Author: UllalaVani

Kannada News From Coastal Karnataka

ಆಯುಷ್ಮಾನ್ ಭಾರತ್ ಹಾಗೂ ರಾಜ್ಯದ ಆರೋಗ್ಯ ಭದ್ರತಾ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಂದ ಯಾವುದೇ ಆಸ್ಪತ್ರೆ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡಿದರೆ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವ ಯು.ಟಿ. ಖಾದರ್ ಅವರ ಎಚ್ಚರಿಕೆ ಸ್ವಾಗತಾರ್ಹ ಮತ್ತು ಶ್ಲಾಘನೀಯ ಕ್ರಮವಾಗಿದೆ. ಭಾರತದ ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ಘನತೆಯಿಂದ ಬದುಕುವ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಈ ಹಕ್ಕಿನ ಭಾಗವಾಗಿ ಆರೋಗ್ಯ ಸೇವೆಗಳನ್ನು ಪಡೆಯುವ ಅವಕಾಶವೂ ಸೇರಿದೆ ಎಂದು ನ್ಯಾಯಾಲಯಗಳು ಹಲವು ಬಾರಿ ಸ್ಪಷ್ಟಪಡಿಸಿವೆ. ಆದ್ದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಅಥವಾ ಸಹಾಯಧನದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದಲ್ಲಿ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳು, ಆರೋಗ್ಯ ಆಯುಕ್ತರು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಸೇರಿದಂತೆ ಅನೇಕ ಅಧಿಕಾರಿಗಳು ಜನರ ಆರೋಗ್ಯ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.…

Read More

ಉಳ್ಳಾಲ ತಾಲೂಕು ವ್ಯಾಪ್ತಿಯ ಪಾವೂರು ಕಂಬ್ಲಪದವಿನಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು ಇದರ ಪೂರ್ವಭಾವಿಯಾಗಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಿತು. ಗೌರವ ಡಾಕ್ಟರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಕಚೇರಿಯನ್ನು ರಿಬ್ಬನ್ ಅರಳಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸುಂದರಣ್ಣ ಮತ್ತು ತನಗೆ ಹಲವು ವರ್ಷಗಳ ಸಂಬ0ಧ, ಬಂಧುವ ಚಾರಿಟೇಬಲ್ ಟ್ರಸ್ಟ್ ಗೆ ಅವರ ಸಹಕಾರ ನಿರಂತರವಾಗಿದೆ, ಹಾಗಾಗಿ ಮೂಕಾಂಬಿಕ ಚಾರಿಟೇಬಲ್ ಟ್ರಸ್ಟ್ ನ ರಚನೆ ಹಾಗೂ ಕ್ಷೇತ್ರ ನಿರ್ಮಾಣದ ಯೋಜನೆಗಳಿಗೆ ನೆರವಾಗುವ ಅವಕಾಶ ತನಗೂ ಒದಗಿ ಬಂತು, ಇಲ್ಲಿ ಹಿಂದೂ, ಮುಸ್ಲೀಂ, ಕ್ರೆöÊಸ್ತರು ಎಲ್ಲರೂ ಇದ್ದಾರೆ, ಇದು ಸುಂದರಣ್ಣನ ಆತ್ಮೀಯತೆ, ಸೌಹಾರ್ದತೆಗೆ ಸಾಕ್ಷಿ, ಮೂಕಾಂಬಿಕಾ…

