Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು: ಪ್ರಾರ್ಥನಾ ಸಭಾಂಗಣದಲ್ಲಿ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿ ಚಿನ್ನ ದರೋಡೆಗೈದಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್ ನಿವಾಸಿ ಗಂಗಾಧರ್ (66) ಹಲ್ಲೆಗೊಳಗಾದವರು. ಇವರ ಬಳಿಯಿದ್ದ 3 ಪವನ್ ತೂಕದ ಚಿನ್ನದ ಸರ ಕಳವುಗೈಯ್ಯಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜ.16ರಂದು ಪ್ರಾರ್ಥನಾ ಮಂದಿರ ಇರುವ ಕಟ್ಟಡ ಸಮೀಪವೇ ಗಂಗಾಧರ್ ಅವರ ಮನೆ ಇದೆ. ಇವರ ಮನೆಯ ಗೇಟಿನ ಎದುರುಗಡೆ ಸಂಜೆ ವೇಳೆ ಪ್ರಾರ್ಥನಾ ಮಂದಿರದಿಂದ ಟ್ಯೂಬ್ ಲೈಟ್ ಅನ್ನು ಎಸೆಯಲಾಗಿತ್ತು. ಇದನ್ನು ಪ್ರಶ್ನಿಸಲು ಗಂಗಾಧರ್ ಅವರು ಪ್ರಾರ್ಥನಾ ಮಂದಿರದ ಒಳಗಡೆ ತೆರಳಿದ್ದರು. ಈ ವೇಳೆ ಶೇಖ್ ಬಶೀರ್, ನಾಸಿರ್, ಇಸ್ಮಾಯಿಲ್ ಸಹಿತ 10 ಮಂದಿಯ ತಂಡ ಗಂಗಾಧರ್ ಅವರ ಮೇಲೆ ಏಕಾಏಕಿ ನೆಲ ಒರೆಸುವ ಸಾಮಗ್ರಿ, ರಾಡು, ಹಾಗೂ ಕೈಗಳಿಂದ ಎದೆ, ಸೊಂಟ ಹಾಗೂ…

Read More

UN NETWORKS ತೊಕ್ಕೊಟ್ಟು: ಶಿಕ್ಷಣ ಸಂಸ್ಥೆಯಲ್ಲಿ ಕರುಣೆಯ ಹಾದಿಯ ಜೊತೆಗೆ ಶಿಸ್ತು, ನೈತಿಕ ಬೋಧನೆಯನ್ನು ಬೋಧಿಸಿದ ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರ ಕಾರ್ಯವೈಖರಿ ಸ್ಮರಣೀಯ ಎಂದು ಸಂತ ಸೆಬೆಸ್ತಿಯನ್ನರ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಡಾ.ಜೆ. ಬಿ ಸಲ್ದಾನ್ಹ ಅಭಿಪ್ರಾಯಪಟ್ಟರು. ಅವರು ಸಂತ ಸೆಬೆಸ್ತಿಯನ್ನರ ಅನುದಾನಿತ ಪ್ರೌಢಶಾಲೆ ಪೆರ್ಮನ್ನೂರು ಇಲ್ಲಿ ಶಿಕ್ಷ ಣ ಕ್ಷೇತ್ರದಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ವಯೋ ನಿವೃತ್ತಿಯಾದ ದೈಹಿಕ ಶಿಕ್ಷಣ ಶಿಕ್ಷಕ ಉರ್ಬನ್ ಮಸ್ಕರೇನಸ್ ಇವರಿಗೆ ಶಾಲಾ ವತಿಯಿಂದ ಹಮ್ಮಿಕೊಳ್ಳಲಾದ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜೀವನವನ್ನೇ ವಿದ್ಯಾರ್ಥಿಗಳಿಗೆ ಸಮರ್ಪಿತವಾಗಿ ಜೀವಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.ದೇವರು ಕೊಟ್ಟ ಅಂತ:ಕರಣದ ಮೂಲಕ ನೈತಿಕ ಬೋಧನೆಯ ಜತೆಗೆ ಸತ್ಯದ ದಾರಿಯಲ್ಲಿ ನಡೆದವರು. ವಿದ್ಯಾರ್ಥಿಗಳಿಗೆ ಕರುಣೆ ತೋರಿಸಿ ವೃತ್ತಿ ಜೀವನ ನಡೆಸಿದವರಾಗಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಕಟಪೂರ್ವ ಪ್ರಾಂಶುಪಾಲ ಫಾ. ಕ್ಲೆಮೆಂಟ್ ಮಸ್ಕರೇನಸ್ ಮಾತನಾಡಿ, ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಪ್ರಾಮಾಣಿಕ ವ್ಯಕ್ತಿ. ಪ್ರಾರ್ಥನಾ ಮನೋಭಾವದಿಂದ ಕೃತಾರ್ಥ…

