UN networks
ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಸಿಬಿಝೆಡ್ ಬೈಕನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದೆ ಹಲವು ದಿನಗಳಿಂದ ಬೈಕ್ ರಸ್ತೆ ಬದಿಯಲ್ಲೇ ಉಳಿದಿತ್ತು.


ತೊಕ್ಕೊಟ್ಟು ಒಳಪೇಟೆಯಲ್ಲಿ ಫ್ಯಾನ್ಸಿ ಅಂಗಡಿ ಮುಂಭಾಗದಲ್ಲಿ ಒಂದು ವಾರದಿಂದ ಸಿಬಿಝೆಡ್ ಬೈಕ್ ನಂಬರ್ ಪ್ಲೇಟ್ ಇಲ್ಲದೇ ನಿಲ್ಲಿಸಲಾಗಿತ್ತು. ಗೇರ್ ಲಿವರ್ , ಸೈಡ್ ಸ್ಟ್ಯಾಂಡ್ ಇಲ್ಲದೇ ಬೈಕನ್ನು ಕಳವುಗೈದು ತಂದು ನಿಲ್ಲಿಸಿರುವ ಸಾಧ್ಯತೆ ಇದೆ. ಅಥವಾ ಅಪರಾಧ ಕೃತ್ಯಕ್ಕೆ ಬಳಸಿ ಬಳಿಕ ಇಟ್ಟು ತೆರಳಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಕ್ಲಿಕ್ ಸಭಾಂಗಣದಲ್ಲಿ ತೊಕ್ಕೊಟ್ಟು ಒಳಪೇಟೆಯ ವರ್ತಕ ಸಂಘದವರು ಪೊಲೀಸ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


