Author: UllalaVani

Kannada News From Coastal Karnataka

ಉಳ್ಳಾಲ : ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ ಇನ್ಸ್‍ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆಯ ಮುಖಂಡನೊಬ್ಬನಿಗೆ ಕೇರಳ ಮೂಲದ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ನಡುರಾತ್ರಿಯೇ ಠಾಣೆಗೆ ಮುತ್ತಿಗೆ ಹಾಕಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆತೆಗೆದುಕೊಂಡಿದ್ದಾರೆ.   ಬಜರಂಗದಳದ ಉಳ್ಳಾಲ ನಗರ,ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಮುಖಂಡ.ಹಲ್ಲೆ ನಡೆಸಿದ  ಕಾಸರಗೋಡು ಜಿಲ್ಲೆಯ ಹೊಸಂಗಡಿ ,ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಆಸಿಫ್(33) ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಘಟನೆಯ ವಿವರ : ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಸಣ್ಣ ಅಪಘಾತ ನಡೆದಿದೆ. ಈ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರ ಅಸಿಫ್ ಶರತ್ ಅವರಿಗೆ ಹಲ್ಲೆ ನಡೆಸಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲ್ಲೆ ವಿಚಾರದಲ್ಲಿ…

Read More

ಮಾಡೂರು: ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಮಾಡೂರು ಶಾರದಾ ನಗರ ಎಂಬಲ್ಲಿ  ಬುಧವಾರ ಸಂಭವಿಸಿದೆ.ಮಾಡೂರು ನಿವಾಸಿ ನಾಗೇಶ್(51) ಮೃತರು. ಮೃತರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ರಜೆಯಿದ್ದ ಕಾರಣ ಮನೆಗೆ ಬೀರಿ ಪೇಟೆಯಿಂದ ತೆಂಗಿನಕಾಯಿ ತರುವ ಸಂದರ್ಭ ಘಟನೆ ಸಂಭವಿಸಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್ಐ ಯಶವಂತ್ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Read More

ತೊಕ್ಕೊಟ್ಟು: ಸಾಂವಿಧಾನಿಕವಾಗಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಧರ್ಮದ  ವಿಚಾರಧಾರೆಗಳ ಕುರಿತು ಹಿಂದೂ ಸಮಾಜಕ್ಕೆ ಹೇಳಿರುವ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸುವ ರಾಜ್ಯ ಸರಕಾರ ಅಸಾಂವಿಧಾನಿಕವಾಗಿ ಧರ್ಮವನ್ನು ಹಿಯ್ಯಾಳಿಸುವವರ  ವಿರುದ್ಧ ಕಠಿಣ ಕ್ರಮ ಜರುಗಿಸದೇ ಇರುವುದು  ತಾರತಮ್ಯವಲ್ಲವೇ ಎಂದು ವಿಶ್ವ ಹಿಂದೂ ಪರಿಷತ್  ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು. ಸಾಹಿತಿ ಹಾಗೂ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಬಾಷಣದ ವಿರುದ್ಧ ದಾಖಲಾಗಿರುವ ಸುಮೊಟೊ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕಿನ್ಯಾದಲ್ಲಿ ಜರಗಿದ ನವ ದಂಪತಿ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಉಪನ್ಯಾಸಕ ಅರುಣ್ ಉಳ್ಳಾಲ್, ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನ ಅಣಕಿಸಿ ,ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ‍್ಯ…

Read More

ಮುಡಿಪು: ಮಂಗಳೂರು ಬಲ್ಮಠ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.ಶಿಬಿರದ ಧ್ವಜಾರೋಹಣ ನೆರವೇರಿಸಿದ ಶಾಲೆಯ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜಿಸುವುದರಿಂದ ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಸೊಗಸು ಅರಿತುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.ಶಿಬಿರ ಉದ್ಘಾಟಿಸಿದ ಭಾರತೀ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ತಂದೆ, ತಾಯಿ, ಗುರುಹಿರಿಯರು, ದೇಶ ಮತ್ತು ಸಮಾಜವನ್ನು ಪ್ರೀತಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಕೆ. ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಬಲ್ಮಠ ಕಾಲೇಜು ಪ್ರಾಂಶುಪಾಲೆ ವನಿತಾ ದೇವಾಡಿಗ ಮಾತನಾಡಿ, ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಶ್ರೀ ಭಾರತೀ ಶಾಲೆ ಹಳೆ ವಿದ್ಯಾರ್ಥಿ ಪೂವಪ್ಪ,…