Read More

UN NETWORKS ಮುಡಿಪು: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಮಹಾಶಕ್ತಿ ಕೇಂದ್ರ ಆಶ್ರಯದಲ್ಲಿ ಜ.20 ರಂದು ಸಂಜೆ 4.30ಕ್ಕೆ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿ ದೃಷ್ಟಿಯಿಂದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಮುಡಿಪು ಅಮರ್ ದೀಪ ಕಾಂಪ್ಲೆಕ್ಸ್ ನಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಚಾಲಕ ಗೋಪಾಲಕೃಷ್ಣ ಹೇರಳ ಹಾಗೂ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ಬೋಳಿಯಾರ್ ವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 4.00 ಗಂಟೆಗೆ ತೌಡುಗೋಳಿ ಕ್ರಾಸ್ ನಿಂದ , 4.15ಕ್ಕೆ ಬೋಳಿಯಾರಿನಿಂದ ಬೈಕ್ ರ್ಯಾಲಿ ಆರಂಭವಾಗಿ ಮುಡಿಪುವಿನಲ್ಲಿ ಸಮಾಪನೆಗೊಳ್ಳಲಿದೆ.

Read More

UN NETWORKS ಮಂಗಳೂರು: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಗಾಂಜಾ ಮಾರಾಟದ ಆರೋಪಿಯನ್ನು ನಗರದ ಇಕೊನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ತಲಪಾಡಿ ಟೋಲ್ ಗೇಟ್ ಸಮೀಪ ಬಂಧಿಸಿದ್ದಾರೆ. ಮಂಜೇಶ್ವರ ತೂಮಿನಾಡು ನಿವಾಸಿ ಆಸೀಫ್ (33) ಬಂಧಿತ. ಹಲವು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ಈತನ ಮೇಲೆ ಪ್ರಕರಣವಿದೆ. ಹೆಚ್ಚು ಕೇರಳ ಭಾಗದಿಂದ ಕರ್ನಾಟಕಕ್ಕೆ ತಂದು ಶಾಲಾ-ಕಾಲೇಜು ಆವರಣಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

UN NETWORKS ಬೆಂಗಳೂರು: ಸಮಸ್ತ ಕರ್ನಾಟಕ ಅಧ್ಯಕ್ಷರಾದ ಸೆಯ್ಯಿದ್ ಏನ್ ಪಿ ಎಮ್ ಝೈನಲ್ ಆಬಿದೀನ್ ತಂಗಳ್ ರವರು ಅಬ್ದುಲ್ ನಾಸಿರ್ ಮ್ಹದನಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಬೂಬಕ್ಕರ್ ಉಸ್ತಾದ್, ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮೊಹಮ್ಮದ್ ಹಾಜಿ, ಜಾಬಿರ್ ಹಾಜಿ ಪಲ್ಲಂಕೋಡ್, ಇಸ್ಮಾಯಿಲ್ ಲಿಂರ ಸಾಫ್ಟ್ ಟೆಕ್, ಹನೀಫ್, ಅಬ್ದುಲ್ ಸಮದ್ ದಾರಾನಿ ಉಪಸ್ಥಿತರಿದ್ದರು.

Read More

UN NETWORKS ಬೆಂಗಳೂರು : ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಮೀಲಾದ್ ಮೆಹಫಿಲ್ 2019 ಕಾರ್ಯಕ್ರಮ ಎಮ್ ಇ ಸಿ ಟಿ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ನಡೆಯಿತು. ಅಬೂಬಕ್ಕರ್ ಉಸ್ತಾದ್ ಎಂಎಫ್ ವಿ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಿನ್ಸಿಪಾಲ್ ನ್ಯಾಯವಾದಿ ಹನೀಫ್ ಹುದವಿ ಮುಖ್ಯ ಪ್ರಭಾಷಣಗೈದರು .ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮುಹಮ್ಮದ್ ಹಾಜಿ ನಿರ್ವಹಿಸಿದರು.ವೇದಿಕೆಯಲ್ಲಿ ಅಬ್ದುಲ್ ಸಮದ್ ದಾರಾನಿ, ಅಸ್ಲಂ ಫೈಝಿ, ಅಲಿ ದಾರಿಮಿ ,ಜುನೈದ್ ಬೆಂಗಳೂರು, ಜಾಬಿರ್ ಹಾಜಿ, ಇಬ್ರಾಹಿಂ ಹಾಜಿ ಕತ್ತರ್, ಮುಷ್ತಾಖ್ ಹುದವಿ, ಶಹಜಲ್ ಹುದವಿ ಸುಲೈಮಾನ್ ಹಾಜಿ, ಮುಹಮ್ಮದ್ ಟಿ ಕೆ , ಖಾಸಿಂ ಹಾಜಿ, ಅಯ್ಯೂಬ್ ಟಿ ಕೆ,ಸಲಾಂ, ಅಝೀಝ್, ಮೊಯ್ದೀನ್ ಇನ್ನಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂರುಲ್ ಹುದಾ ಮದ್ರಸ…

