UN network ಉಳ್ಳಾಲ : ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ. ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಕಾರು ಆತನ ಮೇಲೆ ಹರಿದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
Author: UllalaVani
UN networks ಉಳ್ಳಾಲ: ಅಲ್-ಮಸ್ಜಿದುಲ್ ಜಾಮಿಉಲ್ ಅಮೀನ್ (401), ಹಝ್ರತ್ ಅಸ್ಸಯ್ಯಿದ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ, ಹಾಗೂ ನಜಾತುಸ್ವಿಬ್ಯಾನ್ ಮದ್ರಸ ಅಳೇಕಲ, ಉಳ್ಳಾಲ ಇದರ 2021-23ನೇ ಸಾಲಿನ ಅಧ್ಯಕ್ಷರಾಗಿ ಯು. ಎಸ್. ಹಂಝ ಹಾಜಿ ಆಯ್ಕೆಯಾದರು.ನೂತನ ಪಧಾದಿಕಾರಿಗಳ ಸಭೆ ಅ.29ರಂದು ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದರ ದುಆದೊಂದಿಗೆ ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ ಝಿಯಾರತ್ ಬಳಿಕ ನಡೆಯಿತು.ಹಂಗಾಮಿ ಅಧ್ಯಕ್ಷರಾದ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.ಪ್ರಧಾನ ಕಾರ್ಯದರ್ಶಿಯಾಗಿ ಯು.ಎ. ಅಬ್ದುಲ್ ರವೂಫ್ ಹಾಜಿ, ಕೋಶಾಧಿಕಾರಿಯಾಗಿ ಯು.ಎಸ್. ಅಬ್ದುರ್ರಹ್ಮತ್, ಉಪಾಧ್ಯಕ್ಷರಾಗಿ ಪುತ್ತು ಬಾವಾ ಹಾಜಿ, ಕಾರ್ಯದರ್ಶಿಯಾಗಿ ಮುಹಮ್ಮದ್ ತಾಜುದ್ದೀನ್, ಗೌರವ ನಿರ್ದೇಶಕರಾಗಿ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ, ಮಸ್ಜಿದ್ ಸಂಚಾಲಕರಾಗಿ ಯು.ಫಾರೂಕ್ , ಮದ್ರಸ ಸಂಚಾಲಕರಾಗಿ ಕೆ. ಮುಹಮ್ಮದ್ ಅಶ್ರಫ್ ಫ್ಲಾಟ್ ಸಂಚಾಲಕರಾಗಿ ಆಸಿಫ್ ಅಬೂಬಕ್ಕರ್ ಕಕ್ಕೆತೋಟ ಮತ್ತು ಮಸ್ಜಿದ್ ಉಪಸಮಿತಿ ಸದಸ್ಯರುಗಳಾಗಿ ಯು.ಸಿ. ಇಬ್ರಾಹೀಂ, ಯು.ಡಿ. ಅಶ್ರಫ್, ನವಾಝ್, ನಝೀರ್…
UN networks ಕೊಣಾಜೆ: ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಮರಿಕ್ಕಳ ಜಮಾಅತ್ ನಲ್ಲಿ 38 ವರ್ಷಗಳ ಕಾಲ ಅಧ್ಯಕ್ಷರಾಗಿಯೂ, ಖಾಝಿಯೂ ಆಗಿದ್ದ ತಾಜುಲ್ ಪುಖಹಾಅ ಬೇಕಲ್ ಉಸ್ತಾದರ ಪ್ರಥಮ ಆಂಡ್ ನೇರ್ಚೆಯು ಸೆಪ್ಟಂಬರ್ 19 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಮರಿಕ್ಕಳದಲ್ಲಿ ನಡೆಯಲಿದೆ.ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಕೊಡಂಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಖುನಾ ಖಾಝಿ ಮಾಣಿ ಉಸ್ತಾದ್,ಸಯ್ಯಿದ್ ಝೈನುಲ್ ಅಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಹುಸೈನ್ ಸಅದಿ ಕೆ.ಸಿ.ರೋಡ್,ಎಸ್.