Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕ್ಯಾಲೆಂಡರ್‌ನಲ್ಲಿ 4,500 ಮೃತದೇಹದ  ಉಚಿತ ಅಂತಿಮ ಸಂಸ್ಕಾರ ದಾಖಲುಬಾಬು ಪಿಲಾರ್ ನಿಸ್ವಾರ್ಥ ಸೇವೆಗೆ ಉಳ್ಳಾಲ ಪ್ರೆಸ್ ಕ್ಲಬ್ ಗೌರವ

UllalaVaniBy UllalaVaniOctober 23, 2024No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ:  ಹಣದ ಆಸೆಯಿಂದ ಹೆಣ ಸುಡುವವರಿಬ್ಬರ ಗಲಾಟೆ ತಾರಕಕ್ಕೇರಿತ್ತು, ಉಳ್ಳಾಲ ಭಾಗದಲ್ಲಿ ಹಿಂದು ಅಂತಿಮ ಸಂಸ್ಕಾರ ನಡೆಸಲು ಆರ್ಥಿಕವಾಗಿ ದುರ್ಬಲರಿಗೆ ವಿಧಿಯೇ ಇಲ್ಲ ಅಂದಾಗ  ಎಲ್ಲರಿಗೆ ಎದುರಾಗಿ ನಿಂತು ಧೈರ್ಯ ತೋರಿ ಉಚಿತ ಅಂತಿಮ ಸಂಸ್ಕಾರ ನಡೆಸಿದವರು ಬಾಬು ಪಿಲಾರ್. 2024ರ ಅ.20ಕ್ಕೆ  ಜೀವನದುದ್ದಕ್ಕೂ ಸೇವೆ ನಡೆಸಿದ 4,500 ಮೃತದೇಹಗಳಾಗಿದೆ ಅನ್ನುವುದು ಅವರು ಬರೆದಿಟ್ಟ ಕ್ಯಾಲೆಂಡರಿನಲ್ಲಿ ದಾಖಲಾಗಿದೆ. ಶ್ರೇಷ್ಟ ಮಾನವೀಯತೆ ಮೈಗೂಡಿಸಿದ ಸರಳ ವ್ಯಕ್ತಿತ್ವದ ವ್ಯಕ್ತಿ ಬಾಬು ಪಿಲಾರ್ ಅವರಿಗೆ ಇಂದು  ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಅಸೈಗೋಳಿ ಅಭಯಾಶ್ರಮದ  ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ  ಗೌರವಿಸಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿ,  ಎಸ್ ಎಸ್ ಎಲ್ ಸಿ ನಂತರ ಪೈಂಟಿಂಗ್ ವೃತ್ತಿ ಆರಂಭಿಸಿದವರು, ಅನಿವಾರ್ಯವಾಗಿ ಪೈಂಟಿಂಗ್ ನಲ್ಲಿ ಹೊಸಮನೆಗಳೆರಡರ ನಾಮಫಲಕಗಳನ್ನು ಬರೆಯಲು ಗುತ್ತಿಗೆದಾರರು ಸೂಚಿಸಿದಂತೆ ಬರೆದ ಬರವಣಿಗೆ  ಅವರ ವೃತ್ತಿ ಜೀವನ ಬದಲಾಯಿಸಿತು. ಬಟ್ಟೆ ಬ್ಯಾನರ್ ಬರೆಯುವ ಕಾಯಕವನ್ನು ಮುಂದುವರಿಸಿದ ಬಾಬಣ್ಣ ತೊಕ್ಕೊಟ್ಟುವಿನಲ್ಲಿ ಗೋಡೆಯಲ್ಲಿ ಬಟ್ಟೆಗಳನ್ನು ನೇತುಹಾಕುತ್ತಾ 2ಮೀ ಬ್ಯಾನ್ರಿಗೆ 30 ರೂ. ನಲ್ಲಿ ಗ್ರಾಹಕರಿಗೆ ನೀಡಲು ಆರಂಭಿಸಿದ್ದರು. ಸ್ಥಳದಲ್ಲಿ 60 ರೂ. ಇದ್ದರೂ ತನ್ನ ಸೇವಾ ಭಾಗವಾಗಿ ಕಲೆಯನ್ನು ಮಾರಾಟದ ಭಾಗವಾಗಿ ಇರಿಸಬಾರದು ಅನ್ನುವ ಮನಸ್ಸಿನಿಂದ ಕಡಿಮೆಯಲ್ಲಿ ಬ್ಯಾನರ್ ಬರೆಯುವುದು ಇತರೆರೆ ಕೆಂಗಣ್ಣಿಗೂ ಗುರಿಯಾಗಿದ್ದರು. 