Author: UllalaVani

Kannada News From Coastal Karnataka

UN networks ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಾಳೆಪುಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈರಂಗಳ ಗ್ರಾಮದ ಮೋಂಟುಗೋಳಿಯಲ್ಲಿ ನೂತನ ಆಟೋ ರಿಕ್ಷಾ ಪಾರ್ಕ್ ಹಾಗೂ ಸಂತೆ ಮಾರುಕಟ್ಟೆಗೆ ಜಿ.ಪಂ. ಮಾಜಿ ಅಧ್ಯಕ್ಷೆ, ನಿಕಟಪೂರ್ವ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಶಿಲಾನ್ಯಾಸಗೈದರು.ಬಳಿಕ ಮಾತನಾಡಿ ಮೋಂಟುಗೋಳಿ ಸೈಟ್ ಪ್ರದೇಶದಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆಗೆ ೫೦ಸಾವಿರ ಲೀ. ಸಾಮರ್ಥ್ಯದ ನೀರಿನ ಟಾಂಕಿ ನಿರ್ಮಿಸಿ ಕೊಟ್ಟಿದ್ದಾರೆ. ಬೋರ್ ವೆಲ್ ಪೈಪ್ ಲೈನ್ ನಿರ್ಮಾಣವೂ ನಡೆದಿದೆ. ನೂತನ ಆಟೋ ರಿಕ್ಣಾ ಪಾರ್ಕ್ ಸಂತೆ ಮಾರುಕಟ್ಟೆ ಅಭಿವೃದ್ಧಿಯ ಸಂಕೇತವಾಗಲಿದೆ ಎಂದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಝಿಯಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ, ಅರುಣ್ ಡಿಸೋಜ, ಅಹಿಂದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ ಹಾಗೂ ಬಾಳೆಪುಣಿ ಗ್ರಾ.ಪಂ. ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Read More

UN networks ಉಳ್ಳಾಲ: ದ.ಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಪೂರ್ವಭಾವಿಯಾಗಿ ನೀರು ಪೂರೈಕೆಗೆ ಪರ್ಯಾಯ ತಯಾರಿ ನಡೆಸುವಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಜೆ.ಡಿಎಸ್ ದ.ಕ ಜಿಲ್ಲೆ ಮನವಿ ಮಾಡಿದೆ.ಪ್ರಸಕ್ತ ವರ್ಷ ಬೇಸಿಗೆಕಾಲ ಆರಂಭವಾಗುವ ಮುಂಚೆಯೇ ಜನವರಿ ತಿಂಗಳಿನಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಾವಿಗಳಲ್ಲಿ ನೀರು ಕೆಳಮಟ್ಟಕ್ಕೆ ಹೋಗಿದೆ. ನಗರಪ್ರದೇಶಗಳಿಗೆ ನೀರು ಪೂರೈಸುವ ನೀರಿನಷ ಶೇಖರಣೆಯಲ್ಲಿಯೂ ಕುಂಠಿತವಾಗಿ ಬವಣೆ ಆರಂಭವಾಗಿದೆ. ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಬಹುದು, ಜಿಲ್ಲೆಗೆ ನೀರಿನ ಬಹುದೊಡ್ಡ ಸಮಸ್ಯೆಯೂ ಉಂಟಾಗಬಹುದು. ಆದ್ದರಿಂದ ಈಗಿನಿಂದಲೇ ನಗರಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹಾಗೂ ಗ್ರಾಮ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಆಸಕ್ತಿ ವಹಿಸಿ ಪರ್ಯಾಯ ನೀರಿನ ಸಂಪನ್ಮೂಲ ವ್ಯವಸ್ಥೆ ಹಾಗೂ ವಿತರಣೆಯನ್ನು ಸಮರ್ಪಕವಾಗಿ ನಡೆಸಲು ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN networks ಉಳ್ಳಾಲ: ೧೯೯೭ರಲ್ಲಿ ಪ್ರಾರಂಭವಾದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಪ್ರತಿವರ್ಷ ವಿಜೃಂಭಣೆಯಿAದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಈ ಸಲ ಫೆಬ್ರವರಿ ೪, ೨೦೨೩ರಂದು ನಡೆಯುವ ಉತ್ಸವದಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.ಅವರು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನಡೆಯುವ’೨೦೨೨-೨೩ರ ವೀರರಾಣಿ ಅಬ್ಬಕ್ಕ ಉತ್ಸವ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನಗುರಿಕಾರರಾದ ಮಂಜಪ್ಪಕಾರ್ನವರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಕಾರ್ಯದರ್ಶಿ ಡಿ.ಎನ್.ರಾಘುವ, ಎಂ.ವಾಸುದೇವರಾವ್, ಸತೀಶ್ ಭಂಡಾರಿ, ಭಾಸ್ಕರ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಅನುಪಮ ಸಿ, ಹೇಮಾಯು, ವಾಣಿ ಲೋಕಯ್ಯ, ಕ್ಲೇರಾ ಕುವೆಲ್ಲೊ, ಮಾಧವಿ ಉಳ್ಳಾಲ್, ಸತ್ಯವತಿಜೆ.ಕೆ, ದೇವಕಿಯು ಬೋಳಾರ್, ಸುಷ್ಮಾಜನಾರ್ಧನ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್,…