Read More

UN NETWORKS ತಲಪಾಡಿ:ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಂತರಶಾಲಾ ಕಾಲೇಜು ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಲಪಾಡಿ ಕೆ.ಸಿ.ರೋಡ್‌ನ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ಅಬ್ದುಲ್ ಸಯೀಮ್ (ಕಟಾ 1 ಬೆಳ್ಳಿ, ಕುಮಿಟೆ 1 ಚಿನ್ನ), ಮುಹಮ್ಮದ್ ಇಸ್ಮಾಯೀಲ್ ಫಝಲ್ (ಕಟಾ 1 ಕಂಚು), ಎರಡನೇ ತರಗತಿಯ ಫಾತಿಮಾ ತುಹ್ಫ (ಕುಮಿಟೆ 1 ಬೆಳ್ಳಿ, ಕಟಾ 1 ಕಂಚು) ಹಾಗೂ ನಾಲ್ಕನೇ ತರಗತಿಯ ಮುಹಮ್ಮದ್ ಫೌಝಾನ್ (ಕಟಾ 1 ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ತಿಳಿಸಿದ್ದಾರೆ.

Read More

UN NETWORKS ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ವತಿಯಿಂದ ಮೌಲ್ಯ ಶಿಕ್ಷಣ ವಿಭಾಗದಿಂದ ಶವಸಂಸ್ಕಾರ ( ಮಯ್ಯತ್) ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಹಿರಾ ಸಭಾಂಗಣದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ಅನುಪಮ ಮಹಿಳಾ ಮಾಸಿಕದ ಸಂಪಾದಕ ಮಂಡಳಿಯ ಸದಸ್ಯೆ ಸಾಜಿದಾ ಮೂಮಿನ್ ಇವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಉತ್ತಮ ಮಾಹಿತಿಯನ್ನು ನೀಡಿದರು. ಶವ ಸಂಸ್ಕಾರವು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕಡ್ಡಾಯ ಕರ್ಮವಾಗಿದೆ. ಅದರಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡು ಪ್ರತಿಫಲವನ್ನು ಗಳಿಸಲು ಶ್ರಮಿಸಬೇಕು. ಇದನ್ನು ಪ್ರತಿಯೊಬ್ಬರು ಕಲಿಯಲು ಪ್ರಯತ್ನಿಸಬೇಕು ಎಂದು ಉಪದೇಶಿಸಿದರು. ಕಾರ್ಯಕ್ರಮದಲ್ಲಿ ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್. ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸಿಹಾನ ಬಿ.ಎಂ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಫಾತಿಮತ್ ಝವೀದ ಮತ್ತು ಶರೀಫ ಅಫ್ರ ಕಿರಾತ್ ಪಠಿಸಿದರು. ವಿದ್ಯಾರ್ಥಿನಿ ಫಾತಿಮತ್ ರಹೀಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ದೇರಳಕಟ್ಟೆ: ಕಾವೂರಿನ ಯಶ ಟ್ರಸ್ಟ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ದಳದ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಆಟಿಸಂ ಮಕ್ಕಳ ಕ್ರೀಡಾ ಕೂಟವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಯೆನೆಪೋಯ ದಂತ ವ್ಯೆದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ಶ್ಯಾಮ್ ಎಸ್. ಭಟ್ ಮುಖ್ಯ ಅತಿಥಿಯಾಗಿದ್ದರು. ಆಡಳಿತ ಟ್ರಸ್ಟ್ ನ ದುರ್ಗಾಲಕ್ಷ್ಮಿ ಹಾಗೂ ಸುನಿಲ್, ಕಾಲೇಜಿನ ಪ್ರಾಂಶುಪಾಲ ಡಾ. ತಾರಾ ರಾವ್, ಸುಧೀರ್ ಸಂಯೋಜನಾಧಿಕಾರಿ, ರೇಖಾ, ಆಟಿಸ್‍ಂ ಮಕ್ಕಳ ಪೋಷಕರು ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋದ್ಯಾಮ ಇಲಾಖೆಯಡಿ ಸಂಪರ್ಕ ಕಲ್ಪಿಸಿ ಪ್ರವಾಸೋದ್ಯಾಮ ಇಲಾಖೆಯಡಿ ಬರುವ ಅನುದಾನಗಳನ್ನು ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಕೊಣಾಜೆಯ ಶ್ರೀ ಉಳ್ಳಾಲ್ತಿ ಕ್ಷೇತ್ರವನ್ನು ಸಂಪರ್ಕಕ್ಕೆ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟು ರಸ್ತೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ಮಂಗಳೂರು ವಿವಿ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಶೇ. 80 ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದಂತೆ ಧಾರ್ಮಿಕ ಪ್ರವಾಸೋಧ್ಯಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸೋಧ್ಯಾಮ ಇಲಾಖೆಯಡಿ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಉಳ್ಲಾಲ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಕ್ಷೇತ್ರದ ಅರ್ಚಕರಾದ…

Read More