1982 ರಲ್ಲಿ ಉಳ್ಳಾಲಬೈಲ್ ನಲ್ಲಿ  ಹೆಣ ಸುಡುವ ವಿಚಾರಕ್ಕೆ ಸಂಬಂಧಿಸಿ ಅಂದಿನ ಕಾಲದಲ್ಲಿ ರೂ.400 ಪಡೆಯಲೆಂದೇ ಇಬ್ಬರ ನಡುವೆ ನಡೆಯುತ್ತಿದ್ದ ಗಲಾಟೆಯಿಂದ ಸಾವನ್ನಪ್ಪಿದವರ ಮನೆಮಂದಿಗಿದ್ದ ಅಸಮಾಧಾನವನ್ನು ದೂರ ಮಾಡಿಸಿ, ಚೆಂಬುಗುಡ್ಡೆಯಲ್ಲಿ  ಕಟ್ಟಿಗೆಯನ್ನು ಇಟ್ಟು ಉಚಿತವಾಗಿ ಸೇವೆಗೈದವರು ಬಾಬಣ್ಣ.  ಇದರಿಂದಾಗಿ ಮೃತದೇಹ ಸುಡಲು ಅಸಾಧ್ಯವಾಗದ  ಆರ್ಥಿಕವಾಗಿ ಹಿಂದುಳಿದ ಮನೆಯವರು ನಂತರ ಬಾಬಣ್ಣನನ್ನು ಹುಡುಕುತ್ತಲೇ ಅಂತಿಮ ಸಂಸ್ಕಾರ ನಡೆಸಲು ಆರಂಭಿಸಿದ್ದರು. ಕೊಣಾಜೆಯಿಂದ ಕೇರಳದ ಕುಂಬ್ಳೆವರೆಗೂ ದು:ಖಿತರ ಮನೆಯಲ್ಲಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುತ್ತಿದ್ದ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಹೊಂದಿದ ನಂತರ ಕಟ್ಟಿಗೆಯನ್ನು ಇಡುವ ಕಾಯಕ ಬಿಟ್ಟು , ಅಂತಿಮ ಸಂಸ್ಕಾರವಿರುವ ಮನೆಗಳಲ್ಲಿ ಮೃತದೇಹವನ್ನು ಸ್ನಾನ ಮಾಡುವುದರಿಂದ ಹಿಡಿದು ಅಲಂಕಾರಗೊಳಿಸಿ, ಚಟ್ಟ ಏರಿಸುವವರೆಗೆ ಸೇವೆ ನಡೆಸಲು ಆರಂಭಿಸಿದ್ದಾರೆ. ಹೀಗೆ ಎಲ್ಲಿ ಮರಣವಾದರೂ ಬಾಬಣ್ಣನನ್ನು ಕರೆಯುವವರು ಈಗಲೂ ಅನೇಕರಿದ್ದಾರೆ. ಅಂತಿಮ ಸಂಸ್ಕಾರದ ಸೇವೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ಉಳ್ಳಾಲ ಭಾಗದಲ್ಲಿ ಪರಿಚಯಿಸಿದ್ದೇ ಬಾಬಣ್ಣ ನೇತೃತ್ವದ ತಂಡ.  ದೇಶದಾದ್ಯಂತ   1977ರಲ್ಲಿ ವಿದ್ಯಾರ್ಥಿಗಳಿಗೆ  ಬೀಡಿ ಸ್ಕಾಲರ್ ಶಿಪ್ ಜಾರಿಯಾದರೂ, ಶಿಕ್ಷಣದ ಕೊರತೆಯಿಂದ  ಕರಾವಳಿ ಭಾಗದಲ್ಲಿ  ಸ್ಕಾಲರ್ ಶಿಪ್ ಪಡೆಯಲಾಗುತ್ತಿರಲಿಲ್ಲ. 1986 ರಲ್ಲಿ  ಬಾಬಣ್ಣ ಅವರು  ಸ್ಕಾಲರ್ ಶಿಪ್ ಕುರಿತು ತಿಳಿದು  