ಉಳ್ಳಾಲ: `ಉಳ್ಳಾಲ ದರ್ಗಾ’ ಎಂದೇ ಪ್ರಸಿದ್ಧವಾಗಿರುವ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಗಳ್‍ರವರ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ಒಂದು ತಿಂಗಳುಗಳ ಕಾಲ ನಡೆಯುವ ‘ಉಳ್ಳಾಲ ಉರೂಸ್’ ಗೆ ದರ್ಗಾ ಆಡಳಿತ ಮಂಡಳಿ ಸಿದ್ಧತೆ ನಡೆಸುತ್ತಿದ್ದು, ಪವಿತ್ರ ರಂಝಾನ್ ಉಪವಾಸ ಮುಗಿದ ತಕ್ಷಣ ಉರೂಸ್ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಿದ್ದು, 2021ರ ಅಕ್ಟೋಬರ್ 28ರಿಂದ ನ. 20ರವರೆಗೆ ಉಳ್ಳಾಲ ಉರೂಸ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಶನಿವಾರ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧಾರ್ಮಿಕ ಶ್ರದ್ಧಾಕೇಂದ್ರವಾಗಿ ದೇಶವಿದೇಶಗಳಿಂದ ಇಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. 2020ರಲ್ಲಿ ಉರೂಸ್ ಆಗಬೇಕಾಗಿದ್ದು ಕೋವಿಡ್ 19 ಹಿನ್ನಲೆಯಲ್ಲಿ ಉರುಸ್ ಕಾರ್ಯಕರಮವನ್ನು ಮುಂದೂಡಲಾಗಿತ್ತು ಇದೀಗ ಭಕ್ತಾ„ಗಳು ಉಳ್ಳಾಲ ಉರೂಸ್ ಕುರಿತ ಮಾಹಿತಿಗಾಗಿ ಕಾಯುತ್ತಿದ್ದು, ಉರೂಸು ನಡೆಯುವ 6 ತಿಂಗಳ ಮೊದಲೇ ಸಿದ್ಧತೆ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ದರ್ಗಾ ಸಮಿತಿ…
Author: UllalaVani
ಉಳ್ಳಾಲ: ಬಸ್ – ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ , ಇಬ್ಬರು ಗಾಯಗೊಂಡಿರುವ ಘಟನೆ ನಾಗುರಿ ಸಂಚಾರಿ ಠಾಣಾ ವ್ಯಾಪ್ತಿಯ ಕುತ್ತಾರು ಬಳಿ ಸಂಭವಿಸಿದೆ.ಪೊಳಲಿ ನಿವಾಸಿ ಮಹಮ್ಮದ್ ಶಾಫಿ (20)ಮೃತರು. ಸಹಸವಾರರಾದ ರಾಣಿಪುರ ನಿವಾಸಿ ಮಹಮ್ಮದ್ ಇಮ್ರಾನ್ (20) ಮತ್ತು ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಸೀನ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ.ರಾಣಿಪುರ ಕಡೆಗೆ ಗೆಳೆಯನ ಮನೆಗೆ ತೆರಳುತ್ತಿದ್ದಾಗ ಕುತ್ತಾರು ಕೊರಗಜ್ಜನ ಕಟ್ಟೆ ಬಳಿ ಓವರ್ ಟೇಕ್ ಮಾಡುವ ಧಾವಂತದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಶಾಫಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ . ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ: ಬಡ ವ್ಯಾಪಾರಿಗಳ ಅನುಕೂಲಕ್ಕಾಗಿ ಮತ್ತು ಗ್ರಾಹಕರ ಸ್ನೇಹಿ ವ್ಯವಸ್ಥೆಯಾಗಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಬಳಿ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಸ್ಥಾಪಿಸಲಾಗಿದೆ. ಪ್ರಧಾನಿ ಮೋದಿಯವರ ಕನಸಿನಂತೆ ಆತ್ಮನಿರ್ಭರ್ ಗೆ ಪೂರಕ ಮಾದರಿ ಯೋಜನೆಯಾಗಿದೆ ಎಂದು ಗ್ಲೋಬಲ್ ಕಮರ್ಷಿಯಲ್ ಸೆಂಟರ್ ನ ಅಬೂಬಕರ್ ಸಿದ್ದೀಖ್ ಹೇಳಿದರು.