Author: UllalaVani

Kannada News From Coastal Karnataka

ಮಂಗಳೂರು: ವಿಶೇಷ ಚೇತನ ಮಕ್ಕಳನ್ನು ಒಗ್ಗೂಡಿಸಿ ಅವರಲ್ಲಿರುವ ನ್ಯೂನ್ಯತೆಗಳ ಪಟ್ಟಿ ಮಾಡಿ ಅವಶ್ಯಕತೆಯಿರುವ ಸಲಕರಣೆಗಳ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಶಿಕ್ಷಣ ಇಲಾಖೆ ದಾನಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಸೇರಿಕೊಂಡು ಸಮಾಜಮುಖಿಯಾದ ಕಾರ್ಯವನ್ನು ಆಯೋಜಿಸಿರುವುದು ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪೂರಕ ಎಂದು ಡಿಡಿಪಿಐ ವೆಂಕಟೇಶ್ ಪಟಗಾರ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ದ.ಕ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ ವಲಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ನದ ಮಾರುತಿ ಜನಸೇವಾ ಸಂಘ , ಮಾರುತಿ ಯುವಕ ಮಂಡಲ ಆಶ್ರಯದಲ್ಲಿ ಲೇಡಿಹಿಲ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ವಿಕಲ ಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ 2024-2025 ದಲ್ಲಿ ಭಾಗವಹಿಸಿ ಮಾತನಾಡಿದರು.ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇಡೀ ತಂಡದ್ದಾಗಿದೆ. ಮೂರು ವಲಯದಿಂದ ಭಾಗವಹಿಸಿದ…

Read More

ಉಳ್ಳಾಲ: ಮುನ್ನೂರು ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬಂದಿರುವುದರಿಂದ ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಾಗಿವೆ. ಶಿಕ್ಷಣದ ಕಾಶಿಯಾಗಿ ಪ್ರದೇಶ ಮಾರ್ಪಾಡಾದರೂ, ಹೊರಗಿನಿಂದ ಬರುವ ಜನರಿಂದ ಮೂಲ ಸಂಸ್ಕೃತಿಗಳ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಸೌಹಾರ್ದಯುತ ವಾತಾವರಣದ ಜೊತೆಗಿನ ಸಂಸ್ಕೃತಿ ಅರಿವು ಮೂಡಿಸುವ ಗ್ರಾಮಡೊಂಜಿ ಗೌಜಿ ಕಾರ್ಯಕ್ರಮ ಸಮಾಜಕ್ಕೆ ಪೂರಕ ಎಂದು ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಹೇಳಿದರು.ಅವರು ಸೌಹಾರ್ದ ಕಲಾವಿದರು ಕುತ್ತಾರು, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಮುನ್ನೂರು ಯುವಕ ಮಂಡಲ , ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಜರಗಿದ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮ ಆರಂಭಿಸುವುದು ಸುಲಭ, ಆದರೆ 15 ವರ್ಷಗಳ ಕಾಲ ಅದನ್ನು ಮುನ್ನಡೆಸುವುದು ಬಹುದೊಡ್ಡ ಕಾರ್ಯ. ವೇದಿಕೆಯಲ್ಲಿ ಎಲ್ಲಾ ಧರ್ಮೀಯರು, ಮೇಲು-ಕೀಳು ಅನ್ನುವ ಭಾವನೆಯಿಲ್ಲದೆ ಭಾಗವಹಿಸುವ ವಿಶಿಷ್ಟವಾದ ಕಾರ್ಯಕ್ರಮ. ಶೇ.80 ಹೊರಗಿನವರೇ ಇರುವಾಗ ಮೂಲ ಗ್ರಾಮದವರು ಶೇ.20 ಮಂದಿ…

