Author: UllalaVani

Kannada News From Coastal Karnataka

ತೊಕ್ಕೊಟ್ಟು : ರಾಜ್ಯ ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉಳ್ಳಾಲ ತಾಲೂಕಿನ 7,563 ಬಿಪಿಎಲ್ ಕಾರ್ಡುದಾರರು ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದರಲ್ಲಿ 420 ಮಂದಿಯ ಬಿಪಿಎಲ್ ಕಾರ್ಡುಗಳನ್ನು ಅಮಾನತಿನಲ್ಲಿರಿಸಲಾಗಿದೆ.  ಶೀಘ್ರವೇ ರಾಜ್ಯ ಸರಕಾರ ಹಾಗೂ ರಾಜ್ಯ ಆಹಾರ ಇಲಾಖೆ ಸಚಿವರು ಗೊಂದಲಗಳನ್ನು ಪರಿಹರಿಸಬೇಕು ಎಂದು ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ತಿಳಿಸಿದರು. ತೊಕ್ಕೊಟ್ಟು ಸೇವಾಸೌಧ ದ ಎರಡನೇ ಮಹಡಿಯಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ  ಸೋಮವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರುಉಳ್ಳಾಲ ತಾಲೂಕಿನಲ್ಲಿ ಸುಮಾರು 29415 ಬಿಪಿಎಲ್ ಪಡಿತರಿದ್ದಾರೆ. ಇದರಲ್ಲಿ 420 ಪಡಿತರ ಚೀಟಿಯನ್ನು ಹಲವು ಮಾನದಂಡಗಳ ಆಧಾರದ ಮೇಲೆ ಅಮಾನತಿನಲ್ಲಿರಿಸಲಾಗಿದೆ. ಅಲ್ಲದೆ 7563 ಬಿಪಿಎಲ್ ಪಡಿತರನ್ನು ಗ್ರಾಮ ಆಡಳಿತಾಧಿಕಾರಿಗಳ ವರದಿಗಾಗಿ ಕಳುಹಿಸಲಾಗಿದೆ. ಕೇಂದ್ರಕ್ಕೆ ಸೇವಾ ತೆರಿಗೆ ಕಟ್ಟಿದವರನ್ನು ಅಮಾನತಿನಲ್ಲಿರಿಸಿದ್ದು, ಮನೆ ಕಟ್ಟುವ ಉದ್ದೇಶದಿಂದ ಬ್ಯಾಂಕ್ ಸಾಲ ಪಡೆಯಲು  ಹಲವು ಕುಟುಂಬಸ್ಥರು ಸೇವಾ ತೆರಿಗೆ ಪಾವತಿಸಿರುತ್ತಾರೆ. ಅದರ ಮೇಲೆ ಮಾನದಂಡ ಪ್ರಯೋಗ…

Read More

ದೇರಳಕಟ್ಟೆ : ಇಲ್ಲಿನ ಪಾನೀರು ಅಂಗನವಾಡಿ ಸಮೀಪ ಚಿರತೆ ಕಂಡುಬAದಿದ್ದು, ಈ ಕುರಿತು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಅಂಗನವಾಡಿ ಆಸುಪಾಸಿನಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಸಮೀಪದ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಚಿರತೆ ದಾರಿಯಾಗಿ ಹೋಗುತ್ತಿರುವ ದೃಶ್ಯ ಸೆರೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಅಂಗನವಾಡಿ ಸ್ಥಳೀಯರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಮಡ್ಯಾರು, ಮಾಡೂರು, ದೇರಳಕಟ್ಟೆ ನಿವಾಸಿಗಳು ಆತಂಕಗೊಂಡಿದ್ದಾರೆ. ಎಚ್ಚರಿಕೆಯ ವಾಯ್ಸ್ ಮೆಸೇಜ್ಕೋಟೆಕಾರು ಪಟ್ಟಣ ಪಂಚಾಯತ್ ನ 11 ನೇ ವಾರ್ಡಿನ ಪಾನೀರುನಲ್ಲಿರುವ ಕಾಂಗ್ರೆಸ್ ಮುಖಂಡ ಆಲ್ವಿನ್ ಎಂಬವರ ಕಂಪೌಂಡ್ ಮನೆ ಮುಂದೆ ಸಾಗಿರುವ ಚಿರತೆ, ಇನ್ಸು ಟೀಚರ್ ಎಂಬವರಿಗೆ ಸೇರಿದ ಗಿಡಗಂಟೆಗಳಿರುವ ಖಾಲಿ ಜಾಗದ ಒಳಕ್ಕೆ ನುಸುಳಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಜಾಗೃತೆಯಿಂದ ಇರಲು ವಾಯ್ಸ್ ಮೆಸೇಜ್ ಮೂಲಕ ಪ್ರತ್ಯಕ್ಷದರ್ಶಿ ಮನವಿ ಮಾಡಿಕೊಂಡಿದ್ದಾರೆ. ತ್ಯಾಜ್ಯ ಎಸೆಯುವುದು ಈ ಭಾಗದಲ್ಲಿ ಜಾಸ್ತಿಯಾಗುತ್ತಿರುವುದರಿಂದ ಅದನ್ನು ತಿನ್ನಲೆಂದು ಕಾಡಿನಲ್ಲಿರುವ ಚಿರತೆ ಈ ಭಾಗಕ್ಕೆ ಬಂದಿರುವ ಶಂಕೆಯನ್ನು ವಾಯ್ಸ್ ಮೆಸೇಜ್…

Read More

ತಲಪಾಡಿ: ತಲಪಾಡಿಯ ಖ್ಯಾತ ಬಾಣಸಿಗ, ಕಬ್ಬಡ್ಡಿ ಪಟು , ಸಹಾಯಕ ಅರ್ಚಕ ಶ್ರೀಹರಿ ಭಟ್ (53) ಹೃದಯಾಘಾತಕ್ಕೊಳಗಾಗಿ ಭಾನುವಾರ ಸಂಜೆ ನಿಧನ ಹೊಂದಿದ್ದಾರೆ.ಉತ್ತಮ ಕಬ್ಬಡ್ಡಿ ಪಟುವಾಗಿದ್ದ ಅವರು ಖ್ಯಾತ ಪಾಕತಜ್ಞರೂ ಹೌದು. ಉಳ್ಳಾಲ ಭಾಗದ ದೇವಸ್ಥಾನಗಳಲ್ಲಿ ಸೇರಿದಂತೆ ಕೊಲ್ಯ ಮೂಕಾಂಬಿಕಾ ದೇವಸ್ಥಾನ, ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಾಣಸಿಗರಾಗಿ ಹಲವು ವರ್ಷಗಳ ಕಾಲ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ದೇವಿಪುರ ತಲಪಾಡಿಯ ದುರ್ಗಾಪರಮೇಶ್ವರಿ ಯುವಕ ಸಂಘ ಸಕ್ರಿಯ, ಅವಿನಾಶಿ ಭಜನಾ ಮಂದಿರ ಸದಸ್ಯರಾಗಿ ಶಿವಳ್ಳಿ ಸ್ಪಂಧನಾ ಮಾಜಿ ಅಧ್ಯಕ್ಷರಾಗಿಯೂ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಅವರು ಪತ್ನಿ ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Read More