ತೊಕ್ಕೊಟ್ಟು ಕಲ್ಲಾಪು ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 5 ಎಕರೆ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ವ್ಯಾಪಾರ ಉದ್ಯಮಕ್ಕೆ ಬಳಸಲಾಗಿದೆ. ಅದರಲ್ಲಿ 200 ರಷ್ಟು ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹೊರ ಆವರಣದಲ್ಲಿ ರಖಂ ಮತ್ತು ಒಳಾಂಗಣದಲ್ಲಿ ಚಿಲ್ಲರೆ ಅಂಗಡಿಗಳಿರಲಿವೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ಗೆ ಬಳಸಲಾಗುವುದು. ವ್ಯಾಪಾರಿಗಳಿಗೆ ಕೈಗೆಟಕುವ ಬಾಡಿಗೆ ಆಧಾರದಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾದ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಪೆನ್ಸರಿ, ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯಗಳು ಇರಲಿವೆ.…
ಕುದ್ರೋಳಿ : ಕಾರ್ಯಗಾರದಲ್ಲಿ ಉತ್ತಮ ವಿಷಯಗಳು ಚರ್ಚೆಗೆ ಬರಲಿ. ಉತ್ತಮ ನಿರ್ಣಯಗಳು ಕೂಡಾ ಹೊರಬರುವ ಮೂಲಕ ಉಪನ್ಯಾಸಕರಿಗೆ ಯಶಸ್ವಿ ಕಾರ್ಯಗಾರವಾಗಿ ಮೂಡಿಬರಲಿ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ಚಂದ್ರ ಡಿ ಸುವರ್ಣ ಹೇಳಿದರು. ಅವರು ಕುದ್ರೋಳಿ ನಾರಾಯಣ ಗುರು ಕಾಲೇಜು , ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು, ಸಮಾಜಶಾಸ್ತ್ರ ಉಪನ್ಯಾಸಕರ ಸಂಘ ,ಮಂಗಳೂರು ಆಶ್ರಯದಲ್ಲಿ ನಗರದ ಕುದ್ರೋಳಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ಜರಗಿದ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮನೆಯಲ್ಲಿ ಪೆÇೀಷಕರು, ಶಾಲೆಯಲ್ಲಿ ಶಿಕ್ಷಕರು ಮುಂದಿನ ಪೀಳಿಗೆಯನ್ನು ಉತ್ತಮವಾಗಿ ಬೆಳೆಸುವಲ್ಲಿ ಜವಾಬ್ದಾರರಾಗಿರುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರ ಮಾತಿಗೆ ಹೆಚ್ಚಿನ ಗಮನ ಕೊಡುವವರು, ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಉಪನ್ಯಾಸಕರು ಶ್ರಮಿಸಬೇಕು. ಈ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಈಗಿನ ವಿದ್ಯಾರ್ಥಿಗಳಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರ, ಪರಂಪರೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಗೆ ಶಿಕ್ಷಕರೇ ಕಾರಣರಾಗಿರುತ್ತಾರೆ. ಸಿಲೆಬಸ್ ಮುಗಿಸುವ ಕೆಲಸವನ್ನಷ್ಟೇ ಶಿಕ್ಷಕರು ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಶಿಕ್ಷಕರು…
