ತಲಪಾಡಿ: ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ. 23ರಿಂದ ಡಿ.30 ರವರೆಗೆ ಬ್ರಹ್ಮಕಲಶ ಸಹಿತ ಶತ ಚಂಡಿಕಾಯಾಗ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಮೋಹನ್ ದಾಸ್ ರೈ, ಸಾಂತ್ಯಗುತ್ತು ಹೇಳಿದರು.ತಲಪಾಡಿ ದೇವಸ್ಥಾನದ ವಠಾರದಲ್ಲಿ ಕರೆಯಲಾದ ಸುದ್ಧಿಗೋಷ್ಠಿಯಲ್ಲಿ ಏಳು ದಿನಗಳ ಕಾರ್ಯಕ್ರಮಗಳ ಮಾಹಿತಿ ನೀಡಿದ ಅವರು ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ತಲಪಾಡಿ ಶ್ರೀ ಗಣೇಶ್ ಭಟ್ ರವರ ಉಪಸ್ಥಿತಿಯಲ್ಲಿ ಹಾಗೂ ರಾಜಪುರೋಹಿತ ವಿದ್ವಾನ್ ಶ್ರೀ ವಿಷ್ಣುಮೂರ್ತಿ ಭಟ್ ರವರ ಪೌರೋಹಿತ್ಯದಲ್ಲಿ ನವೀಕೃತ ಧ್ವಜಸ್ತಂಭ ಕಲಶಾಭಿಷೇಕ, ಶತ ನಾರೀಕೇಳ ಗಣಯಾಗ, ಮೂಡಪ್ಪ ಸೇವೆ, ರುದ್ರಯಾಗ, ವಡೆ ಸೇವೆ, ಶತ ಚಂಡಿಕಾಯಾಗ, ಚಿನ್ನದ ಪೀಠ ಪ್ರಭಾವಳಿ, ಅಟ್ಟೆಕನ್ನಟಿ ಸಮರ್ಪಣೆ, ಶ್ರೀ ರಂಗಪೂಜೆ ಉತ್ಸವ ಜರಗಲಿದೆ.ಡಿ.23 ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಮುಹೂರ್ತ , ದ್ವಾದಶ ನಾರಿಕೇಳ ಯಾಗ ರುದ್ರಪಾರಾಯಣ…
Author: UllalaVani
ಎಕ್ಕೂರು: ದೇವರ ಸ್ಮರಣೆಯಿಂದ ಶ್ರದ್ಧೆ ಮತ್ತು ಭಕ್ತಿಯ ಮೂಲಕ ವ್ಯಕ್ತಿಗಳ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿದೆ. ಹಿರಿಯರು ದೇವರ ಸ್ಮರಣೆಯನ್ನು ದಿನಚರಿಯಾದಲ್ಲಿ ಅಂಕಿತಗೊಳಿಸುವ ಮಹತ್ವವನ್ನು ಸಾರಿದ್ದಾರೆ. ಸಮಾಜದಲ್ಲಿ ಪರಸ್ಪರ ಸಹಾಯ ಮತ್ತು ಸಹಕಾರದ ಮನೋಭಾವ ವೃದ್ಧಿಯಾಗಲು ದೇವರ ಸ್ಮರಣೆ ಮಾರ್ಗದರ್ಶಕವಾಗಿದೆ. ಆಧ್ಯಾತ್ಮ ಪಥದಲ್ಲಿ ದೇವರ ಸ್ಮರಣೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶ್ರೀ ಅನಂತನಾಗ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಬ್ರ. ಎಂ.ಗೋಪಾಲಕೃಷ್ಣ ತಂತ್ರಿವರ್ಯರು ಅಭಿಪ್ರಾಯಪಟ್ಟರು.ಅವರು ಎಕ್ಕೂರಿನ ಶ್ರೀ ಅನಂತನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಕಂದ ಪಂಚಮಿಯ ಪ್ರಯುಕ್ತ ಜರಗಿದ ವಿಶೇಷ ಪೂಜೆ ಅಭಿಷೇಕಾದಿ ವೈದಿಕ ಕಾರ್ಯಕ್ರಮಗಳು ಹಾಗೂ ಸಂಜೆ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭ ವಿಶಾಲಾಕ್ಷಿ ವಿ.ನಾಯಕ್ ಪತಂಜಲಿ, ಯೋಗ ಶಿಕ್ಷಣ ಸಮಿತಿ ಎಕ್ಕೂರು ಇಲ್ಲಿನ ರಾಮದಾಸ್, ಅನಂತ ಕೃಷ್ಣ ರಾವ್ ಎಕ್ಕೂರು ದೀಪ ಬೆಳಗಿಸಿದರು.ಶ್ರೀ ಅನಂತನಾಗ ಸುಬ್ರಹ್ಮಣ್ಯ ಗೀತ ನರ್ತನ ಎಕ್ಕೂರು ಇಲ್ಲಿನ…
ತೊಕ್ಕೊಟ್ಟು: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪುನರ್ ಪ್ರತಿಷ್ಠೆ, ಮಹಾಕುಂಭಾಭಿಷೇಕ ಹಾಗೂ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭವು ಡಿ.22ರಿಂದ ಡಿ.25ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯೊಂದಿಗೆ ನಡೆಯಲಿರುವುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ ಇದರ ಅಧ್ಯಕ್ಷ ರವೀಂದ್ರ ಬಂಗೇರ ತಿಳಿಸಿದ್ದಾರೆ. ಅವರು ಶುಕ್ರವಾರ ದಂದು ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿಡಿ.22 ರಂದು ಬೆಳಿಗ್ಗೆ 9.25ಕ್ಕೆ ಸರಿಯಾಗಿ ಉಗ್ರಾಣ ಮುಹೂರ್ತ, 10.15ಕ್ಕೆ ಕೊಪ್ಪರಿಗೆ ಮುಹೂರ್ತ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿದೆ. 