UN NETWORKS ಮುಡಿಪು : ಮಜ್ಲಿಸ್ ಎಜ್ಯು ಪಾರ್ಕ್ ಮುಡಿಪುನಲ್ಲಿ ಜುಲೈ 13ರಂದು ಸಖಾಫಿಯ್ಯ ರಾತೀಬ್ ಮಜ್ಲಿಸ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ನೇತೃತ್ವದಲ್ಲಿ ಮುಡಿಪು ಎಜ್ಯು ಪಾರ್ಕ್ ವಠಾರದಲ್ಲಿ ನಡೆಯಲಿದೆ.ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.
Author: UllalaVani
UN NETWORKS ಪಂಪ್ ವೆಲ್: ತಖ್ವಾ ಜುಮ್ಮಾ ಮಸೀದಿ ಪಂಪ್ ವೆಲ್ ನಲ್ಲಿ ಹಜ್ಜ್ ತರಬೇತಿಯನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ತರಬೇತಿ ನೀಡಿದರು, ಪ್ರಸಕ್ತ ಸಾಲಿನಲ್ಲಿ ಹಜ್ಜ್ ಯಾತ್ರೆ ಗೈಯ್ಯಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ತಖ್ವಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ವೈ ಅಬ್ದುಲ್ಲಾ ಕುಂಞ, ಉಪಾಧ್ಯಕ್ಷರಾದ ಯು.ಕೆ ಮೋನು ಕಣಚೂರು, ಪ್ರಧಾನ ಕಾರ್ಯದರ್ಶಿ ಬಿ.ಎಮ್ ಮುಮ್ತಾಝ್ ಅಲಿ, ಟ್ರಸ್ಟಿಗಳಾದ ಪಿ.ಸಿ ಹಾಶೀರ್, ಅಬೂ ಸುಫಿಯಾನ್ ಇಬ್ರಾಹಿಂ ಮದನಿ , ಜಿ. ಮಹಮೂದ್ ಹಾಗೂ ಶೇಖಬ್ಬ ಮುಸ್ಲಿಯಾರ್ ಖತೀಬ್ ಬದ್ರಿಯಾ ಮಸ್ಜಿದ್, ಇಬ್ರಾಹಿಂ ಬಾಖವಿ ಉಪಸ್ಥಿರಿದ್ದರು, ತಖ್ವಾ ಜುಮ್ಮಾ ಮಸೀದಿಯ ಮುತವಲ್ಲಿ ಹಾಗೂ ಕೋಶಾಧಿಕಾರಿಯಾದ ಎಸ್.ಎಮ್ ರಶೀದ್ ಹಾಜಿಯವರು ಪ್ರಾಸ್ತಾವಿಕ ಭಾಷಣ ಮಾಡಿ ಸರ್ವರನ್ನು ಸ್ವಾಗತಿಸಿದರು.
UN NETWORKS ತೊಕ್ಕೊಟ್ಟು: ಅನೈತಿಕತೆಯನ್ನು ಬೆಂಬಲಿಸುವ ಸಮಾಜ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಕೆಡುಕುಗಳನ್ನು ಟೂರಿಸಂ, ಸಾಹಿತ್ಯ, ಕಲೆಯ ಹೆಸರಿನಲ್ಲಿ ಅನೈತಿಕತೆ , ಅಶ್ಲೀಲತೆ , ಮದ್ಯಪಾನಗಳನ್ನು ನಿರಂತರವಾಗಿ ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕೆಲಸಗಳು ನಿರಂತರವಾಗಿ ಆಗುತ್ತಿದೆ. ಇಂತಹ ಅನಾಚಾರಗಳ ದ್ವಾರಗಳನ್ನು ತೆರೆದಿಟ್ಟು ಅತ್ಯಾಚಾರದ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಶಾಂತಿಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಉಳ್ಳಾಲ ಘಟಕ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಇದರ ನೇತೃತ್ವದಲ್ಲಿ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ದೇಶದಾದ್ಯಂತ ನಡೆದ ಮುಗ್ದ ಬಾಲಕಿಯರ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಮುಗ್ದ ಮಕ್ಕಳ ಮೇಲಿನ ಅತ್ಯಾಚಾರ , ಅನಾಚಾರಗಳು ದೇಶದ ಗೌರವ ಮತ್ತು ಮಾನವನ್ನು ಹರಾಜು ಮಾಡುತ್ತಿದೆ. ಇದರೊಂದಿಗೆ ಅತ್ಯಾಚಾರಗಳಿಗೆ ರಾಜಕೀಯ ಬಣ್ಣ, ಅತ್ಯಾಚಾರಿಗಳ ಧರ್ಮ ನೋಡುವಂತಹ ಶಾಪಗಳು ದೇಶದಲ್ಲಿ ನಡೆಯುತ್ತಿರುವುದು ದುರಾದೃಷ್ಟ. ಕಥುವಾದಲ್ಲಿ ನಡೆದ ಅತ್ಯಾಚಾರವನ್ನು…