Read More

ಉಳ್ಳಾಲ: ಭಾರತ ಸಂವಿಧಾನ ಕೇವಲ ಒಂದು ಪುಸ್ತಕ ಅಲ್ಲ ಅದು ಶ್ರೇಷ್ಠ ಗ್ರಂಥವಾಗಿದ್ದು ಈ ನಿಟ್ಟಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು ಎಂದು ಕರ್ನಾಟಕ ವಿದಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಮಂಗಳವಾರದಂದು ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ನಡೆದ ” ಭಾರತ ಸಂವಿಧಾನ – ಅಮೃತ ಮಹೋತ್ಸವ” 75 ರ ಸಂಭ್ರಮದ ಉಪನ್ಯಾಸ ಕಾರ್ಯಕ್ರಮ ಹಾಗೂ ಪೌರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬ ನಾಗರಿಕನೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಿರ್ಭಯವಾಗಿ ,ಒಬ್ಬಂಟಿಯಾಗಿ ,ಧೈರ್ಯ ವಾಗಿ ಓಡಾಟವಾಗಬೇಕಾದರೆ ಅದು ಡಾ.ಅಂಬೇಡ್ಕರ್ ಬರೆದ ಸಂವಿಧಾನವೇ ಮೂಲ ಕಾರಣ. ಈ ಹಿಂದೆ ದೇಶದಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸ ಪಡೆಯಲು ಅವಕಾಶ ಇತ್ತು.ದೇಶದ ಸಂವಿಂಧಾನದಿಂದ ಕಡ್ಡಾಯ ಶಿಕ್ಷಣದ ಮೂಲಕ ಇವತ್ತು ಬಡ ವರ್ಗದವರೂ ಉನ್ನತ ಮಟ್ಟದ ಶಿಕ್ಷಣ ಪಡೆಯುವಂತಾಗಿದೆ.ಶ್ರೀಮಂತರು,ವಿದ್ಯಾವಂತರು ಮಾತ್ರ ಮತದಾನ ಮಾಡಲು ಅರ್ಹರೆಂದು ಅನೇಕ ರೀತಿಯ ಚರ್ಚೆಗಳಾದಾಗ ಅಂಬೇಡ್ಕರ್ ಅವರೇ…

Read More

ಬಬ್ಬುಕಟ್ಟೆ:  ಸಹಾಯ ಮನೋಭಾವದ ಮಾತೆ ನಿತ್ಯಾಧರ್, ಅಂತಹ ಶ್ರೇಷ್ಠ ತಾಯಿಯ ಹೆಸರಿನಡಿಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸದ್ಗುಣ ಸಂಪನ್ನವರಿತು ಜೀವಿಸಲು ಸಾಧ್ಯ.  ಸಮಾನತೆಯ ಭಾವನೆ, ಸ್ವಾತಂತ್ರ್ಯ ಭಾವೈಕ್ಯತೆ ಮೌಲ್ಯಗಳು ಮೂಡಿಸುವ ಕಲ್ಪನೆಯೇ ಸಂವಿಧಾನದ ಆದರ್ಶಗಳನ್ನು ಪಾಲಿಸುವ ನಿತ್ಯಾಧರ್ ಶಿಕ್ಷಣ ಸಂಸ್ಥೆಯಾಗಿದೆ.   ಎಂದು ಮಂಗಳೂರು ಧರ್ಮಪ್ರಾಂತ್ಯದ  ಬಿಷಪ್ ರೆ| ಫಾ| ಪೀಟರ್ ಪೌಲ್ ಸಲ್ದಾನ್ಹ ಹೇಳಿದರು.ಬಬ್ಬುಕಟ್ಟೆ ನಿತ್ಯಾಧರನಗರದ ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆಯ  ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾದ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಶಾಲೆಯ ಆಸ್ತಿ. 25 ವರ್ಷಗಳ ನಿರಂತರ ಸಾಧನೆಗೆ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಎಲ್ಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿಗೆ ಕಾರಣವಾಗಿರುತ್ತಾರೆ. ಜ್ಞಾನದ ಕಾಶಿ ನಿತ್ಯಾಧರಶಾಲೆ ಆಗಿರುವುದರಿಂದ ಪ್ರದೇಶಕ್ಕೆ ನಿತ್ಯಾಧರನಗರ ಎಂಬ ಬಿರುದೇ ದೊರಕಿದೆ. ಆಂತರಿಕ ಜ್ಞಾನದ ಜೊತೆಗೆ ಸಂವಹನ ಜ್ಞಾನವೂ ಅತೀ ಅಗತ್ಯ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಪಿಯುಸಿ ಶಿಕ್ಷಣವನ್ನು ಶೀಘ್ರವೇ…

Read More

ತೊಕ್ಕೊಟ್ಟು: ಸಹ್ಯಾದ್ರಿ ಕೋ ಓಪರೇಟಿವ್ ಸೊಸೈಟಿ ಉದ್ಘಾಟನೆಯ ಸುಸಂದರ್ಭದಲ್ಲೇ 1,100 ಸದಸ್ಯರನ್ನು ಒಳಗೊಂಡು, 40 ಲಕ್ಷ ರೂ. ಪಾಲುಬಂಡವಾಳವನ್ನಿಟ್ಟುಕೊಂಡು , ಜಿಲ್ಲೆಯಾದ್ಯಂತ ಎಲ್ಲರ ಮನಗೆದ್ದ ಕೆ.ಟಿ.ಸುವರ್ಣರಂತಹ ಅಧ್ಯಕ್ಷರನ್ನು ಇಟ್ಟುಕೊಂಡಿರುವುದರಿಂದ ಅಭಿವೃದ್ಧಿಗೆ ಪೂರಕವಾದಂತಹ ಎಲ್ಲಾ ವ್ಯವಸ್ಥೆಗಳಿದ್ದು, ಸಂಸ್ಥೆ ಜಿಲ್ಲೆಯಲ್ಲೇ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದು, ರಾಜ್ಯಮಟ್ಟದ ಸಹಕಾರಿ ಸಂಘವಾಗಿ ಬೆಳೆದು ನಿಲ್ಲಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿ. ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇಲ್ಲಿನ ನಿರ್ದೇಶಕ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಭಟ್ನಗರದ ಶಕ್ತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಆರಂಭಗೊಂಡ ಸಹ್ಯಾದ್ರಿ ಕೋ-ಓಪರೇಟಿವ್ ಸೊಸೈಟಿ ಲಿ. ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೊಸ ಸಂಸ್ಥೆಯ ಸೇರ್ಪಡೆಯಾಗಿದೆ. ವಿಶಾಲವಾದ ಕ್ಷೇತ್ರ ಸಹಕಾರಿ ಕ್ಷೇತ್ರ. ದೇಶದ 32 ಕೋಟಿ ಜನಸಂಖ್ಯೆಯ ಜನ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ.…