12.30ಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ವಿಗ್ರಹ ಪೂಜೆ ನೆರವೇರಿಸಿದ ನಂತರ ಪಂಚಲೋಹ ವಿಗ್ರಹದ ಶೋಭಾಯಾತ್ರೆಯು ಮಂಗಳೂರು, ತೊಕ್ಕೊಟ್ಟು ಹಾಗೂ ಮಧ್ಯಾಹ್ನ ಗಂಟೆ 3.30ಕ್ಕೆ ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ತಲುಪಿ, ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು…
ಮಂಗಳೂರು: ಪಿ ಎಂ ಪೋಷಣ್ – ಮಧ್ಯಾಹ್ನ ಉಪಹಾರ ಯೋಜನೆಯು ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಸರಕಾರದ ಬಹಳ ಮುಖ್ಯ ಯೋಜನೆಗಳಲ್ಲಿ ಒಂದಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಅದೆಷ್ಟೋ ಮಕ್ಕಳ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವುಗಳನ್ನು ಬಹಳ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಮತ್ತು ಅಧಿಕಾರಿ ವರ್ಗದವರ ಪಾತ್ರ ಹಿರಿದು. ಈ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಎಲ್ಲಾ ದಾಖಲೆಗಳನ್ನು ಅತ್ಯುತ್ತಮ ವಾಗಿ ನಿರ್ವಹಿಸಿ ಕೊಂಡು ಬರುತ್ತಿರುವ ಎಲ್ಲಾ ಶಿಕ್ಷಕರುಗಳಿಗೆ ಅಭಿನಂದನೆಗಳು ಎಂದು ಮಂಗಳೂರು ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಪ್ರವೀಣ ಕುಮಾರಿ ರೈ ಅವರು ತಿಳಿಸಿದರು. ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯದ ವತಿಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಹಮ್ಮಿ ಕೊಂಡ ಪಿ ಎಂ ಪೋಷಣ್ ಯೋಜನೆಯ ಯಶಸ್ವಿ ಅನುಷ್ಠಾನ…
ಕಣಚೂರು: ಮರ ಕಡಿಯುವ ಯಂತ್ರಕ್ಕೆ ಕೈ ಸಿಲುಕಿದ ಪರಿಣಾಮ ಕೈ ಬೆರಳುಗಳು ತುಂಡಾಗಿ ಗಂಭೀರ ಗಾಯಗೊಂಡಿದ್ದ ಕೇರಳ ಮೂಲದ 26 ವರ್ಷದ ಯುವಕನ ಕೈ ಬೆರಳುಗಳಿಗೆ ಕಣಚೂರು ವೈದ್ಯಕೀಯ ಆಸ್ಪತ್ರೆ ಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಯನ್ನು ನಡೆಸುವ ಮೂಲಕ ಕೈ ಬೆರಳುಗಳನ್ನು ಮತ್ತೆ ಜೋಡಿಸಲಾಗಿದೆ. ಕೇರಳದ ಕಣ್ಣೂರಿನಲ್ಲಿ ನಡೆದ ಅಪಘಾತದಲ್ಲಿ ಯುವಕ ಬಲಗೈಯ ಮೂರು ಬೆರಳುಗಳನ್ನು ಕಳೆದುಕೊಂಡಿದ್ದರು. ಅಪಘಾತದ ಸಂದರ್ಭ ಪ್ರಾಥಮಿಕ ಚಿಕಿತ್ಸೆ ಸ್ಥಳೀಯ ಆಸ್ಪತ್ರೆಯಲ್ಲಿ ಪಡೆದು ನಂತರ ಇತರೇ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ ಬಳಿಕ ಅಪಘಾತ ನಡೆದು ಸುಮಾರು ಏಳು ಗಂಟೆಗಳ ನಂತರ ರೋಗಿಯನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.ಕಣಚೂರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಂಡ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿತ್ತು. ಸುಮಾರು ಏಳು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಉಂಗುರ ಬೆರಳು ಹಾಗೂ ನಡುವಿನ ಬೆರಳುಗಳನ್ನು ಯಶಸ್ವಿಯಾಗಿ ಮರು ಜೋಡಿಸಲಾಗಿದೆ. ತೀವ್ರ ಅಪಘಾತದ ಪರಿಣಾಮ 12 ಗಂಟೆಗಳಲ್ಲಿ ರಕ್ತನಾಳಗಳನ್ನು ಪುನಃಜೀವಂತಗೊಳಿಸುವಲ್ಲಿ ತಂಡ ಯಶಸ್ವಿಯಾಗಿದ್ದು ಇದೀಗ ಯುವಕ ಗುಣಮುಖರಾಗುತ್ತಿದ್ದಾರೆ.ಕಣಚೂರು…
