Author: UllalaVani

Kannada News From Coastal Karnataka

ಉಳ್ಳಾಲ: ತಲಪಾಡಿಯ ಕೆ.ಆರ್ ಕನಕದಾಸ್ ಅವರಿಗೆ ಸೇರಿದ ಸ್ತ್ರೀ ಶಕ್ತಿ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೇಟಿಗೆ ಓಣಂ ಬಂಪರ್ ಡ್ರಾ ಇದರ ಎರಡನೇ ಬಹುಮಾನ ರೂ. 1 ಕೋಟಿ ಒಲಿದಿದೆ. ಲಾಟರಿ ಒಂಟಿ ಮಹಿಳೆಗೆ ಒಲಿದಿರುವುದರಿಂದ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ. ಇದು ಕನಕದಾಸ್ ಅವರ ಅಂಗಡಿಯಿಂದ ಟಿಕೇಟ್ ಪಡೆದ 6 ನೇಯ ಬಂಪರ್ ಪ್ರಶಸ್ತಿಯಾಗಿದೆ.ಕಳೆದ ೩೦ ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಟಿಕೇಟ್ ಪಡೆದ 6 ಮಂದಿ ಲಾಟರಿ ಗೆಲುವು ಸಾಧಿಸಿದ್ದು, 4 ಮಂದಿಗೆ ರೂ.1 ಕೋಟಿ ಒಲಿದಿದ್ದರೆ, 75 ಲಕ್ಷ ರೂ. ಮತ್ತು 80 ಲಕ್ಷ ರೂ. ಇಬ್ಬರಿಗೆ ಒಲಿದಿದೆ. 2024ರ ಲಾಟರಿ ಪಡೆದ ಮಹಿಳೆ ಸ್ತ್ರೀ ಶಕ್ತಿ ಲಾಟರಿ ಅಂಗಡಿಯ ಸಿಬ್ಬಂದಿ ಗಾಯತ್ರಿ ಎಂಬವರಿಂದ ಟಿಕೇಟನ್ನು ಪಡೆದುಕೊಂಡಿದ್ದರು. ಅದಕ್ಕಾಗಿ ಲಾಟರಿ ಹೊಡೆಯುತ್ತಲೇ ಮಹಿಳೆ ಅಂಗಡಿ ಸಿಬ್ಬಂದಿ ಗಾಯತ್ರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಹಲವು ವರ್ಷಗಳ ಹಿಂದೆ ಒಂದು…

Read More

ಮುಡಿಪು : ರಾಜಕೀಯ ರಹಿತವಾಗಿ ಆರೋಗ್ಯಯುತ ಕಾರ್ಯದಲ್ಲಿ ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ರಕ್ತದಾನದ ಜಾಗೃತಿ ಮೂಡಿಸಲು ನಿರಂತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ರಕ್ತದಾನ ಎಂಬುದು ಶ್ರೇಷ್ಟದಾನ ಅನ್ನುವುದನ್ನು ಮನವರಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಮಹತ್ಕಾರ್ಯದಲ್ಲಿ ಭಾಗವಹಿಸಿರಿ ಎಂದು ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಹೇಳಿದ್ದಾರೆ.ಅವರು ಕಾಲೇಜು ಶಿಕ್ಷಣ ಇಲಾಖೆ, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಕಲ್ಲೂರು ಎಜ್ಯುಕೇಷನ್ ಟ್ರಸ್ಟ್ ಕಾರವಾರ ಇದರ ಆಶ್ರಯದಲ್ಲಿ ಯೂತ್ ರೆಡ್ ಕ್ರಾಸ್ , ಎನ್ ಎಸ್ ಎಸ್ ರೇಂಜರ್ಸ್- ರೋರ‍್ಸ್ ಘಟಕ ಹಿರಿಯ ವಿದ್ಯಾರ್ಥಿ ಸಂಘ ಇದರ ಆಶ್ರಯದಲ್ಲಿ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರಗಿದ ಬೃಹತ್ ರಕ್ತದಾನ ಶಿಬಿರ ಹಾಗೂ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ರಕ್ತದ ಕೊರತೆಯಾಗುತ್ತಿದೆ ಅನ್ನುವ ಕೂಗು ಇದೆ. ಅದನ್ನು ಹೋಗಲಾಡಿಸುವ ಸಲುವಾಗಿ ಕಲ್ಲೂರು ಟ್ರಸ್ಟ್ ನಿರಂತರವಾಗಿ ವಿವಿಧ ಸಂಘಟನೆಗಳ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಿದೆ ಎಂದರು.ಸಾಹಿತಿ…