ಪಿ ಹಂಝ ಸಖಾಫಿ,ಅನಸ್ ಸಿದ್ದೀಕ್ ಸಖಾಫಿ ಬೆಂಗಳೂರು,ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ,ಮೌಲಾನಾ ಶಾಫಿ ಸಅದಿ ಬೆಂಗಳೂರು,ಎಸ್ ವೈ.ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ,ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ, ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ,ಪಿ.ಪಿ ಮಹಮ್ಮದ್ ಸಖಾಫಿ,ಕೆ.ಕೆ.ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ,ಮಹಮ್ಮದಲಿ ಸಖಾಫಿ ಸುರಿಬೈಲ್,ಅಲ್ ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ,ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ,ಸ್ಥಳೀಯ ಶಾಸಕ ಯು.ಟಿ ಖಾದರ್ ಹಾಗೂ ಸಾಮಾಜಿಕ, ಸಂಘಟನಾ ನಾಯಕರು…
UN networks ತಲಪಾಡಿ: ತಲಪಾಡಿ ವಿಜಯಬ್ಯಾಂಕ್ ಬಳಿಯಿರುವ ರೇಷನ್ ಅಂಗಡಿಯಲ್ಲಿ ರೇಷನ್ ಪಡೆಯಲು ಮಹಿಳೆಯರು ಸಾಲುಗಟ್ಟಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುಡುಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿ ಎದುರಾಗಿದೆ. ಬೆಳಿಗ್ಗೆ 9.30 ಕ್ಕೆ ಬಂದು ರೇಷನ್ ಅಂಗಡಿಯೆದುರು ನಿಂತಿರುವ ಮಹಿಳೆಯರಿಗೆ ಮಧ್ಯಾಹ್ನ 12.30 ಆದರೂ ರೇಷನ್ ದೊರೆತಿಲ್ಲ. 1.ಕಿ.ಮೀ ಉದ್ದ ಸಾಲು ಇದ್ದು ಸುಡುಬಿಸಿಲು, ಮಳೆಯ ನಡುವೆ ಎಲ್ಲರೂ ಚೀಲ ಹಿಡಿದು ನಿಲ್ಲುವಂತಾಗಿದೆ. ರೇಷನ್ ನೀಡುವವರಲ್ಲಿ ಕೇಳಿದಾಗ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಬೆಳಿಗ್ಗೆ ಅರ್ಧ ಗಂಟೆ ವೇಳೆ ಸರ್ವರ್ ಇತ್ತು, ಆನಂತರ ಹೋಗಿರುವ ಸರ್ವರ್ ವಾಪಸ್ಸು ಬಂದಿಲ್ಲ ಅನ್ನುತ್ತಾರೆ. ಅಲ್ಲದೆ ಗ್ರಾಹಕರು ಹೇಳುವ ಪ್ರಕಾರ ಹಿಂದಿನಿಂದಲೂ ಇದೇ ರೀತಿಯ ಸಮಸ್ಯೆ ರೇಷನ್ ಅಂಗಡಿಯಲ್ಲಿ ನಿರ್ಮಾಣವಾಗಿದೆ. ಎರಡು ದಿನಗಳಿಂದ ರೇಷನ್ನೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ವರ್ ಇಲ್ಲವೆಂದಾದಲ್ಲಿ ಅಂಗಡಿಗೆ ಶಟರ್ ಹಾಕಬಹುದಲ್ಲ. ಸುಮ್ಮನೆ ಕಾಯಿಸುವುದು ಏಕೆ? ಅನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಆಹಾರ ನಾಗರಿಕ ಸರಬರಾಜು ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಸರಿಪಡಿಸುವವರೆಗೇ ಶಟರ್ ಹಾಕಿ ಎಂದಿದ್ದಾರೆ.…