ಕರಾವಳಿ ಭಾಗಗಳಲ್ಲಿ ಇರುವ ಬೀಡಿ ಕಾರ್ಮಿಕರ ಮಕ್ಕಳ ಅರ್ಜಿಯನ್ನು ಭರ್ತಿಗೊಳಿಸಿ ಸರಕಾರಕ್ಕೆ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಿದರು. ಅದರಲ್ಲಿಯೂ  ಒಂದು ವರ್ಷದಲ್ಲಿ 6,500 ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ದೊರಕಿಸಿಕೊಟ್ಟವರು. ಇದರಿಂದ  ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿದ ಶ್ರೇಷ್ಟ ಮನುಷ್ಯ. 2016ರಿಂದ ಸ್ಕಾಲರ್ ಶಿಪ್ ಅನ್ನು ಡಿಜಿಟಲೀಕರಣದಡಿ ತರಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಿಗುವ ಹಲವಾರು ಸ್ಕಾಲರ್ ಶಿಪ್ ಗಳು ನಿಂತೇ ಹೋಯಿತು. ಇದು ಬಡ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಅನ್ನುವುದು ಅವರ ಆರೋಪವಾಗಿದೆ. ಏನೂ ಇಲ್ಲದವರಿಗೂ ಮರಣ ಬರುತ್ತದೆ  ಅನ್ನುವಂತೆ ಮನೆಯಲ್ಲಿ  ಕಾರ್ಯಕ್ಕೆ ಸಹೋದರಿ, ಪತ್ನಿ ಎಲ್ಲರೂ ಸ್ಪೂರ್ತಿ ತುಂಬಿಸಿದ್ದಾರೆ. ಸಾಹಿತ್ಯ ಲೋಕದಲ್ಲಿಯೂ ಅಭಿರುಚಿ ಹೊಂದಿರುವವರು  ಮುಂಗಾರು ಸಹಿತ ಮಂಗಳೂರಿನ ಇತರೆ ಪತ್ರಿಕೆಗಳಿಗೂ ಸಮಸ್ಯೆಗಳನ್ನು ಬರೆದು ಸಾರ್ಥಕತೆ ಕಂಡವರು.  ಯು.ಬಿ ಲೋಕಯ್ಯ ಜೀವನಚರಿತ್ರೆ , ತನ್ನ ತರವಾಡು ವಿಚಾರಗಳಲ್ಲಿ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಿಐಟಿಯು  ರಾಜ್ಯ ಸಮಿತಿ ಸದಸ್ಯರು, ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಜಾಯಿಂಟ್ ಸೆಕ್ರಟೆರಿಯಾಗಿ ಪಕ್ಷದಲ್ಲಿಯೂ ನಿರಂತರವಾಗಿ ದುಡಿದು ಬಡ ಕಾರ್ಮಿಕರಿಗೆ ಒಡನಾಡಿಯಾಗಿದ್ದರು. ಮರಣದ ಮನೆಗಳಲ್ಲಿ ಪತಿ ಮರಣವನ್ನಪ್ಪಿದ ಮಹಿಳೆಯರ ಮೇಲೆ ಆಗುತ್ತಿದ್ದ ಮೌಢ್ಯಗಳನ್ನು ಕ್ರಾಂತಿಕಾರಿಯಾಗಿ ನಿಲ್ಲಿಸಿ,  ಅಂತಿಮ ಸಂಸ್ಕಾರದಲ್ಲಿಯೂ ಸರಳ ವಿಚಾರಗಳನ್ನು ಎತ್ತಿಹಿಡಿದು ಸೇವೆ ಸಲ್ಲಿಸುತ್ತಾ ಬಂದಿರುವರು.