Read More

ನಾಟೆಕಲ್ : ಬಸ್ -ಕಾರು ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಲ್ಕಟ್ಟ ಸಮೀಪದ ತಿರುವಿನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ.ಆಸೀಫ್ ಕಲ್ಕಟ್ಟ ಇವರ ಬಲಗೈ, ಭುಜದ ಮೂಲೆಗಳು ಮುರಿತಕ್ಕೊಳಗಾಗಿದ್ದರೆ, ಅರಾಫತ್ ಇನೋಳಿ ಎಂಬವರ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ಉಳಿದಂತೆ ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಎನ್ .ಎಸ್ ಟ್ರಾವೆಲ್ಸ್ ಬಸ್ಸು ವಿರುದ್ಧ ಧಿಕ್ಕಿನಿಂದ ಬಂದಿದ್ದು, ಎದುರಿನಿಂದ ನಾಟೆಕಲ್ ನಿಂದ ಕಲ್ಕಟ್ಟ ಕಡೆಗೆ ತೆರಳುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ನಾಲ್ವರನ್ನು ಕದ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ಸುಗಳ ಪೈಪೋಟಿಯಿಂದ ವಾಹನ ಸವಾರರು ಪ್ರಾಣ ತೆತ್ತಬೇಕಾಗಿದೆ. ಬಸ್ಸು ಚಾಲಕರ ವೇಗಕ್ಕೆ ಕಡಿವಾಣ ಹಾಕಬೇಕು ಹಾಗೂ ಟೈಮಿಂಗ್ ವಿಚಾರವನ್ನು ಖಾಸಗಿ ಬಸ್ ಮಾಲಕರ ಸಂಘ ಹಾಗೂ ಸಂಚಾರಿ ಪೊಲೀಸರು ಸೇರಿಕೊಂಡು ಪರಿಷ್ಕರಿಸಬೇಕು ಅನ್ನುವ ಆಗ್ರಹ ಕೇಳಿಬಂದಿದೆ. ಇನ್ನೊಂದೆಡೆ ಕಲ್ಕಟ್ಟ ತಿರುವು ಪ್ರದೇಶ ಅಪಘಾತ ವಲಯ , ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅನ್ನುವ ಆಗ್ರಹಕೇಳಿಬಂದಿದೆ.…

Read More

ಅಧ್ಯಕ್ಷರಾಗಿ ಕೆ.ಟಿ.ಸುವರ್ಣ ಉಪಾಧ್ಯಕ್ಷರಾಗಿ ಎ.ಜೆ.ಶೇಖರ್ ತೊಕ್ಕೊಟ್ಟು: ತೊಕ್ಕೊಟ್ಟಿನಲ್ಲಿ ಹೊಸದಾಗಿ ಪ್ರಾರಂಭವಾಗುವ ಸಹ್ಯಾದ್ರಿ ಸಹಕಾರಿ ಸೊಸೈಟಿ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಇಂದು ಸಹಕಾರಿ ಸಂಘಗಳ ಜಿಲ್ಲಾ ನೋಂದಾವಣಾಧಿಕಾರಿ ಶಿವಲಿಂಗಯ್ಯ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿ ನಡೆಸಿಕೊಟ್ಟರು.ಸೊಸೈಟಿ ಅಧ್ಯಕ್ಷರಾಗಿ ಕೆ.ಟಿ ಸುವರ್ಣ,ಉಪಾಧ್ಯಕ್ಷರಾಗಿ ಎ.ಜೆ. ಶೇಖರ್ ಆಯ್ಕೆಗೊಂಡರೆ. ನಿರ್ದೇಶರಾಗಿ ಸತೀಶ್ ಕರ್ಕೇರ, ಬಾಬು ಶಾಸ್ತ, ಬಿ.ಡಿ.ಗೋಪಾಲ, ದಿನೇಶ್ ಅತ್ತಾವರ, ಆನಂದ ಕೆ, ಶಿವಪ್ರಸಾದ್, ಮಾಧವ ಪೂಜಾರಿ, ಯತೀಶ್ ಹೊಸಗದ್ದೆ ಮತ್ತು ಶ್ರೀಮತಿ ದಿವ್ಯ ನವೀನ್ ಸುವರ್ಣ, ನಿಶಾ ವಿನೋದ್ ಕುಮಾರ್ ನಿರ್ದೇಶಕರಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಆಖ ಕಚೇರಿಯ ಶ್ರೀಯುತ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Read More