ಬಬ್ಬುಕಟ್ಟೆ: ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಉದ್ಯಮ ರಂಗಗಳ ಮುಂದಾಳು, ಪೆರ್ಮನ್ನೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರು , ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾದ ಬಬ್ಬುಕಟ್ಟೆ ಹೊಸಗದ್ದೆ ನಿವಾಸಿ ರಾಘವ ಪೂಜಾರಿ ಹೊಸಗದ್ದೆ (70) ಇವರು ಹೃದಯಾಘಾತದಿಂದ ಎ.6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮಂಗಳೂರು ತಾಲೂಕಿನ ಪೆರ್ಮನ್ನೂರು ಗ್ರಾಮದ ಹೊಸಗದ್ದೆ ಮನೆಯಲ್ಲಿ ದಿ. ತನಿಯಪ್ಪ ಪೂಜಾರಿ ಮತ್ತು ರತ್ನ ದಂಪತಿ ದ್ವಿತೀಯ ಪುತ್ರ. ಕೃಷಿಕ ಕುಟುಂಬದಲ್ಲಿ ಜನಿಸಿರುವ ಇವರು ಚಿಕ್ಕಂದಿನಲ್ಲಿಯೇ ಶ್ರಮಜೀವಿಯಾಗಿ ಕಾಯಕದಲ್ಲೇ ವಿಶ್ವಾಸವುಳ್ಳವರು.ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಅನುಯಾಯಿಯಾಗಿ ಗ್ರಾಮ ಪಂಚಾಯತ್ ನ ಚುನಾಯಿತ ಸದಸ್ಯರಾಗಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಹಲವಾರು ರೀತಿಯಲ್ಲಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದ ಓರ್ವ ಆದರ್ಶ ಕಾರ್ಯಕರ್ತರು. ಶೈಕ್ಷಣಿಕ ರಂಗದಲ್ಲಿ ಸಮಾಜದ ಏಳಿಗೆ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಯಂತೆ ಸರಕಾರಿ ಶಾಲೆಯ ನಿರ್ಮಾಣಕ್ಕೆ ಸ್ಥಳದಾನ ನಡೆಸಿ ಊರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ ಮಾಡಿ ಸಮಾಜದ ಹಲವು ಬಡ ವಿದ್ಯಾರ್ಥಿಗಳಿಗೆ ವಿದ್ಯೆ…
ಮಂಗಳೂರು: ನಗರದ ಪಾಂಡೇಶ್ವರ ಟಿ.ಎಂ.ಎ ಪೈ ಸಭಾಂಗಣದ ಎದುರುಗಡೆ ಕಟ್ಟಡ ನಿರ್ಮಾಣಕ್ಕಾಗಿ ಅಗೆಯಲಾದ ಹೊಂಡದ ನೀರಿನಲ್ಲಿ ಸಿಲುಕಿದ ಪಾರಿವಾಳವನ್ನು ಪರಿಸರವಾದಿಯೋರ್ವರ ಕರೆಗೆ ಓಗೊಟ್ಟು ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.ನಗರದ ಟಿಎಂಎ ಪೈ ಹಾಲ್ ಎದುರುಗಡೆ ಕಟ್ಟಡ ನಿರ್ಮಾಣಕ್ಕಾಗಿ ಬೃಹತ್ ಗಾತ್ರದ ಹೊಂಡವನ್ನು ಅಗೆದು ಸಮಯಗಳೇ ಆಗಿವೆ. ಆದರೆ ಹೊಂಡ ಪೂರ್ತಿ ನೀರಿನಿಂದ ತುಂಬಿದೆ. ಇಲ್ಲಿ ಸುತ್ತಾಡುತ್ತಿದ್ದ ಪಾರಿವಾಳ ನೀರಿಗೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ಒದ್ದಾಡಲು ಆರಂಭಿಸಿದೆ. ಇದನ್ನು ಗಮನಿಸಿದ ಪರಿಸರವಾದಿ ಶಶಿಧರ್ ಶೆಟ್ಟಿ ಅವರು ಕೂಡಲೇ ಪಾಂಡೇಶ್ವರ ಅಗ್ನಿ ಶಾಮಕ ದಳದ ಠಾಣೆಗೆ ಕರೆ ಮಾಡಿದ್ದಾರೆ. ಮೊದಲಿಗೆ ಕರೆ ಸ್ವೀಕರಿಸಿದ ಸಿಬ್ಬಂದಿ ಪಾರಿವಾಳ ರಕ್ಷಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೂ ಬಳಿಕ ದೂರವಾಣಿ ಮೂಲಕ ಸ್ಪಂಧಿಸಿದ ಸಿಬ್ಬಂದಿ ಕಿಶೋರ್ ಎಂಬವರು ತಕ್ಷಣಕ್ಕೆ ಸ್ಪಂಧಿಸುವ ಭರವಸೆ ನೀಡಿದ್ದರು. ಅಲ್ಲದೆ ಸ್ಥಳಕ್ಕೆ ದೌಡಾಯಿಸಿ ಹರಸಾಹಸ ಪಟ್ಟು ಪಾರಿವಾಳವನ್ನು ರಕ್ಷಿಸುವ ಮೂಲಕ ಕರ್ತವ್ಯದ ಜೊತೆಗೆ ಮಾನವೀಯತೆಯನ್ನು…
