Author: UllalaVani

Kannada News From Coastal Karnataka

UN networks ಮಂಗಳೂರು: ತುಂಬು ಗರ್ಭಿಣಿಗೆ ಸೀಮಂತ ಮಾಡುವುದು ಸಾಮಾನ್ಯ. ಆ ಹೊತ್ತಲ್ಲಿ ಹೆಣ್ಣಿನ ಬಯಕೆ ತೀರಿಸಿ ಖುಷಿ ಪಡಿಸೋದು ನಡೆದುಕೊಂಡು ಬಂದ ಸಂಪ್ರದಾಯ. ‌ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತ ಮಾಡಿ ಸುದ್ದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ಸೀಮಂತದ ಫೋಟೋ, ವೀಡಿಯೋ ವ್ಯೆರಲ್ ಆಗಿದೆ‌. ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳಾ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ. ತಮ್ಮ ಮನೆಯಲ್ಲಿ ಸಾಕಿದ್ದ ಒಂದೂವರೆ ವರ್ಷದ ಶಾಡೊ ಎಂಬ ಗರ್ಭಿಣಿ ನಾಯಿಗೆ ಹಸಿರು ಬಳೆ , ಹಸಿರು ಸೀರೆ , ಕುಂಕುಮ, ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು, ಐಸ್ ಕ್ರಿಂ, ಸಿಹಿತಿನಿಸು ಕೂಡ ನೀಡಿದ್ದಾರೆ. ಸೀಮಂತ ನಡೆಯುವ ವೇಳೆ ಶ್ವಾನ ಶಾಂತತೆಯಿಂದ ಕುಳಿತಿರುವ ದೃಶ್ಯ ವ್ಯೆರಲ್ ಆಗಿದೆ. ಅಲ್ಲದೇ ಸೀಮಂತದ ಜೊತೆ ನಾಯಿಯ ಮೆಟರ್ನಿಟಿ ಶೂಟ್ ಕೂಡ ಮಾಡಲಾಗಿದ್ದು, ಈ ಮುದ್ದಾದ…

Read More

ContentBook Of Ra CasinosBook Of Ra More Chillis Tricks 2022Book Of Ra TricksGenau so wie Funktioniert Book Of Ra Wirklich? Wohl bekannt sein es nicht alleine nochaus diesseitigen Spielhallenbezwecken nun unumgänglich nachfolgende on the internet Adaptation inside Book of Ra verführen. Unser vorzeigen diese RTP jedes Slots, wahrscheinlich im innersten pauschal angeschaltet einer Stelle an, sodass man diverse Werte kollationieren konnte. Laien kennen angewandten RTP Warteschlange immer wieder getürktschleppen ihn je diese Wahrscheinlichkeit, via ein ein großer Gewinndas Jackpot lift.

Read More

UN NEWS NETWORKSಉಳ್ಳಾಲ: ಶಾರೀರಿಕ, ಮಾನಸಿಕ, ಸಾಮಾಜಿಕ , ಆಧ್ಯಾತ್ಮಿಕ ನೆಲೆಯಲ್ಲಿ ಕ್ರೀಡೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಸುಖ ಶಾಂತಿ ನೆಮ್ಮದಿಗೆ ಯಾವುದಾದರೂ ಕ್ರೀಡೆಯಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಅವರು ದ.ಕ – ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಉಳ್ಳಾಲ ವಲಯದ ಆಶ್ರಯದಲ್ಲಿ ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಮೈದಾನದಲ್ಲಿ ಭಾನುವಾರ ಜರಗಿದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ-2022 ನ್ನು ಉದ್ಘಾಟಿಸಿ ಮಾತನಾಡಿದರು.ದಿ ಮೈಸೂರ್‌ ಇಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್‌ ಲಿ. ಮಾಜಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಮಾತನಾಡಿ, ಛಾಯಗ್ರಾಹಕರಲ್ಲಿನ ಒಗ್ಗಟ್ಟು ಕಂಡಾಗ ಶಾಸಕರ ಚುನಾವಣೆಗೆ ತಮ್ಮಲ್ಲಿ ಯಾರಾದರೂ ನಿಂತಲ್ಲಿ ಗೆಲುವು ಖಂಡಿತ. ಕೊರೊನಾ ಸಂಕಷ್ಟದಲ್ಲಿ ಸಿಲುಕಿದವರು ಛಾಯಾಗ್ರಾಹಕರು.ಅದನ್ನೆಲ್ಲವನ್ನು ಹಿಮ್ಮೆಟ್ಟಿ ಬೆಳೆದು ನಿಂತವರು ಎಲ್ಲರಿಗೂ ಸ್ಫೂರ್ತಿ. ಆಯೋಜನೆಗೊಂಡ ಕ್ರೀಡಾಕೂಟ ಎಲ್ಲರಿಗೂ ಮಾದರಿಯಾಗಲಿ ಎಂದರು.ಎಂಸಿಎಫ್ ಡಿಜಿಎಂ ಕೀರ್ತನ್ ಕುಮಾರ್ ಕಾರ್ಕಳ ಮಾತನಾಡಿ, ಕ್ರೀಡಾಕೂಟ ಸಾಮರಸ್ಯದ ಕೇಂದ್ರವಾಗಬೇಕು. ಎಲ್ಲರೂ ಜತೆಗೂಡಿ ನೆರೆಯುವಾಗ…

