ತೊಕ್ಕೊಟ್ಟು : ತುಳುನಾಡಿನ ವಿಶೇಷ ಪದ್ಧತಿ,ಆಚರಣೆ, ಸಂಸ್ಕೃತಿ ಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಟಿ ತಿಂಗಳಲ್ಲಿ ಪ್ರಸ್ತುತ ಮಾಡುತ್ತಿರುವ ಕಾರ್ಯಕ್ರಮ ಗಳ ಮುಖೇನ ಆಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರಿನ ಎಮ್.ವೈ.ಎಮ್. ಸಭಾಂಗಣದಲ್ಲಿ ನಡೆದ ಆಟಿಡೊಂಜಿ ಕೂಡಾಟಿಕೆ – 2025 ಕಾರ್ಯಕ್ರಮವನ್ನು, ವೇದಿಕೆಯಲ್ಲಿ ಸಿದ್ಧ ಪಡಿಸಿರುವ ಒಣಮೀನಿನ ಪದಾರ್ಥದ ಉಪ್ಪು,ಖಾರ ರುಚಿ ನೋಡಿ ವಿಶಿಷ್ಠವಾಗಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ವಹಿಸಿದ್ದರು.ಅತಿಥಿಗಳಾಗಿ ಕೊಲ್ಯ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಮುಂಡೋಳಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಯಕ್ರಮದ ಸಹ ಸಂಚಾಲಕರಾದ ಪ್ರಸಾದ್ ಕೊಂಡಾಣ, ಸುಧಾಕರ ಬಜಾಲ್ ಉಪಸ್ಥಿತರಿದ್ದರು.ಪ್ರತಿಷ್ಠಾನದ ಪ್ರಮುಖರಾದ ದೀಕ್ಷಿತ್ ನಿಸರ್ಗ ಸ್ವಾಗತಿಸಿದರು. ಸಂಚಾಲಕರಾದ ದಾಮೋದರ ನಡಾರ್ ವಂದಿಸಿದರು. ಉಪಾಧ್ಯಕ್ಷ ರಾದ…
Author: UllalaVani
ಸಂಕೊಳಿಗೆ : ಇಲ್ಲಿನ ಭಗವತೀ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಮಿತಿ ವತಿಯಿಂದ ಆಟಿದ ಕೂಡಾಟಿಕೆಡ್ ಒಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಭಗವತೀ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್ ಮತ್ತು ಟ್ರಸ್ಟಿ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮೇಧ.ಜೆ.ಬಿ, ವರ್ಷಿಣಿ ರೈ, ತೇಜಸ್ವಿನಿ.ವಿ.ವೈ, ಹಿರಾಲ್.ಎಸ್.ಬಂಗೇರ ಇವರನ್ನು ಅಭಿನಂದಿಸಲಾಯಿತು.ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಘವ ಉಚ್ಚಿಲ್, ಕೋಶಾಧಿಕಾರಿ ಮಾಧವ ತಲಪಾಡಿ ಟ್ರಸ್ಟಿ ಶ್ರೀಮತಿ ಗಜಲಕ್ಷ್ಮಿ, ಭಗವತೀ ಶಾಲೆಯ ಮುಖ್ಯ ಶಿಕ್ಷಕಿಯರಾದ ಪ್ರಮೀಳಾ ಶಾಂತರಾಮ್, ಭಗವತೀ ಶಾಲೆಯ ಪೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಸುನೀತ ಮತ್ತು ಅಮೃತ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸದಸ್ಯರ ಮನೆಯವರು ಸಿದ್ಧ ಪಡಿಸಿರುವ ಆಟಿ ತಿಂಗಳ ಸುಮಾರು 35 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸುಮ, ಕವಿತ ಸುರೇಶ್, ಕವಿತ ಶೆಟ್ಟಿ, ಪ್ರಫುಲ್ಲಾ, ಲಕ್ಷ್ಮಿಹರೀಶ್, ವನಿತ,…
ಬಜ್ಪೆ : ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ ಮತ್ತು ನಾಗರಿಕ ಸೇವಾ ಸಮಿತಿ ಅಂಬೇಡ್ಕರ್ ನಗರ ಕರಂಬಾರು ಆಶ್ರಯದಲ್ಲಿ ‘ನಮ್ಮ ಕ್ಲಿನಿಕ್ ಮಳವೂರು’ ಸಭಾಂಗಣದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ 66 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಇನ್ನರ್ ವೀಲ್ ಮಂಗಳೂರು ದಕ್ಷಿಣದ ಅಧ್ಯಕ್ಷ ಶೀಜಾ ನಂಬ್ಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಭೋಜರಾಜ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಸಮೀಕ್ಷಾ ಡಿ.ಪಿ. ಭಾಗವಹಿಸಿದ್ದರು. ಇನ್ನರ್ ವೀಲ್ ಕ್ಲಬ್‌ನ ಕಾರ್ಯದರ್ಶಿ ಕಲಾವತಿ, ಮಾಜಿ ಅಧ್ಯಕ್ಷೆ ಶಬರಿ ಭಂಡಾರಿ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೈಯದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಯುವವಾಹಿನಿ ಕೆಂಜಾರು ಕರಂಬಾರು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮಾಧವ ಅಮೀನ್ ಕೆಂಜಾರು, ಗ್ರಾಪಂ ಮಾಜಿ ಸದಸ್ಯೆ ಶಶಿಕಲಾ ಉಪಸ್ಥಿತರಿದ್ದರು. ವಿನಯ್ ಸಾಲ್ಯಾನ್ ಸ್ವಾಗತಿಸಿದರು. ನವೀನ್‌ಚಂದ್ರ ಸಾಲ್ಯಾನ್ ವಂದಿಸಿದರು. ರಾಕೇಶ್…
