UN NETWORKS
ತಲಪಾಡಿ: ಕಾಸರಗೋಡು ಉಪಜಿಲ್ಲೆಯ ನೂತನ ಎಇಒ ಆಗಿ ಪದೋನ್ನತಿ ಪಡೆದ ಜಿ.ವಿ.ಎಚ್.ಎಸ್. ಎಸ್. ಕುಂಜತ್ತೂರು ಶಾಲೆಯ ಮುಖ್ಯೋಪಾಧ್ಯಾಯ ಅಗಸ್ಟಿನ್ ಬರ್ನಾಡ್ ಮೊಂತೆರೊ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಹಿರಿಯ ಶಿಕ್ಷಕಿ ಪ್ರಮೀಳಾ ಇವರ ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕ ರವೀಂದ್ರ ರೈ ಇವರಿಗೆ ಅಭಿನಂದಿಸಲಾಯಿತು. ಸ್ಟಾಫ್ ಸೆಕ್ರೆಟರಿ ಸುಚೇತ ವಂದಿಸಿದರು. ಶಾಲಾ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