Read More

UN NEWS NETWORKSಉಳ್ಲಾಲ: ಚುನಾವಣೆ ಸಂದರ್ಭ ವಿವಿಧ ಸುಳ್ಳು ಘೋಷಣೆಗಳನ್ನು ಎಲ್ಲರೂ ಮಾಡುತ್ತಾರೆ, ಕಳೆದ ಬಾರಿ ಸಿದ್ಧರಾಮಯ್ಯ ತಾಳಿಭಾಗ್ಯವನ್ನು ಘೋಷಣೆ ಮಾಡಿದ್ದರು. ಗಂಡ ಮಾಡುವ ಕೆಲಸವನ್ನು ಸಿದ್ಧರಾಮಯ್ಯ ಮಾಡಿದರೆ ಇನ್ನು ಗಂಡ ಯಾಕೆ?. ಮುಂದಕ್ಕೆ ಮಂಚ ಭಾಗ್ಯವನ್ನೂ ಕೊಡುವ ಘೋಷಣೆ ಮಾಡುತ್ತಿದ್ದರು ಏನೋ? ಎಲ್ಲವನ್ನೂ ಸರಕಾರ ಕೊಟ್ಟರೆ ಮತ್ತೆ ಜನ ಯಾಕೆ ಎಂದು ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಲೇವಡಿ ಮಾಡಿದ್ದಾರೆ. ಅವರು ಶನಿವಾರ ರಾಜಾರಾಂ ಭಟ್ ಅವರ ನೆರವಿನ ಆಸರೆ ಯೋಜನೆಯಡಿಯಲ್ಲಿ ಬಾಳೆಪುಣಿಯ ಕುಕ್ಕುದಕಟ್ಟೆ ಸೈಟ್‌ ನಲ್ಲಿ ದಿ.ಶರಣಪ್ಪ ಅವರ ಕುಟುಂಬಕ್ಕೆ ನಿರ್ಮಿಸಿದ ಎರಡನೇ ಮನೆಯ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಧರ್ಮ ಪ್ರಜ್ಞೆಯ ಮೂಲಕ ನಮ್ಮ ಸಮಾಜ ಬೆಳೆಯಬೇಕಿದೆ. ಬಡವರಿಗೆ ಮನೆ ನಿರ್ಮಾಣದ ಕಾರ್ಯ ಪುಣ್ಯದ ಕಾರ್ಯವಾಗಿದೆ. ರಾಜಾರಾಂ ಭಟ್ ಅವರು ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಬಡವರಿಗೆ ಮನೆ ನಿರ್ಮಾಣದ ಪುಣ್ಯದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಇಂತಹ ಪವಿತ್ರವಾದ ಕಾರ್ಯ‌ ಸಮಾಜಕ್ಕೆ ಮಾದರಿ…