ಮಂಗಳೂರು: ಉತ್ತಮ ವಿಷಯ ಜ್ಞಾನ ಹೊಂದಿ, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿದುಕೊಂಡು, ಅತ್ಯುತ್ತಮ ಬೋಧನಾ ಕೌಶಲ್ಯ ದೊಂದಿಗೆ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡಿದಾಗ ಶ್ರೇಷ್ಠ ಮಟ್ಟದ ಫಲಿತಾಂಶ ಪಡೆಯಲು ಸಾಧ್ಯ.ಈ ದೃಷ್ಟಿಯಲ್ಲಿ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿಸೋಜ ಅವರು ಉತ್ತಮ ಶಿಕ್ಷಕರಾಗಿ, ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿ ಗುರುತಿಸಿ ಕೊಂಡಿರುವುದು ಅಭಿನಂದನೀಯ ಎಂದು ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯದ ವತಿಯಿಂದ ಕಿನ್ನಿಕಂಬಳ ರೊಸಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿಸೋಜ ಅವರಿಗೆ ನಡೆದ ವಿದಾಯ ಸನ್ಮಾನ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ವಂದನೀಯ ಭಗಿನಿ ಡಾ. ಮರೆಯೋಲ ಬಿ ಎಸ್ ಇವರು ವಹಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಐರಿನ್ ಅವರು ಶಾಲೆ ದೇವಸ್ಥಾನಕ್ಕೆ ಸಮ. ಶ್ರದ್ಧೆ, ಭಕ್ತಿ ಕರುಣೆ ತಾಳ್ಮೆ ಮುಂತಾದ ಗುಣಗಳನ್ನು ಮೈಗೂಡಿಕೊಳ್ಳುವುದರಿಂದ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ, ಆಡಳಿತ…
ಉಳ್ಳಾಲ: ಅಳೇಕಲದ ಮದನಿ ಎಜ್ಯುಕೇಷನ್ ಅಸೋಸಿಯೇಷನ್ 50ನೇ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ಮದನಿ ಅಲ್ಯುಮ್ನಿ ಎಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಆಚರಣೆ 2024-25 ಪ್ರಯುಕ್ತ ಡಿ.21 ರಂದು 3 ಗಂಟೆಗೆ ಶಂಕುಸ್ಥಾಪನೆ ಹಾಗೂ ನೂತನ ಕಟ್ಟಡದ ನಾಮಫಲಕ ಅನಾವರಣ ನೆರವೇರಲಿದೆ ಎಂದು ಮದನಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫತಾಕ್ ಹೇಳಿದ್ದಾರೆ.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿ ಮದನಿ ಎಜ್ಯುಕೇಷನ್ ಎಸೋಸಿಯೇಶನ್ ಸಂಸ್ಥೆ ಆರಂಭಗೊಂಡಿದ್ದು, ಉಳ್ಳಾಲದಲ್ಲಿ ಪ್ರಥಮ ಮುಸ್ಲಿಂ ವಿದ್ಯಾಸಂಸ್ಥೆ ಹೆಗ್ಗಳಿಗೆ ಪಡೆದುಕೊಂಡಿದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮದನಿ ಪ್ರೌಢಶಾಲೆ, ಮದನಿ ಪದವಿಪೂರ್ವ ಕಾಲೇಜುಗಳು ಪ್ರಾರಂಭಗೊಂಡಿದೆ. ಜಾತಿ ಮತಗಳ ಬೇಧವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ದ.ಕ ಜಿಲ್ಲೆ ಹಾಗೂ ಕಾಸರಗೋಡು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿರುವುದರಿಂದ ಈಗಿರುವ ಮೂಲಭೂತ ಸೌಕರ್ಯದ ಜೊತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳ ವ್ಯವಸ್ಥೆ ಅನಿವಾರ್ಯವಾಗಿದೆ. ಮುಂದಿನ ವರ್ಷಗಳಲ್ಲಿ ಪಿಯುಸಿಗೆ…
ಮಂಗಳೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ‍್ಯಕಾರಿಣಿ ಸಭೆಯು ಇತ್ತೀಚಿಗೆ ಕೋಲಾರದಲ್ಲಿ ನಡೆದಿದ್ದು ಉಳ್ಳಾಲ ತಾಲೂಕು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಇವರು ಅವಿರೋಧವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈಗಾಗಲೇ ಇವರು ಮಂಗಳೂರು ತಾಲೂಕು ಸಂಘದ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಸಂಘದ ಕೋಶಾಧಿಕಾರಿಯಾಗಿ, ರಾಜ್ಯ ಸಂಘದ ಪ್ರಚಾರ ಸಮಿತಿ ಮುಖ್ಯಸ್ಥರಾಗಿ, ಮೈಸೂರು ವಿಭಾಗೀಯ ಕಾರ್ಯಾಧ್ಯಕ್ಷರಾಗಿ, ಇದೀಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದಾರೆ. ಇದೇ ಪ್ರಥಮ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರೊಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಮುನ್ನೂರು : 2024ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಮುನ್ನೂರು ಯುವಕ ಮಂಡಲಕ್ಕೆ ಮುನ್ನೂರು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.ಕಳೆದ 54 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದ ಮುನ್ನೂರು ಯುವಕ ಮಂಡಲ ಕುತ್ತಾರ್ ಮುನ್ನೂರು ಸೌಹಾರ್ದಯುತವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಕಲ್ಪಿಸುತ್ತಾ ಬಂದಿದೆ. ಇವರ ಹಲವು ವರ್ಷಗಳ ಸೇವೆಯನ್ನು ಮನಗಂಡು ನ.1 ಕ್ಕೆ ಜಿಲ್ಲಾ ಪ್ರಶಸ್ತಿಯನ್ನು ಜಿಲ್ಲಾಡಳಿತ ನೀಡಿ ಗೌರವಿಸಿದೆ . ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತದ ವತಿಯಿಂದ ಅಭಿನಂದಿಸಲಾಯಿತು.ಈ ಸಂದರ್ಭ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷರಾದ ಮಹಾಬಲ್. ಟಿ. ದೆಪ್ಪೆಲಿಮಾರ್, ಮುನ್ನೂರು ಯುವಕ ಮಂಡಲ ಸ್ಥಾಪಕ ಸದಸ್ಯರು ಗಳಾದ ವಿಶ್ವನಾಥ್ ತೇವುಲ. ಕೆ ಕೃಷ್ಣಪ್ಪ ಸಾಲಿಯಾನ್ , ಮುನ್ನೂರು ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಮುಂಡೋಳಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಪಂಚಾಯತ್ ಸದಸ್ಯರುಗಳು ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.
ತೊಕ್ಕೊಟ್ಟು : ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ಸಂಭವಿಸಿದೆ.ದೇರೆಬೈಲ್ ನ ದಿವಂಗತ ಜಗದೀಶ್ ಭಂಡಾರಿ ಅವರ ಪತ್ನಿ ಉಷಾ (72)ಮೃತ ಮಹಿಳೆ.ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲವು ದಿನಗಳ ಹಿಂದೆ ನಿಧನರಾಗಿದ್ದು ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಜೊತೆಗೆ ಸೋಮೇಶ್ವರಕ್ಕೆ ಆಗಮಿಸಿದ್ದರು. ಪಿಂಡಪ್ರದಾನದ ಬಳಿಕ ಸಮುದ್ರ ದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು ಸಮುದ್ರ ತಟಕ್ಕೆ ತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಉಷಾ ಅವರು ಏನ್ ಎಮ್ ಪಿ ಟಿಯಲ್ಲಿ ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಉಷಾ ಅವರಿಗೆ ಮಗಳಿದ್ದಾರೆ. ಮೃತ ದೇಹವನ್ನುಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.ಉಳ್ಳಾಲ ಠಾಣೆಯಲ್ಲಿ…