UN NETWORKS ಕೊಣಾಜೆ : ಇಂದು ಯುವಕರಲ್ಲೇ ಮಧುಮೇಹ, ಅಧಿಕರಕ್ತದೊತ್ತಡ ಮುಂತಾದ ಕಾಯಿಲೆಯನನು ಕಾಣುತ್ತಿದ್ದೇವೆ. ಆದರೆ ಹಿಂದಿನ ಕಾಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ನಮ್ಮ ಹಿರಿಯರಿಗೆ ಇಂತಹ ಯಾವುದೇ ಸಮಸ್ಯೆಗಳು ಇರಲಿಲ್ಲ. ಅಂದರೆ ಗದ್ದೆ ಮಣ್ಣಿಗೆ ಅಂತಹ ಶಕ್ತಿ ಇದೆ. ಕೃಷಿ ಕಾಯಕದಲ್ಲಿ ನಾವು ತೊಡಗಿಸಿಕೊಂಡರೆ ರೋಗ ರುಜಿನಗಳನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು. ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ವಿಜಯಾ ಬ್ಯಾಂಕ್ ಕೊಣಾಜೆ, ಗ್ರಾಮಾಭಿವೃದ್ಧಿ ಸಮಿತಿ, ಮಂಗಳಾ ಗ್ರಾಮೀಣ ಯುವಕ ಸಂಘ, ಶಿಕ್ಷಣ ಸಂಪನ್ಮೂಲ ಕೇಂದ್ರ ಇವುಗಳ ಸಹಭಾಗಿತ್ವದಲ್ಲಿ ಮಂಗಳೂರು ವಿವಿ ಮಟ್ಟ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಗುರುವಾರ ಕೊಣಾಜೆ ಕಲ್ಲಿಮಾರ್ ಮರಕಳ ಬೆಟ್ಟುವಿನಲ್ಲಿ ನಡೆದ ಭತ್ತ ನಾಟಿ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರ ಪ್ರದೇಶಗಳಲ್ಲಿ ವಾಸವಿರುವವರು ಗದ್ದೆಗಳಿಗೆ ಬಂದಾಗ ಬಿಸಿಲು, ಕೆಸರು ಎನ್ನುವ ಕೊರಗು ಕಾಡುತ್ತದೆ. ಆದರೆ ಹಳ್ಳಿಯಲ್ಲಿದ್ದ ಗದ್ದೆ, ತೋಟ ಬಿಟ್ಟು ನಗರಕ್ಕೆ ವಲಸೆ…
UN NETWORKS ಉಳ್ಳಾಲ: ಇಸ್ಲಾಮಿನ ಆದರ್ಶ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳ ಕಾರ್ಯ ಇಸ್ಲಾಂ ಚೌಕಟ್ಟು ಮೀರದೇ ನಡೆಯಬೇಕು ಎಂಬ ಉದ್ದೇಶದಿಂದ ಪ್ರೇ ಸ್ಕೂಲ್ ಆರಂಭಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಇಸ್ಮಾಯಿಲ್ ಸಅದಿ ಉರುಮಣೆ ಅಭಿಪ್ರಾಯಪಟ್ಟರು. ದೇರಳಕಟ್ಟೆಯಲ್ಲಿ ತಾಜುಲ್ ಉಲಮಾ ಮಸೀದಿಯಲ್ಲಿ ಆರಂಭಗೊಂಡ ತಾಜುಲ್ ಉಲಮಾ ನ್ಯೂ ಬೀ ಇಸ್ಲಾಮಿಕ್ ಪ್ರೇ ಸ್ಕೂಲ್‍ಉದ್ಘಾಟಿಸಿ ಮಾತನಾಡಿದರು. ಸಿಹಾಬುದ್ದೀನ್ ಸಖಾಫಿ ತಲಕ್ಕಿ ಅವರು ತರಗತಿಯನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಮಕ್ಕಳ ಅಭಿವೃದ್ಧಿಗಿರುವ ಸಾಧನ. ಇದರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದರು. ಏಷ್ಯನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸ್ಹಾಕ್ ಝುಹ್‍ರಿ, ಯಾಕೂಬ್ ಸಅದಿ, ಮನ್ಸೂರ್ ಹಿಮಮಿ, ಹೈದರ್ ಆಲಿ, ನಝೀರ್ ಅಹ್ಸನಿ, ಇಸ್ಮಾಯಿಲ್ ಝಕರಿಯಾ, ಅಶ್ರಫ್ ಸಅದಿ, ಹಮೀದ್ ದೇರಳಕಟ್ಟೆ, ಶೌಕತ್, ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.
