UN networks ಮಂಗಳೂರು: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವರ್ಷ ವಿಶೇಷವಾಗಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಮಂಗಳೂರಿನ ಕೇಂದ್ರೀಯ ರೈಲ್ವೆ ನಿಲ್ದಾಣದಲ್ಲಿ ಅತ್ತಾವರದ ಪ್ರತಿಷ್ಠಿತ ಸರೋಜಿನಿ ಮಧುಸೂದನ ಕುಶೆ ಕಾಲೇಜಿನ ವಿದ್ಯಾರ್ಥಿಗಳು ಕನ್ನಡದ ಮೂರು ಗೀತೆಗಳನ್ನು ಹಾಡುವುದರ ಮೂಲಕ ಕನ್ನಡದ ಡಿಂಡಿಮ ಮೊಳಗಿಸಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮ ,ನಿಸಾರ್ ಅಹ್ಮದ್ ರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನ ಸುಮಧುರವಾಗಿ ಪ್ರಸ್ತುತಪಡಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮೀಶ್ ಹೆಗಡೆ ಸೋಂದಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸ್ಟೇಶನ ಮಾಸ್ಟರ್ ಕಿಶನ್ ಮತ್ತಿತರರು ಸಹಕರಿಸಿ ಮಂಗಳೂರಿನ ರೈಲ್ವೇ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಆಗುತ್ತಿರುವುದರ ಕುರಿತು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕುಶೆ ಕಾಲೇಜಿನ ಉಪನ್ಯಾಸಕರಾದ ಪುಷ್ಪಾವತಿ, ಪವಿತ್ರ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಕುಶೆ ಸಂಸ್ಥೆಯಲ್ಲೂ ಮೊಳಗಿದ…
Author: UllalaVani
UN networks ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ. ಧರ್ಮನಗರ ನಿವಾಸಿ ಮುಕ್ತಾರ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ತೆರಳಿದ್ದರು. ಧರ್ಮನಗರದ ಮನೆಗೆ ತೆರಳಿದ್ದಾಗ ತಲವಾರು ಹಿಡಿದೇ ಹೊರಬಂದ ಮುಕ್ತಾರ್,ಅಲ್ಲಿಂದ ತಲವಾರು ತೋರಿಸುತ್ತಲೇ ಹತ್ತಿರದ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.ಪೊಲೀಸರು ಬೆನ್ನಟ್ಟಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಆದರೆ, ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಬೈಕಿನಲ್ಲಿದ್ದ ನಿಜಾಮುದ್ದೀನ್ ಪೊಲೀಸರು ಹಿಂಬಾಲಿಸಿ ಬಂದಿದ್ದನ್ನು ತಿಳಿದು ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ,…
UN networks ಕೊಣಾಜೆ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ , ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ ಬಿದ್ದಿದೆ. ಗಾಯಾಳು ಪ್ರಕಾಶ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವಾರ ಕೊಣಾಜೆ ಜಂಕ್ಷನ್ ನ ಕೊಣಾಜೆ ಸ್ಟೋರ್ಸ್ & ಸ್ವೀಟ್ಸ್ ಮಳಿಗೆಯ ಮಾಲಕ ಉಸ್ಮಾನ್ ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