Read More

ಕುತ್ತಾರು : ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳ ದಲ್ಲಿ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯಗಳ ಉದ್ಘಾಟನೆ ಸೋಮವಾರ ನಡೆಯಿತು. ಆದಿಸ್ಥಳದ ಸಮೀಪದಲ್ಲೇ ನಿರ್ಮಿಸಲಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ತುಂಗಾ ಗ್ರೂಪ್ ಆಫ್ ಹೊಟೇಲ್ಸ್ ಇದರ ಅಧ್ಯಕ್ಷ ಸುಧಾಕರ್ ಹೆಗ್ಡೆ ಉದ್ಘಾಟಿಸಿದರು. ನೂತನ ಬಸ್ ನಿಲ್ದಾಣವನ್ನು ಹಿರಿಯ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ವಿವೇಕ್ ಶೆಟ್ಟಿ ಬೊಳ್ಯಗುತ್ತು ಉದ್ಘಾಟಿಸಿದರು. ವಿಶ್ರಾಂತಿ ಕೊಠಡಿಗಳನ್ನು ಕುತ್ತಾರು ದೆಕ್ಕಾಡುವಿನ ಶ್ರೀ ಪಂಜಂದಾಯ ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಅನುಮಂಶಿಕ ಆಡಳಿತ ಮೊಕ್ತೇಸರ ಮಾಗಣತ್ತಡಿ ಶ್ರೀಧರ್ ಶೆಟ್ಟಿ ಉದ್ಘಾಟಿಸಿದರು. ತಂತ್ರಿಗಳಾದ ಶ್ರೀ ಕೃಷ್ಣಕುನಿಕುಳ್ಳಾಯ ಇವರ ಆಶೀರ್ವಾದದೊಂದಿಗೆ ಅರ್ಚಕರಾದ ಸುರೇಶ್ ಕುನಿಕುಳ್ಳಾಯ ಮತ್ತು ಶ್ರೀಪ್ರಸಾದ ಭಟ್ ಗಣಹೋಮ ನಡೆಸಿಕೊಟ್ಟರು.ಈ ಸಂದರ್ಭ ಶ್ರೀ ಪಂಜಂದಾಯ ಬಂಟ, ವೈದ್ಯನಾಥ ದೈವಗಳ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್, ದೇರಳಕಟ್ಟೆ…

Read More

ಕೋಟೆಕಾರು: ಆಧುನಿಕ ಕಾಲದಲ್ಲಿ ಸುಲಭವಾಗಿ ಸಿಗುವಂತಹ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟಿನ   ಪಾತ್ರೆಗಳ ಸಂಸ್ಕೃತಿಗೆ ಕಡಿವಾಣ ಹಾಕಿ  ಮಣ್ಣಿನ ಮಡಕೆಯನ್ನು ತಯಾರಿಸಿ ಜನರಿಗೆ ಒದಗಿಸುವಂತಹ ದೊಡ್ಡಮಟ್ಟಿನ ಜನಜಾಗೃತಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ವತಿಯಿಂದ  ಸಮಾಜದಲ್ಲಿ ಆಗುತ್ತಿದೆ.  ಇಂತಹ ವಸ್ತುಗಳಿಗೆ  ಬ್ರಾಂಡಿAಗ್ ಜೊತೆಗೆ ಡಿಜಿಟಲ್ ಮಾರ್ಕೆಟಿಂಗ್ ಅತೀ ಅಗತ್ಯ .  ಸಹಕಾರಿ ಸಂಘದ ಎರಡು ಬೇಡಿಕೆಗಳಾಗಿರುವ ಸರಕಾರಿ ಜಾಗ  ಒದಗಿಸುವುದು ಹಾಗೂ ಮಣ್ಣಿನ ಪಾತ್ರೆಗಳ ನಿರ್ಮಾಣದ ಘಟಕಕ್ಕೆ ಸೋಲಾರ್ ಪೂರೈಸಲು  ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ  ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಅವರು ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ೧೬ನೇ ಮಾಡೂರು ಶಾಖೆಯ ಮಾಡೂರಿನ ಮೆಡಿಪ್ಲಸ್ ಎದುರುಗಡೆಯ ಕಟ್ಟಡದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಕುಲಾಲ ಸಮಾಜ ಇತಿಹಾಸದಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರತಿಯೊಂದು ಮನೆಯಲ್ಲಿ ಮಡಿಕೆ ಇದ್ದಂತಹ ಕಾಲವಿತ್ತು. ತದನಂತರ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟುಗಳೇ ಜಾಸ್ತಿಯಾಯಿತು.…

