Author: UllalaVani

Kannada News From Coastal Karnataka

UN networks ಉಳ್ಳಾಲ: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಹಾಗೂ ಉಚ್ಚಿಲದಲ್ಲಿ 19 ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸಿಸಿಬಿ ಹಾಗೂ ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆ.ಸಿ.ರೋಡ್ ಮುಳ್ಳುಗುಡ್ಡೆ ನಿವಾಸಿ ಅಬ್ದುಲ್ ರಾಶಿಕ್(22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಝಿಕ್ ಬುಧವಾರ ಬೆಳಗ್ಗೆ ವೇಳೆ 14ರ ಹರೆಯದ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ತಲಪಾಡಿ ಅಲಂಕಾರ ಗುಡ್ಡೆಯಿಂದ ಕಾಲ್ನಡಿಗೆಯ ಮೂಲಕ ತಲಪಾಡಿ ಚೆಕ್ ಪೋಸ್ಟ್ ರಸ್ತೆಯಾಗಿ ಶಾಲೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ಆಕೆಯ ಕೈ ಎಳೆದು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಲ್ಲದೆ ಅದೇ ದಿನ ಬೆಳಗ್ಗೆ ಉಚ್ಚಿಲದಲ್ಲಿ ಕಾಲೇಜಿಗೆ ಹೋಗುತ್ತಿದ್ದ 19 ಹರೆಯದ ಯುವತಿಯೊಬ್ಬಳಿಗೆ ಯುವಕನೋರ್ವ ಕಿರುಕುಳ ನೀಡಿದ್ದ ಬಗ್ಗೆ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಎರಡೂ ದೂರಿನ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ…

Read More

UN networks ತೊಕ್ಕೊಟ್ಟು; ಲಾರಿ ಹಾಗೂ ಓಮ್ನಿ ನಡುವೆ ಅಪಘಾತ ನಡೆದ ಘಟನೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಕೇರಳ ಕಡೆಗೆ ಸರಕು ಸಾಗಾಟ ನಡೆಸುತ್ತಿದ್ದ ಲಾರಿಯ ಟಯರ್ ಫ್ಲೈಓವರ್ ನಲ್ಲಿ ಪಂಕ್ಚರ್ ಆಗಿತ್ತು. ಲಾರಿಯನ್ನು ಅಲ್ಲೇ ನಿಲ್ಲಿಸಿ ದುರಸ್ತಿ ನಡೆಸುತ್ತಿದ್ದ ಸಂದರ್ಭ ಹಿಂಬದಿಯಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರಿನ ಚಾಲಕನ ಗಮನಕ್ಕೆ ಬಾರದೆ ಲಾರಿ ಹಿಂಬದಿಗೆ ಢಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಘಟನೆಯಿಂದಾಗಿ ರಾ.ಹೆ 66 ರಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ನಾಗುರಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Read More

UN networks ಉಳ್ಳಾಲ: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಸ್ಕೂಟರಿನಲ್ಲಿ ಬಂದ ಕಿರಾತಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಲಪಾಡಿ ಅಲಂಕಾರುಗುಡ್ಡೆ ಬಳಿ ಇಂದು ಬೆಳಿಗ್ಗೆ ನಡೆದಿದೆ. ಕೋಟೆಕಾರು ಬಳಿಯ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ತಲಪಾಡಿ ಚೆಕ್ ಪೋಸ್ಟ್ ಬಳಿ ಬಸ್ಸು ಹತ್ತಲು ಒಳದಾರಿಯಾಗಿ ನಡೆಕೊಂಡು ಬರುವಾಗ ಘಟನೆ ನಡೆದಿದೆ. ವಿದ್ಯಾರ್ಥಿನಿ ಗಾಬರಿಗೊಂಡು ಬೊಬ್ಬಿಟ್ಟಾಗ ಸ್ಥಳೀಯರು ಜಮಾಯಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಸ್ಥಳೀಯರು ವಿದ್ಯಾರ್ಥಿನಿ ಗೆ ಧೈರ್ಯ ತುಂಬಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ತೆರಳಿ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳೀಯವಾಗಿ ಹಲವು ಕಾರ್ಖಾನೆಗಳಿಗೆ ವಲಸೆ ಕಾರ್ಮಿಕರು ಬಂದಿದ್ದು, ಅವರ ದಾಖಲೆಗಳನ್ನು ಪೊಲೀಸ್ ಠಾಣೆಯಲ್ಲಿ ಮಾಲೀಕರು ದಾಖಲಿಸಿರುವುದಿಲ್ಲ. ಅಲ್ಲದೆ ಈ ಭಾಗದಲ್ಲಿ ಇಂತಹ ಕೃತ್ಯಗಳು ಅನೇಕ ನಡೆಯುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ, ಕ್ರಮ ವಹಿಸಿಲ್ಲ ಅನ್ನುವ ಆರೋಪ ಕೇಳಿಬಂದಿದೆ. ಆರೋಪಿ ಕುರಿತ ಸಿಸಿಟಿವಿಯಲ್ಲಿ ದಾಖಲೆಯಿದ್ದು ಪೊಲೀಸರು ಪರಿಶೀಲನೆ…

