Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
All News

ವೀರರಾಣಿ ಅಬ್ಬಕ್ಕಳ ಕಳೆದುಹೋದ ವಜ್ರದ ಮೂಗುತ್ತಿ ದೊರೆತಿದ್ದೇ ಆ ದೈವದ ಮೊರೆ ಹೋದ ನಂತರ ,ಅಂತಹ ದೈವಕ್ಕೆ ಅಂದು ಆಕೆ ಕೃತಜ್ಞಕಾಪೂರಕವಾಗಿ ನಿರ್ಮಿಸಿದ ದೈವಸ್ಥಾನಕ್ಕೆ ಇಂದು ಭಂಡಾರ ಮನೆಯ ನಿರ್ಮಾಣಕ್ಕೆ ಸಿದ್ಧತೆ

UllalaVaniBy UllalaVaniOctober 6, 2024Updated:October 6, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಅಲ್ಯಾರದ ಮನೆ (ಈಗಿನ ಅಳೇಕಲ) ಶ್ರೀ ಮಲರಾಯ ದೈವವನ್ನು ಉಯ್ಯಾಲೆಯಲ್ಲಿ ಆರಾಧಿಸುತ್ತಿದ್ದ ಸಂದರ್ಭ ಸುಮಾರು 800 ವರ್ಷಗಳ ಹಿಂದೆ ಉಳ್ಳಾಲದಲ್ಲಿ ಜೈನ ಮನೆತನದ ಚೌಟೆದಿ ರಾಣಿ ಅಬ್ಬಕ್ಕ ಅರಸುತನ ನಡೆಸುವಾಗ ತನ್ನ ಮುತ್ತೈದೆತನದ ದ್ಯೋತಕವಾದ ವಜ್ರದ ಮೂಗುತ್ತಿ ಕಳೆದುಹೋಗಿ ದು:ಖಿತಳಾಗಿದ್ದರು. ಹಿರಿಯರ ಮಾರ್ಗದರ್ಶನದಂತೆ ಮಲರಾಯ ದೈವಕ್ಕೆ ಹರಕೆ ಹೇಳಿದಾಗ ಕಳೆದುಹೋದ ಮೂಗುತ್ತಿಯು ಮರುಕಾಣಿಸಿಕೊಂಡಿತ್ತು. ಇದರಿಂದ ಹರ್ಷಚಿತ್ತಳಾದ ಚೌಟೆದಿ ರಾಣಿ ಅಬ್ಬಕ್ಕ ಶ್ರೀ ಮಲರಾಯ ದೈವಕ್ಕೆ ಕೊಟ್ಟಾರದಲ್ಲಿ ದೈವಸ್ಥಾನ ಕಟ್ಟಿರುವ ಇತಿಹಾಸವಿದೆ. ಇದೀಗ ದೈವಸ್ಥಾನಕ್ಕೆ ಭಂಡಾರಮನೆಯ ನಿರ್ಮಾಣಕ್ಕೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದು, ಅದರ ಪ್ರಚಾರವಾಗಿ ಇಂದು ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ನಿವೇದನಾ ಪತ್ರಿಕೆಯ ಬಿಡುಗಡೆಯನ್ನು ನಡೆಸಲಾಯಿತು.
ಭಂಡಾರ ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಉಳ್ಳಾಲ್ ಸುಂದರ್ ನಿವೇದನಾ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ಭಂಡಾರ ಗ್ರಹವು ದೈವಸ್ಥಾನದ ಅಂಗಣದ ಒಳಗಡೆಯಿದೆ. ನಿರ್ಮಾಣ ಮಾಡುವ ಸಂದರ್ಭ ಸೂಕ್ತ ಸ್ಥಳವಿಲ್ಲದ ಕಾರಣ ದೈವಸ್ಥಾನದ ಪಕ್ಕದಲ್ಲಿಯೇ ನಿರ್ಮಿಸಲಾಗಿತ್ತು. 2024ರ ಬಂಡಿ ಉತ್ಸವದಂದು ದೈವ ತನ್ನ ಭಂಡಾರಮನೆಯನ್ನು ಸೂಕ್ತವಾದ ಸ್ಥಳದಲ್ಲಿ ಅಂಗಣದ ಹೊರಗಡೆ ನಿರ್ಮಾಣ ಮಾಡಬೇಕೆಂದು ದಐವದ ಅಪ್ಪಣೆಯಾಗಿದೆ. ಅದರಂತರ ನೂತನ ಭಂಡಾರ ಮನೆ ಮತ್ತು ಗೋಪುರ ನಿರ್ಮಾಣ ಮಾಡಲು ಕ್ಷೇತ್ರದ ತಂತ್ರಿ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮತ್ತು ಆಗಮಶಾಸ್ತ್ರ ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಂತೆ ತಾಂತ್ರಿಕ ಇಂಜಿನಿಯರಿಂಗ್ ಸಂಸ್ಥೆ ನಿತಿನ್ ರಾಜ್ ಅಸೋಸಿಯೇಟ್ಸ್ ಉಳ್ಳಾಲ ಇವರು ರೂ.1.25 ಕೋಟಿ ಅಂದಾಜು ಪಟ್ಟಿ ಮತ್ತು ನೀಲನಕ್ಷೆಯನ್ನು ತಯಾರಿಸಿದ್ದಾರೆ. ದೈವದ ಅಪ್ಪಣೆಯಂತೆ 2025ರ ಬಂಡಿ ಉತ್ಸವದ ಮೊದಲು ಭಂಡಾರಮನೆಯ ನಿರ್ಮಾಣವಾಗಬೇಕಿದೆ. ಗ್ರಾಮಸ್ಥರು, ಊರಪರವೂರ ಭಕ್ತರು ದೇಣಿಗೆ ನೀಡಿ ಭಂಡಾರಮನೆಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕಿದೆ ಎಂದರು.
ಇತಿಹಾಸ : ನೇತ್ರಾವತಿ ನದಿಯ ಸಮುದ್ರ ಸಂಗಮದ ಕವಲಿನ ನಡುವೆ ಹಬ್ಬಿರುವ ಉಳ್ಳಾಲ ಗ್ರಾಮದ ಬಯಲು ಪ್ರದೇಶವೇ ಕೊಟ್ಟಾರ. ಪ್ರಕೃತಿಯ ಮಡಿಲಲ್ಲಿ ಮಲರಾಯನಿಗೆ ಶ್ರೀ ಕೊಟ್ಟಾರ ದೈವಸ್ಥಾನ ನೆಲೆಯೂರಿದೆ. ರಾಣಿ ಅಬ್ಬಕ್ಕಳ ಕಳೆದುಹೋದ ಮೂಗುತ್ತಿ ದೊರೆತ ಹಿಂದೆಯೂ ಸಿಡುಬು ರೋಗ ಕಾಣಿಸಿಕೊಂಡಾಗ ಮಲರಾಯ ದೈವಸ್ಥಾನದ ಅಂಗಣದ ಮಣ್ಣು ಔಷಧಿಯಾಗಿತ್ತು ಅನ್ನುವ ನಂಬಿಕೆ ಜನರಲ್ಲಿ ಮನೆಮಾತಾಗಿತ್ತು. ದೈವಸ್ಥಾನದ ನೈಋತ್ಯ ಭಾಗದಲ್ಲಿ ಬಂಡಿಯನ್ನು ಇರಿಸಲಾಗಿದ್ದು, ಬಂಡಿಯನ್ನು ಪ್ರತಿವರ್ಷ ನಡೆಯುವ ಬಂಡಿ ಉತ್ಸವದ ಸಂದರ್ಭ ಎಲ್ಲರೂ ಸೇರಿಕೊಂಡು ಗದ್ದೆಯಲ್ಲಿ ಎಳೆಯುತ್ತಾರೆ. ದೈವಸ್ಥಾನದಲ್ಲಿ ಬಿಸುಗೆ ಕುಂಟ ಹಾಕುವುದು ನಂತರ 10 ನೇ ದಿನಕ್ಕೆ ಧ್ವಜಾರೋಹಣ ನಡೆಸಿ ಒಂದು ದಿನದ ಕೊಟ್ಯದಾಯನ ಉತ್ಸವ ಮತ್ತು ಎರಡು ದಿನಗಳ ಬಂಡಿ ಉತ್ಸವ ನಡೆಯುವುದು ಮತ್ತು ದೈವಸ್ಥಾನದಿಂದ ಉಳ್ಳಾಲ ಗುತ್ತುವಿಗೆ ಭಂಡಾರ ಹೋಗಿ ಒಂದು ದಿನ ಪ್ರಥಮ ಹೊಸ ಮೆಚ್ಚಿ ನೇಮೋತ್ಸವ ನಡೆಯುತ್ತದೆ. ಎರಡನೆಯದಾಗಿ ಸೇನೆರೆಬೈಲಿಗೆ ಭಂಡಾರ ಹೋಗಿ ಉಳ್ಳಾಲ ದೊಡ್ಡಮನೆ ಸೇನೆರೆ ಮನೆತನ ಹಾಗೂ ಸ್ಥಳೀಯರು ಒಟ್ಟು ಸೇರಿ ಹೊಸ ಮೆಚ್ಚಿ ನೇಮೋತ್ಸವ ನಡೆಯುತ್ತದೆ. ಅಲ್ಲದೆ ದೈವಸ್ಥಾನದಲ್ಲಿ ಚೌತಿ, ನವರಾತ್ರಿ, ಬಲಿಪಾಢ್ಯ, ನಾಗರಪಂಚಮಿ, ಪತ್ತನಾಜೆ ಆಚರಣೆಗಳು ನಡೆಯುತ್ತಿರುತ್ತದೆ. ಪ್ರತಿ ಭಾನುವಾರ ಮತ್ತು ಮಂಗಳವಾರ ಪೂಜೆಯು ನಡೆಯುತ್ತದೆ.
ಈ ಸಂದರ್ಭ ಕ್ಷೇತ್ರದ ಅರ್ಚಕ ಲತೀಶ ಯಾನೆ ಮುಂಡ ಪುಜಾರಿ, ಗೌರವ ಅಧ್ಯಕ್ಷರುಗಳಾದ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ದೇವಕಿ ಆರ್. ಉಳ್ಳಾಲ್, ಪ್ರಧಾನ ಸಂಚಾಲಕ ಶ್ರೀನಿವಾಸ ಕೊರಸಾನ, ಯು.ಕೆ.ಗೋಪಾಲ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ನಿತಿನ್ ರಾಜ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು ಉಪಸ್ಥಿತರಿದ್ದರು.
ಹರ್ಷವರ್ಧನ್ ಕುತ್ತಾರ್ ಸ್ವಾಗತಿಸಿದರು. ಜಗದೀಶ್ ಗೋಳಿಯಡಿ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