Read More

ಉಳ್ಳಾಲ: ರಿಕ್ಷಾ ಅಪಘಾತದಲ್ಲಿ ಚಾಲಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಕಲ್ಕಾರ್ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಕುಂಬಳೆ ಮಂಜಂತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತರು. ಕುಂಬಳೆಯಿಂದ ಕೊಲ್ಯ ಅಡ್ಕ ಸಮೀಪ ನಡೆದಿದ್ದ ಸಂಬಂಧಿಕರ ಹುಟ್ಟುಹಬ್ಬ ಸಮಾರಂಭಕ್ಕೆ ಖಾಸಗಿ ರಿಕ್ಷಾದಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಸಂಬಂಧಿಕರನ್ನು ಕೊಣಾಜೆ ಕಲ್ಕಾರ್ ಎಂಬಲ್ಲಿಗೆ ಬಿಟ್ಟು ಬರಲು ರಿಕ್ಷಾದಲ್ಲೇ ತೆರಳಿದ್ದರು. ಕಲ್ಕಾರ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆರಿಕ್ಷಾ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾದೊಳಗಿದ್ದ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸೋಮೇಶ್ವರ : ಸೋಮೇಶ್ವರ ಇಲ್ಲ್ಲಿನ ರುದ್ರಬಂಡೆಯಿಂದ ಹಾರಿದ ಯುವತಿಯನ್ನು ಈಜುಗಾರರು ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುವ ಯುವತಿ ಸಮುದ್ರಕ್ಕೆ ಹಾರಿದ್ದು, ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿ ಆಗಿರುವ ಈಕೆಯನ್ನು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಯುವತಿಯನ್ನು ರಕ್ಷಿಸಲಾಗಿದೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಉಳ್ಳಾಲ: ದಕ್ಷಿಣ ಕನ್ನಡ ,ಉಡುಪಿ, ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿ ಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 16ನೇ ಶಾಖೆಯು ಕೋಟೆಕಾರು  ಮಾಡೂರಿನಲ್ಲಿ ನ.24 ರಂದು ಭಾನುವಾರ ಬೆಳಿಗ್ಗೆ 11.45ಕ್ಕೆ  ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ಧನ್‌ ಮೂಲ್ಯ ತಿಳಿಸಿದ್ದಾರೆ.ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.66 ವರ್ಷಗಳ ಸುದೀರ್ಘ ಸೇವೆಯಲ್ಲಿರುವ  ಸಂಘ ಇದೀಗ ತನ್ನ 14 ನೇ ಶಾಖೆಯನ್ನು  ಮಾಡೂರು ಮೆಡಿ ಪ್ಲಸ್‌  ಮೆಡಿಕಲ್‌ ಎದುರುಗಡೆ ಕಾರ್ಯಾರಂಭಗೊಳ್ಳಲಿದೆ.  ಸಭಾಧ್ಯಕ್ಷರಾದ ಯು.ಟಿ ಖಾದರ್ ಉದ್ಘಾಟಿಸಲಿದ್ದು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ದ್ವೀಪ ಪ್ರಜ್ಜಲಿಸಲಿದ್ದಾರೆ. ಕೋಟೆಕಾರ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ದಿವ್ಯ ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.ಹಿರಿಯ ನ್ಯಾಯಾವಾದಿಗಳಾದ ಲಕ್ಷ್ಮಣ ಕುಂದರ್, ಕುಲಾಲ ಸಂಘ ಕೊಲ್ಯದ ಅಧ್ಯಕ್ಷ ರಾದ ಭಾಸ್ಕರ್ ಕುತ್ತಾರ್, ಕುಲಾಲ್ ಸಂಘ ಮುಡಿಪು ಅಧ್ಯಕ್ಷ ಪುಂಡರೀಕಾಕ್ಷ ಯು ಮತ್ತಿತರರು ಮುಖ್ಯ…

Read More