Read More

UN networks ಕೊಂಡಾಣ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮುಂಡತ್ತಾಯ ದೈವಸ್ಥಾನದಲ್ಲಿ ಜೋರ್ತಿ ವಿದ್ವಾನ್‌ ಕುಂಬ್ಳೆ ಶೃಜೇಶ್‌ ಪೊದುವಾಳ್‌ ಮತ್ತು ಸತೀಶ್‌ ಪಣಿಕ್ಕರ್‌ ಊರ ಪರವೂರ ಭಕ್ತಾಧಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅಷ್ಠಮಂಗಲ ಪ್ರಶ್ನೆ ಚಿಂತನೆ ಇತ್ತೀಚೆಗೆ ನಡೆಯಿತು. ವೈಷ್ಣವಿ ಎಸ್.‌ ಆಚಾರ್ಯ ಸ್ವರ್ಣರಾಶಿ ಇಡುವ ಮೂಲಕ ಪ್ರಶ್ನೆ ಚಿಂತನೆ ಆರಂಭಿಸಲಾಯಿತು.ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಆರಂಭಗೊಂಡ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮಾರ್ಗದರ್ಶಕ ಡಾ.ಕಲ್ಲಡ್ಕ ಪ್ರಭಾಕರ್‌ ಭಟ್‌, ಸದಸ್ಯರಾದ ಗಿರಿಪ್ರಕಾಶ್‌ ತಂತ್ರಿ ಪೊಳಲಿ, ಸಂಜೀವ ಸೂಟರ್‌ಪೇಟೆ, ಗೋಪಾಲ್‌ ಕುತ್ತಾರ್‌, ಶೃಂಗೇರಿ ಶಂಕರ ಮಠ ಕೋಟೆಕಾರು ಇದರ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಈಶ್ವರ್‌ ಕಟೀಲ್‌, ಹಿರಿಯರಾದ ಸೀತಾರಾಮ ಬಂಗೇರ, ಲಕ್ಷ್ಮಣ ಅಬ್ಬಕ್ಕನಗರ, ಬಾಬು ಬಂಗೇರ ಉಳ್ಳಾಲ, ಗೋಪಾಲ ಶೆಟ್ಟಿ ಇನೋಳಿ, ಗಡಿಕಾರರಾದ ದೇವು ಶೆಟ್ಟಿ, ಮೋಹನ್‌ ದಾಸ್‌ ಭಂಡಾರಿ, ಗಡದಗುತ್ತು ರಘುನಾಥ್‌ ಶೆಟ್ಟಿ, ಭಗವತೀಶ ಉಚ್ಚಿಲ, ಪವಿತ್ರ…