ಕುತ್ತಾರು : ಯೇನಪೋಯ (ಡಿಮ್ಡ್ ಟು ಬಿ ಯುವರ್ಸಿಟಿ)ಯ, ದಿ ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಆಸಿಸ್ಟೆಂಟ್ ಪ್ರೋಫೆಸರ್ ಹಾಗೂ ಆಸಿಸ್ಟೆಂಟ್ ಕಂಟ್ರೋಲರ್ ಆಫ್ ಎಗ್ಸಾಮಿನೇಶನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೀವನ್ ರಾಜ್ ರವರು, ಡಾ.ಗಾಂವ್ಕರ್ ಗೋಪಾಲಕೃಷ್ಣ ಎಂ.ರವರ ಮಾರ್ಗದರ್ಶನದಲ್ಲಿ ರಚಿಸಿದ “ಹೊಸ ಆರ್ಥಿಕ ನೀತಿ ಮತ್ತು ಶೈಕ್ಷಣಿಕ ವಲಯ: ದಕ್ಷಿಣ ಕನ್ನಡ ಜಿಲ್ಲೆಯನ್ನು ಅನುಲಕ್ಷಿಸಿ ಒಂದು ಅಧ್ಯಯನ”(New Economic Policy and Education Sector: A study with Reference to Dakshina Kannada District) ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ವಿಶ್ವ ವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಪ್ರಾಧ್ಯಾಪಕರಾಗಿ 11 ವರ್ಷಗಳ ಅನುಭವವುಳ್ಳ ಇವರು ಹಿಂದೆ ಸಂತ ಆಲೋಶಿಯಸ್ ಮತ್ತು ಕಣಚೂರು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.ಇವರು ಎಂ.ಕಾಮ್ ಪದವಿಯನ್ನು ಸೈಂಟ್ಆಲೋಶಿಯಸ್ ಕಾಲೇಜ್ ನಲ್ಲಿ ಪಡೆದಿದ್ದಾರೆ. ಯೇನಪೋಯ ವಿವಿಯ “ಉತ್ತಮ ಶಿಕ್ಷಕ -2019” ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ…
ಉಳ್ಳಾಲ: ಮನೆಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಮಗನ ಫೋನ್ ಸ್ವಿಚ್ ಆಫ್ ಆಗಿದೆ. ಆರೋಪಿ ಬಾಲಕ ಕಳವು ಕೃತ್ಯಗಳಲ್ಲಿ ಹಿಂದೆ ಭಾಗಿಯಾದವ, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹತ್ಯೆಗೀಡಾದ ಆಕೀಫ್ ತಂದೆ ಹನೀಫ್ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಆಕೀಫ್ ಗೆ ಆರೋಪಿ ಜೊತೆಗೆ ಮೊಬೈಲ್ ಅಂಗಡಿಯಲ್ಲಿ ಪರಿಚಯವಾಗಿತ್ತು. ಮನೆ ಸಮೀಪದ ಶಾಂತಿನಗರದ ಮನೆಯೊಂದರಲ್ಲಿ ಸಿಕ್ಕ ಸಿಸಿಟಿವಿ ದಾಖಲೆಯಂತೆ ಆಕೀಫ್ ಮನೆಯಿಂದ 8.45ಕ್ಕೆ ವೇಗವಾಗಿ ನಡೆದುಕೊಂಡು ಹೋಗುವ ದೃಶ್ಯಗಳು ಸೆರೆಯಾಗಿವೆ. ಆರೋಪಿ ಮನೆಗೆ ತಲುಪಲು ಕನಿಷ್ಟ 12 ನಿಮಿಷಗಳಾದರೂ ಬೇಕಿದೆ. ಮನೆಗೆ ತಲುಪಿ ಮೊಬೈಲ್ ಗೇಮ್ ಆಟವಾಡಲು ಅರ್ಧ ಗಂಟೆಯಾದರೂ ಬೇಕಿದೆ. ಆದರೆ 9.05ರ ವೇಳೆಗೆ ಆಕೀಫ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾಯಿ ಅಂಗಡಿಯಿಂದ ಅಕ್ಕಿ ತರಲು ಹೇಳಿರುವುದನ್ನು ನೆನಪಿಸಲು ಆಕೀಫ್ ಮೊಬೈಲಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಗಿತ್ತು. ಆರೋಪಿ ಬಾಲಕ ಅಪರಾಧ ಹಿನ್ನೆಲೆಯವ. ಹಲವು ಮೊಬೈಲುಗಳನ್ನು ಕಳವುಗೈದಿದ್ದು, ಇದಕ್ಕೆ ಆತನ ಮನೆಯಲ್ಲಿ ಹಲವು ಮೊಬೈಲುಗಳಿರುವುದು…
