ಕೈರಂಗಳ: ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಮಹಾಸಂಸ್ಥಾನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರ ಕಾರಿನ ಮೇಲೆ ನಡೆದ ದಾಳಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಗುರುರಾಜ್ ಭಟ್ ಕೈರಂಗಳ ತೀವ್ರವಾಗಿ ಖಂಡಿಸಿದ್ದಾರೆ.ಪ್ರಸಿದ್ಧ ಶಂಕರಾಚಾರ್ಯ ಪರಂಪರೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ವಾಹನದಲ್ಲಿರುವ ಸಂದರ್ಭದಲ್ಲಿ ನಡೆದಿರುವ ದಾಳಿ ಅತ್ಯಂತ ಖಂಡನೀಯ..ಯಕ್ಷಗಾನ ಕಲೆ ಸಾಹಿತ್ಯ ಸಾಮಾಜಿಕ ಚಟುವಟಿಕೆಗಳಿಗೆ ಅಗತ್ಯ ಪ್ರಾಶಸ್ತ್ಯ ನೀಡಿ ಸಮಾಜಕ್ಕೋಸ್ಕರ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟಿರುವ ಸ್ವಾಮೀಜಿಯವರ ಮೇಲಿನ ದಾಳಿಯನ್ನು ಖಂಡಿಸುತ್ತಾ ಇದರ ಕುರಿತು ಉನ್ನತ ಮಟ್ಟದ ತನಿಖೆ ಮಾಡಬೇಕು ಹಾಗೂ ಸ್ವಾಮಿಗಳಿಗೆ ಮತ್ತು ಮಠಕ್ಕೆ ಹೆಚ್ಚಿನ ಭದ್ರತೆಯನ್ನು ಕೇರಳ ಸರಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
Author: UllalaVani
ಉಳ್ಳಾಲ : ಉಳ್ಳಾಲ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಸಿಕ ಸಭೆ ಹಾಗೂ ಸೌಹಾರ್ದ ದೀಪಾವಳಿ ಆಚರಣೆ ತೊಕ್ಕೊಟ್ಟು ಕಲ್ಲಾಪುವಿನ ಕಾರುಣ್ಯ ಸದನದಲ್ಲಿ ವಿಶಿಷ್ಟವಾಗಿ ನಡೆಯಿತು.ಮಂಡಲದ ಪ್ರತಿಯೋರ್ವ ಸದಸ್ಯರು ಹಬ್ಬದ ಆಚರಣೆ ಪ್ರಯುಕ್ತ ಮನೆಯಿಂದ ತಯಾರಿಸಲಾದ, ಸಿಹಿತಿಂಡಿಗಳನ್ನು ತಂದು ಸಹಭೋಜನ ನಡೆಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.ಉಳ್ಳಾಲ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ದೇವಕಿ ಆರ್. ಉಳ್ಳಾಲ್ ಮಾತನಾಡಿ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಂಕೇತವಾದ ದೀಪಾವಳಿ, ಎಲ್ಲರ ಮನಗಳನ್ನು ಬೆಳಗಲಿ. ಈ ಮೂಲಕ ಎಲ್ಲರೊಂದಿಗೆ ಬೆರೆಯುವ ಮನಸ್ಸುಗಳು ಉದಯವಾಗಲಿ. ಒಟ್ಟು ಹಬ್ಬದ ಆಚರಣೆ ಎಲ್ಲರನ್ನು ಆರೋಗ್ಯ, ಸುಖ, ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸಿದರು.