಿ.ಪಿ.ಐ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಘೋಷಿಸಿದರು. ಸಭೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಸಾಮಾಜಿಕ, ರಾಜಕೀಯ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ ಕಳೆದ ಮೂರು ವರ್ಷಗಳಲ್ಲಿ ಪಕ್ಷದ ವತಿಯಿಂದ ನಡೆದ ಚಟುವಟಿಕೆಗಳ ವರದಿ ವಾಚನ ಹಾಗೂ ವಿಚಾರಗೋಷ್ಠಿ ನಡೆಸಲಾಯಿತು. ಮುಂದಿನ ಮೂರು ವರ್ಷ (2018-21)ಗಳ ಅವಧಿಗೆ ನಡೆದ ರಾಜ್ಯ ಸಮಿತಿ ಚುನಾವಣೆಯಲ್ಲಿ 21 ಮಂದಿಯನ್ನು ರಾಜ್ಯ ಸಮಿತಿಗೆ ಆರಿಸಲಾಯಿತು. ಬಳಿಕ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷರಾಗಿ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಮಜೀದ್ , ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಹನ್ನಾನ್, ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿಗಳಾಗಿ ಅಕ್ರಂ ಹಸನ್, ಅಲ್ಫಾನ್ಸೋ ಫ್ರಾಂಕೋ, ಅಪ್ಸರ್‍ಕೊಡ್ಲಿಪೇಟೆ, ಅಶ್ರಫ್ ಮಾಚಾರ್,…

Read More

UN NETWORKS ಮಂಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೂಪದಲ್ಲಿ ತಂದು ಗದ್ದೆಯಲ್ಲಿ ಕಟ್ಟಿಹಾಕಲು ಯತ್ನಿಸುತ್ತಿರುವ ಸಂದರ್ಭ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ತಂಡದಲ್ಲಿದ್ದ ನಾಲ್ವರು ಪರಾರಿಯಾಗಿರುವ ಘಟನೆ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ನಡೆದಿದ್ದು, ತಲೆಮರೆಸಿಕೊಂಡ ನಾಲ್ವರಲ್ಲಿ ಓರ್ವನನ್ನು ಬಂಧಿಸಲಾಗಿದೆ. ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಜಾಮುದ್ದೀನ್, ಮುಸ್ತಾಫ ಮತ್ತು ಮಲ್ಲೂರಿನ ಫೌಝಾನ ಎಂಬವರು ಎಲ್ಲಿಂದಲೋ ಕಳವುಗೈದ ಜಾನುವಾರುಗಳನ್ನು ಓಮ್ನಿ ಕಾರಿನಲ್ಲಿ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಹಿಂಸಾತ್ಮಕವಾಗಿ ಕರೆತಂದು ಮಸೀದಿ ಬಳಿ ಗದ್ದೆಯಲ್ಲಿ ಕಟ್ಟಿಹಾಕುತ್ತಿರುವ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ನಾಲ್ವರು ಪರಾರಿಯಾಗಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಮುಸ್ತಾಫ ಯಾನೆ ಮುಸ್ತಾ ನನ್ನು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2 ಜಾನುವಾರು ಕಳವು ಪ್ರಕರಣಗಳಿವೆ.

Read More