Read More

UN networks ಉಳ್ಳಾಲ: ಲಾರಿ ಢಿಕ್ಕಿ ಹೊಡೆದು ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯ ಕಾರ್ಮಿಕ ಮೃತಪಟ್ಟಿರುವ ಘಟನೆ ನಿನ್ನೆ ಸಂಭವಿಸಿದೆ. ಮೂಲತ: ಬೆಂಗ್ರೆ ನಿವಾಸಿ ಕಲ್ಲಾಪು ನಾಗನಕಟ್ಟೆ ಹಿಂಬದಿ ಬಾಡಿಗೆ ಮನೆಯ ನಿವಾಸಿ ನಿಯಾಝ್ ಬಾವಾ(51)ಮೃತರು. ಮಾರುಕಟ್ಟೆಗೆ ಹೋಗಲು ರಸ್ತೆ ದಾಟುವ ವೇಳೆ ಕೇರಳ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN networks ಉಳ್ಳಾಲ: ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ವಿವಿಧ ಯೋಜನೆಗಳ ಉದ್ಘಾಟನೆಗೆ ಶುಕ್ರವಾರದಂದು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನುಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹತ್ತಿರದಿಂದ ಸ್ವಾಗತಿಸಿದ ಫೋಟೊ ಇದೀಗ ಉಳ್ಳಾಲದಾದ್ಯಂತ ವಾಟ್ಸ್ಯಾಪ್ ಗುಂಪುಗಳಲ್ಲಿ ಹರಿದಾಡುತ್ತಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಸತೀಶ್ ಕುಂಪಲ ಇಂದು ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ ಹತ್ತಿರದಿಂದಲೇ ಸ್ವಾಗತಿಸಿದ್ದಾರೆ‌ . ಈ ಬಾರಿ ಪ್ರಧಾನಿಗಳ ಭೇಟಿ ವೇಳೆ ತಮ್ಮ ಪಕ್ಷದ ಕಾರ್ಯದರ್ಶಿಗಳಿಗೆ, ಬಿಜೆಪಿ ಯುವಮುಖಂಡರುಗಳಿಗೆ ಸ್ವಾಗತಿಸಲು ಅವಕಾಶಗಳನ್ನು ಕಲ್ಪಿಸಲಾಗಿತ್ತು. ಇದರಲ್ಲಿ ಮುಖಂಡ ಸತೀಶ್ ಕುಂಪಲ ಅವರೂ ಒಬ್ಬರಾಗಿದ್ದಾರೆ.

Read More

Un networks ಮಂಗಳೂರು: ಪ್ರಧಾನಿಯವರ ಕಾರ್ಯಕ್ರಮದಲ್ಲಿ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಅವರಿಗೆ ಗೌರವ ತೋರಲಾಗಿಲ್ಲ, ಅನ್ನುವ ವಾಟ್ಸ್ ಆಪ್ ಸಂದೇಶಗಳು ಹರಿದಾಡುತ್ತಿದ್ದಂತೆ ಇದೀಗ ಅವರು ವಿವಿಐಪಿ ಸೀಟಿನಲ್ಲಿ ಕುಳಿತಿರುವ ಫೋಟೋ ಕೂಡ ವೈರಲ್ ಆಗಿದೆ. ಪಾಸು ಮರೆತು ಅಥವಾ ಬರುವುದು ತಡವಾದ ಹಿನ್ನೆಲೆಯಲ್ಲಿ ಒಳಗಡೆ ಬಿಡುವ ನಿಯಮವಿಲ್ಲ. ರಕ್ಷಣೆಗೆ ನಿಂತವರ ಪೈಕಿ ಹೊರಜಿಲ್ಲೆಯ ಪೊಲೀಸರೇ ಅನೇಕರಿದ್ದರು. ಹಾಗಾಗಿ ಬಿ.ಆರ್ ಶೆಟ್ಟಿಯವರ ಪರಿಚಯವಿಲ್ಲದವರೇ ಇರಬಹುದು. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಕಾನೂನು ಪಾಲಿಸುವ ಉದ್ದೇಶದಿಂದ ಶೆಟ್ಟರ‌ನ್ನು ತಡೆಹಿಡಿಯಲಾಗಿತ್ತು. ಆದರೆ ಇದೇ ವಿಚಾರವನ್ನು ಮುಂದಿಟ್ಟು ಹಲವರು’ ಹಣವಿದ್ದಾಗ ದುಬೈಗೆ ಮೋದಿಯನ್ನೇ ಕರೆಸಿದ್ಸ ಉದ್ಯಮಿಯನ್ನೇ ಮರೆತರು’ . ಬೆಳವಣಿಗೆಗೆ ಸಹಕರಿಸಿ ದವರನ್ನೇ ಮರೆತೇ ಬಿಡುವ ಪಕ್ಷ’ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಹಂಚಲಾಗಿತ್ತು. ಇದಕ್ಕೆ ಪರ್ಯಾಯ ವಾಗಿ ಇದೀಗ ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಇಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Read More