ಮಹಿಳಾ ಮಂಡಲಗಳ ಒಕ್ಕೂಟದ ಕಮಲ ಗೌಡ, ಕಾರ್ಯದರ್ಶಿ ಜೆಸಿಂತ , ಜೊತೆ ಕಾರ್ಯದರ್ಶಿ ತುಳಸಿ ಗಟ್ಟಿ, ಸದ್ಯಸರಾದ ಝೀನತ್ ,ಸಾಹಿತಿ ಸಿಹಾನ, ಪ್ರೇಮ, ಮೀರಾ, ಮೈಮುನಾ, ರಮ್ಲತ್ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ: ಪ್ರೆಸ್ ಕ್ಲಬ್ ಉಳ್ಳಾಲ ನೇತೃತ್ವದಲ್ಲಿ ನಡೆದ ತಿಂಗಳ ಬೆಳಕು- ಸೌಹಾರ್ದ ದೀಪಾವಳಿ ಕಾರ್ಯಕ್ರಮದಲ್ಲಿ ಹೊರನಾಡ ಕನ್ನಡಿಗ, ಸಮಾಜಸೇವಕ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ, ಇಸ್ಮಾಯಿಲ್ ಕಣಂತೂರು ಬಾಳೆಪಣಿ, ರೀಚಲ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ ಸೇರಿದಂತೆ ಮೂವರು ಸಾಧಕರನ್ನು ಗೌರವಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ, ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ ಮಾತನಾಡಿ,ನಂಬಿಕೆಯ ಕ್ರಿಯಾತ್ಮಕ ರೂಪವೇ ಆಚರಣೆ . ನಂಬಿಕೆಯ ನೆಲಗಟ್ಟಿನಲ್ಲಿ ಹಬ್ಬಗಳ ಆಚರಣೆಗಳು ನೆಲೆನಿಂತಿದೆ. ಮತಗಳ ಮಾತ್ರ ಬೇರೆಯಾದರೂ ಧರ್ಮ ಒಂದೇ ಆಗಿದೆ. ಆಧುನಿಕವಾಗಿ ಸಮಾಜ ಬೆಳೆಯುತ್ತಿದ್ದರೂ ಆತ್ಮಜ್ಞಾನ ಅನ್ನುವಂತದ್ದು ಬೆಳೆದಿಲ್ಲ, ಅಂತರಂಗ ಸಂಸ್ಕಾರ ಬೆಳೆಯಬೇಕಿದೆ. ವೈಜ್ಞಾನಿಕತೆಯಿಂದ ಸಾಧ್ಯವಿಲ್ಲ. ಒಳ್ಳೆಯ ಮನಸ್ಸಿನಿಂದ ಸಾಧ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಹಬ್ಬದಾಚರಣೆಯಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ಸಂಸ್ಕಾರಯುತ ಕಾರ್ಯಕ್ರಮವಾಗಿದೆ ಎಂದರು. ಗೌರವ ಸ್ವೀಕರಿಸಿದ ಪ್ರವೀಣ್ ಶೆಟ್ಟಿ ಮೇಗಿನಮನೆ ಮಾತನಾಡಿ, ಸಮಾಜದಿಂದ ಯಾವುದನ್ನೂ ನಿರೀಕ್ಷಸದೆ ಸೇವೆಯನ್ನು ನಡೆಸುತ್ತಾ ಬಂದಿರುವೆನು. ಸರಳತೆಯಿಂದ ಬದುಕುವುದಷ್ಟೇ…
ಕುಂಪಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‍ಲೈನ್ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಕುಂಪಲ ಬೈಪಾಸ್ ಮುಖ್ಯ ರಸ್ತೆಯಿಂದ ಬಾಲಕೃಷ್ಣ ಮಂದಿರದವರೆಗಿನ ಮುಖ್ಯರಸ್ತೆಯನ್ನು ದಿನಾಂಕ: 07/11/2024 ರಿಂದ 10/11/2024 ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು. ಎಂದು ಸೋಮೇಶ್ವರ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.ಇದರಿಂದಾಗಿ ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕಾಗಿ ಕೋರಿಕೊಳ್ಳುತ್ತೇವೆ. ಪರ್ಯಾಯ ಮಾರ್ಗವಾಗಿ ದೇರಳಕಟ್ಟೆ, ಯೆನಪೋಯ, ಕೊಲ್ಯ ಶಾರದೋತ್ಸವ ಸಮಿತಿ ಪಕ್ಕದ ರಸ್ತೆ, ಕೊಲ್ಯ ಕನೀರ್‍ತೋಟ ರಸ್ತೆಯನ್ನು ಉಪಯೋಗಿಸುವಂತೆ ಸೋಮೇಶ್ವರ ಪುರಸಭೆ ಸೂಚಿಸಿದೆ.