Read More

ಉಳ್ಳಾಲ: ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಮಾಡುವ ಕಾರ್ಯ ದ.ಕ ಗ್ಯಾರೇಜ್ ಮಾಲಕರ ಸಂಘದಿಂದ ಆಗಿದೆ. ಗ್ಯಾರೇಜ್ ವ್ಯವಹಾರ ಎಂದಲ್ಲಿ ಅಭಿವೃದ್ಧಿ ಹೊಂದುವ ಕ್ಷೇತ್ರ ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಸವಾಲುಗಳು ಎದುರಾಗಲಿದೆ. ಅದರ ದುರಸ್ತಿ ತರಬೇತಿಯನ್ನು ಗ್ಯಾರೇಜ್ ಸಿಬ್ಬಂದಿಗೆ ನೀಡುವ ಕಾರ್ಯವಾಗಬೇಕಿದೆ ಎಂದು ಕಾಂಚನಾ ಮೋಟರ್ಸ್ ಸಂಸ್ಥೆ ಮಾಲೀಕ ಪ್ರಸಾದ್ ಕಾಂಚನ್ ಹೇಳಿದರು.ಅವರು ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ( ದ.ಕ ಮತ್ತು ಉಡುಪಿ ಜಿಲ್ಲೆ) ವತಿಯಿಂದ ಕಡೆಮೊಗರು ಸಂಘದ ಸಭಾಭವನದಲ್ಲಿ ಜರಗಿದ ವಾರ್ಷಿಕ ಮಹಾಸಭೆ-2020-21 ಕ್ಕೆ ಚಾಲನೆ ನೀಡಿ ಮಾತನಾಡಿದರು.900 ಗ್ಯಾರೇಜ್ ಮಾಲಕರನ್ನು ಹೊಂದಿರುವ ಸಂಘ ರಾಜ್ಯಕ್ಕೆ ಮಾದರಿ. ದ.ಕ ಜನತೆಯಲ್ಲಿ ಶಿಸ್ತನ್ನು ತೋರಿಸಿದ ಗ್ಯಾರೇಜ್ ಮಾಲಕರ ಸಂಘ,ಕೋವಿಡ್ ಸಂಧಿಗ್ಧ ಸಂದರ್ಭ ಮೂರು ವರ್ಷಗಳಿಂದ ಸ್ಪೇರ್ ಪಾಟ್9 ಪೂರೈಕೆಯಲ್ಲಿ ಕೊರತೆಯಾಗಿದೆ. ಜನವರಿ ತಿಂಗಳಿನಲ್ಲಿ ಎಲ್ಲವೂ ಹಿಂದಿನಂತೆ ಆಗುವ ವಿಶ್ವಾಸವಿದೆ. ಗ್ಯಾರೇಜ್ ಮಾಲೀಕರು ಈ ಸಂದರ್ಭ ಸಹಕರಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು (ದ.ಕ ಮತ್ತು ಉಡುಪಿ…

Read More

UN networks ಸೋಮೇಶ್ವರ :ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿ ಯುವತಿಯರಿಗೆ ಸೋಮೇಶ್ವರ ಪುರಸಭೆ ವತಿಯಿಂದ ರೂ. 500 ದಂಡ ವಿಧಿಸಲಾಯಿತು. ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗಿ ಕಂಡುಬಂದಿತ್ತು. ಈ ಕುರಿತು ಸೋಮೇಶ್ವರ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿದ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿತ್ತು. ಅಲ್ಲದೆ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನು ಹಾಕಲಾಗಿತ್ತು. ಆದರೂ ಪ್ರವಾಸಿಗರು ಪ್ಲಾಸ್ಟಿಕ್ ಹಾಕಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ರೂ.500 ದಂಡ ವಿಧಿಸಿ, ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿ ಮಾಲೀಕರಿಗೆ ನೋಟೀಸು ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ ತಿಳಿಸಿದ್ದಾರೆ.

Read More

UN networks ಉಳ್ಳಾಲ: ಭಾರತದ ಆರೋಗ್ಯ ಕ್ಷೇತ್ರ ಉತ್ತಮ ಸಾಧನೆಯ ಪಥದಲ್ಲಿದ್ದು, ಇಲ್ಲಿನ ವೈದ್ಯರು, ದಾದಿಯರು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ ಸರಕಾರದ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಡೈರೆಕ್ಟರ್ ಜನರಲ್ ಪೆÇ್ರ. ಡಾ. ಬಲರಾಂ ಭಾರ್ಗವ ಹೇಳಿದರು. ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ 11ನೇ ಘಟಿಕೋತ್ಸವದಲ್ಲಿ ಪ್ರಮುಖ ಭಾಷಣ ಮಾಡಿದರು.ಬಾಹ್ಯಾಕಾಶ ಸಂಶೋಧನೆ, ಸಶಸ್ತ್ರ ಪಡೆ, ಮೊಬೈಲ್, ಪರಮಾಣು ಶಕ್ತಿಗಳ ತಂತ್ರಜ್ಞಾನದಲ್ಲಿ ಭಾರತ ಅಂತರಾಷ್ಟ್ರೀಯವಾಗಿ ಮುಂಚೂಣಿಯಲ್ಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದ ಸಂದರ್ಭ ಆಹಾರದ ಕೊರತೆಯುಂಟಾಗಿತ್ತು. ಅವೆಲ್ಲವನ್ನು ಮೆಟ್ಟಿ ನಿಂತ ದೇಶ ಹಸಿರು ಕ್ರಾಂತಿ ಮೂಲಕ ವಿಶ್ವಕ್ಕೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವಂತಹ ದೇಶವಾಗಿ…

