Author: UllalaVani

Kannada News From Coastal Karnataka

ಉಳ್ಳಾಲ: ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಕ್ಕಳ ವಿಭಾಗ ದ ಆಶ್ರಯದಲ್ಲಿ ಹಾರ್ಮೋನೈಸಿಂಗ್‌ ಹಾರ್ಮೋನ್ಸ್‌ ಪೀಡಿಯಾಟ್ರಿಕ್‌ ಎಂಡೋಕ್ರೈನಾಲಜಿ ಅಪ್ಡೇಟ್‌ -2024 ಮಂಗಳೂರು ರಾಜ್ಯಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣಾ ಕಾರ್ಯಗಾರ ನ.23 ಮತ್ತು ನ.24 ರಂದು ನಾಟೆಕಲ್‌ ಕಣಚೂರು ಆಸ್ಪತ್ರೆ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಘಟನಾ ಕಾರ್ಯದರ್ಶಿ ಕಿಮ್ಸ್‌ ಮಕ್ಕಳ ತಜ್ಞ ಡಾ. ವರ್ಷಾ ಹೇಳಿದರು. ತೊಕ್ಕೊಟ್ಟು ಸೇವಾಸೌಧದ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ,ಟೈಪ್‌ -1 ಡೈಯಾಬಿಟೀಸ್‌ ಮೆಲ್ಲಿಟಸ್‌ (ಮಧುಮೇಹ ರೋಗ) ಮತ್ತು ಬೆಳವಣಿಗೆಯ ಮೇಲ್ವಿಚಾರಣೆಯ ಮೇಲೆ ಕಾರ್ಯಗಾರವನ್ನು ಆಯೋಜಿಸಲಾಗಿದೆ. ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಅಂಕಗಳನ್ನು ನೀಡಲಾಗಿದೆ. ಇನ್ಸುಲಿನ್‌ ಡೆಲಿವರಿ ಡಿವೈಸಸ್‌, ಶುಗರ್‌ ರೆಕಾರ್ಡಿಂಗ್‌ , ಮಕ್ಕಳಲ್ಲಿ ಬೆಳವಣಿಗೆಯ ಮಾನಿಟರಿಂಗ್‌ ಸೇರಿದಂತೆ ಸಮಾಜದಲ್ಲಿ ಬೊಜ್ಜು, ಡಯಾಬಿಟೀಸ್‌ ಹೆಚ್ಚು ಆಗುತ್ತಿರುವ ಕಾರಣಗಳ ಕುರಿತು ವಿಶ್ಲೇಷಣೆಗಳ ಪ್ರಾಕ್ಟಿಕಲ್‌ ಹಾಗೂ ವಿಶ್ಲೇಷಣೆಗಳನ್ನು ಕಾರ್ಯಗಾರ ಒಳಗೊಂಡಿದೆ. ಡಾ.ಓನಿಯಲ್‌ ಫೆರ್ನಾಂಡಿಸ್‌ ಅವರ ಮಾರ್ಗದರ್ಶನದಲ್ಲಿ ಮಕ್ಕಳ ವಿಭಾಗ ನಿರಂತರ ಕಲಿಕಾ…