ಅಭಿನಂದನೆ ಸಲ್ಲಿಸಿದ ಅಸೈಗೋಳಿ ಅಭಯಾಶ್ರಯದ ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ ಮಾತನಾಡಿ,  ಬಾಬು ಪಿಲಾರ್ ಅವರು ತಮ್ಮ ಜೀವಿತಾವಧಿಯಲ್ಲಿ ದೊರೆತಂದಹ  ಯೋಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.  ತಾನು  ಬಂಟ ಸಮುದಾಯದವರು ಸಾವನ್ನಪ್ಪುವ ಸಂದರ್ಭ ಕ್ರಿಯೆಗಳನ್ನು ಸೂಚಿಸಲು ತೆರಳುತ್ತಿದ್ದವನು. ಆದರೂ ಬಾಬಣ್ಣನಷ್ಟು ಅಂತಿಮ ಸಂಸ್ಕಾರಗಳಲ್ಲಿ ಭಾಗಿಯಾದವನಲ್ಲ. ವಿವಿಧ ಭಾಗಗಳಲ್ಲಿ ಅವರವರ ಜಾತಿಗೆ ಅನುಗುಣವಾಗಿ ಅಂತಿಮ ಸಂಸ್ಕಾರಗಳು ನಡೆಯುತ್ತದೆ. ಪಾರ್ಸಿ ಸಮಾಜದಲ್ಲಿ ಹಕ್ಕಿಗಳಿಗೆ ಹೆಣವನ್ನಿಡುವ ಸಂಸ್ಕಾರವಿದೆ. ಎಂತಹ ಕಾರ್ಯವೇ ಇರಲಿ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುವುದೇ ಜೀವನ. ಕಾಲ ಬದಲಾದಂತೆ ವಿಧಿವಿಧಾನಗಳನ್ನು ಬದಲಿಸುವುದು ಅನಿವರ‍್ಯವಾಗಿದೆ. ಕೋವಿಡ್ ಸಂದರ್ಭ ಮೃತದೇಹವನ್ನು ಮುಟ್ಟದೆ ಅಂತಿಮ ಸಂಸ್ಕಾರಗಳು ನಡೆಯುತ್ತಿತ್ತು.   ಆದರೆ ತನ್ನ ಆಶ್ರಮಕ್ಕೆ ಸಹಕಾರಿಯಾಗಿದ್ದ ವೈದ್ಯರೊಬ್ಬರು  ಕೋವಿಡ್ ಸಂದರ್ಭ ಮೃತಪಟ್ಟ ಹಿನ್ನೆಲೆಯಲ್ಲಿ ತಾನೇ ಮೃತದೇಹವನ್ನು ಸ್ನಾನ ಮಾಡಿಸಿದ್ದೆ. ನಂತರ 15 ದಿನಗಳ ಬಳಿಕ ತನಗೂ ಕೋವಿಡ್ ಆವರಿಸಿತ್ತು. ಇದರಿಂದ  ಆರೋಗ್ಯ ಕ್ಷೀಣಿಸಿದೆ. ಹೆತ್ತವರಿಬ್ಬರೂ 100ರ ಮೇಲ್ಪಟ್ಟ ವಯಸ್ಸಿನಲ್ಲಿ ಮೃತಪಟ್ಟವರು. ಅವರಿಂದ ದೊರೆತ ಸ್ಫೂರ್ತಿಯಿಂದ  ಮುಂಬೈನಲ್ಲಿ ಇನ್ಶುರೆನ್ಸ್ ಕಂಪೆನಿಯ ಪ್ರಬಂಧಕನ ಉದ್ಯೋಗವನ್ನು ಬಿಟ್ಟು  ಸೇವಾ ಕಾರ್ಯದಲ್ಲಿ ಭಾಗಿಯಾಗಿರುವೆನು. ಅಂತಿಮವಾಗಿ  ಬೇಕಾಗಿರುವುದು ಸೇವಾ ಸಂತೃಪ್ತಿ ಅನ್ನುವ ಉದ್ದೇಶದಿಂದ ಕರ‍್ಯಾಚರಿಸುತ್ತಿರುವೆನು.  ಆಶ್ರಮದಲ್ಲಿ ಸ್ಥಾಪಿಸಿದ ಧ್ಯಾನಮಂದಿರದ ಸದುಪಯೋಗವನ್ನು ನಿಬಂಧನೆಗಳೊಂದಿಗೆ ಬಳಸಬಹುದು ಅಲ್ಲದೆ 140 ಆಶ್ರವiವಾಸಿಗಳ ಜೊತೆಗೆ  ಒಂದು ದಿನವನ್ನಾದರೂ ವಿಶೇಷ ದಿನಗಳಲ್ಲಿ ಕಳೆದರೆ ಅವರ ಮನಸ್ಸು ಉಲ್ಲಾಸದಾಯಕವಾಗುವುದರೊಂದಿಗೆ ತಮ್ಮ ಜೀವನವೂ ಸಂತೃಪ್ತಿಯಿಂದ ಕೂಡಬಹುದು ಅನ್ನುವುದು ಅನುಭವದಿಂದ ಅರಿತಿರುವೆನು ಎಂದರು.