Read More

ಕೈರಂಗಳ: ಶಿಕ್ಷಣ, ಉದ್ಯೋಗ, ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಕೈರಂಗಳ ಆಯೋಜಿಸುವ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ-2024 ರ ಡಿ.6,7,8 ರಂದು ಕೈರಂಗಳ ಪುಣ್ಯಕೋಟಿನಗರದಲ್ಲಿ ನಡೆಯಲಿದ್ದು, ವಿಪ್ರೋ, ಲಿನೆವೋ, ಇನ್ಫೋಸಿಸ್‌ ಸೇರಿದಂತೆ ಪ್ರತಿಷ್ಠಿತ ಐಟಿ ಕಂಪೆನಿಗಳಿಗೆ ಆಹ್ವಾನಿಸಲಾಗಿದೆ. ರಾಜ್ಯದಾದ್ಯಂತ ಉದ್ಯೋಗಾಕಾಂಕ್ಷಿಗಳು, ಕೃಷಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಶಿಕ್ಷಣ, ಉದ್ಯೋಗ, ಕೃಷಿ ಮೇಳ -2024 ಸಂಚಾಲಕ ಅಧ್ಯಕ್ಷ ಟಿ.ಜಿ.ರಾಜಾರಾಮ್‌ ಭಟ್‌ ಹೇಳಿದರು.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಮಂಗಳವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.ಎಸ್‌ ಎಸ್‌ ಎಲ್‌ ಸಿ , ಪಿಯುಸಿ ಹಾಗೂ ಪದವಿ ಬಳಿಕ ಮುಂದೇನು? ಅನ್ನುವ ಕುತೂಹಲದಲ್ಲಿ ವಿದ್ಯಾರ್ಥಿ ಸಮೂಹಕ್ಕಿದೆ. ರಾಜ್ಯದ ಅನೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಲವು ರೀತಿಗಳಲ್ಲಿ ಕೋರ್ಸುಗಳನ್ನು ಒದಗಿಸುತ್ತಿದೆ. ಅಂತಹ ಒಟ್ಟು 37 ಕಾಲೇಜುಗಳನ್ನು ಒಟ್ಟಾಗಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕೋರ್ಸುಗಳ ಪರಿಚಯದ ಶಿಕ್ಷಣ ಮೇಳ, ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಂಪೆನಿಗಳಿಗೆ…

Read More

ಕೊಲ್ಯ: ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ಕೊಲ್ಯದವರೆಗೆ ಶ್ರೀ ಶಾರದಾ ಮಾತೆಯ ನೂತನ ಬೆಳ್ಳಿ ಬಿಂಬದೊದಿಗೆ ಹಸಿರುವಾಣಿ ಹೊರೆದಿಬ್ಬಣ ಶೋಭಾಯಾತ್ರೆಯು ವಿಜೃಂಭಣೆಯಿಂದ ನಡೆಯಿತು.ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಮಂದಿರ ನಿರ್ಮಾಣ ಸಮಿತಿ ವತಿಯಿಂದ ಕೊಲ್ಯದಲ್ಲಿ ಅ.6 ರಿಂದ 12 ರ ವರೆಗೆ 43 ನೇ ವರ್ಷದ ಶಾರದಾ ಮಹೋತ್ಸವ ಮತ್ತು ಅ.7 ಸೋಮವಾರ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಾರದಾ ಮಂದಿರದ ಲೋಕಾರ್ಪಣೆ ನಡೆಯಲಿದೆ.ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರದಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ಹಸಿರುವಾಣಿ ಹೊರೆದಿಬ್ಬಣ ಶೋಭಾಯಾತ್ರೆಗೆ ಚಾಲನೆ ನೀಡಿದರು.ಬೆಂಗಳೂರಿನ ದಿ.ಮೈಸೂರು ಇಲೆಕ್ಟ್ರಿಕಲ್ಸ್ ಲಿ.ನ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಹೊರೆಕಾಣಿಕೆಯು ಯಶಸ್ವಿಯಾಗಿ ನಡೆದರೆ ಇಡೀ ಉತ್ಸವವೇ ಸಾಂಘವಾಗಿ ನಡೆಯುವುದು. ನೂತನ ಶಾರದಾ ಮಂದಿರ ನಿರ್ಮಾಣಕ್ಕೆ ಬಹಳಷ್ಟು ಜನರು ಬೆವರು ಹರಿಸಿದ್ದಾರೆ.ಮಂದಿರದಲ್ಲಿ ಮುಂದಿನ ದಿವಸಗಳಲ್ಲಿ ಧರ್ಮ ಜಾಗೃತಿಯ…