UN networks ಕೊಣಾಜೆ: ಯುವಕನೋರ್ವ ಮನೆಯೊಳಗೆ ನೆಡಣುಬಿಗಿದು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಮೂಡಿಜೇರ ಸೈಟ್ ನಲ್ಲಿ ನಡೆದಿದೆ. ಕೊಣಾಜೆ ಸಮೀಪದ ನಾರಾಯಣ ಶೆಟ್ಟಿ ಎಂಬವರ ಪುತ್ರ ಮಹೇಶ್ ಶೆಟ್ಟಿ(35) ಆತ್ಮಹತ್ಯೆ ಮಾಡಿಕೊಂಡ ಯುವಕ . ಪ್ಲಂಬರ್ ಆಗಿದ್ದ ಮಹೇಶ್ ಶೆಟ್ಟಿ ಅವಿವಾಹಿತರಾಗಿದ್ದಾರೆ. ಓರ್ವನೇ ಪುತ್ರನಾಗಿರುವ ಇವರು ಮನೆಮಂದಿಗೆ ಆಧಾರವಾಗಿದ್ದರು. ಇಬ್ಬರು ಸಹೋದರಿಯರು ವಿವಾಹಿತರಾಗಿದ್ದಾರೆ. ತಾಯಿ ತನ್ನ ಸಹೋದರಿ ಮನೆಗೆ ತೆರಳಿದ್ದ ಸಂದರ್ಭ ಮಹೇಶ್ ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ಗೆಳೆಯರ ಜೊತೆಗೆ ಕ್ರಿಕೆಟ್ ಆಟವಾಡಿ ಮನೆಗೆ ಬಂದಿದ್ದ ಮಹೇಶ್, ಗೆಳೆಯರಿಗೆ ವಾಟ್ಸ್ಯಾಪ್ ನಲ್ಲಿ ಫಾರ್ವಡ್೯ ಮೆಸೇಜ್ ಗಳನ್ನು ಮಾಡಿದ್ದರು. ಆದರೆ ಸಂಜೆ 7 ರ ನಂತರ ಫಿನಾಯಿಲ್ ಸೇವಿಸಿ, ಅರ್ಧ ದೋಸೆ ತಿಂದು ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಕೊಣಾಜೆ ಪೊಲೀಸರು ಅದನ್ನು ಅನ್ಲಾಕ್ ನಡೆಸಿದ ಬಳಿಕವಷ್ಟೇ ಕಾರಣ ತಿಳಿದುಬರಲಿದೆ ಎನ್ನುತ್ತಾರೆ ಮಹೇಶ್ ಆಪ್ತ ವಲಯ.
UN networks ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಮಂಗಳೂರು ದಸರಾ ಮುಗಿಸಿ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾ.ಹೆ. 66ರ ಕೆ.ಸಿ ರೋಡ್ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿಗಳಾದ ಕೃಷ್ಣಪ್ರಸಾದ್ (26) ಮತ್ತು ಪ್ರಜೀತ್ (24) ಮೃತರು. ನಿನ್ನೆ ರಾತ್ರಿ ಯುವಕರಿಬ್ಬರು ದಸರಾ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಬೈಕ್ ಸ್ಕಿಡ್ ಆಗಿ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ. ಯುವಕರಿಬ್ಬರ ರಕ್ಷಣೆಗೆ ಧಾವಿಸಿದ ಕಾರು ಚಾಲಕನ ವಿರುದ್ಧವೇ ಸ್ಥಳೀಯರು ಆರೋಪಿಸಿದ್ದು, ಪೊಲೀಸರ ವಿಚಾರಣೆ ವೇಳೆ ಆತನ ತಪ್ಪಿಲ್ಲವೆಂದು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
UN networks ಮುಡಿಪು : ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕಾಲೇಜಿನಿಂದ ಬಂದು ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊರ್ವಳನ್ನು ಅಡ್ಡಗಟ್ಟಿ ಕಿರುಕುಳ ನೀಡಿ ಘಟನೆ ಮಂಗಳವಾರ ನಡೆದಿದ್ದು, ಘಟನೆಗೆ ಸಂಬಂದಿಸಿದಂತೆ ಕೊಣಾಜೆ ಪೊಲೀಸರು ಆರೋಪಿಯೊರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಬಂಧಿತ ಆರೋಪಿಯನ್ನು ಕಣ್ಣೂರು ನಿವಾಸಿ ಯಾಕೂಬ್ (43)ಎಂದು ಗುರುತಿಸಲಾಗಿದೆ. ಯುವತಿಯೋರ್ವಳು ಮದ್ಯಾಹ್ನ ಕಾಲೇಜು ಮುಗಿಸಿ ಮನೆ ಕಡೆಗೆ ಹೋಗುತ್ತಿದ್ದಾಗ ಯಾಕೂಬ್ ಅಡ್ಡಗಟ್ಟಿ ಆಕೆಯ ಕೈ ಎಳೆದು ಅಪ್ಪಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ., ಈ ಸಂದರ್ಭ .