ಉಳ್ಳಾಲ: ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲ ಇಡೀ ಊರಿಗೆ ಆದರ್ಶವಾಗಿದೆ. 25 ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಸಂಘಟನೆ ಸ್ವಂತ ಕಟ್ಟಡದ ದಶಮಾನೋತ್ಸವವನ್ನು ಆಚರಿಸುತ್ತಿದೆ. ಬೆಳ್ಳಿಹಬ್ಬದ ಪ್ರಯುಕ್ತ 12 ತಿಂಗಳಿಗೆ ವಿವಿಧ 12 ಕಾರ್ಯಕ್ರಮಗಳನ್ನು ಆಯೋಜಿಸಿವ ಮೂಲಕ ಮಾದರಿಯಾಗಿದೆ ಎಂದು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇದರ ಪ್ರ.ಕಾ ಹಾಗೂ ದುರ್ಗಾವಾಹಿನಿ ಮಹಿಳಾ ಮಂಡಲದ ಗೌರವ ಸಲಹೆಗಾರ ಪವಿತ್ರ ಗಟ್ಟಿ ಕುತ್ತಾರ್ ಹೇಳಿದರು.ಅವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.10ನೇ ತಿಂಗಳ 10ನೇ ಕಾರ್ಯಕ್ರಮವಾದ ಕ್ರೀಡಾಕೂಟವನ್ನು ಮಹಿಳಾ ಮಂಡಳಿ ಹಮ್ಮಿಕೊಂಡಿದೆ. ನ.24 ರಂದು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ರಾತ್ರಿ ಹಗಲು ದುಡಿದ ಎಲ್ಲಾ ಮಹಿಳಾ ಕರ‍್ಯಕರ್ತೆಯರಿಗೆ ದೈವ ದೇವರು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಿದರು.ಕಾರ್ಯಕ್ರಮ ಉದ್ಘಾಟಿಸಿದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯ ಶಿಶು ಶಿಕ್ಷಣ ವಿಭಾಗ ಮುಖ್ಯಸ್ಥೆ ಉಜ್ವಲ್ ರಾಜೇಶ್…

Read More

ಕುತ್ತಾರು : ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕ ಪಾದಚಾರಿಗೆ ಮೂವರು ಸಂಚರಿಸುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಕುತ್ತಾರು ವೆಜಿನೇಷನ್ ಹಾಗೂ ಅಪೋಲೋ ಮೆಡಿಕಲ್ ಎದುರುಗಡೆ ಗುರುವಾರ ಸಂಜೆ ವೇಳೆ ಸಂಭವಿಸಿದೆ.ಸಂತೋಷನಗರ ನಿವಾಸಿ ಚಂದ್ರಹಾಸ್ (74) ಗಾಯಗೊಂಡವರು. ಮನೆಗೆ ತೆರಳಲು ರಸ್ತೆ ದಾಟುವ ಸಂದರ್ಭ ಕುತ್ತಾರು ಕಡೆಯಿಂದ ತೊಕ್ಕೊಟ್ಟುವಿನತ್ತ ತೆರಳುತ್ತಿದ್ದ ಮೂವರಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಘಟನೆಗೆ ಸ್ಕೂಟರ್ ಸವಾರರ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುತ್ತಾರು: ಬೈಕ್ , ರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮೆಸ್ಕಾಂ ಎದುರುಗಡೆ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ.ಉಳ್ಳಾಲ ನಿವಾಸಿ ಗುರುಪ್ರಸಾದ್ (25) ಗಾಯಗೊಂಡವರು. ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಯತ್ತ ನಾರಾಯಣ ರಾವ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ, ಹಿಂಬದಿಯಲ್ಲಿದ್ದ ಬೈಕ್ ಅದನ್ನು ಓವರ್ ಟೇಕ್ ಮಾಡುತ್ತಿದ್ದಂತೆ ಎದುರಿನಿಂದ ಬಂದ ಸ್ವಿಫ್ಟ್ ಕಾರು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ರಿಕ್ಷಾಗೂ ಢಿಕ್ಕಿ ಹೊಡೆದಿದೆ. ಬೈಕ್ ನ ಎದುರು ಮತ್ತು ಹಿಂಭಾಗ ಎರಡೂ ಕಡೆಗಳಲ್ಲಿ ನುಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ: ನಾಟೆಕಲ್ ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಶು ಚಿಕಿತ್ಸಾ ವಿಭಾಗವು ಶಿಶು ಗ್ಯಾಸ್ಟ್ರೋಂಟರೋಲಜಿಯ ನಿರಂತರ ವೈದ್ಯಕೀಯ ಶಿಕ್ಷಣ ಕರ‍್ಯಗಾರ- 2024 ಕರಾವಳಿ ಶಿಶು ಗ್ಯಾಸ್ಟ್ರೋಂಟರೋಲಜಿಯ ಪ್ರಸ್ತುತ ಸ್ಥಿತಿಯ ಕುರಿತು ಒಂದು ದಿನದ ಕಾರ್ಯಗಾರವನ್ನು ಅ.26 ರ ಶನಿವಾರ ಕಣಚೂರು ವೈದ್ಯಕೀಯ ಕಾಲೇಜಿನ ಮೂರನೇ ಮಹಡಿಯ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಹಾಗೂ ನವಜಾತ ಶಿಶು ಗ್ಯಾಸ್ಟ್ರೋಎಂಟರೋಲಜಿಸ್ಟ್ ಡಾ. ಗೌತಮ್ ಪೈ ತಿಳಿಸಿದ್ದಾರೆ. ಗುರುವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು ಈ ಕಾರ್ಯಕ್ರಮದ ನೇತೃತ್ವವನ್ನು ಕಣಚೂರು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ರಾದ ಡಾ. ಯು.ಕೆ. ಮೋನು ಮತ್ತು ನಿರ್ದೇಶಕರಾದ ಅಬ್ದುರಹಿಮಾನ್ ವಹಿಸಲಿದ್ದಾರೆ ಎಂದರು.ಕರ‍್ಯಗಾರದಲ್ಲಿ ಮಕ್ಕಳ ಯಕೃತ್ ಕುರಿತಾದ ವಿವಿಧ ರೀತಿಯ ಕಾಯಿಲೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತಿದ್ದು, ಇದರಲ್ಲಿ ಶಿಶು ಗ್ಯಾಸ್ಟ್ರೋಂಟರೋಲಜಿಯ ಕಡೆಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಿರ್ಲಕ್ಷ್ಯತೆಯನ್ನು ಪರಿಹರಿಸುವ ಪ್ರಯತ್ನವನ್ನು ಈ ಕಾರ್ಯಗಾರದ ಮೂಲಕ…