ಉಳ್ಳಾಲ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಲವ್ ಜಿಹಾದ್ ಗೆ ಕಾನೂನು ತರುತ್ತೇವೆ ಅಂತಾ ಹೇಳಿದವರು ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಸುಮ್ಮನಿದ್ದಾರೆ ಎಂದು ಮಾಜಿ ಸಚಿವ, ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.ನಗರದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಲವ್ ಜಿಹಾದ್ ಬಗ್ಗೆ ಸರ್ಕಾರ ಕಾನೂನು ಮಾಡಬೇಕು, ಕಾರ್ಯಕಾರಿಣಿ ಸಭೆಯಲ್ಲಿ ಲವ್ ಜಿಹಾದ್ ಕಾನೂನು ತರುತ್ತೇವೆ ಅಂತಾ ಹೇಳಿದ್ದರು ಆದರೆ, ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಆ ಬಗ್ಗೆ ಚಕಾರ ಎತ್ತುತ್ತಿಲ್ಲ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ . “ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ರಾತ್ರಿ ಮನೆಯಲ್ಲಿ ಮಲಗಲು ಹೆದರಿಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ನೈತಿಕ ಪೆÇೀಲಿಸ್ ಗಿರಿಗೆ ಅವಕಾಶ ಮಾಡಿಕೊಡಲಾಗಿದ್ದು, ಪೆÇಲೀಸ್ ಕ್ರಮ ಕೈಗೊಂಡರೆ ಪೆÇಲೀಸರ ವಿರುದ್ಧವೇ ದೂರು ಕೊಡುತ್ತಾರೆ” ಎಂದರು.ಇನ್ನು ಸುದ್ದಿಗೋಷ್ಠಿ ನಡೆಸಿ ಬಹಿರಂಗ ಎಚ್ಚರಿಕೆ ನೀಡುವ ಬಗ್ಗೆ ಪೆÇಲೀಸರು ಯಾಕೆ ಕ್ರಮ…
ಉಳ್ಳಾಲ: ಶಿವಾಜಿ ಫ್ರೆಂಡ್ಸ್ ಸರ್ಕಲ್ ಭಟ್ನನಗರ. ತೊಕ್ಕೊಟ್ಟು ಇದರ 2021-2022 ಸಾಲಿನ ಅಧ್ಯಕ್ಷರಾಗಿ ಸದಾನಂದ ಒಂಬತ್ತುಕೆರೆ ಆಯ್ಕೆಯಾಗಿದ್ದಾರೆ.ಫ್ರೆಂಡ್ಸ್ ಸರ್ಕಲ್‍ನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಹಮೀದ್ ಒಂಬತ್ತುಕೆರೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಕೃಷ್ಣನಗರ, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಭಟ್ನನಗರ, ಜೊತೆ ಕಾರ್ಯದರ್ಶಿಯಾಗಿ ಸು„ೀರ್ ತೊಕ್ಕೊಟ್ಟು , ಲೆಕ್ಕ ಪರಿಶೋಧಕರಾಗಿ ಚಂದ್ರಶೇಖರ ಬೋಳಾರ್, ಖಜಾಂಚಿಯಾಗಿ ವಾಸುಗಟ್ಟಿ. ಓವರ್‍ಬ್ರಿಡ್ಜ್ ತೊಕ್ಕೊಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಅಲ್ತಾಫ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಆನಂದ ಧರ್ಮನಗರ, ಸಮಿತಿ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ. ಪಿಲಾರ್ ಪ್ರಕಾಶನಗರ, ಯುವ ಅಧ್ಯಕ್ಷರಾಗಿ ಸುನೀಲ್ ತೊಕ್ಕೊಟ್ಟು , ಗೌರವ ಸಲಹೆಗಾರ ಕೇಶವ ಭಟ್ನನಗರ, ಶ್ರೀ ಕೊರಗಜ್ಜ ಶಿವಾಜಿ ಸಮಿತಿ.ಪ್ರಧಾನ ಅರ್ಚಕರಾಗಿ ಸುಧೀರ್ ಕೊಂಡಾಣ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯೆ ನಡೆಸಲಾಯಿತು.