ಪ್ರತಿಭಟಿಸಿದ ಯುವತಿ ಆತನಿಂದ ತಪ್ಪಿಸಿ ಬೊಬ್ಬೆ ಹೊಡೆದು ಓಡಿ ಹೋಗಿದ್ದಳು. ಯುವತಿಯ ಬೊಬ್ಬೆ ಕೇಳಿದ ಗ್ರಾಮಸ್ಥರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದು ಕೊಣಾಜೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಎಲಿಯಾರ್ ಪದವು ಎಂಬಲ್ಲಿ ಆರೋಪಿ ಯಾಕೂಬ್ ನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN networks ಕುತ್ತಾರು: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಕುತ್ತಾರು ಕೊರಗಜ್ಜ ಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ ಅದರಲ್ಲಿ ಯಶಸ್ಸು ಕಂಡಿದ್ದರು. ಈ ಬಗ್ಗೆ ಮಂಗಳೂರಿನಲ್ಲಿರುವ ಕಲಾವಿದರಲ್ಲಿ ಹರಕೆ ಹೊತ್ತ ಕುರಿತು ತಿಳಿಸಿದ್ದು, ಅದರಂತೆ ಇಂದು ಎಲ್ಲರೂ ನಟಿ ರಕ್ಷಿತಾ ಜತೆಗೆ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ ಅದರಲ್ಲಿ ಯಶಸ್ಸು ಕಂಡಿದ್ದರು. ಈ ಬಗ್ಗೆ…
UN networks ಮುನ್ನೂರು: ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಪಂಚಾಯಿತಿಗೆ ಬಂದಿದ್ದು ಅಲ್ಲಿ ಇದ್ದ ಬಿ.ಜೆ.ಪಿ ಬೆಂಬಲಿತ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಆ ಮಹಿಳೆಯನ್ನು ನೇರ ಅಧ್ಯಕ್ಷರಾದ ವಿಲ್ಫ್ರೇಡ್ ಡಿ ಸೋಜರವರ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ಹೊರ ಬಂದಿದ್ದರು. ಈ ಸಂದರ್ಭ ಮಹಿಳೆಯೊಂದಿಗೆ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಾಬು ಶೆಟ್ಟಿ ಅಧ್ಯಕ್ಷರು ಬರುವವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತ ದೃಶ್ಯಾವಳಿ ಗ್ರಾ.ಪಂ ಸಿಸಿಟಿವಿಯಲ್ಲಿ ದಾಖಲಾಗಿದೆ. ತಪ್ಪಿತಸ್ಥನಿಗೆ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಡಿವೈಎಫ್ ಐ ನಿಯೋಗ ಮುನ್ನೂರು ಗ್ರಾಮದ ಅಧ್ಯಕ್ಷ ವಿಲ್ ಫ್ರೆಡ್ ಅವರಿಗೆ ಮನವಿ ಸಲ್ಲಿಸಿತ್ತು. ಇದೀಗ ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ…