Read More

UN networksಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢಶಾಲೆ ಯಲ್ಲಿ ಬಾರತದ ಸಂವಿಧಾನದ ೭೪ನೇ ವರ್ಷಾಚರಣೆಯನ್ನು ಉಳ್ಳಾಲದ ಸಯ್ಯಿದ್ ಮದನಿ ದರ್ಗಾದ ಪ್ರಧಾನ ಕಾರ್ಯ ದರ್ಶಿ ತ್ವಾಹಾ ಹಾಜಿ ಧ್ವಜಾರೋಹಣಗೈದರು.ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವರೆಷ ಭೂಷಣ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಮನ ಗೆದ್ದರು. ಸಮಾರಂಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಯು.ಎನ್.ಇಬ್ರಾಹಿಂ, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟನ ಉಪಾಧ್ಯಕ್ಷ ಎಂ.ಹೆಚ್ ಇಬ್ರಾಹಿಂ, ಕಾರ್ಯ ದರ್ಶಿ ಅಲ್ತಾಫ್ ಯು ಹೆಚ್, ಕೋಶಾಧಿಕಾರಿ ಕರೀಂ ಯು. ಹೆಚ್, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಝೈನುದ್ದೀನ್ ಉಪಸ್ಥಿತರಿದ್ದರುಶಾಲಾ ಮುಖ್ಯ ಶಿಕ್ಷಕಾರಾದ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಶಕೀಲ ವಂದಿಸಿದರು.

Read More

UN networks ಉಳ್ಳಾಲ: ವಿಶ್ವ ಮಾನ್ಯತೆ ಪಡೆಯುತ್ತಿರುವ ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಚಾರಸೂತ್ರ ಪದ್ದತಿ ಪ್ರಸಿದ್ಧವಾಗುತ್ತಿದೆ. ಪಿಸ್ತೂಲಕ್ಕಿರುವ ನೋವುರಹಿತ ಚಿಕಿತ್ಸಾ ಪದ್ದತಿ ಆಧುನಿಕ ಚಿಕಿತ್ಸಾ ಪದ್ದತಿಯಲ್ಲೂ ಇಲ್ಲ ಎಂದು ನವದೆಹಲಿಯ ಮೆಡಿಕಲ್ ಅಸ್ಸೆಸ್ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ರಘುರಾಮ ಭಟ್ಟ ಯು. ಅಭಿಪ್ರಾಯಪಟ್ಟರು.ಯೇನೆಪೊಯ ಪರಿಗಣಿತ ವಿಶ್ವವಿದ್ಯಾಲಯ ಅಧೀನದ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಪಂಡಿತೌಸ್ ನಲ್ಲಿ ಶನಿವಾರ ನೂತನವಾಗಿ ಆರಂಭಗೊಂಡ ‘ನಿಯಾಶ ಆಯುರ್ವೇದ’ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಯೇನೆಪೊಯ ವಿವಿ ಆಶ್ರಯದಲ್ಲಿ ಅಗ್ನಿಕರ್ಮ, ಚಾರಕರ್ಮ ಸಹಿತ ಇನ್ನಿತರ ಪದ್ದತಿಯೊಂದಿಗೆ ಆಯುರ್ವೇದ ಆಸ್ಪತ್ರೆ ಆರಂಭಿಸುತ್ತಿರುವುದು ಶ್ಲಾಘನೀಯ. ಯೇನೆಪೊಯ ವಿವಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವು ಆರಂಭಿಸಬೇಕಾಗಿರುವ ಆಸ್ಪತ್ರೆ ಬಗ್ಗೆ ಅರಿವು ಮೂಡಿಸಲಿದೆ‌. ನೂತನ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ವಿಶ್ವವ್ಯಾಪಿಯಾಗಲಿ ಎಂದು ಹಾರೈಸಿದರು‌.ಸಂಗೀತಾ ನಿರ್ದೇಶಕ ಗುರುಕಿರಣ್ ಮಾತನಾಡಿ, ಅಲೋಪಥಿ ಆಧುನಿಕ ಚಿಕಿತ್ಸಾ ಪದ್ದತಿಯಾಗಿದ್ದರೆ ಆಯುರ್ವೇದ ಪುರಾತನ ಹಾಗೂ ಸುದೀರ್ಘ ಚಿಕಿತ್ಸಾ…