March 6, 2026

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ

March 5, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

By UllalaVaniMarch 6, 20260

ಉಳ್ಳಾಲ; ಇಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! ಹತ್ತಿಪ್ಪತ್ತು ಜನ ನಾಗರಿಕರು ಸೇರಿ ತಮಗೆ ಇರುವ ಆತಂಕ ತೋಡಿಕೊಂಡರೆ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕ ಪುನರ್ ಸಂಘಟನೆಗೆ ನಿರ್ಧಾರ

March 5, 2026

ಇರಾನ್ ದಾಳಿ; ಮೂವರು ಭಾರತೀಯರು ಸಾವು…!

March 5, 2026
1 2 3 … 1,825 Next
Automatic YouTube Gallery

ದೇರಳಕಟ್ಟೆ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ `ಸಮನ್ವಯ 2026' ವಾರ್ಷಿಕೋತ್ಸವ

ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ಸಮನ್ವಯ-2026 ವಾರ್ಷಿಕೋತ್ಸವ; ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಪ್ರತಿಭಾ ಪ್ರದರ್ಶನಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #nitte #Samanvaya2026 #Package #Nursing
Show More
ದೇರಳಕಟ್ಟೆ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ `ಸಮನ್ವಯ 2026' ವಾರ್ಷಿಕೋತ್ಸವ
Now Playing
ದೇರಳಕಟ್ಟೆ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ `ಸಮನ್ವಯ 2026' ವಾರ್ಷಿಕೋತ್ಸವ
ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ಸಮನ್ವಯ-2026 ವಾರ್ಷಿಕೋತ್ಸವ; ...
ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ಸಮನ್ವಯ-2026 ವಾರ್ಷಿಕೋತ್ಸವ; ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಪ್ರತಿಭಾ ಪ್ರದರ್ಶನಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #nitte #Samanvaya2026 #Package #Nursing
Show More
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
Now Playing
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ...
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ತೊಕ್ಕೊಟ್ಟು ಒಳಪೇಟೆಯಲ್ಲಿ ಮಾ.8ರಂದು ಶುಭಾರಂಭ

ಗ್ರಾಹಕರಿಗಾಗಿ ಬಿಗ್ ಕಾಂಬೋ ಆಫರ್...!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d