ಉಳ್ಳಾಲ: ಇಲ್ಲಿನ ನಾಟೆಕಲ್ ನಲ್ಲಿ ಇರುವ ಉಳ್ಳಾಲ ತಾಲೂಕು ಸರ್ವೇಯರ್ ಗಳ ಕಚೇರಿ ಮೆಸ್ಕಾಂ ಬಿಲ್ ಪಾವತಿಸದೇ ಕತ್ತಲಿನಿಂದ ತುಂಬಿದೆ, ಮ್ಯಾನುವೆಲ್ ಆಉಗಿ ಫೈಲ್ ವಿಲೇವಾರಿ ನಡೆಯುತ್ತಿದೆಯೇ ಹೊರತು ಇಫೈಲಿಂಗ್ ಪ್ರಕ್ರಿಯೆ ಸ್ಥಗಿತಗೊಂಡು ವಾರಗಳೆ ಕಳೆದಿವೆ. ನಾಟೆಕಲ್ ಸಮೀಪ ಖಾಸಗಿ ಕಟ್ಟಡದಲ್ಲಿ ಭೂದಾಖಲೆಗಳ ಸಹಾಯಕ ನಿದೇಶಕರ ಕಚೇರಿ ಸರ್ವೇಯರ್ ಸೆಕ್ಷನ್ ೨೦೦ ಚದರ ಅಡಿ ಕೊಠಡಿಯೊಂದರಲ್ಲಿ ಬಾಡಿಗೆಯನ್ನು ಪಡೆಯಲಾಗಿದೆ. ಉಳ್ಳಾಲ ತಾಲೂಕು ಘೋಷಣೆಯಾದ ಎರಡು ವರ್ಷಗಳ ಹಿಂದೆ ಕಚೇರಿ ಮಂಗಳೂರಿನಿಂದ ನಾಟೆಕಲ್ ಗೆ ವರ್ಗಾವಣೆಗೊಂಡಿತ್ತು. ೫ ಸರಕಾರಿ ಸರ್ವೇಯರ್ , ೧೭ ಖಾಸಗಿ, ೧ ಎಡಿಎಲ್ ಆರ್, ೧ ಸುಪರ್ ವೈಸರ್ ಇರುವ ಕಚೇರಿಯಲ್ಲಿ ಕನಿಷ್ಠ ಮೂರು ಮಂದಿಗೆ ಕುಳಿತುಕೊಳ್ಳಲು ಕಷ್ಟ ಅನ್ನುವ ಮಾತುಗಳು ಕೇಳಿಬಂದಿದೆ. ಖಾಸಗಿ ಕೊಠಡಿಯಾಗಿರುವುದರಿಂದ ತಿಂಗಳಿಗೆ ರೂ.೧೦,೦೦೦ ಬಾಡಿಗೆಯನ್ನು ಈವರತೆಗೆ ಸರ್ವೇಯರ್ ತಮ್ಮ ಕೈಯಿಂದಲೇ ಭರಿಸುತ್ತಿದ್ದರು. ಆದರೆ ಕಳೆದ ೮ ತಿಂಗಳಿನಿಂದ ಅವರಲ್ಲಿಯೂ ಪಾವತಿಸಲು ಹಣವಿಲ್ಲದೇ ಇರುವುದರಿಂದ ಬಾಡಿಗೆಯನ್ನು ಕಟ್ಟಲಿಲ್ಲ. ಇದರಿಂದ ಸಾವಿರಾರು ರೂ. ಬಾಡಿಗೆ ಬಾಕಿಯಿದೆ.…
ತೊಕ್ಕೊಟ್ಟು: ಸೋಮೇಶ್ವರ ವ್ಯವಸ್ಥಾಪನಾ ಸಮಿತಿ ಸದಸ್ಯ, ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಪುಡಿರೌಡಿ ನಡೆಸಿರುವ ಹಲ್ಲೆಯನ್ನು ಇಡೀ ಸಮಾಜ ವಿರೋಧಿಸಬೇಕು. ನ್ಯಾಯದ ಪರ ಊರಿನ ಮಂದಿ ಧ್ವನಿಯೆತ್ತಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಆಗ್ರಹಿಸಿದ್ದಾರೆ.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅ.4 ತಡರಾತ್ರಿ ಸೋಮೇಶ್ವರ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಉಚ್ಚಿಲ್ ಮೇಲೆ ನಡೆಸಿರುವ ಹಲ್ಲೆಯನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿ ತೊಡಗಿಸಿಕೊಂಡು, ತಾಲೂಕಿನ ಸಮಸ್ತ ಜನತೆಯ ಆರಾಧ್ಯ ದೈವ ಸೋಮನಾಥನ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನಡೆದಿರುವ ಹಲ್ಲೆಯನ್ನು ಎಲ್ಲರೂ ಖಂಡಿಸಬೇಕಿದೆ. ಉಳ್ಳಾಲ ಪೊಲೀಸ್ ಠಾಣೆ ಹಲ್ಲೆಗೊಳಗಾದ ಕಿಶೋರ್ ಅವರ ಜೊತೆ ನಿಲ್ಲಬೇಕು.ಸೋಮೇಶ್ವರ ಕಡಲ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.…