UN networks ಸೋಮೇಶ್ವರ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ 71 ನೇ ವರ್ಷದ ಜನ್ಮದಿನದ ಪ್ರಯುಕ್ತ ದೇ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಶಕ್ತಿಯನ್ನು ದೇವರು ತುಂಬಲಿ ಹಾಗೂ ಅವರಿಗೆ ದೀರ್ಘಾಯುಷ್ಯ ವನ್ನು ಕರುಣಲಿಸಲೆಂದು ಮಂಗಳೂರು ಮಂಡಲ ಮತ್ತು ಸೋಮೇಶ್ವರ ಮಹಾ ಶಕ್ತಿ ಕೇಂದ್ರ ದ ಪರವಾಗಿ ಶುಕ್ರವಾರದಂದು ಶ್ರೀ ಸೋಮನಾಥೇಶ್ವರ ದೇವಸ್ಥಾನ ಸೋಮೇಶ್ವರ ದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಪ್ರಧಾನ ಕಾರ್ಯದಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಡಿ ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಂಡಲ ಉಪಾಧ್ಯಕ್ಷ ಯಶವಂತ್ ಅಮೀನ್ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ರವಿಶಂಕರ್ ಸೋಮೇಶ್ವರ್, ಜೇತೇದ್ರ ಶೆಟ್ಟಿ ತಲಪಾಡಿ, ಆನಂದ್ ಶೆಟ್ಟಿ, ನವೀನ್ ಕುರ್ನಾಡು, ಪಕ್ಷದ ಮುಖಂಡರುಗಳಾದ ಸೀತಾರಾಮ್ ಬಂಗೇರ, ಚಂದ್ರಶೇಖರ್ ಉಚ್ಚಿಲ್,ಮೋಹನ್ ರಾಜ್ ಕೆ.ರ್, ಸ್ವಪ್ನ ಶೆಟ್ಟಿ, ಪುರುಷೋತ್ತಮ್ ಗಟ್ಟಿ, ರಮಣಿ…
UN networks ಉಳ್ಳಾಲ: ಬಿಜೆಪಿ ಆಡಳಿತದಲ್ಲಿರುವ ಸಂದರ್ಭ ಕಾಂಗ್ರೆಸ್ ನವರಿಗೆ ಪ್ರತಿಭಟನೆ ನಡೆಸಲು ಎತ್ತು ಆದರೂ ಸಿಕ್ಕಿದೆ. ಅದೇ ಕಾಂಗ್ರೆಸ್ ಆಡಳಿತದಲ್ಲಿರುತ್ತಿದ್ದರೆ ಎತ್ತುಗಳೆಲ್ಲ ಕಸಾಯಿಖಾನೆಯಲ್ಲಿರುತ್ತಿದ್ದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.ಮಂಗಳೂರು ಮಂಡಲ ಮಂಜನಾಡಿ ಮಹಾಶಕ್ತಿಕೇಂದ್ರದ ನರಿಂಗಾನ ಶಕ್ತಿಕೇಂದ್ರದ ತೌಡುಗೋಳಿ ಬೂತ್ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆದ ನಾಮಫಲಕ ಅನಾವರಣ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ, ಬಳಿಕ ತೌಡುಗೋಳಿ ಅಂಗನವಾಡಿ ಕೇಂದ್ರದ ಬಳಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಎತ್ತಿನಗಾಡಿಯಲ್ಲಿ ನಿಂತು ಪ್ರತಿಭಟಿಸಿರುವ ಮೂಲಕ ಕಾಂಗ್ರೆಸ್ ನ ಕೊಂಡಿ ಸಿದ್ಧರಾಮಯ್ಯನ ಕೈಯಲ್ಲಿರುವುದು ಸಾಬೀತಾಗಿದೆ. ಎತ್ತಿನಗಾಡಿಯ ಹಗ್ಗವನ್ನು ಸಿದ್ಧರಾಮಯ್ಯ ಹಿಡಿದುಕೊಂಡಿದ್ದರೆ, ಡಿಕೆಶಿ ಬೆತ್ತವನ್ನು ಹಿಡಿಯಲು ಮಾತ್ರ ಸೀಮಿತವಾಗಿದ್ದಾರೆ ಎಂದ ಅವರು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಇದೇ ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗೆದ್ದುಕೊಂಡಿದೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಮಹಾನಗರಪಾಲಿಕೆ ಫಲಿತಾಂಶಗಳು ಬಿಜೆಪಿ ಮುಂದಿನ ಇಪ್ಪತ್ತು ವರ್ಷ ಆಡಳಿತ ನಡೆಸಲಿದೆ ಎಂಬುದನ್ನು ಸೂಚಿಸಿದ್ದು ಸಿದ್ಧರಾಮಯ್ಯ…