Read More

UN networksಉಳ್ಳಾಲ: ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಮತ್ತು ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಇವರ ವಿರುದ್ಧ ಸಾಮಾಜಿಕ ಕರ‍್ಯಕರ್ತರೊಬ್ಬರು ದಾಖಲಿಸಿರುವ ದೂರಿಗೆ ಸ್ಪಂಧಿಸದ ಹಾಗೂ ಮಾಹಿತಿ ಹಕ್ಕಿನಡಿ ಕೇಳಲಾದ ದಾಖಲೆಗಳನ್ನು ಒದಗಿಸದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಐಪಿಎಸ್ ವಿರುದ್ಧ ಕರ್ನಾಟಕ ಲೋಕಾಯುಕ್ತ ನೋಟೀಸು ಜಾರಿಗೊಳಿಸಿ ಫೆ.೧೪ ರ ಒಳಗಡೆ ತನಿಖಾ ವರದಿ ಹಾಗೂ ಸಂಬAಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮೊಹಮ್ಮದ್ ಕಬೀರ್ ಎಂಬವರು ಪೊಲೀಸ್ ಕಮೀಷನರ್ ವಿರುದ್ಧ ದಾಖಲಿಸಿರುವ ದೂರಿನಂತೆ ನೋಟೀಸು ಜಾರಿಗೊಳಿಸಲಾಗಿದೆ. ದೂರು : ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ಎಂಬವರು ಪ್ರಕರಣಗಳಲ್ಲಿ ಠಾಣೆಗೆ ಬರುವವರೊಂದಿಗೆ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದು, ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಗೆ ಪ್ರತಿಯೊಂದರಲ್ಲಿ ಹಣದ ಬೇಡಿಕೆಯನ್ನು ಇಟ್ಟು ಜನರ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ಸಂಪಾದಿಸಿದ್ದಾರೆ. ಈ…

Read More

UN networks ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. ೩೦೧/೩ ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ ಸಲ್ಲಿಸಲಾಗಿದೆ. ಈ ನಡುವೆ ವ್ಯಾಜ್ಯ ಇತ್ಯರ್ಥವಾಗುವ ಮೊದಲೇ ಉಳ್ಳಾಲ ಪುರಸಭೆ ಏಕಾಏಕಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರ ಅನುಮತಿ ಪಡೆಯದೇ ಇರುವುದು ಕಂಡುಬAದಿದೆ. ಈ ಬಗ್ಗೆ ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಭೂಮಾಫಿಯಾ ಕೈಜೋಡಿಸಿರುವ ಸಂಶಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷಿಸಿ ನ್ಯಾಯ ದೊರಕಿಸಿಕೊಡಬೇಕೆಂದು ದೂರಿನಲ್ಲಿ ಸಲ್ಲಿಸಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗ್ರಾಮಕರಣಿಕರು ಹಾಗೂ ಎನ್ ಇಸಿಎಫ್ ಮಂಗಳೂರು…