Read More

ಉಳ್ಳಾಲ : ತುಳುನಾಡಿನಲ್ಲಿ ದೈವಾರಾಧನೆಗೆ ಪ್ರಾಮುಖ್ಯತೆ ಹೆಚ್ಚಿದ್ದು, ಕೌಟುಂಬಿಕ ಭದ್ರತೆ, ಸಾಮಾಜಿಕ ನ್ಯಾಯಕ್ಕಾಗಿ ದೈವಾರಾಧನೆಯ ಪರಿಕಲ್ಪನೆ ಜನರ ಮನದಲ್ಲಿ ದಟ್ಟವಾಗಿದೆ. ಇಂತಹ ನಂಬಿಕೆಯನ್ನಿಟ್ಟುಕೊಂಡು ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಶ್ರೀ ಕೊಟ್ಟಾರ ಸ್ಥಾನ, ಮಲರಾಯ ದೈವಸ್ಥಾನದ ಭಂಡಾರಮನೆ ದೈವಚಿತ್ತದಂತೆ ಮುಂದಿನ ಬಂಡಿಯ ಮೊದಲು ನಿರ್ಮಾಣವಾಗಲಿ ಎಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಅಭಿಪ್ರಾಯ ಪಟ್ಟರು.ಉಳ್ಳಾಲ ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ,ಶ್ರೀ ಮಲರಾಯ ದೈವಸ್ಥಾನದಲ್ಲಿ ದೈವದ ಅಪ್ಪಣೆಯಂತೆ 2025 ರ ಬಂಡಿ ಉತ್ಸವದ ಒಳಗಾಗಿ ಸುಮಾರು 1.25 ಕೋಟಿ ವೆಚ್ಚದಲ್ಲಿ ಮಲರಾಯ ಮತ್ತು ಪರಿವಾರ ದೈವಗಳ ನೂತನ ಭಂಡಾರ ಮನೆ ನಿರ್ಮಾಣವಾಗಲಿದ್ದು ,ಗುರುವಾರದಂದು ಭಂಡಾರ ಮನೆ ಕಾಮಗಾರಿಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.ಭಾರತೀಯ ಸಂಸ್ಕೃತಿಯು ಧರ್ಮದ ಆಧಾರದಲ್ಲೇ ಇದೆಯೇ ಹೊರತು ಮತದ ಆಧಾರದಲ್ಲಿಲ್ಲ. ಧರ್ಮದ ಸೂಕ್ಷ್ಮತೆಯನ್ನು ಅರಿತು ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಪುರಾತನ ಕಾಲದಿಂದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ…