UN NETWORKS ಕೈರಂಗಳ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಪೂರಕವಾಗಿದ್ದು, ಶಾಲೆಗೆ ಸಮರ್ಥ ನಾಯಕತ್ವ ನೀಡುವ ಮೂಲಕ ನಮ್ಮ ಸಂಸತ್ತು ಆದರ್ಶ ಮೆರೆಯಲಿ ಹಾಗೂ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಬಹುದೊಡ್ಡ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು ಎಂದು ಸಂಸ್ಥೆಯ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಅಭಿಪ್ರಾಯಪಟ್ಟರು. ಕೈರಂಗಳ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಿರಿಧರ್ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಶತಮಾನಗಳ ಹಿಂದಿನ ವಿದ್ಯಾರ್ಥಿ ಸಂಘಗಳನ್ನು ನೆನಪಿಸಿದರು. ಆ ಮಹಾನುಭಾವರು ನಮಗೆ ಮಾದರಿಯಾಗಿದ್ದು ಅಂತಹ ಬೆಳವಣಿಗೆಗೆ ಈ ಶಾಲೆ ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲೆ ದಿವ್ಯದೀಪ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ 13 ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಹಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಪ್ರಾಂಶುಪಾಲ ಸೋಮಶೇಖರ ಎಂ.ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ಚೈತನ್ಯ ಸ್ವಾಗತಿಸಿ, ಅಮೃತ ಕಾರ್ಯಕ್ರಮ ನಿರೂಪಿಸಿದರು. ಸ್ನೇಹ ವಂದಿಸಿದರು.
UN NETWORKS ತಲಪಾಡಿ: ಕಾಸರಗೋಡು ಉಪಜಿಲ್ಲೆಯ ನೂತನ ಎಇಒ ಆಗಿ ಪದೋನ್ನತಿ ಪಡೆದ ಜಿ.ವಿ.ಎಚ್.ಎಸ್. ಎಸ್. ಕುಂಜತ್ತೂರು ಶಾಲೆಯ ಮುಖ್ಯೋಪಾಧ್ಯಾಯ ಅಗಸ್ಟಿನ್ ಬರ್ನಾಡ್ ಮೊಂತೆರೊ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಹಿರಿಯ ಶಿಕ್ಷಕಿ ಪ್ರಮೀಳಾ ಇವರ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕ ರವೀಂದ್ರ ರೈ ಇವರಿಗೆ ಅಭಿನಂದಿಸಲಾಯಿತು. ಸ್ಟಾಫ್ ಸೆಕ್ರೆಟರಿ ಸುಚೇತ ವಂದಿಸಿದರು. ಶಾಲಾ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
UN NETWORKS ಉಳ್ಳಾಲ : ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ಮೊಂಟುಗೋಳಿ ರೇಂಜ್ ವ್ಯಾಪ್ತಿಯ ಮದ್ರಸಗಳಲ್ಲಿ ಮರಿಕ್ಕಳ “ಮದನುಲ್ ಉಲೂಮ್” ಮದ್ರಸದ 5ನೇ ತರಗತಿಯ ಮೊಹಮ್ಮದ್ ಶಾಝಿಲ್ 519 ಅಂಕ ಪಡೆದು ಪ್ರಥಮ ಹಾಗೂ 7ನೇ ತರಗತಿಯ ಆಯಿಷತ್ ರಾಫಿಯಾ 504 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
UN NETWORKS ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್ – ಮೇ 2018ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶ ಜು. 5ರಂದು ಅಪರಾಹ್ನ 3 ಗಂಟೆಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ (www.mangaloreuniversity.ac.in) ಪ್ರಕಟಗೊಳ್ಳಲಿದೆ. ಪದವಿಗಳಾದ ಬಿ.ಎ./ ಬಿ.ಎಸ್‌ಸಿ./ ಬಿ.ಕಾಂ./ ಬಿ.ಸಿ.ಎ./ ಬಿಬಿಎಂ/ ಬಿಬಿಎ/ ಬಿ.ಎಸ್‌ಸಿ. (ಎಫ್.ಎನ್.ಡಿ)/ ಬಿ.ಎಚ್.ಎಂ./ ಬಿ.ಎಚ್.ಎಸ್/ ಬಿ.ಎಸ್‌ಸಿ (ಎಫ್.ಡಿ./ಐ.ಡಿ.)/ಬಿ.ಎ.ಎಸ್.ಎಲ್.ಪಿ, ಬಿ.ಎಸ್.ಡಬ್ಲ್ಯೂ/ಬಿ.ಎ. (ಎಚ್.ಆರ್.ಡಿ.) ವಿಷಯಗಳ ಫಲಿತಾಂಶ ಪ್ರಕಟಗೊಳ್ಳಲಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ವಿದ್ಯಾರ್ಥಿಗಳು ಜು. 14ರೊಳಗೆ ಆನ್‌ಲೈನ್ ಅಂಕಪಟ್ಟಿಯೊಂದಿಗೆ ಕಾಲೇಜು ಮುಖಾಂತರ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.
UN NETWORKS ಮಂಜನಾಡಿ: ಮಂಜನಾಡಿ ಗ್ರಾಮದ ಗೋಪಾಲ ಎಂಡೇಲ್ ಕಲ್ಕಟ್ಟ ( 58)ಯವರು ನಿಧನರಾದ್ದಾರೆ. ಅವರು ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರಾಗಿ ದುಡಿಯುತ್ತಿದು. ಅರ್ ಎಸ್ಎಸ್ ಲ್ಲಿ ತನ್ನನು ತೊಡಗಿಸಿಕೊಂಡಿದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದರು. ಇವರು ಎರಡು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