Read More

ಉಳ್ಳಾಲ: ಸೌಹಾರ್ದ ಕಲಾವಿದರು ಕುತ್ತಾರ್, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಕುತ್ತಾರ್, ಮುನ್ನೂರು ಯುವಕ ಮಂಡಲ ಮುನ್ನೂರು ಕುತ್ತಾರ್, ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಕುತ್ತಾರ್ ನಾಲ್ಕು ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಮುನ್ನೂರು ಗ್ರಾಮಡೊಂಜಿ ಕಾರ್ಯಕ್ರಮವನ್ನು ನ.24ರಂದು ಭಾನುವಾರ ಕುತ್ತಾರು ನ ದೆಪ್ಪಲಿಮಾರ್ ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಮುನ್ನೂರು ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಇದರ ಪ್ರಧಾನ‌ ಕಾರ್ಯದರ್ಶಿ ಡಾ. ಜೀವನ್ ರಾಜ್ ಕುತ್ತಾರ್ ತಿಳಿಸಿದ್ದಾರೆ.ಅವರು ಗುರುವಾರ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತ‌ನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು  ಗೌರವಾಧ್ಯಕ್ಷರಾದ ಬಿ.ವಿವೇಕ್ ಶೆಟ್ಟಿ ಬೊಳ್ಯ ಗುತ್ತು ಉದ್ಘಾಟಿಸಲಿದ್ದಾರೆ.ಇಂದು ಗ್ರಾಮೀಣ ಪ್ರದೇಶಗಳು ನಾಗರೀಕರಣದತ್ತಾ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಇಂದಿನ ತಲೆಮಾರಿಗೆ ಕೃಷಿ ಮತ್ತು ಕೃಷಿ ಭೂಮಿಯ ಪರಿಜ್ಞಾನವೇ ಇಲ್ಲದಂತಾಗಿದೆ‌. ಮಾತ್ರವಲ್ಲದೇ ಗ್ರಾಮೀಣ ಜೀವನ ಪದ್ಧತಿಗಳು ಜನಪದ ವೈವಿಧ್ಯಮಯ ಸಂಸ್ಕೃತಿ ಗಳು ಕೂಡ ಅವಸಾನದ ಹಂಚಿಗೆ ತಲುಪಿರುವುದು ಸಹಜ. ಆದರೂ ಇಂತಹ ಪರಿಸರ ಸಾಂಸ್ಕೃತಿಕ ಜನಪದ…

Read More

ಸೋಮೇಶ್ವರ: ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರದಲ್ಲಿ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಆಶ್ರಯದಲ್ಲಿ ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ , ಮೂಡಪ್ಪ ಸೇವೆ, ರಂಗಪೂಜೆ, ದೇವರಬಲಿ ಉತ್ಸವ ಸೇವೆ, ಲಕ್ಷ ಬಿಲ್ವಾರ್ಚನೆ, ರುದ್ರ ಹೋಮ ತಾ.17-11-2024 ಭಾನುವಾರದಿಂದ 21-11-2024 ಗುರುವಾರದವರೆಗೆ ಅದ್ಧೂರಿಯಾಗಿ ಜರಗಲಿದೆ ಎಂದು ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.ರಾಜಕೀಯ ರಹಿತ ಕಾರ್ಯಕ್ರಮವನ್ನು ಎಲ್ಲರೂ ಹಿಂದೂ ಸಮಾಜದ ಒಳಿತಿಗಾಗಿ ಹಮ್ಮಿಕೊಂಡಿದ್ದು, ಭಕ್ತಾಧಿಗಳ ಸಹಕಾರ ಅಗತ್ಯ ಬೇಕಿದೆ . ಮಹಿಳೆಯೊಬ್ಬರಿಗೆ ಇದ್ದ ಸೊಂಟ ನೋವು ಯಜ್ಞದ ಸೇವಾ ಕಾರ್ಯದಲ್ಲಿ ಮಾಯವಾಗಿರುವುದು ಇಡೀ ಯಜ್ಞದ ಶಕ್ತಿಯನ್ನು ತೋರಿಸುತ್ತದೆ. ಎಲ್ಲರಿಗೂ ಒಂದೇ ರೀತಿಯಲ್ಲಿ ದೇವರ ಸೇವೆಯನ್ನು ನೆರವೇರಿಸುವಂತಹ ಅವಕಾಶ ಯಾಗದಲ್ಲಿ ಇದ್ದು, ಹೊಸ ಚಾಪೆಯ ಮೇಲೆ ಕುಳಿತು ಯಾಗದಲ್ಲಿ ಭಾವಹಿಸುವುದೇ ವಿಶೇಷ. ಜಿಲ್ಲೆಯುದ್ದಕ್ಕೂ ಎಂದರು.ದಿ.16 ರಂದು ಸಂಜೆ 4 ಕ್ಕೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಬೀರಿ, ಕೋಟೆಕಾರಿನಿಂದ…