ಕಾರ್ಯಕ್ರಮದಲ್ಲಿ  ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರನೇ ತಿಂಗಳ ಅತಿಥಿ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿದೆ.  ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ನಡೆಸುತ್ತಿರುವ ಬಾಬು ಪಿಲಾರ್ ಅವರು ಜಿಲ್ಲಾ, ರಾಜ್ಯ, ರಾಷ್ಟ್ರಪ್ರಶಸ್ತಿಗೆ ಅರ್ಹರು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ,  ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ಮನೋಭಾವ ಹಾಗೂ ಸಾಹಿತ್ಯಾತ್ಮಕ ಜಗತ್ತಿನಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ. ಜೊತೆಗೆ ಶ್ರೀನಾಥ್ ಹೆಗ್ಡೆಯವರು ಸಮಾಜದಲ್ಲಿ ನಿರಾಶ್ರಿತರ ಸೇವೆಯನ್ನು ದಶಕಗಳಿಂದಾ ನಡೆಸುತ್ತಾ , ಅವರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದುಕೊಂಡು ಕೊಣಾಜೆ ಪರಿಸರದಲ್ಲೇ ಉತ್ತಮವಾದ ವಾತಾವರಣ ಸ್ಥಾಪಿಸಿದವರು ಎಂದರು.
ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಶೀರ್ ಕಲ್ಕಟ್ಟ,  ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಪತ್ರಕರ್ತರುಗಳಾದ ರಜನಿಕಾಂತ್ ಬಬ್ಬುಕಟ್ಟೆ, ಗಂಗಾಧರ್ ಕೊಣಾಜೆ ಉಪಸ್ಥಿತರಿದ್ದರು. 
ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಅತಿಥಿ ವಿವರ ನೀಡಿದರು. ಪ್ರಧಾನ ಕರ‍್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.  ಕೋಶಾಧಿಕಾರಿ ವಜ್ರ ಗುಜರನ್ ವಂದಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಛಾಯಾಗ್ರಾಹಕರ ಕುಟುಂಬ ಭದ್ರತೆಗಾಗಿ ಎಸ್ ಕೆಪಿಎ ನಿಂದ ನೂತನ ಯೋಜನೆ ಜಾರಿ; ನವೀನ್ ರೈ ಪಂಜಳ