ಉಳ್ಳಾಲ: ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ, ಮರಳು ದಂಧೆಯ ಆರೋಪಿ ಸೋಮೃಏಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರಿಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಸೋಮೇಶ್ವರ ಪುರಸಭೆ ಕಚೇರಿ ಸಮೀಪ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಪ್ರತಿಭಟನೆ ನಂತರ ಕೆಲ ದಿನಗಳ ಕಾಲ ಮರಳುಗಾರಿಕೆ ಸ್ಥಗಿತಗೊಂಡಿದ್ದರೂ, ಇದೀಗ ತಡರಾತ್ರಿ ಉಳ್ಳಾಲ ತಾಲೂಕಿನ ಎಲ್ಲಾ ರಸ್ತೆಗಳಲ್ಲಿಯೂ ಮರಳುಗಾರಿಕೆಯ ಲಾರಿಗಳು ಸಂಚರಿಸಲು ಆರಂಭವಾಗಿದೆ.ಸೋಮೇಶ್ವರ ಉಚ್ಚಿಲದ,ಫಿಶರೀಶ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಮ್ ಉಚ್ಚಿಲ(೫೩)ಹಲ್ಲೆಗೊಳಗಾದ ವ್ಯಕ್ತಿ. ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸುನಿಲ್ ಪೂಜಾರಿ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ.ಕಿಶೋರ್ ಅವರು ಸೋಮವಾರ ಬೆಳಿಗ್ಗೆ ತನ್ನ ಮಿತ್ರ ಪುಷ್ಪರಾಜ್ ಎಂಬವರ ಜತೆಯಲ್ಲಿ ಸೋಮೇಶ್ವರದ ಹೊಟೇಲಲ್ಲಿ ಚಹಾ ಕುಡಿದು ಸ್ಕೂಟರಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಸಮೀಪದಲ್ಲಿ ಆರೋಪಿ ಸುನಿಲ್ ಪೂಜಾರಿ ತಡೆದಿದ್ದಾನೆ. ಆರೋಪಿ ಸುನಿಲ್ ಕಿಶೋರ್…
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧಿಕಾರಿಗಳ ವಿಳಂಬದಿಂದಾಗಿ ತಡವಾಗಿ ಆರಂಭವಾಗಿದ್ದು, ಮೊದಲ ಹಂತದಲ್ಲಿ ಸಭೆ ರದ್ದತಿಗೆ ಕೌನ್ಸಿಲರುಗಳು ಒತ್ತಾಯಿಸಿದರೂ ಬಳಿಕ ಅಧಿಕಾರಿಗಳ ಆಗಮನದಿಂದ ಒಂದು ಗಂಟೆ ತಡವಾಗಿ ಆರಂಭವಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಟೆಕಾರು ಪಟ್ಟಣ ಪಂಚಾಯತ್ ನ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಸಿಸಿಟವಿ ಅಳವಡಿಕೆ, ಹುಲ್ಲು ಕಡಿಯುವ ಯಂತ್ರ ಚಾಲನೆಗೆ ಹೆಚ್ಚುವರಿ ಪೌರಕಾರ್ಮಿಕರ ನಿಯುಕ್ತಿ, ಸರಕಾರಿ ಜಾಮೀನು ಅತಿಕ್ರಮಣದ ಕುರಿತು ಕ್ರಮ, ಪ್ರತಿಯೊಂದು ಕೌನ್ಸಿಲರ್ ಗೆ 25 ಎಲ್ ಇಡಿ ಬೀದಿ ದೀಪಗಳು , 125 ಮನೆಗಳ ಡೋರ್ ನಂಬರ್ ರದ್ದುಗೊಳಿಸುವಿಕೆ ಮಾಡದೇ ಹಿಂದಿನಂತೆಯೇ ಮುಂದುವರಿಸಲಾಗುವುದು ಎಂದರು.ವಾರ್ಡ್ 11 ರ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಮನೆ ಕಟ್ಟಿ ನೆಲೆಸಿರುವ 120 ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಮನೆ ಕಟ್ಟಿರುವ ಭೂಮಿಯ ಒಡೆಯ ಬೇರೆಯವರಾಗಿದ್ದು, ಆರ್ ಟಿಸಿ ಎಲ್ಲವೂ ಅವರ ಹೆಸರಿನಲ್ಲಿದೆ. ಮೋಸದಲ್ಲಿ ಭೂಮಿಯನ್ನು ಅಷ್ಟೂ ಮನೆಮಂದಿಗೆ ಮಾರಾಟ…