Read More

ಉಳ್ಳಾಲ: ಪರಿಸರ ದಿನ ಪ್ರಯುಕ್ತ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ‘ಏಕ್ ಪೇಡ್, ಮಾಕೇ ನಾಮ್’ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಶಾಲಾ ಮಕ್ಕಳಿಂದ ಒಣಕಸ, ಹಸಿಕಣ ನಿರ್ವಹಣೆ, ಪ್ಲಾಸ್ಟಿಕ್ ನಿಂದ ಪರಿಸರ, ಮಾನವ, ಪ್ರಾಣಿ, ಪಕ್ಷಿಗಳಿಗಾಗುವ ಅನಾಹುತಗಳ ಬಗ್ಗೆ ಕನ್ನಡ ಅಕ್ಷರ ಮಾಲೆ ಅ ದಿಂದ ಅಃ ವರೆಗೆ ಶ್ಲೋಗನ್ ಬಳಸಿ ಮೈಮ್ ಪ್ರದರ್ಶಿಸಿದರು.ಅಧ್ಯಕ್ಷತೆ ವಹಿಸಿದ ಸಯ್ಯದ್ ಮದನಿ ದರ್ಗಾ ಪ್ರಭಾರ ಅಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಮಾತನಾಡಿ, ಶಿಕ್ಷಣಕ್ಕಾಗಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ತಿಂಗಳಿಗೆ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದ ಜೊತೆ ಪರಿಸರಕ್ಕೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.ಮಂಗಳೂರು ದಕ್ಷಿಣ ವಲಯ ಎಚ್‌.ಆರ್.ಈಶ್ವರ್ ಉದ್ಘಾಟಿಸಿ, ಮುಂದಿನ ದಿನಗಳಲ್ಲಿ ತಾಪಮಾನ ತಡೆಯಬೇಕಾದರೆ ಈಗಲೇ ಗಿಡಗಳನ್ನು ನೆಡಬೇಕು. ಮನೆಯ ಪರಿಸರಲ್ಲಿ ನೆಟ್ಟ ಗಿಡಗಳಿಗೆ ಮನೆಯವರ ಹೆಸರಿಟ್ಟು ಪೋಷಿಸಬೇಕು ಎಂದರು.ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ…

Read More

ಕೊಲ್ಯ:  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಆಯ್ಕೆಗೊಂಡ  ಕ್ಷೇತ್ರದ ಶಾಸಕ ಯು.ಟಿ.ಖಾದರ್‌ ಅವರನ್ನು  ಕೊಲ್ಯ  ಶ್ರೀರಾಮ ಭಜನಾ ಮಂದಿರದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಶ್ರೀರಾಮ ಭಜನಾಮಂದಿರ ಅಧ್ಯಕ್ಷರು ಪ್ರೀತಂ ಕೊಲ್ಯ, ಗೌರವಾಧ್ಯಕ್ಷರಾದ ತಾರನಾಥ್ ಗಟ್ಟಿ ಕೊಲ್ಯ , ಜಯಂತ್ ಕನೀರುತೋಟ, ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರು ವಿಶ್ವಥ್ ಕುಲಾಲ್ ಕೊಲ್ಯ, ಉಪಾಧ್ಯಕ್ಷರು ಚೇತನ್, ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ್, ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಮಾಜಿ ಅಧ್ಯಕ್ಷರು ಮತ್ತು ಮಲಯಾಳ ಚಾಮುಂಡಿ ದೈವಸ್ಥಾನ ಆಡಳಿತ ಮುಕ್ತೇಸರರು ಧನಂಜಯ ಗಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ನಯನ ಗಟ್ಟಿ ಕುತ್ತಾರ್ , ಅಭಿಜಿತ್ ಕುತ್ತಾರ್, ದೀಪಕ್ ಪೂಜಾರಿ, ಮನೀಶ್ ವೇಗಸ್, ಶೇಖರ್ ಕೊಲ್ಯ, ಶ್ರೀರಾಮ ಮಹಿಳಾ ಮಂಡಲ ಅಧ್ಯಕ್ಷೆ ಶಾರದ ಗಟ್ಟಿ ಕೊಲ್ಯ, ದೇವಕಿ ಕಾಸಿಂಬೆಟ್ಟು , ಚಂಚಲಾಕ್ಷಿ ಕೊಲ್ಯ, ದೇವಕಿ ಗಟ್ಟಿ ಕೊಲ್ಯ, ಜಯಂತಿ ಗಟ್ಟಿ ಕಾಸಿಂಬೆಟ್ಟು, ವೀಣಾ ಗಟ್ಟಿ ಕೊಲ್ಯ, ಕುಸುಮ ಕಾಸಿಂಬೆಟ್ಟು, ಶಶಿಪ್ರಭಾ ಗಟ್ಟಿ ಕುತ್ತಾರ್,…