Read More

UN NEWS NETWORKSಮಂಗಳೂರು: ಝಾಯ್ದ್ಸ್ ಅಜ್ವಾ ಫ್ಯಾಮಿಲಿ ರೆಸ್ಟೋರೆಂಟ್ ಜ್ಯೋತಿ ಬಲ್ಮಠದ ಸರಸ್ವತಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಕರ್ನಾಟಕ ಥಿಯಾಲಾಜಿಕಲ್ ಕಾಲೇಜು ಪ್ರಾಂಶುಪಾಲ ರೆ| ಡಾ.ಹೆಚ್.ಎಂ. ವ್ಯಾಟ್ಸನ್ , ಫೌಝಿ ಜುಮಾ ಮಸೀದಿ ಖತೀಬರಾದ ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್ , ಕ್ವಾಲಿಟಿ ಗ್ರೂಪ್ ಆಫ್ ಹೊಟೇಲ್ಸ್ ಹಾಗೂ ಶ್ರೀ ದೇವಿ ಎಜ್ಯುಕೇಷನ್ ಟ್ರಸ್ಟ್ ಚೇರ್ ಮೆನ್ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು.`ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಿ, ಆರೋಗ್ಯಯುತವಾದ ಆಹಾರವನ್ನು ಒದಗಿಸಿರುವ ಯಾಸೀರ್ ತಂಡ ಇನ್ನೊಂದು ರೆಸ್ಟೋರೆಂಟ್ ಆರಂಭಿಸಲು ಸಾಧ್ಯವಾಗಿದೆ. ಇವರ ಉದ್ಯಮ ಇನ್ನಷ್ಟು ಯಶಸ್ಸಿನತ್ತ ಸಾಗಲಿ’ ಎಂದು ಫೌಝಿ ಜುಮಾ ಮಸೀದಿ ಖತೀಬರಾದ ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್ ಶುಭಹಾರೈಸಿದರು.`ಬಲ್ಮಠದ ಕ್ಯಾಂಪಸ್ಸಿನಲ್ಲಿ ಹೊಸ ಹೊಟೇಲಿನ ಶುಭಾರಂಭವಾಗಿದೆ. ಮಂಗಳೂರಿನ ನಾಗರಿಕರಿಗೆ ಶುಚಿಯಾದ, ರುಚಿಯಾದ ಉತ್ತಮ ಬೆಲೆಯಲ್ಲಿ ಕೊಡುವ ಕೇಂದ್ರವಾಗಲಿ. ಎಲ್ಲರಿಗೂ ಸಂತೃಪ್ತಿಯಾಗಿ ಹೊಟೇಲ್ ಇನ್ನಷ್ಟು ಬೆಳೆಯಲಿ ಎಂದು ರೆ| ಡಾ.ಹೆಚ್.ಎಂ. ವ್ಯಾಟ್ಸನ್ ಶುಭಹಾರೈಸಿದರು.ಉದ್ಯಮಿ ಎ.ಸದಾನಂದ ಶೆಟ್ಟಿ ಮಾತನಾಡಿ, ವ್ಯಾಪಾರ…

Read More

ContentMr Bet, Bis 2 500 Euro Sobald 500 Freispiele Inside MrbetWillkommenspaket Inoffizieller mitarbeiter Mr Bet CasinoGewünscht Man Den Tollen Prämie Kode Pro Diese Freispiele? So lange Eltern gegenseitig im Mr Bet Verifizierung, sie sind Diese über unserem Neukundenbonus, das nicht mehr da 4 Aufstieg besteht, bestens. Insgesamt sind Eltern nach inanspruchnahme von unserem 400-prozentigen Bonuspreis überaus. So lange Sie im innern ein Woche in diesem casuml Verbunden-Casino 500 Euro und weitere eingesetzt besitzen, beibehalten Nachfolgende 5percent das Geldsumme zurück.

Read More

UN networks ಉಳ್ಳಾಲ: ಪ್ರಸವಪೂರ್ವ ರೋಗನಿರ್ಣಯ, ಭ್ರೂಣದ ವೈಪರೀತ್ಯಗಳ ಅರಿವು ಕುರಿತು ವೈದ್ಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಗಾರ ಅನುಕೂಲ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ರೇಡಿಯೋ ಡಯಾಗ್ನೋಸಿಸ್ ವಿಭಾಗ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗವು ಸೊಸೈಟಿ ಆಫ್ ಫೀಟಲ್ ಮೆಡಿಸಿನ್ ಕರ್ನಾಟಕ ಚಾಪ್ಟರ್ ನ ಸಹಯೋಗದೊಂದಿಗೆಫೆಟಲ್ ಮೆಡಿಸಿನ್ ಅಪ್‍ಡೇಟ್ -ಬೇಸಿಕ್ಸ್ ಮತ್ತು ಅದರಾಚೆ’ ವಿಚಾರಗಳ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಆವಿಷ್ಕಾರ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಕ್ಷೇಮ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಡಾ| ಸುಪ್ರಿಯಾ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಡೀನ್ ಡಾ| ಪ್ರಕಾಶ್, ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ, ರೇಡಿಯಾಲಜಿ ವಿಭಾಗ ಮುಖ್ಯಸ್ಥ ಡಾ| ರಘುರಾಜ್ , ಫೀಟಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ| ನಿರೀಕ್ಷಾ ಶೆಟ್ಟಿ, ಡಾ|…

Read More