ಕಿನ್ಯಾ : ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿಯ ಬಂಧನಉಳ್ಳಾಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾ ರೆಹಮತ್ ನಗರ ಕಜೆ ಬಾಕಿಮಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಜೋಡಿಯನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಆಂಟಿ ಡ್ರಗ್ ಟೀಂ ನೇತೃತ್ವದ ಪೊಲೀಸ್ ತಂಡ ಬಂಧಿಸಿ, ಆರೋಪಿತರಿಂದ 2,04,000 ರೂ ಬೆಲೆಯ 8 ಕೆ.ಜಿ ಗಾಂಜಾ ವಶಪಡಿಸಿಕೊಂಡಿದೆ.ಮಾಡೂರು ನಿವಾಸಿ ನಜೀರ್ ಹುಸೈನ್ (50) ಮತ್ತು ಕಿನ್ಯಾ ರೆಹಮತ್ ನಗರ ದ ಅಫ್ಸಾತ್ (37) ಎಂಬವರನ್ನು ಬಂಧಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ ಗಾಂಜಾ ಸಹಿತ ಮಾರಾಟಕ್ಕೆ ಯತ್ನಿಸುತ್ತಿದ್ದ ರೆನಾಲ್ಟ್ ಕ್ವಿಡ್ ಕಾರು ಹಾಗೂ ಎರಡು ಮೊಬೈಲುಗಳನ್ನು ವಶಪಡಿಸಿಕೊಂಡಿದೆ. ಒಟ್ಟು ರೂ. 5,14,810 ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದೆ.ಇಬ್ಬರ ವಿರುದ್ಧ 195/2024 ಕಲಂನಡಿ ಎನ್ ಡಿಪಿಎಸ್ ಆಕ್ಟ್ 1985 ಮತ್ತು ಬಿಎನ್ ಎಸ್ ಕಾಯಿದೆಗಳಡಿ ಪ್ರಕರಣಗಳು ದಾಖಲಾಗಿವೆ.
ತೊಕ್ಕೊಟ್ಟು : ಮಾರ್ಗ ಮಧ್ಯೆ ಕೆಟ್ಟು ನಿಂತ ಕೆಎಸ್ ಆರ್ ಟಿಸಿ ಬಸ್ಸನ್ನು ತಪ್ಪಿಸುವ ಧಾವಂತದಲ್ಲಿ ಟೆಂಪೋ ಚಾಲಕ ನಿಯಂತ್ರಣ ಕಳೆದು ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಲಾಪು ಆಡಂಕುದ್ರು ರಾ.ಹೆ.66 ರಲ್ಲಿ ಮಧ್ಯಾಹ್ನ ವೇಳೆ ಸಂಭವಿಸಿದೆ. ಟೆಂಪೋ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಇಲೆಕ್ಟಿçಕ್ ಕಾರಿಗೂ ಢಿಕ್ಕಿ ಹೊಡೆದು, ಸಮೀಪದ ಅಂಗಡಿ ನಾಮಫಲಕಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.ಫರಂಗಿಪೇಟೆ ತುಂಬೆ ರೊಟ್ಟಿಗುಡ್ಡೆ ಮನೆಯ ಆದಂ (64) ಸಾವನ್ನಪ್ಪಿದವರು. ಮಂಗಳೂರಿನಿAದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮಾರ್ಗಮಧ್ಯೆ ಕೆಟ್ಟು ನಿಂತಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಇಂಟರ್ ಲಾಕ್ ಲೋಡ್ ಹೊತ್ತಿದ್ದ ಟೆಂಪೋ ಲಾರಿ ಎದುರಿನಲ್ಲಿ ಬಸ್ ನಿಂತಿರುವುದನ್ನು ತಪ್ಪಿಸುವ ಧಾವಂತದಲ್ಲಿ ನಿಯಂತ್ರಣ ಕಳೆದುಕೊಂಡು ಎಡಗಡೆಗೆ ತಿರುಗಿಸಿದ್ದು, ಈ ವೇಳೆ ಕಟ್ಟುನಿಂತ ಬಸ್ಸಿನಿಂದ ಇಳಿದು ಬೇರೆ ಬಸ್ಸನ್ನೇರಲು ಮುಂದಾಗುತ್ತಿದ್ದ ಮೊಹಮ್ಮದ್ ಹುಸೈನ್ ಅವರಿಗೆ ಟೆಂಪೋ ಢಿಕ್ಕಿ ಹೊಡೆದಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಎದುರಿನಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ…