Read More

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದಲ್ಲಿ ನಡೆಯುತ್ತಿರುವ ನೇತ್ರಾವತಿ ಡ್ಯಾಮ್ ಅಜೀರ್ ಉಳಿಯದಿಂದ ಪಾವೂರು ದೊಡ್ಡ ರಸ್ತೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಕುರಿತು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಸವಿಸ್ತಾರ ಮನವಿಯನ್ನು ಸಲ್ಲಿಸಿದ್ದು, ಕಾಮಗಾರಿಯ ತಾಂತ್ರಿಕ ಗುಣಮಟ್ಟ, ಸುರಕ್ಷತೆ, ಭೂಸ್ವಾಧೀನ, ಪರಿಸರ ನಿಯಮಗಳ ಪಾಲನೆ ಹಾಗೂ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಪಾವೂರು ಗ್ರಾಮದ ರಾಧಾಕೃಷ್ಣ ಪೂಜಾರಿ ಹಾಗೂ ಗ್ರಾಮಸ್ಥರ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನುಬದ್ಧತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಗ್ರಾಮಸ್ಥರ ಪ್ರಕಾರ, ರಸ್ತೆ ನಿರ್ಮಾಣವಾಗುತ್ತಿರುವ ಪ್ರದೇಶವು ನೇತ್ರಾವತಿ ನದಿಯ ತೀರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದ ನೀರಿನಿಂದ ಆವೃತವಾಗುವ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಯಾವುದೇ ರಕ್ಷಣಾ ಗೋಡೆ ಅಥವಾ ತಡೆಗೋಡೆ ನಿರ್ಮಿಸದೆ ಮಣ್ಣಿನ ರಸ್ತೆ ನಿರ್ಮಾಣ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಭವಿಷ್ಯದಲ್ಲಿ ಪ್ರವಾಹ ಅಥವಾ…

Read More

ಕಾಸರಗೋಡು, ಜೂನ್ 8: ಕನ್ನಡದ ಪ್ರಥಮ ರಾಷ್ಟ್ರಕವಿ ಎಂದೇ ಖ್ಯಾತರಾಗಿರುವ ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಕೇರಳ ಹಾಗೂ ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಕ್ರಮ ಕೈಗೊಂಡು ಟ್ರಸ್ಟ್ ಸಮಿತಿಯನ್ನು ಪುನರ್‌ರಚಿಸಬೇಕು ಎಂದು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ. ಅಂತರರಾಷ್ಟ್ರೀಯ ಬಹುಭಾಷಾ ವಿದ್ವಾಂಸ, ಸಾಕ್ಷ್ಯಚಿತ್ರ ನಿರ್ಮಾಪಕ ಹಾಗೂ ನಿರೂಪಣಾ ಸಾಹಿತ್ಯಕಾರ ಎಲ್.ಜಿ. ಜ್ಯೋತೀಶ್ವರ ಅವರು ಸಾಹಿತ್ಯ, ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳ ಕುರಿತ ಸಾಕ್ಷ್ಯಚಿತ್ರ ನಿರ್ಮಾಣದ ಪೂರ್ವ ಸಮೀಕ್ಷೆಗಾಗಿ ಜೂನ್ 2ರಂದು ಮಂಜೇಶ್ವರದ ರಾಷ್ಟ್ರಕವಿ ನಿವಾಸಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ದಶಕಗಳ ಹಿಂದೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಸಹಭಾಗಿತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಹೆಸರಿನಲ್ಲಿ ಟ್ರಸ್ಟ್ ಹಾಗೂ ಸಮಿತಿಯನ್ನು ರಚಿಸಿ ಕಾರ್ಯಾರಂಭ ಮಾಡಲಾಗಿದ್ದರೂ, ನಂತರದ ಅವಧಿಯಲ್ಲಿ ನಿರಾಸಕ್ತಿಯಿಂದ ರಾಷ್ಟ್ರಕವಿ ನಿವಾಸ, ಗ್ರಂಥ ಭಂಡಾರ, ಅತಿಥಿ ಗೃಹ ಹಾಗೂ ಸಭಾಂಗಣದ ಕಾಮಗಾರಿಗಳು ಪೂರ್ಣಗೊಳ್ಳದೇ ಉಳಿದಿವೆ ಎಂದು ವಿಷಾದ…