Read More

Un networks ಹರೇಕಳ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಇವರನ್ನು ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸೀ ಗೌಡ ಶನಿವಾರ ಹರೇಕಳದ ನ್ಯೂಪಡ್ಪು ಮನೆಯಲ್ಲಿ ಭೇಟಿ ಮಾಡಿದರು. ಶನಿವಾರ ಬೆಳಿಗ್ಗೆ 9 ರ ವೇಳೆಗೆ ಭೇಟಿ ನೀಡಿದ ತುಳಸಿ ಗೌಡ ಹಾಜಬ್ಬರ ಜೊತೆ ಉಪಹಾರ ಸ್ವೀಕರಿಸಿದರು. ಈ ಸಂದರ್ಭ ಹರೇಕಳ ಗ್ರಾಮಸ್ಥರಿಂದ ತುಳಸಿ ಗೌಡ ಇವರನ್ನು ಅಭಿನಂದಿಸಲಾಯಿತು.

Read More

UN networks ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ನಡೆಸುವ 13 ನೇ ವರ್ಷದ ಗೂಡುದೀಪ ಸಂಗಮ ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯು ನ. 11 ರಂದು ಸಂಜೆ 5.30 ಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದರು ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಾಂಪ್ರದಾಯಿಕ ವಿಭಾಗ, ಆಧುನಿಕ ಮತ್ತು ಪ್ರತಿಕೃತಿ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಥಮ , ದ್ವಿತೀಯ, ತೃತೀಯ ನಗದು ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಇದೇ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಚ್ಚಿಲತ್ತಾಯ ನೀಲೇಶ್ವರ ತಂತ್ರಿ ವಹಿಸಲಿದ್ದಾರೆ. ಈ ಬಾರಿಯ ಭಗತ್ ಸಿಂಗ್ ಸಾಧಕ ಪ್ರಶಸ್ತಿಯನ್ನು ಸಮಾಜಸೇವಕ ಹಾಗೂ ಮನಪಾ ಸದಸ್ಯ ಗಣೇಶ್ ಕುಲಾಲ್ ಅವರಿಗೆ ಪ್ರಧಾನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ…

Read More

ಮಡಂತ್ಯಾರು : ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ನೋವಾ ಪ್ಲಾಝಾದಲ್ಲಿ ` ಟೆಡ್ಡಿ ಸುಪರ್ ಮಾರ್ಟ್’ ಇದರ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲು ಇಲ್ಲಿನ ಪ್ರಧಾನ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಶನಿವಾರ ಉದ್ಘಾಟಿಸಿದರು.ಮಡಂತ್ಯಾರು ಗ್ರಾಮೀಣ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ದಿನಬಳಕೆ ವಸ್ತುಗಳೆಲ್ಲವೂ ಇರುವಂತಹ ಸುಪರ್ ಮಾರ್ಟ್ ಚಂದ್ರ ಪೂರ್ಣಚಂದ್ರನಾಗಿ ಬೆಳಗುವಂತೆ ಇನ್ನಷ್ಟು ಪ್ರದೇಶಗಳಲ್ಲಿಯೂ ಇಂತಹ ಮಾರುಕಟ್ಟೆ ಶುಭಾರಂಭಗೊಳ್ಳಲಿ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವಂತಾಗಲಿ ಎಂದು ಶುಭಹಾರೈಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಶ್ರೀ ಕ್ಷೇತ್ರ ಪಣೋಲಿಬೈಲ್ ಇಲ್ಲಿನ ಪ್ರಧಾನ ಅರ್ಚಕ ನಾರಾಯಣ ಮೂಲ್ಯ , ಮಾಜಿ ಶಾಸಕ ವಸಂತ ಬಂಗೇರ, ಕಟೀಲು ಹೊಟೇಲ್ ಸೌಂದರ್ಯ ಪ್ಯಾಲೇಸ್ ಮತ್ತು ಸೌಂದರ್ಯ ರೆಸಾರ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸೌಂದರ್ಯ ರಮೇಶ್, ಜಿ.ಪಂ ಮಾಜಿ ಸದಸ್ಯರುಗಳಾದ ಪದ್ಮಶೇಖರ್ ಜೈನ್, ತುಂಗಪ್ಪ ಬಂಗೇರ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಶಶಿಪ್ರಭಾ ಮುಖ್ಯ ಅತಿಥಿಗಳಾಗಿದ್ದರು.ಸಚ್ಚ್ ಪ್ರಾಪರ್ಟಿಸ್ ಮಾಲಕ ಕಿರಣ್ ಬಿ.ಎನ್, ನಗರ ಮತ್ತು ಗ್ರಾಮಾಂತರ ಯೋಜನೆ…

Read More