UN netowrks ಕಿನ್ಯಾ: ಸಂಸ್ಥೆಗಳು ನಡೆಸಿದ ಶ್ರಮದಾನದ ಕಾಮಗಾರಿಗೂ ಗ್ರಾ.ಪಂ ಆಡಳಿತದಿಂದ ಬಿಲ್ ಪಾವತಿಸಲಾಗಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಕಿನ್ಯಾ ಗ್ರಾಮಸ್ಥರ ಆರೋಪಗಳ ನಡುವೆ ಗ್ರಾಮಸ್ಥರಿಲ್ಲದೆ ಅತಿ ಹೆಚ್ಚು ಖಾಲಿ ಖುರ್ಚಿಗಳ ಸಮ್ಮುಖದಲ್ಲೇ ಕಿನ್ಯಾ ಗ್ರಾಮ ಪಂಚಾಯತ್ 2021-22 ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಕಿನ್ಯಾ ವಾದಿತ್ತೈಬ ಸಭಾಂಗಣದಲ್ಲಿ ನಡೆಯಿತು. ಗ್ರಾಮಸ್ಥ ಸಿದ್ದೀಖ್ ಮಾತನಾಡಿ,ಶ್ರಮದಾನ ನಡೆಸಿ ವಾಟ್ಸ್ಯಾಪ್ ಮೂಲಕ ಪ್ರಚಾರವಾದ ಗ್ರಾ.ಪಂ ನಿಂದ ಕಾಮಗಾರಿಗಳಿಗೂ ಬಿಲ್ ಪಾವತಿಸಲಾಗಿದೆ. ಇದರಿಂದ ಗ್ರಾಮಸ್ಥರ ತೆರಿಗೆ ಹಣದಲ್ಲಿ ವಂಚನೆಗಳಾಗಿವೆ. ಗ್ರಾಮದಲ್ಲಿ ನಡೆದ ಬಹುತೇಕ ಶ್ರಮಾದಾನಗಳಿಗೆ , ಗ್ರಾ.ಪಂ ಬಿಲ್ ಪಾವತಿಸಿರುವುದು ಗೊಂದಲಕಾರಿ. ಈ ಬಗ್ಗೆ ಗ್ರಾ.ಪಂ ಆಡಳಿತ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಉತ್ತರಿಸಿದ ಗ್ರಾ.ಪಂ ಸದಸ್ಯ ತ್ವಾಹಾ, ದಾಖಲೆಗಳಿದ್ದರೆ ತೋರಿಸಿ, ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಸಂಘ ಸಂಸ್ಥೆಗಳು ಮಾಡಿರುವ ಶ್ರಮಾದಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ತಪ್ಪಲ್ಲ ಎಂದರು. ಪಿಡಿಓ ಉತ್ತರಿಸಿ, ಶ್ರಮಾದಾನಕ್ಕೆ ಗ್ರಾ.ಪಂನಿಂದ ಬಿಲ್ ಪಾವತಿ ಮಾಡಿರುವ…
UN networks ಹರೇಕಳ: ಹರೇಕಳದಲ್ಲಿ ಯೆನೆಪೋಯ ಸಂಸ್ಥೆ ಆರಂಭಿಸಿರುವ ಬೃಹತ್ ತ್ಯಾಜ್ಯ ನಿರ್ವಹಣೆ ಘಟಕ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಮಾದರಿ. ನಗರದಲ್ಲಿಯೂ ಇಂತಹ ನಿರ್ವಹಣೆ ಘಟಕವನ್ನು ಯಾವ ರೀತಿಯಾಗಿ ಸ್ಥಾಪಿಸಬಹುದಾದ ಚಿಂತನೆ ನಡೆಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಅಕ್ಷಿ ಶ್ರೀಧರ್ ಐಎಎಸ್ ಅಭಿಪ್ರಾಯಪಟ್ಟರು.ಅವರು ಹರೇಕಳ ಗ್ರಾಮದ ಎಲಿಯಾರುಪದವು ಮಲೆಕೆದು ಪರಿಸರದಲ್ಲಿ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕ `ಉವ್ರ್ವಿ’ ಯನ್ನು ಉದ್ಘಾಟಿಸಿ ಮಾತನಾಡಿದರು.ದಿನಕ್ಕೆ 10 ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಘಟಕ ಜಿಲ್ಲೆಯಲ್ಲೇ ಪ್ರಥಮ . ಖಾಸಗಿಯವರು ಮುತುವರ್ಜಿ ವಹಿಸಿ ನಡೆಸಿದಂತಹ ಯೋಜನೆ ಸಮಾಜಕ್ಕೆ ಪೂರಕವಾಗಲಿ. ನಗರದಲ್ಲಿಯೂ ಇಂತಹ ತ್ಯಾಜ್ಯ ಸಂಸ್ಕರಣಾ ಘಟಕದ ಅಗತ್ಯತೆ ಇದ್ದು, ಅದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತೇವೆ ಎಂದರು.ಪರಿಸರವಾದಿ ಜೀತ್ ಮಿಲನ್ ರೋಚ್ ಮಾತನಾಡಿ , ಖಾಸಗಿಯವರು ಇಷ್ಟು ದೊಡ್ಡ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಿರುವುದು ಶ್ಲಾಘನೀಯ. ತಾನು ರೂಪಿಸಿದ ಯೋಜನೆ ರೂಪುರೇಷೆಗೆ ಯೆನೆಪೋಯ ಸಂಸ್ಥೆ ಗೌರವ ನೀಡಿದೆ.…