Read More

ಕ್ಯಾನ್ಸರ್ ಇಂದು ವಿಶ್ವದಾದ್ಯಂತ ಆತಂಕ ಮೂಡಿಸುತ್ತಿರುವ ಮಾರಕ ರೋಗಗಳಲ್ಲಿ ಒಂದಾಗಿದೆ. ಆದರೆ ಈ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ಪಡೆದು ಗುಣಮುಖರಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಅನಾರೋಗ್ಯಕರ ಆಹಾರ ಪದ್ಧತಿ, ತಂಬಾಕು ಮತ್ತು ಮದ್ಯಪಾನದ ವ್ಯಸನ, ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಪರಿಸರ ಮಾಲಿನ್ಯ ಮುಂತಾದ ಅಂಶಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿವೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ದೇಹದಲ್ಲಿ ಕಂಡುಬರುವ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಅತ್ಯಂತ ಮುಖ್ಯ. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಈ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳಿಗೆ ಒತ್ತು ನೀಡಬೇಕಾಗಿದೆ. ರೋಗದ ಮೂಲ ಕಾರಣಗಳನ್ನು ಪತ್ತೆಹಚ್ಚಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಮಯೋಚಿತ ತಪಾಸಣೆ ಮಾಡಿಸಿಕೊಂಡರೆ ಕ್ಯಾನ್ಸರ್‌ನಿಂದ ಉಂಟಾಗುವ…

Read More

ಉಳ್ಳಾಲ, ಜೂನ್ 8: ಗ್ರಾಮಸ್ಥರ ಒಗ್ಗಟ್ಟು ಮತ್ತು ಸಹಕಾರದಿಂದಲೇ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಒಂದು ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಅಂಬ್ಲಮೊಗರು ಗ್ರಾಮ ಇಂದು ನೀರು, ರಸ್ತೆ ಹಾಗೂ ವಿದ್ಯುತ್ ಸೌಲಭ್ಯಗಳಲ್ಲಿ ಸ್ವಾವಲಂಬಿಯಾಗಿರುವುದು ಸಂತಸದ ಸಂಗತಿ. ದ್ವೇಷಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿರುವ ಅಂಬ್ಲಮೊಗರು ಸಮಾಜವನ್ನು ದುಷ್ಟಶಕ್ತಿಗಳಿಂದ ಮುಕ್ತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಅಂಬ್ಲಮೊಗರು ಗ್ರಾಮದ ಕುಂಡೂರು ನುಸ್ರತುಲ್ ಇಸ್ಲಾಂ ಸಮಿತಿಯ ವತಿಯಿಂದ ಅಂಬ್ಲಮೊಗರು ಜಂಕ್ಷನ್‌ನಲ್ಲಿ ನಿರ್ಮಿಸಲಾದ ಕುಂಡೂರು ಜಮಾ ಮಸೀದಿ ಹಾಗೂ ಅಸ್ಸಯ್ಯಿದ್ ಮುಹಮ್ಮದ್ ರಿಫಾಯಿ ಅಲ್ ಬುಖಾರಿ ದರ್ಗಾದ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 15 ವರ್ಷಗಳಲ್ಲಿ ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ಇದೀಗ ಮಸೀದಿ ಹಾಗೂ ದರ್ಗಾಕ್ಕೆ ನಿರ್ಮಿಸಲಾದ ಭವ್ಯ ಪ್ರವೇಶ ದ್ವಾರ ಅಂಬ್ಲಮೊಗರು ಗ್ರಾಮದ ಕಿರೀಟದಂತಾಗಿದೆ. ಮುಂದಿನ ದಿನಗಳಲ್ಲಿ ಅಂಬ್ಲಮೊಗರು–ಬಜಾಲ್ ಸೇತುವೆ ನಿರ್ಮಾಣ ಯೋಜನೆಯನ್ನು ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