Read More

ತೊಕ್ಕೊಟ್ಟು: ಜೀವಹಾನಿಯನ್ನು ತಪ್ಪಿಸುವ, ಜೀವದಾನ, ಪುನರ್ಜನ್ಮ ನೀಡುವಂತಹ ಚೈತನ್ಯ ಇರುವಂತಹ ತುರ್ತು ವಾಹನ ಆಂಬ್ಯುಲೆನ್ಸ್ . ಅದನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಪ್ರಾಣಾಸ್ತ್ರ ಟ್ರಸ್ಟ್ ಶ್ರೇಷ್ಟ ಕಾರ್ಯವನ್ನು ಸಮಾಜಕ್ಕೆ ನೀಡಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮಾಜಮುಖಿಯಾಗಿ ಬಂದಂತಹ ಸಂಪತ್ತನ್ನು ಸಮಾಜಕ್ಕೆ ನೀಡುವುದು ಶ್ರೇಷ್ಟ ಕಾರ್ಯ. ಸುಮರಸರು ಸುಮನಸ್ಸಿನಿಂದ ಕೊಟ್ಟ ಪುಷ್ಪದಂತೆ ಉತ್ತಮ ಕಾರ್ಯಕ್ಕೆ ಮಳೆಯ ಸಿಂಚನವಾಗಿದೆ. ಉತ್ತಮ ಕೆಲಸಕ್ಕೆ ವಿಘ್ನಗಳು ಅನೇಕವಿರುವುದು, ಅದನ್ನು ಎದುರಿಸುವುದೇ ಆತ್ಮಸ್ಥೈರ್ಯ. ಅದನ್ನು ಪ್ರಾಣಾಸ್ತ್ರ ಟ್ರಸ್ಟ್ ಮತ್ತು ವಿ.ಹಿಂ.ಪ-ಬಜರಂಗದಳ ವಾಸುಖಿ ಶಾಖೆ ಮಾಡಿ ತೋರಿಸಿದೆ. ದೇಶವ್ಯಾಪಿ, ರಾಷ್ಟ್ರವ್ಯಾಪಿ ಅಖಿಲ ಭಾರತ ವ್ಯವಸ್ಥೆಯಲ್ಲಿಯೂ ವಿ.ಹಿಂ.ಪ ಜಗತ್‌ವ್ಯಾಪಿ ಇರುವ ಸಂಘಟನೆಯಾಗಿದೆ. ಇದರಿಂದ ಹಿಂದೂ ಸಮಾಜ ಆತ್ಮವಿಶ್ವಾಸದಿಂದ ಬಾಳುವ ವಾತಾವರಣ ನಿರ್ಮಾಣವಾಗಿದೆ. ಲೋಕದುದ್ದಕ್ಕೂ ಸಮಾಜ ವ್ಯವಸ್ಥೆಯನ್ನು ಸದೃಢಗೊಳಿಸಬೇಕು, ನಿರಾಶ್ರಿತರ ಅವಶ್ಯಕತೆಯನ್ನು ಪೂರೈಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡಿರುವ ಅಸ್ತ್ರ ಗ್ರೂಪ್ ನ ಪ್ರಾಣಾಸ್ತ್ರ ಟ್ರಸ್ಟ್ ವಿ.ಹಿಂ.ಪ-ಬಜರಂಗದಳ ಜೊತೆಗೆ ಕೈಜೋಡಿಸಿರುವುದು ಉತ್ತಮವಾದ ಕಾರ್ಯ ಎಂದರು.ವಿಶ್ವಹಿಂದೂ ಪರಿಷತ್ ದಕ್ಷಿಣ…

Read More

ಮಂಜನಾಡಿ : ಎರಡು ದಿನಗಳೊಳಗಾಗಿ ಮಂಜನಾಡಿಯ ಆರಂಗಡಿ ಬಸ್‌ ನಿಲ್ದಾಣ ಬಳಿಯ ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದಲ್ಲಿ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ನರಿಂಗಾನ, ಮಂಜನಾಡಿ ನಾಗರಿಕರು ಒತ್ತಾಯಿಸಿದ್ದಾರೆ.ಮಂಜನಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ 11ನೇ ವಾರ್ಡಿನ ಆರಂಗಡಿ ಬಸ್‌ ನಿಲ್ದಾಣ ಬಳಿಯ ಮುಖ್ಯರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಒಂದು ವಾರದ ಹಿಂದೆಯೇ ಡಿವೈಎಫ್‌ ಐ ನಿಯೋಗ ಮಂಜನಾಡಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಲೋಕೋಪಯೋಗಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿಯ ಪ್ರತಿಯನ್ನು ತಲುಪಿಸುವಂತೆಯೂ ಸೂಚಿಸಿತ್ತು. ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೂ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿನ.11 ರಂದು ಮಂಜನಾಡಿ ಮತ್ತು ನರಿಂಗಾನ ಗ್ರಾಮದ ನಾಗರಿಕರು ರಸ್ತೆಬದಿಯಲ್ಲಿ ನಿಂತು ಎರಡು ದಿನಗಳ ಅವಧಿಯಲ್ಲಿ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದಲ್ಲಿ ರಸ್ತೆ ಬಂದ್‌ ನಡೆಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

