UN networks
ಉಳ್ಳಾಲ: ಲಾರಿ ಢಿಕ್ಕಿ ಹೊಡೆದು ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯ ಕಾರ್ಮಿಕ ಮೃತಪಟ್ಟಿರುವ ಘಟನೆ ನಿನ್ನೆ ಸಂಭವಿಸಿದೆ.


ಮೂಲತ: ಬೆಂಗ್ರೆ ನಿವಾಸಿ ಕಲ್ಲಾಪು ನಾಗನಕಟ್ಟೆ ಹಿಂಬದಿ ಬಾಡಿಗೆ ಮನೆಯ ನಿವಾಸಿ ನಿಯಾಝ್ ಬಾವಾ(51)ಮೃತರು. ಮಾರುಕಟ್ಟೆಗೆ ಹೋಗಲು ರಸ್ತೆ ದಾಟುವ ವೇಳೆ ಕೇರಳ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


