
ಸೋಮೇಶ್ವರ: ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರದಲ್ಲಿ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಆಶ್ರಯದಲ್ಲಿ ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ , ಮೂಡಪ್ಪ ಸೇವೆ, ರಂಗಪೂಜೆ, ದೇವರಬಲಿ ಉತ್ಸವ ಸೇವೆ, ಲಕ್ಷ ಬಿಲ್ವಾರ್ಚನೆ, ರುದ್ರ ಹೋಮ ತಾ.17-11-2024 ಭಾನುವಾರದಿಂದ 21-11-2024 ಗುರುವಾರದವರೆಗೆ ಅದ್ಧೂರಿಯಾಗಿ ಜರಗಲಿದೆ ಎಂದು ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.
ರಾಜಕೀಯ ರಹಿತ ಕಾರ್ಯಕ್ರಮವನ್ನು ಎಲ್ಲರೂ ಹಿಂದೂ ಸಮಾಜದ ಒಳಿತಿಗಾಗಿ ಹಮ್ಮಿಕೊಂಡಿದ್ದು, ಭಕ್ತಾಧಿಗಳ ಸಹಕಾರ ಅಗತ್ಯ ಬೇಕಿದೆ . ಮಹಿಳೆಯೊಬ್ಬರಿಗೆ ಇದ್ದ ಸೊಂಟ ನೋವು ಯಜ್ಞದ ಸೇವಾ ಕಾರ್ಯದಲ್ಲಿ ಮಾಯವಾಗಿರುವುದು ಇಡೀ ಯಜ್ಞದ ಶಕ್ತಿಯನ್ನು ತೋರಿಸುತ್ತದೆ. ಎಲ್ಲರಿಗೂ ಒಂದೇ ರೀತಿಯಲ್ಲಿ ದೇವರ ಸೇವೆಯನ್ನು ನೆರವೇರಿಸುವಂತಹ ಅವಕಾಶ ಯಾಗದಲ್ಲಿ ಇದ್ದು, ಹೊಸ ಚಾಪೆಯ ಮೇಲೆ ಕುಳಿತು ಯಾಗದಲ್ಲಿ ಭಾವಹಿಸುವುದೇ ವಿಶೇಷ. ಜಿಲ್ಲೆಯುದ್ದಕ್ಕೂ ಎಂದರು.
ದಿ.16 ರಂದು ಸಂಜೆ 4 ಕ್ಕೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಬೀರಿ, ಕೋಟೆಕಾರಿನಿಂದ ಕ್ಷೇತ್ರಕ್ಕೆ ವಿಜೃಂಭಣೆಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 19 ರಂದು ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಶ್ರೀ ಸೋಮನಾಥನಿಗೆ ವಿಶೇಷ ರಂಗಪೂಜೆ, ಶ್ರೀರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ರಂಗಪೂಜೆ ದೇವರಿಗೆ ವಿಶೇಷ ಬಲಿ ಉತ್ಸವ ಜರಗಲಿದೆ.
ಅತ್ಯಂತ ಪಾವಿತ್ರ್ಯತೆಯುಳ್ಳ ಶಿವಪಂಚಾಕ್ಷರಿ ಕೋಟಿ ನಾಮ ಜಪ ಸಮಸ್ತ ಬಾಂಧವರ ಕುಟುಂಬದ ಹಾಗೂ ಸಮಾಜದ ಆತ್ಮವಿಶ್ವಾಸ ಪ್ರಾಪ್ತಿಗಾಗಿ ಆಯೋಜಿಸಲಾಗಿದೆ ಎಂದಿದ್ದಾರೆ.
ಸಂದರ್ಶನದಲ್ಲಿ ಕಾರ್ಯದರ್ಶಿ ಸತೀಶ್ ದೀಪಂ, ಪ್ರಧಾನ ಸಂಚಾಲಕ ಆನಂದ ಶೆಟ್ಟಿ ಭಟ್ನಗರ ಉಪಸ್ಥಿತರಿದ್ದರು.
ಸಮಗ್ರ ಮಾಹಿತಿಗಾಗಿ ವೀಡಿಯೋ ಕ್ಲಿಕ್ಕಿಸಿರಿ.

