UN NETWORKS
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಸಿ.ಎಸ್.ಸಿ., ಸೇವಾಸಿಂಧು ವಿ.ಎಲ್.ಇ ಸೊಸೈಟಿಯ ಸಭೆಯು ನಂತೂರಿನ ಬಬ್ಬುಸ್ವಾಮಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಅಧ್ಯಕ್ಷರಾಗಿ ರೋಹಿತ್ ಕಮಾರ್ ಕುತ್ತಾರ್ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ಹೇಮಚಂದ್ರ ಬಜ್ಪೆ, ಉಪಾಧ್ಯಕ್ಷರುಗಳಾಗಿ ಆಸೀಫ್ ಮಂಗಳೂರು, ಸರೀತಾ ಪುತ್ತೂರು, ಹೈದರ್ ಅಲಿ ಬೆಳ್ತಂಗಡಿ, ನವೀನ್ ಸುಳ್ಯ, ಶಿವಾನಂದ ಬಂಟ್ವಾಳ, ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಪಕ್ಷಿಕೆರೆ, ಜೊತೆ ಕಾರ್ಯದರ್ಶಿಗಳಾಗಿ ಡಾ.ಯಸ್ ಅಬೂಬಕರ್ ಆರ್ಲಪದವು, ಸುನೀಲ್ ಮಂಗಳೂರು, ಕೋಶಾಧಿಕಾರಿಯಾಗಿ ಪ್ರೀತೇಶ್ ಮಂಗಳೂರು, ಮಹಿಳಾ ಪ್ರತಿನಿಧಿಗಳಾಗಿ ನೀತಾ ಬೆಳ್ತಂಗಡಿ, ಚಂದ್ರಾವತಿ ಗಂಜಿಮಠ, ಪೂರ್ಣಿಮಾ ಹಳೆಯಂಗಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಶ್ರಫ್ ತಲಪಾಡಿ, ಪ್ರಸನ್ನ ಮಲ್ಯ, ಗೌತಮ್ ಕುಕ್ಯಾನ್, ರಘುವೀರ್ ಕಡಬ, ವಿಶ್ವಾಸ್, ಅಬ್ದುಲ್ ರಝಾಕ್ ಸುಳ್ಯ, ವಿನಯ್ ಕುಮಾರ್, ವಿಶಾಲ್ ಶೆಣೈ, ರೂಪಾನಂದ ದಾಸ್, ರಾಜೇಶ್ ಶೆಟ್ಟಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


