UN NETWORKS
ಮಂಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೂಪದಲ್ಲಿ ತಂದು ಗದ್ದೆಯಲ್ಲಿ ಕಟ್ಟಿಹಾಕಲು ಯತ್ನಿಸುತ್ತಿರುವ ಸಂದರ್ಭ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ತಂಡದಲ್ಲಿದ್ದ ನಾಲ್ವರು ಪರಾರಿಯಾಗಿರುವ ಘಟನೆ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ನಡೆದಿದ್ದು, ತಲೆಮರೆಸಿಕೊಂಡ ನಾಲ್ವರಲ್ಲಿ ಓರ್ವನನ್ನು ಬಂಧಿಸಲಾಗಿದೆ.
ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಜಾಮುದ್ದೀನ್, ಮುಸ್ತಾಫ ಮತ್ತು ಮಲ್ಲೂರಿನ ಫೌಝಾನ
ಎಂಬವರು ಎಲ್ಲಿಂದಲೋ ಕಳವುಗೈದ ಜಾನುವಾರುಗಳನ್ನು ಓಮ್ನಿ ಕಾರಿನಲ್ಲಿ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಹಿಂಸಾತ್ಮಕವಾಗಿ ಕರೆತಂದು ಮಸೀದಿ ಬಳಿ ಗದ್ದೆಯಲ್ಲಿ ಕಟ್ಟಿಹಾಕುತ್ತಿರುವ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ನಾಲ್ವರು ಪರಾರಿಯಾಗಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಮುಸ್ತಾಫ ಯಾನೆ ಮುಸ್ತಾ ನನ್ನು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2 ಜಾನುವಾರು ಕಳವು ಪ್ರಕರಣಗಳಿವೆ.