UN networks ಉಳ್ಳಾಲ: ಶ್ರೀ ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಆಶ್ರಯದಲ್ಲಿ ನಡೆದ 38 ನೇ ವರ್ಷದ ಶ್ರೀ ವಿದ್ಯಾ ವಿನಾಯಕ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯಿಂದ ಹಿಡಿದು ವಿಸರ್ಜನೆವರೆಗೂ ಎಲ್ಲಾ ಸಮುದಾಯದವರು ಭಾಗಿಯಾಗುವ ಮೂಲಕ ಈ ಬಾರಿಯ ಗಣೇಶೋತ್ಸವ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕೆಥೋಲಿಕ್ ಸಮುದಾಯದವರೇ ಹೆಚ್ಚಿರುವ ಉಳ್ಳಾಲ ಹೊಯ್ಗೆಯ ಕಿಂಗ್ ಸ್ಟಾರ್ ಸೇವಾ ಸಮಿತಿ ಉಳ್ಳಾಲದ ಗಣೇಶೋತ್ಸವ ಕ್ಕೆ ಶುಭ ಕೋರಿದ್ದಲ್ಲದೆ, ಗಣೇಶ ವಿಗ್ರಹ ವಿಸರ್ಜನೆಯಲ್ಲಿ ಭಾಗವಹಿಸಿ ಬಳಿಕ ನಡೆದ ವಿಸರ್ಜನೆಯಲ್ಲಿ ಕಿಂಗ್ ಸ್ಟಾರ್ ನ ಸದಸ್ಯರೆಲ್ಲರೂ ಕೆರೆ ನೀರಿಗೆ ಇಳಿದು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.ಉತ್ಸವಕ್ಕೆ ಉಳ್ಳಾಲ ನಗರಸಭೆ ಸದಸ್ಯೆ ವೀಣಾ ಶಾಂತಿ ಡಿಸೋಜ, ನವೀನ್ ಡಿಸೋಜ, ರಿಯಾಝ್ ಮಂಗಳೂರು, ಪ್ರೇಮ್ ಪ್ರಕಾಶ್ ಡಿಸೋಜ, ಸಿರಿಲ್ ಜಾನ್ ಡಿಸೋಜ, ಶೈನಿ ಡಿಸೋಜ ಸ್ವಾಗತ ಕೋರಿದ್ದರು. ಕೋಮು ಸೂಕ್ಷ್ಮ ಪ್ರದೇಶ ಎಂದು ಕರೆಯಲ್ಪಡುತ್ತಿರುವ ಉಳ್ಳಾಲಕ್ಕೆ ಗಣೇಶೋತ್ಸವ ಉತ್ತಮ ವಾತಾವರಣವನ್ನು ನಿರ್ಮಿಸುವ ಮೂಲಕ ಶಾಂತಿಯ ಉಳ್ಳಾಲ ಎಂಬುದನ್ನು ಸಾಬೀತುಪಡಿಸಿದೆ ಎಂಬುದು ನಗರಸಭೆ ಸದಸ್ಯರ ಅಭಿಪ್ರಾಯವಾಗಿದೆ.ಉಳ್ಳಾಲ ಉಳಿಯ…
UN networks ಉಳ್ಳಾಲ: ಯುವತಿ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿಬಂದಿದ್ದು, ಉಳ್ಳಾಲದ ಮೀನುಗಾರರು ಮೃತದೇಹ ಸಮುದ್ರ ಸೇರುವುದನ್ನು ತಪ್ಪಿಸಿ ಹೊಯ್ಗೆಬಜಾರ್ ತೀರಕ್ಕೆ ತಲುಪಿಸಿದ್ದಾರೆ. ಸುಮಾರು 20-35 ರ ಒಳಗಿನ ಯುವತಿ ಮೃತದೇಹ ಇದಾಗಿದೆ. ಪ್ಯಾಂಟ್ ಹಾಗೂ ಟೀಶಟ್ ೯ ಧರಿಸಿದ್ದಳು. ಆತ್ಮಹತ್ಯೆ ಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ದೋಣಿಯವರು ಉಳ್ಳಾಲ ಉಳಿಯ ನಿವಾಸಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮೃತದೇಹವಿದ್ದ ಸ್ಥಳಕ್ಕೆ ತೆರಳಿ ಇಬ್ಬರು ಮೀನುಗಾರರು ಅದನ್ನು ಹಿಡಿದು ಹೊಯ್ಗೆಬಝಾರ್ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ದೋಣಿಯಲ್ಲಿ ಪ್ರೇಮ್ ಪ್ರಕಾಶ್, ಅನಿಲ್ ಮೊಂತೇರೋ ಇದ್ದರು. ಪಾಂಡೇಶ್ಬರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.