ಉಳ್ಳಾಲ: ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿಯಿದೆ, ನಂಬಿಕೆಯೂ ಇರುವುದರಿಂದ ಮಂಗಳೂರು  ವ್ಯಾಪ್ತಿಗೆ ಬರುವಾಗ ಈ ಭಾಗಕ್ಕೆ  ಭೇಟಿ ನೀಡುತ್ತಲಿರುವೆೆಂದು ಹ್ಯಾಟ್ರಿಕ್ ಹೀರೋ  ಡಾ| ಶಿವರಾಜ್ ಕುಮಾರ್ ಹೇಳಿದ್ದಾರೆ..ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿ ಅಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು. ಶೃಂಗೇರಿ ಮಠ, ಶ್ರೀ ಕೃಷ್ಣ ಮಠ,  ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ ಕ್ಷೇತ್ರಕ್ಕೆ  ಸಂದರ್ಶನಗೈಯ್ಯುತ್ತಾ ಬಂದಿದ್ದೇನೆ. ಎಲ್ಲಾ ಸಾನಿಧ್ಯಕ್ಕೆ ಭೇಟಿಕೊಟ್ಟಾಗ ನೆಮ್ಮದಿಯಿರುತ್ತದೆ.  ನಂಬಿಕೆಯೂ ಬಲವಾಗಿರುವುದರಿಂದ ಜೀವನ ಚೆನ್ನಾಗಿರಲಿ ಅನ್ನುವ ಭರವಸೆಯ ಜೊತೆಗೆ ಸಂದರ್ಶನಗೈದಿರುವೆ. ನ.15 ರ ಆಸುಪಾಸಿನಲ್ಲಿ ಅರ್ಜುನ್ ಜನ್ಯ ನಿರ್ದೇಶಿಸಿದ ರಿಯಲ್ ಸ್ಟಾರ್ ಉಪೇಂದ್ರ , ರಾಜ್ ಬಿ ಶೆಟ್ಟಿ ಸಹಿತ ತಾನು ನಟಿಸಿದ ಫಾರ್ಟಿಫೈವ್ ಚಿತ್ರ ತೆರೆಕಾಣಲಿದೆ. ಇನ್ನೊಂದು ಚಿತ್ರದ ಮಾತುಕತೆ ಇದ್ದು, ಶೀಘ್ರವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂದರು.ಈ ಸಂದರ್ಭ ಗೀತಾ ಶಿವರಾಜ್ ಕುಮಾರ್ , ಸಿನೆಮಾ ನಿರ್ಮಾಪಕ ಶ್ರೀಕಾಂತ್, ರಾಜೇಶ್ ಭಟ್, ಶ್ರೀ ಪಂಜಂದಾಯ ಬಂಟ…