Read More

ಉಳ್ಳಾಲ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನಿರ್ದೇಶಕರುಗಳ ಆಯ್ಕೆ ಅವಿರೋಧವಾಗಿ ನಡೆಯಿತು.ಉಚ್ಚಿಲಗುಡ್ಡೆಯ ಪಿ.ಎಂ.ಶ್ರೀ ಹಿ.ಪ್ರಾ.ಶಾಲೆ ಯ ಮುಖ್ಯಶಿಕ್ಷಕ ಹರೀಶ್‌ ಕುಮಾರ್‌ ಬಿ.ಎಂ, ನಾಲ್ಯಪದವು ಪಿಎಂಶ್ರೀ ಕುವೆಂಪುಶಾಲೆಯ ಜಿಪಿಟಿ ಶಿಕ್ಷಕ ಗಜಾನನ ಶೆಟ್ಟಿ, ಕಾಟಿಪಳ್ಳ ೬ ನೇ ಬ್ಲಾಕ್‌ ನ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಮಂಗಳೂರು ಉತ್ತರ ವಲಯ ಬಿ ಇ ಆರ್‌ ಟಿ, ಬಿಆರ್‌ ಸಿ ಕೇಂದ್ರದ ನಾಗರಾಜ್‌ ಮದ್ದೋಡಿ, ಕುಪ್ಪೆಪದವು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಾರ್ಕ್‌ .ಜೆ.ಮೆಂಡೋನ್ಸಾ ಹಾಗೂ ಮುತ್ತೂರು ಕೆಪಿಎಸ್‌ ಪ್ರೌಢಶಾಲೆಯ ಸಹಶಿಕ್ಷಕ ಬಾಲಕೃಷ್ಣ ನಾಯ್ಕ್‌ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಆಯ್ಕೆಗೊಂಡ ಎಲ್ಲಾ ನಿರ್ದೇಶಕರುಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಮಂಗಳೂರು ದಕ್ಷಿಣ ವಲಯ ಸಮಿತಿ ಅಭಿನಂದನೆ ಸಲ್ಲಿಸಿದೆ.