July 30, 2026

ಗುತ್ತಿಗೆದಾರರ ಸಂಘದ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾಗಿ ನಿಸಾರ್ ಟಿ.ಎಸ್. ಆಯ್ಕೆ

July 30, 2026

ಸ್ವಚ್ಛ ಗ್ರಾಮ, ಸುರಕ್ಷಿತ ಪರಿಸರದತ್ತ ಹೆಜ್ಜೆ: ಬಾಳೆಪುಣಿ ಗ್ರಾಮ ಪಂಚಾಯತ್ ಮುಡಿಪು ಅರಫಾ ಎಂಟರ್‌ಪ್ರೈಸಸ್‌ಗೆ ರೂ.10,000 ದಂಡನಾ ನೋಟಿಸ್

July 30, 2026

Comments are closed.

Advertise
ಸಂಪರ್ಕಿಸಿ

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026
All News

ಛಾಯಾಗ್ರಾಹಕರ ಕುಟುಂಬ ಭದ್ರತೆಗಾಗಿ ಎಸ್ ಕೆಪಿಎ ನಿಂದ ನೂತನ ಯೋಜನೆ ಜಾರಿ; ನವೀನ್ ರೈ ಪಂಜಳ

By UllalaVaniJuly 30, 20260

ಉಳ್ಳಾಲ: ಛಾಯಾಗ್ರಾಹಕರ ಕುಟುಂಬ ಭದ್ರತೆಗಾಗಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್(ಎಸ್ ಕೆಪಿಎ)ವತಿಯಿಂದ ನೂತನ ಯೋಜನೆಯೊಂದು ಜಾರಿಗೊಳ್ಳಲಿದ್ದು,ಸಂಘದ ಎಲ್ಲಾ ಸದಸ್ಯರು ಇದನ್ನು…

ಗುತ್ತಿಗೆದಾರರ ಸಂಘದ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾಗಿ ನಿಸಾರ್ ಟಿ.ಎಸ್. ಆಯ್ಕೆ

July 30, 2026

ಸ್ವಚ್ಛ ಗ್ರಾಮ, ಸುರಕ್ಷಿತ ಪರಿಸರದತ್ತ ಹೆಜ್ಜೆ: ಬಾಳೆಪುಣಿ ಗ್ರಾಮ ಪಂಚಾಯತ್ ಮುಡಿಪು ಅರಫಾ ಎಂಟರ್‌ಪ್ರೈಸಸ್‌ಗೆ ರೂ.10,000 ದಂಡನಾ ನೋಟಿಸ್

July 30, 2026

ಕಾರ್ಯಕರ್ತರಿಗೆ ಮೊದಲ ಬಾರಿಗೆ ಸಿಕ್ಕ ಸ್ವಾತಂತ್ರ‍್ಯ: ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಕ್ಷರ ನಿರೀಕ್ಷೆ..!

July 29, 2026
1 2 3 … 2,038 Next
Automatic YouTube Gallery

ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್

ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast ...
local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್
Now Playing
ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್
ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್ 📍 Ullal | Dakshina Kannada | ...
ಮಾರ್ಯದೆಡ್ ಬದುಕುಲೆ...ದಯಾನಂದ್ ಕತ್ತಲ್‌ಸಾರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast ...
local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಜೆಪ್ಪುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರ ಪೊಲೀಸ್ ಠಾಣೆ ಬೀರಿಗೆ ಶಿಫ್ಟ್..!
Now Playing
ಜೆಪ್ಪುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರ ಪೊಲೀಸ್ ಠಾಣೆ ಬೀರಿಗೆ ಶಿಫ್ಟ್..!
ಕೋಟೆಕಾರು ಪಟ್ಟಣ ಪಂಚಾಯತ್ ಸಭೆ ; ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ...
ಕೋಟೆಕಾರು ಪಟ್ಟಣ ಪಂಚಾಯತ್ ಸಭೆ ; ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ

ಡ್ರಗ್ಸ್, ಮಾದಕ ವಸ್ತುಗಳ ಹಾವಳಿ ಬಗ್ಗೆ ಮಾಹಿತಿ ನೀಡಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version