“ಉಳ್ಳಾಲ:ಕೋಟೆಕಾರ್ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಳಂಗರ ಸರಕಾರಿ ಕೆರೆಯ ಒಂದು ಭಾಗ ಪಾರ್ಶ್ವ ಕುಸಿದಿದೆ. ಇದರಿಂದ ಈ ಕೆರೆಯ ಸುತ್ತಮುತ್ತಲಿರುವ ಮನೆಗಳು ಅಪಾಯಕ್ಕೆ ಸಿಲುಕಿವೆ. ಇಲ್ಲಿನ ಅಬ್ಬುಲ್ ಖಾದರ್ ಎಂಬವರ ಮನೆ ಹೆಚ್ಚು ಅಪಾಯದಲ್ಲಿದೆ. ಈ ಬಗ್ಗೆ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅಹ್ಮದ್ ಅಜ್ಜಿನಡ್ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೊಳಂಗರದಲ್ಲಿರುವ ಈ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಕೆರೆಯ ಒಂದು ಬದಿ ಬಿರುಕುಬಿಟ್ಟಿದೆ ಎಂದು ಅಹ್ಮದ್ ಅಜ್ಜಿನಡ್ಕ ಮನವಿಯಲ್ಲಿ ತಿಳಿಸಿದ್ದಾರೆ,

Read More

ಮುನ್ನೂರು: ರಾಣಿಪುರ ನಿವಾಸಿ ಹಾಗೂ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ವೀಣಾ ಡಿಸೋಜಾ (49) ಅವರು ಜೂನ್ 7ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತಿ ಅರ್ಬನ್ ಡಿಸೋಜ, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವೀಣಾ ಡಿಸೋಜಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಉಳ್ಳಾಲ ಕಾಪಿಕಾಡ್‌ನ ಜಾನ್ ಬೇಕರಿಯ ಜಾನ್ ಡಿಸೋಜ ಅವರ ಪುತ್ರಿಯಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಜೂನ್ 9ರಂದು ಸಂಜೆ 4 ಗಂಟೆಗೆ ರಾಣಿಪುರದ ನಿವಾಸದಿಂದ ಹೊರಟು ರಾಣಿಪುರದ ಲೇಡಿ ಕ್ವೀನ್ ಆಫ್ ಯೂನಿವರ್ಸ್ ಚರ್ಚ್ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕುಟುಂಬಸ್ಥರು ಹಾಗೂ ಬಂಧು-ಬಳಗ ಪ್ರಾರ್ಥಿಸಿದ್ದಾರೆ. ಮೃತರ ಪುತ್ರಿ ವಿವಲ್‌ ಬಿಂದಿಯ ಡಿಸೋಜ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ಓರ್ವ ಪುತ್ರ ವಿನ್ಸ್ಟನ್‌ ಬ್ರಯಾನ್‌ ಡಿಸೋಜ ಅವರನ್ನು ಅಗಲಿದ್ದಾರೆ. *****************************ಉಳ್ಳಾಲವಾಣಿ ಕಾಳಜಿ ;ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ”ಕ್ಯಾನ್ಸರ್‌ನ್ನು…

Read More