Read More

ಮಂಗಳೂರು: ಕ್ರಿಕೆಟ್ ತಂಡ, ಕಬ್ಬಡ್ಡಿ ಕ್ರೀಡಾಳುಗಳಿಗೆ, ಹೊಟೇಲ್ ಸಿಬ್ಬಂದಿಗೆ ಹೀಗೆ ಒಂದೇ ತರಹದ ಟೀ ಶರ್ಟ್ ಅದರಲ್ಲಿ ಸಂಸ್ಥೆ ಅಥವಾ ವೈಯಕ್ತಿಕ ಹೆಸರುಗಳಿರಬೇಕು ಅನಿಸಿದಲ್ಲಿ ಮಂಗಳೂರಿನ ಬಿಜೈನಲ್ಲಿರುವ ಶಾನ್ ಸ್ಪೋಟ್ರ್ಸ್ 9591332526 ಇವರನ್ನು ಸಂಪರ್ಕಿಸಬಹುದು.ಹೈ ಪ್ರೀಮಿಯಮ್, ಲೋ ಪ್ರೀಮಿಯಮ್ ನಲ್ಲಿ ಬಲ್ಕ್ ಆರ್ಡರ್ ಗಳನ್ನು ಸಂಸ್ಥೆ ದಶಕಗಳಿಂದ ಪಡೆಯುತ್ತಾ ಬಂದಿದೆ. ರಾಜ್ಯದಲ್ಲಿ ನಡೆಯುವ ಕೆಪಿಎಲ್, ಮೈಸೂರ್ ಪ್ರೀಮಿಯರ್ ಲೀಗ್ ಪಂದ್ಯಾಟಗಳಿಗೆ ಟೀಶರ್ಟ್ ಸಿದ್ಧಪಡಿಸಿದ ಬೆಂಗಳೂರು ಮತ್ತು ಮಂಗಳೂರಿನ ಹೆಸರಾಂತ ಸಂಸ್ಥೆಯಾಗಿದೆ. ವಿದೇಶಗಳಲ್ಲಿ ದುಬೈ, ಸೌದಿ, ಸಿಂಗಾಪುರಕ್ಕೂ ಈಗಾಗಲೇ ಸಂಸ್ಥೆ ಟೀಶರ್ಟ್ ಸಿದ್ಧಪಡಿಸಿ ಕಳುಹಿಸುತ್ತಾ ಉತ್ತಮ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದೀಗ ಮಂಗಳೂರಿನ ಬಿಜೈನಲ್ಲಿ ಶಾನ್ ಸ್ಪೋಟ್ಸ್ ್ ಸಂಸ್ಥೆ ಕಾರ್ಯಾಚರಿಸುತ್ತಿದ್ದು, ಟೀಶರ್ಟ್ ನೇಮಿಂಗ್, ಬ್ರಾಂಡಿಂಗ್ ನಡೆಸುವಿರಾದಲ್ಲಿ ತಕ್ಷಣವೇ ಸಂಪರ್ಕಿಸಿರಿ.9591332526

Read More

ಕೊಣಾಜೆ: ಇಲ್ಲಿನ ಸಪ್ತಸ್ವರ ಕಲಾತಂಡದ ಮಾಜಿ ಪ್ರಧಾನ ಕಾರ್ಯದರ್ಶಿ, ಮೊಸರುಕುಡಿಕೆ ಉತ್ಸವ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ ಕಂಬ್ಳಪದವು ದೇವಿನಗರ ನಿವಾಸಿ ಗಂಗಾಧರ್ -ಯಶೋಧಾ ದಂಪತಿ ಪುತ್ರ , ಮೂಲತ: ಸುಳ್ಯ ತಾಲೂಕು ಕೊಲ್ಲರಮೂಲೆ ನಿವಾಸಿ ಅಭಿಲಾಷ್ (29) ಇನ್ನಿಲ್ಲವಾಗಿದ್ದಾರೆ.ತಂದೆ ಗಂಗಾಧರ್ ಅವರು ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ಕೊಣಾಜೆ ಭಾಗದಲ್ಲಿ ಸೇವೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೊಣಾಜೆಯಲ್ಲಿ ಕುಟುಂಬ ವಾಸವಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಅಭಿಲಾಷ್ ಹರೇಕಳ ಶ್ರೀ ರಾಮಕೃಷ್ಣ ಹೈಸ್ಕೂಲಿನ ಹಳೇ ವಿದ್ಯಾರ್ಥಿಯಾಗಿದ್ದು, ಶಾಲಾ ಸಂದರ್ಭದಲ್ಲೇ ಸಕ್ರಿಯನಾಗಿ ವಿದ್ಯಾರ್ಥಿ ನಾಯಕನಾಗಿದ್ದರು. ಶಾಲಾ ದಿನಗಳಲ್ಲಿ ಯಕ್ಷಗಾನ, ನಾಟಕ, ಕಲೆಗಳಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದರು. ಕೊಣಾಜೆ, ಸುಳ್ಯ ಭಾಗದಲ್ಲಿ ಸಂಘ ಪರಿವಾರದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅಭಿಲಾಷ್ , ಸುಳ್ಯದಲ್ಲಿ ಫಾಚ್ರ್ಯೂನ್ ಯೂಟ್ಯೂಬ್ ಚಾನೆಲ್ ನಂತರ ಕೇಬಲ್ ಚಾನೆಲ್ ಆರಂಭಿಸಿದ್ದರು. 3 ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಅವರು ಒಂದೂವರೆ ವರ್ಷದಿಂದ ಸುಳ್ಯದ ಗಾಂಧಿನಗರದಲ್ಲಿ ಅಡಿಕೆ ವ್ಯಾಪಾರವನ್ನು ನಡೆಸುತ್ತಾ ಬಂದಿದ್ದರು. ಮೃತರ ಅಂತಿಮ…