Read More

ಕೊಲ್ಯ : ಇಲ್ಲಿನ ಕುಜುಮಗದ್ದೆ ಸಮೀಪ ಮಹಿಳೆಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಕುಜುಮಗದ್ದೆ ನಿವಾಸಿ ವಾರಿಜಾ (೪೫) ಸಾವನ್ನಪ್ಪಿದವರು. ಓರ್ವ ಪುತ್ರನ ಜತೆಗೆ ನೆಲೆಸಿದ್ದ ಅವರು ಮನೆ ಸಮೀಪದ ಬಾವಿಗೆ ಕಾಲುಜಾರಿ ಬಿದ್ದಿರುವ ಶಂಕೆಯಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಮಾಡೂರು : ಅವಿವಾಹಿತರೊಬ್ಬರು ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಪ.ಪಂ ವ್ಯಾಪ್ತಿಯ ಮಾಡೂರು ಸಮೀಪ ನಡೆದಿದೆ.ಬಾಡಿಗೆ ಮನೆಯ ನಿವಾಸಿ ಹರೀಶ್ (೩೫) ಆತ್ಮಹತ್ಯೆ ನಡೆಸಿದವರು. ಮರ ಹಾಗೂ ಚಿನ್ನದ ಕೆಲಸ ನಿರ್ವಹಿಸುತ್ತಿದ್ದ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಅವಿವಾಹಿತರಾಗಿರುವ ಇವರು ಮೂರು ವರ್ಷಗಳಿಂದ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಹರೀಶ್ ಪತ್ತೆಯಾಗಿದ್ದಾರೆ. ಮೃತರ ಸಂಬAಧಿಕರು ಮಡ್ಯಾರು ಸಮೀಪ ವಾಸಿಸುತ್ತಿದ್ದರು. ಸ್ಥಳೀಯವಾಗಿ ಹೆಚ್ಚು ಮಾತನಾಡದ ವ್ಯಕ್ತಿತ್ವದ ಹರೀಶ್ , ಖಿನ್ನತೆಯಿಂದ ಕೃತ್ಯ ಎಸಗಿರುವ ಶಂಕೆಯಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಶವಮಹಜರಿಗೆ ಕಳುಹಿಸಿದ್ದಾರೆ.

Read More

ಉಳ್ಳಾಲ : ಯು.ಆರ್ ಫೌಂಡೇಶನ್(ರಿ) ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ‌.ಪಿ.ಎಲ್ ಧರ್ಮರವರಿಗೆ ಅಭಿನಂದನಾ ಕಾರ್ಯಕ್ರಮ ದೇರಳಕಟ್ಟೆಯ ಯು.ಆರ್ ಕಾಂಪೌಂಡ್ ನಲ್ಲಿ ನಡೆಯಿತು. ಯು.ಆರ್ ಫೌಂಡೇಶನ್(ರಿ) ಅಧ್ಯಕ್ಷ ಉಸ್ಮಾನ್.ಎ.ಎಂ, ಜಿ.ಎ ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಜಿ.ಎ ರಫೀಕ್, ಎ.ಎಂ ಫ್ಯಾಮಿಲಿಯ ಹಿರಿಯರಾದ ಶರೀಫ್‌ ಮಲಾರ್, ಪಂಜಿಮೊಗರು ರಿಫಾಯಿಯ್ಯಾ ಮದರಸ ಅಧ್ಯಾಪಕ ರಿಯಾಝ್ ಮದನಿ ಬಂಟ್ವಾಳ,  ಎಸ್ ಸಿ‌ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹೈದರ್ ಅಲಿ ಎ.ಎಂ, ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಅಝೀಝ್, ಹನೀಝ್ ಪಕಲಡ್ಕ, ಎಂ.ಎಸ್ ಝೈನುದ್ದೀನ್ ಪುತ್ತಿಗೆ,ಇಬ್ರಾಹಿಂ ಮೊಂಟೆಪದವು, ಅಬ್ದುಲ್ ಅಝೀಝ್ ಕಟ್ಟೆ, ಜಿ.ಎಂ ಇಮ್ರಾನ್ ಬಾಂಬಿಲ, ಫಯಾಝ್‌ ಜಿ.ಎ, ಯು.ಆರ್ ಫೌಂಡೇಶನ್ ನ ಸದಸ್ಯರಾದ ಸಫ್ವಾನ್ ಯು.ಆರ್, ಇರ್ಷಾದ್ ಯು.ಆರ್ ಉಪಸ್ಥಿತರಿದ್ದರು.

Read More