Read More

ಉಳ್ಳಾಲ: ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್‌ ನಡುವೆ ಸಂಭವಿಸಿದ ಅಪಘಾತದಲ್ಲಿ 11ರ ಹರೆಯದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಇಂದು ಸಂಭವಿಸಿದೆ. ಬಡಕಬೈಲು ಮಹಮ್ಮದ್‌ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11) ಮೃತ ವಿದ್ಯಾರ್ಥಿನಿ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪಿಕಪ್‌ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಆಯಿಷಾ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ. ರಿಕ್ಷಾದಲ್ಲಿದ್ದ ಇತರೆ ನಾಲ್ವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಸಾರಲಾಗಿದೆ.

Read More

ಉಳ್ಳಾಲ:  ಹಣದ ಆಸೆಯಿಂದ ಹೆಣ ಸುಡುವವರಿಬ್ಬರ ಗಲಾಟೆ ತಾರಕಕ್ಕೇರಿತ್ತು, ಉಳ್ಳಾಲ ಭಾಗದಲ್ಲಿ ಹಿಂದು ಅಂತಿಮ ಸಂಸ್ಕಾರ ನಡೆಸಲು ಆರ್ಥಿಕವಾಗಿ ದುರ್ಬಲರಿಗೆ ವಿಧಿಯೇ ಇಲ್ಲ ಅಂದಾಗ  ಎಲ್ಲರಿಗೆ ಎದುರಾಗಿ ನಿಂತು ಧೈರ್ಯ ತೋರಿ ಉಚಿತ ಅಂತಿಮ ಸಂಸ್ಕಾರ ನಡೆಸಿದವರು ಬಾಬು ಪಿಲಾರ್. 2024ರ ಅ.20ಕ್ಕೆ  ಜೀವನದುದ್ದಕ್ಕೂ ಸೇವೆ ನಡೆಸಿದ 4,500 ಮೃತದೇಹಗಳಾಗಿದೆ ಅನ್ನುವುದು ಅವರು ಬರೆದಿಟ್ಟ ಕ್ಯಾಲೆಂಡರಿನಲ್ಲಿ ದಾಖಲಾಗಿದೆ. ಶ್ರೇಷ್ಟ ಮಾನವೀಯತೆ ಮೈಗೂಡಿಸಿದ ಸರಳ ವ್ಯಕ್ತಿತ್ವದ ವ್ಯಕ್ತಿ ಬಾಬು ಪಿಲಾರ್ ಅವರಿಗೆ ಇಂದು  ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.ಅಸೈಗೋಳಿ ಅಭಯಾಶ್ರಮದ  ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ  ಗೌರವಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿ,  ಎಸ್ ಎಸ್ ಎಲ್ ಸಿ ನಂತರ ಪೈಂಟಿಂಗ್ ವೃತ್ತಿ ಆರಂಭಿಸಿದವರು, ಅನಿವಾರ್ಯವಾಗಿ ಪೈಂಟಿಂಗ್ ನಲ್ಲಿ ಹೊಸಮನೆಗಳೆರಡರ ನಾಮಫಲಕಗಳನ್ನು ಬರೆಯಲು ಗುತ್ತಿಗೆದಾರರು ಸೂಚಿಸಿದಂತೆ ಬರೆದ ಬರವಣಿಗೆ  ಅವರ ವೃತ್ತಿ ಜೀವನ ಬದಲಾಯಿಸಿತು. ಬಟ್ಟೆ ಬ್ಯಾನರ್ ಬರೆಯುವ ಕಾಯಕವನ್ನು ಮುಂದುವರಿಸಿದ ಬಾಬಣ್ಣ ತೊಕ್ಕೊಟ್ಟುವಿನಲ್ಲಿ ಗೋಡೆಯಲ್ಲಿ ಬಟ್ಟೆಗಳನ್ನು ನೇತುಹಾಕುತ್ತಾ 2ಮೀ…

Read More