Read More

ಉಳ್ಳಾಲ: ದೇಶದಲ್ಲಿ ಮಾಧ್ಯಮ ರಂಗ ಬಲಿಷ್ಠ ಅಂಗವಾಗಿದೆ. ಪತ್ರಕರ್ತರು ಜನರ ಸಮಸ್ಯೆಗಳನ್ನು ಭಾವನೆಗಳನ್ನು ಹುಡುಕುತ್ತಾ ಸಮಾಜಕ್ಕೆ, ಆಡಳಿತ ವ್ಯವಸ್ಥೆಗೆ ಮುಟ್ಟಿಸುವಲ್ಲಿ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಈ ನಡುವೆ ಉಳ್ಳಾಲದ ಪತ್ರಕರ್ತರ ಸಂಘ ವಿಶಿಷ್ಟವಾಗಿ ತಮ್ಮನ್ನೇ ಸೇವಾ ಚಟುವಟಿಕೆಯಲ್ಲಿ ಇತರೆ ಸೇವಾ ಸಂಸ್ಥೆಗಳ ಜೊತೆಗೆ ಭಾಗಿಯಾಗುವ ಮೂಲಕ ಮಾದರಿಯಾಗಿದೆ ಎಂದು ಸೋಮೇಶ್ವರ ಪುರಸಭೆ ಹಾಗೂ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ಮತ್ತಡಿ ಅಭಿಪ್ರಾಯಪಟ್ಟರು. ಅವರು ಕಾರ್ಯನಿರತ ಪತ್ರಕರ್ತರ ಸಂಘ, ಉಳ್ಳಾಲ, ಹಿದಾಯ ಫೌಂಡೇಶನ್ ಮಂಗಳೂರು, ಯು.ಆರ್ ಫೌಂಡೇಶನ್ ಮಂಗಳೂರು, ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಆಧಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಅರ್ಜಿ ಅಂದಲ್ಲಿ ಬರೀ ಪತ್ರವಲ್ಲ ಅದರಲ್ಲಿರುವ ಬರಹಗಳು ವ್ಯಕ್ತಿ, ಮನೆ ಅಥವಾ ಸಮುದಾಯದ ಭಾವನೆಗಳನ್ನು ವಿಸ್ತರಿಸುವ ವಿಚಾರವಾಗಿರುತ್ತದೆ. ಒಂದು ಪತ್ರ ಸಂವೇದನೆ ಮೂಡಿಸುವಂತಾಗಬೇಕು. ಬರಹಗಳಿಗೆ ಜೀವವಿದೆ ಅನ್ನುವ ಮನೋಭಾವ ಇರಬೇಕು. ಇಂತಹ ವಿಚಾರಗಳಿಗೆ ಹೆಚ್ಚು…

Read More

ಉಳ್ಳಾಲ: ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಕಾಸರಗೋಡು ಬಡಾಜೆಯ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಆಸೀಫ್, ಕಾರನ್ನು ತಡೆದು ತಲವಾರು ಬೀಸಿ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಸುರತ್ಕಲ್ ಇಡ್ಯಾ ನಿವಾಸಿ ಅಣ್ಣಪ್ಪ ಸ್ವಾಮಿ(24), ನಾರ್ಲ ತಲಪಾಡಿಯ ಸಚಿನ್ (24) ಕಂಬ್ಳಪದವು ಪಾದಲ್ ಕೋಡಿಯ ಕುಶಿತ್ (18) ಬಂಧಿತರು.ಬಂಧಿತರು ನ.8 ರಂದು ಸಂಜೆ 7.40ರ ಸಮಯಕ್ಕೆ ತಲಪಾಡಿಯ ಕೆ.ಸಿ.ರೋಡ್ -ಉಚ್ಚಿಲ ರಸ್ತೆಯಲ್ಲಿ ರಾ.ಹೆ.66ರ ಲ್ಲಿ ಆಸೀಫ್, ಸಹೋದರ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ತಲವಾರು ಬೀಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.10 ರಂದು ಪ್ರಕರಣ ದಾಖಲಾಗಿತ್ತು.

Read More