Read More

ಉಳ್ಳಾಲ: ಅಲ್ಯಾರದ ಮನೆ (ಈಗಿನ ಅಳೇಕಲ) ಶ್ರೀ ಮಲರಾಯ ದೈವವನ್ನು ಉಯ್ಯಾಲೆಯಲ್ಲಿ ಆರಾಧಿಸುತ್ತಿದ್ದ ಸಂದರ್ಭ ಸುಮಾರು 800 ವರ್ಷಗಳ ಹಿಂದೆ ಉಳ್ಳಾಲದಲ್ಲಿ ಜೈನ ಮನೆತನದ ಚೌಟೆದಿ ರಾಣಿ ಅಬ್ಬಕ್ಕ ಅರಸುತನ ನಡೆಸುವಾಗ ತನ್ನ ಮುತ್ತೈದೆತನದ ದ್ಯೋತಕವಾದ ವಜ್ರದ ಮೂಗುತ್ತಿ ಕಳೆದುಹೋಗಿ ದು:ಖಿತಳಾಗಿದ್ದರು. ಹಿರಿಯರ ಮಾರ್ಗದರ್ಶನದಂತೆ ಮಲರಾಯ ದೈವಕ್ಕೆ ಹರಕೆ ಹೇಳಿದಾಗ ಕಳೆದುಹೋದ ಮೂಗುತ್ತಿಯು ಮರುಕಾಣಿಸಿಕೊಂಡಿತ್ತು. ಇದರಿಂದ ಹರ್ಷಚಿತ್ತಳಾದ ಚೌಟೆದಿ ರಾಣಿ ಅಬ್ಬಕ್ಕ ಶ್ರೀ ಮಲರಾಯ ದೈವಕ್ಕೆ ಕೊಟ್ಟಾರದಲ್ಲಿ ದೈವಸ್ಥಾನ ಕಟ್ಟಿರುವ ಇತಿಹಾಸವಿದೆ. ಇದೀಗ ದೈವಸ್ಥಾನಕ್ಕೆ ಭಂಡಾರಮನೆಯ ನಿರ್ಮಾಣಕ್ಕೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದು, ಅದರ ಪ್ರಚಾರವಾಗಿ ಇಂದು ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ನಿವೇದನಾ ಪತ್ರಿಕೆಯ ಬಿಡುಗಡೆಯನ್ನು ನಡೆಸಲಾಯಿತು.ಭಂಡಾರ ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಉಳ್ಳಾಲ್ ಸುಂದರ್ ನಿವೇದನಾ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ಭಂಡಾರ ಗ್ರಹವು ದೈವಸ್ಥಾನದ ಅಂಗಣದ ಒಳಗಡೆಯಿದೆ. ನಿರ್ಮಾಣ ಮಾಡುವ ಸಂದರ್ಭ ಸೂಕ್ತ ಸ್ಥಳವಿಲ್ಲದ ಕಾರಣ ದೈವಸ್ಥಾನದ ಪಕ್ಕದಲ್ಲಿಯೇ ನಿರ್ಮಿಸಲಾಗಿತ್ತು.…