UN networks ಉಳ್ಳಾಲ: ಕೀಡೆಯಿಂದ ಸಹಬಾಳ್ವೆ, ಸಮನ್ವಯತೆ, ಒಗ್ಗಟ್ಟಿನ ಸಂದೇಶ ಸಿಗುವುದರ ಮೂಲಕ ಉತ್ತಮ ಮನುಷ್ಯರನ್ನಾಗಿಸಲು ಸಾಧ್ಯ. ಇದರಿಂದ ಆರೋಗ್ಯಯುತ ಸಮಾಜ ನಿರ್ಮಾಣವೂ ಸಾಧ್ಯ ಎಂದು ಎ.ಜೆ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ| ಜಯಶಂಕರ್‌ ಮಾರ್ಲ ಹೇಳಿದ್ದಾರೆ.ದ.ಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುದ್ರೋಳಿ ನಾರಾಯಣ ಗುರು ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ತಾಲೂಕು ಮಟ್ಟದ ವಾಲಿಬಾಲ್‌ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷರು ಹಾಗೂ ನಾರಾಯಣ ಗುರು ವಿದ್ಯಾಸಂಸ್ಥೆಗಳ ಅಧ್ಯಕ್ಷ ನವೀನ್‌ ಚಂದ್ರ ಸುವರ್ಣ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಕಲಿಕೆಯ ಹಿಂದೆಯೇ ಇರುವವರೇ ಜಾಸ್ತಿ. ಸ್ಪರ್ಧೆ ಶೇ.೯೫% ಮೇಲಿದೆ. ಆದುದರಿಂದ ಕಲಿಕೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಾ ಮುಂದುವರಿದಲ್ಲಿ ಆರೋಗ್ಯಯುತರ ಸಂಖ್ಯೆಯೂ ಹೆಚ್ಚುವುದು ಎಂದರು.ದ.ಕ ಜಿಲ್ಲಾ ಯುಬಸಬಲೀಕರಣ ಮತ್ತು ಕ್ರೀಡಾ…

Read More

Un networks ಮಂಗಳೂರು: ಸುಮಾರು 3700  ಕೋಟಿ ವೆಚ್ಚದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದುಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರಲಿರುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ ಮಂಗಳೂರಿನಲ್ಲಿ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಡೆಯಲಿರುವ ಮೋದಿ ಸಮಾವೇಶದ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಅವರು ಮಾತನಾಡಿದರು ಮೋದಿ ಭೇಟಿ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾದ ರೀತಿಯಲ್ಲಿ ಜಿಲ್ಲಾಡಳಿತ ಮಾಡಿಕೊಂಡಿದೆ. ಎರಡೂ‌ ಜಿಲ್ಲೆಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಇರಲಿದ್ದು ಅವರನ್ನು ಕರೆತರಲು ಎರಡು ಸಾವಿರ ಬಸ್ ವ್ಯವಸ್ಥೆ ‌ಮಾಡಲಾಗಿದೆ. ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಇಲ್ಲಿಗೆ ಬರತ್ತಾರೆಎಲ್ಲರೂ ಮಧ್ಯಾಹ್ನ 12 ಗಂಟೆ ಒಳಗೆ ಮೈದಾನದ ಒಳಗೆ ಇರಬೇಕು ಎಂದರು.

Read More

UN networks ಮಂಗಳೂರು: ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದು ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದ್ದು  ಸುಮಾರು 100 ಜನ ಉನ್ನತ ಪೊಲೀಸ್ ಅಧಿಕಾರಿಗಳು ನಾಳೆ ಇಲ್ಲಿ ಇರಲಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನಲೆ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರಗೋಲ್ಡ್ ಫಿಂಚ್ ಸಿಟಿಗೆ ಭೇಟಿ ನೀಡಿ ಸಮಾವೇಶದ ಮೈದಾನವನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಎಲ್ಲಾ ‌ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರ ಸಂಪೂರ್ಣ ಭದ್ರತೆ ನೋಡಿಕೊಳ್ತಾರೆಸುಮಾರು 2000 ಸಾವಿರ ಸಿವಿಲ್ ಪೊಲೀಸರು ಭದ್ರತೆಗೆ ನೇಮಿಸಲಾಗಿದೆ. ಕೆಎಸ್ಸಾರ್ಪಿ, ಸಿಎಆರ್, ಎಎನ್ ಎಫ್, ಆರ್ ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್ ಡಿ ಹಾಗೂ ಗರುಡ ಪಡೆ ಇರುತ್ತದೆ.‌ ಒಟ್ಟಾರೆ ಮೂರು ಸಾವಿರ ಪೊಲೀಸ್ ಭದ್ರತೆ ಇರಲಿದೆಸಂಸದ ನಳಿನ್ ಕುಮಾರ್, ಉಸ್ತುವಾರಿ ಸುನೀಲ್ ಉಸ್ತುವಾರಿ ನೋಡುತ್ತಿದ್ದಾರೆ ಎಂದರು. ಸಂಸದ ನಳೀನ್…

Read More