UN networks ಸೋಮೇಶ್ವರ : ಜಿಲ್ಲಾಡಳಿತದ ಆದೇಶದಂತೆ ಲಕ್ಷ ಲಸಿಕಾ ಮೇಳದನ್ವಯ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ನಡೆದ ಕೋವಿಡ್-19 ಲಸಿಕಾ ಶಿಬಿರದಲ್ಲಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಒಟ್ಟು 606 ನಾಗರಿಕರು ಪ್ರಯೋಜನವನ್ನು ಪಡೆದುಕೊಂಡರು. ಇದರಲ್ಲಿ ೧೧ ಮಂದಿ ಅನಾರೋಗ್ಯ ಪೀಡಿತರ ಮನೆಗೆ ಹೋಗಿ ಸಿಬ್ಬಂದಿ ಲಸಿಕೆಯನ್ನು ನೀಡಿದರು. ಶಿಬಿರದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ, ಹನುಮಾನ್ ನಗರ, ಕುಂಪಲ ಮತ್ತು ಕೊಲ್ಯಶಾರದಾ ಸಭಾ ಭವನ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ವಾರ್ಡುಗಳ ಮಾಜಿ ಸದಸ್ಯರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಹಾಗೂ ಉಚ್ಚಿಲ ರಹಮಾನಿಯಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಮಾಜಿ ಸದಸ್ಯರು, ಸಾರ್ವಜನಿಕರು, ಕೋಟೆಕಾರು ಆರೋಗ್ಯಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು.ಈ ಸಂದರ್ಭ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ವಿ ಆಳ್ವ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಕಂದಾಯ ನಿರೀಕ್ಷಕ ಸಿದ್ಧರಾಯ ಕಟ್ಟಿಮನಿ ಹಾಗೂ ಸಿಬ್ಬಂದಿ ಶ್ರೀನಾಥ್, ಸುಧಿನ್, ರೇಖಾ, ಸೌಮ್ಯಾ, ಶ್ರೇಯಸ್ ಹಾಗೂ ದೀಕ್ಷಾ…
UN networks ನಾಟೆಕಲ್ : ಕೋವಿಡ್ ಸೋಂಕಿನಿಂದ ಮೂರು ತಿಂಗಳ ನಂತರವೂ ಲಕ್ಷಣಗಳು ಇದ್ದಲ್ಲಿ ಅದು ದೀರ್ಘಕಾಲಿಕ ಕೊರೊನಾ ಎಂದು ಉಲ್ಲೇಖಿಸಬಹುದು. ಕೋವಿಡ್ ನಿಂದ ಬದುಕಲು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಭಾರತೀಯರ ಹೆಚ್ಚಿನವರ ಶ್ವಾಸಕೋಶ 1.5 ಲೀ. ಸಾಮರ್ಥ್ಯದ್ದಾಗಿದ್ದು, ಕೋವಿಡ್ ಎದುರಿಸಬೇಕಾದಲ್ಲಿ 5 ಲೀ. ಸಾಮರ್ಥ್ಯದ ಅಗತ್ಯತೆ ಇದೆ. ಅದನ್ನು ವೃದ್ಧಿಸುವಲ್ಲಿ ಫಿಸಿಯೋಥೆರಪಿಗಳು ರೋಗಿಗಳ ಗಮನ ಹರಿಸಬೇಕಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋಥೆರಪಿಸ್ಟ್, ದ ಇಂಡಿಯನ್ ಅಸೋಷಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ , ಇಂಟರ್ ನ್ಯಾಷನಲ್ ಅಫೇರ್ಸ್ ಇದರ ಮುಖ್ಯಸ್ಥ ಡಾ.ಅಲಿ ಇರಾನಿ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ಫಿಸಿಯೋಥೆರಪಿ ಕಾಲೇಜು ವತಿಯಿಂದ ವಿಶ್ವ ಫಿಸಿಯೋಥೆರಪಿ ದಿನ-2021 ಪ್ರಯುಕ್ತ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಕೋವಿಡ್ -19 ನಿರ್ವಹಣೆಯಲ್ಲಿ ಫಿಸಿಯೋಥೆರಪಿಗಳ ಪಾತ್ರ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮಂಗಳೂರಿನಲ್ಲಿ ಅಧಿಕ ಫಿಸಿಯೋಥೆರಪಿ ಕಾಲೇಜುಗಳು ಸ್ಥಾಪನೆಯಾಗಿವೆ . ಇಲ್ಲಿ ಇರುವ ಅರ್ಧದಷ್ಟು ಕಾಲೇಜುಗಳ…