Read More

ಉಳ್ಳಾಲ: ಧರ್ಮ ದ್ವೇಷದ ಭಾಷಣ ಆರೋಪದಡಿ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್ ದಾಖಿಲಿಸಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ‘ಹಿಂದುಗಳು ಹಿಂದು ಮಾಲಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು’. ‘ಹಿಂದು ಮಾಲಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು”. ”ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು’.’ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ’ ಎಂದಿದ್ದ ಅರುಣ್ ಉಳ್ಳಾಲ್ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣವನ್ನು ಮಂಗಳೂರು ಸೆನ್ ಪೊಲೀಸರು ದಾಖಲಿಸಿದ್ದಾರೆ‌. ಉಳ್ಳಾಲ ದ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನವದಂಪತಿ ಸಮಾವೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 66(C) IT ACT AND  196,  351 (BNS), 2023 ರಂತೆ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಿರುವ ಅರುಣ್ ಉಳ್ಳಾಲ್…

Read More

ಕುತ್ತಾರು: ನಟ ಹಾಗೂ ನಿರ್ದೇಶಕ ಪ್ರೇಮ್ ಮತ್ತು ನಟಿ ರಕ್ಷಿತಾ ದಂಪತಿ ದೆಕ್ಕಾಡು ಕೊರಗಜ್ಜನ ಕ್ಷೇತ್ರಕ್ಕೆ ಅ.೫ ರಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದಾರಿಮಧ್ಯೆ ಅಜ್ಜನಿಗೆ ಹರಕೆ ರೂಪದಲ್ಲಿ ಇಡುವ ಎಲೆಅಡಿಕೆ ಮತ್ತು ಚಕ್ಕುಲಿ ಖರೀದಿಸುವವರಲ್ಲಿ ಅಜ್ಜನ ಕಟ್ಟೆಗೆ ಆಗಾಗ್ಗೆ ಭೇಟಿ ಕೊಡುತ್ತಿರುವೆ, ಬೇಡಿಕೆಗಳು ಈಡೇರುತ್ತಿವೆ, ಮನಶಾಂತಿಗಾಗಿ ಬರುತ್ತಿರುವೆ ಎಂದಿದ್ದಾರೆ.ನಟಿ ರಕ್ಷಿತಾ ಪ್ರೇಮ್ ಈ ಹಿಂದೆಯೂ ಅಜ್ಜನ ಕಟ್ಟೆಗೆ ಹಲವು ಬಾರಿ ಭೇಟಿಯನ್ನು ಕೊಟ್ಟಿದ್ದರು. ಈ ಬಾರಿ ದಂಪತಿ ಸಮೇತರಾಗಿ ಆಗಮಿಸಿದ್ದು, ಸಂದರ್ಶನ ನಡೆಸಿ ವಾಪಸ್ಸಾಗಿದ್ದಾರೆ. ಈ ನಡುವೆ ಅಂಗಡಿ ಸಮೀಪ ಹರಕೆ ವಸ್ತುಗಳನ್ನು ಖರೀದಿಸಲೆಂದು ನಿಂತಾಗ , ಅಂಗಡಿಯವರು ನಟಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ತನ್ನ ಹಲವು ಭೇಟಿಗಳ ಕುರಿತು ವಿವರಿಸಿದ್ದಾರೆ. ಅಲ್ಲದೆ ಬೇಡಿಕೆಗಳು ಈಡೇರುತ್ತಿವೆ ಅದರಿಂದ ಮನಶಾಂತಿಯಿದೆ. ಈ ನಿಟ್ಟಿನಲ್ಲಿ ಆಗಾಗ್ಗ ಭೇಟಿ ಕೊಡುತ್ತಿರುವೆ ಎಂದಿದ್ದಾರೆ.ಈ ಸಂದರ್ಭ ಸ್ವಾಮಿಕೊರಗಜ್ಜ ದೈವದ ಆದಿಸ್ಥಳ ದೆಕ್ಕಾಡು ಕುತ್ತಾರು ಸಂಬAಧಿಸಿದ ಟ್ರಸ್ಟ್ ವತಿಯಿಂದ ದಂಪತಿಯನ್ನು ಅಭಿನಂದಿಸಲಾಯಿತು.

Read More

ಮAಗಳೂರು: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ದೇರಳಕಟ್ಟೆ ಪಾನೀರು ನಿವಾಸಿ ಆಲ್ವಿನ್ ಜೆರೋಮ್ ಡಿಸೋಜಾ(೫೦) ಎಂಬವರ ಮೇಲೆ ೧೦ ರಿಂದ ೧೫ ಮಂದಿಯ ತಂಡ ಅಡ್ಯಾರ್ ಕಟ್ಟೆ ಸಮೀಪ ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ವೇಳೆ ಸಂಭವಿಸಿದ್ದು, ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅಕ್ರಮ ಮರಳು ದಂಧೆಯ ಪ್ರತಿಭಟನೆಯಲ್ಲಿ ಆಲ್ವಿನ್ ಮುಂಚೂಣಿಯಲ್ಲಿದ್ದರು. ಕೃತ್ಯವನ್ನು ಉಳ್ಳಾಲ ಶಾಸಕ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.ಅಡ್ಯಾರ್ ಕಟ್ಟೆ ಮರಳಿನ ಗಣಿಗಾರಿಕೆ ಸ್ಥಳದ ಸಮೀಪ ಘಟನೆ ಸಂಭವಿಸಿದೆ, ಅಲ್ಲಿ ಕಾನೂನುಬಾಹಿರ ಗಣಿಗಾರಿಕೆ ನಡೆಸಲು ಬಳಸಲಾಗುತ್ತಿದ್ದ ಯಂತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಮಾಹಿತಿ ಪ್ರಕಾರ ಅಲ್ವಿನ್ ಡಿಸೋಜ ಅವರು ವರದಿಗಾರರೊಬ್ಬರ ಜೊತೆಗೆ ಸುದ್ಧಿ ನಡೆಸಲು ತೆರಳಿ ವಾಪಸ್ಸಾಗುವ ಸಂದರ್ಭ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.ಸದ್ಯ ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಆಲ್ವಿನ್ ಜೆರೋಮ್ ಡಿಸೋಜಾ ಕೈಗೆ ಗಾಯವಾಗಿದ್ದು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ಯು.ಟಿ.ಖಾದರ್ ಖಂಡನೆ:ಕಾAಗ್ರೆಸ್ ಮುಖಂಡ ಹಾಗೂ…

Read More

ಮಂಗಳೂರು: ಬಿಜೆಪಿ ಸದಸ್ಯತನ ಅಭಿಯಾನದ ಪ್ರಯುಕ್ತ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಯಾದವ್ ಅವರನ್ನು ಶನಿವಾರ ಬೆಳಿಗ್ಗೆ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ವತಿಯಿಂದ  ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿನಂದನೆ ಸಲ್ಲಿಸಿದರು.   ಈ ಸಂದರ್ಭ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ನಂದನ್ ಮಲ್ಯ, ಅಲೆಮಾರಿ ಜನಾಂಗದ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಅನಂತ ಕೃಷ್ಣ ಯಾದವ್,  ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಹೆಳವ ಉಪಸ್ಥಿತರಿದ್ದರು.

Read More

ಕೊಲ್ಯ : ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ಬೆಳಕಿಗೆ ಬಂದಿದೆ.ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (೪೪) ಮೃತಪಟ್ಟವರು. ಅ.೪ ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮನೆ ಸುತ್ತಮುತ್ತಲೂ , ಸಂಬAಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಇಂದು ಮಧ್ಯಾಹ್ನ ವೇಳೆ ಕುಜುಮಗದ್ದೆ ಮನೆ ಸಮೀಪದ ಪಾಳುಬಿದ್ದ ಬಾವಿಯಲ್ಲಿ ಪ್ರಸಾದ್ ಚಪ್ಪಲಿಗಳು ದೊರೆತಿದ್ದು, ಬಾವಿಯನ್ನು ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ಜೆಪ್ಪು ಗೋರ್ದಂಡು ನಿವಾಸಿ ಪ್ರಸಾದ್ ಕುಟುಂಬ ಕಳೆದ ಕೆಲ ವರ್ಷಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು. ಪೈಂಟರ್ ವೃತ್ತಿ ನಿರ್ವಹಿಸುತ್ತಿದ್ದ ಅವರು ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆಯಿಂದಲೇ ಆತ್ಮಹತ್ಯೆ ನಡೆಸಿರುವ ಶಂಕೆಯಿದೆ . ಮನೆಗೆ ಹಿರಿ…

Read More