ಮುಡಿಪು : ಮುಡಿಪುವಿನಲ್ಲಿ ಎಲ್ ಐಸಿ ಆಫೀಸ್ ಹೊಂದಿ, ಸರಸ್ವತಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕಿನಲ್ಲಿ ಪಿಗ್ಮೀ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜೇಶ್ವರ ಪಾವುಲ ನಿವಾಸಿ ರಮೇಶ್ ಶೆಟ್ಟಿ (49) ಎಂಬವರು ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಡಿಪುವಿನಲ್ಲಿ ಎಲ್ ಐಸಿ ಆಫೀಸ್ ಹೊಂದಿದ್ದ ರಮೇಶ್ ಶೆಟ್ಟಿ ಇವರು ಪಿಗ್ಮೀ ಕಲೆಕ್ಟರ್ ಕೂಡಾ ಆಗಿದ್ದರು. ಜು.17ರಂದು ಮನೆಯಿಂದ ಬೆಳಿಗ್ಗೆ 6.45ರ ಹೊತ್ತಿಗೆ ಕೆಲಸಕ್ಕೆ ತೆರಳಿದವರು ವಾಪಸ್ಸಾಗಿಲ್ಲ. ಈ ಕುರಿತು ಎಲ್ ಐಸಿ ಕಚೇರಿ ಸಮೀಪವಿರುವ ಲಾಂಡ್ರಿ ಅಂಗಡಿ ಸದಾಶಿವ ಎಂಬವರಲ್ಲಿ ವಿಚಾರಿಸಿದಾಗ ಬೆ. 8.1೦ಕ್ಕೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ತೆರಳಿದ್ದರು ಎಂಬ ಮಾಹಿತಿ ನೀಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಡಿ, ಸಂಬಂಧಿಕರಲ್ಲಿಯೂ ವಿಚಾರಿಸಿ ರಮೇಶ್ ಅವರ ಪತ್ತೆಯಾಗದ ಕಾರಣ ತಡವಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪುತ್ರ ರಕ್ಷತ್ ಆರ್ ಶೆಟ್ಟಿ ದೂರು ನೀಡಿರುವಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಂಗಳೂರು ಅಯೋಧ್ಯೆ ನಡುವೆ ನೇರ ರೈಲನ್ನು ಆರಂಭಿಸುವಂತೆ ಮತ್ತು ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ಗೆ ರಾಣಿ ಅಬ್ಬಕ್ಕ ಹೆಸರಿಡುವಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಜುಲೈ 18 ರಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಜನರಿಂದ ನೇರ ರೈಲಿಗಾಗಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಚೌಟ ಗಮನ ಸೆಳೆದಿದ್ದಾರೆ. ಈ ಎರಡು ನಗರಗಳ ನಡುವಿನ ನೇರ ರೈಲು ಬೆಳೆಯುತ್ತಿರುವ ಪ್ರಯಾಣದ ಅಗತ್ಯಗಳನ್ನು ಪೂರೈಸುವುದಲ್ಲದೆ, ಸಾಂಸ್ಕೃತಿಕ ಕಾರಿಡಾರ್ ಆಗಿ ಹೊರಹೊಮ್ಮುಲಿದೆ. ಎರಡು ನಗರಗಳ ನಡುವೆ ನೇರ ರೈಲು ಇಲ್ಲದ ಕಾರಣದಿಂದಾಗಿ ಪ್ರಯಾಣಿಕರು ದೀರ್ಘ ಮತ್ತು ಅನಾನುಕೂಲ ಪ್ರಯಾಣಗಳನ್ನು ಕೈಗೊಳ್ಳಬೇಕಾಗುತ್ತದೆ, ಆಗಾಗ್ಗೆ ಬೆಂಗಳೂರು ಅಥವಾ ಇತರ ಜಂಕ್ಷನ್‌ಗಳ ಮೂಲಕ ಪ್ರಯಾಣಿಸಲು 40 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಚೌಟ ಹೇಳಿದ್ದಾರೆ ಹಾಸನ, ಅರಸಿಕೆರೆ ಮತ್ತು ಬಳ್ಳಾರಿ ಮೂಲಕ ಅಥವಾ ಕೊಂಕಣ ರೈಲ್ವೆ ಮಾರ್ಗ…
ಉಳ್ಳಾಲ : ಸಮನ್ವಯ ಶಿಕ್ಷಕರ ಸಂಘದ ಉಳ್ಳಾಲ ಘಟಕವನ್ನು ಶನಿವಾರ ಉಳ್ಳಾಲ ಹಳೆಕೋಟೆ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಉಳ್ಳಾಲ ಹಾಗೂ ಮಂಗಳೂರು ಘಟಕದ ಅಧ್ಯಕ್ಷ ಬಿ.ಎಂ. ರಫೀಕ್ ತುಂಬೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಬಿ. ಮುಹಮ್ಮದ್ ತುಂಬೆ ಭಾಗವಹಿಸಿ ಮಾತನಾಡಿದರು. ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ ಸಮನ್ವಯವು ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಮಾನವೀಯ ನೆಲೆಯಲ್ಲಿ ಕಾರ್ಯಚರಿಸುತ್ತದೆ ಎಂದರು. ಒತ್ತಡ ನಿರ್ವಹಣೆ ಹೇಗೆ ಎಂಬುವುದರ ಬಗ್ಗೆ ಕಣಚೂರು ಆಸ್ಪತ್ರೆಯ ಆಡಳಿತಾಧಿಕಾರಿ ರೋಹನ್ ಮೋನಿಶ್ ಕಾರ್ಯಾಗಾರ ನಡೆಸಿದರು. ವೇದಿಕೆಯಲ್ಲಿ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಬಾಂಬಿಲ ಉಪಸ್ಥಿತರಿದ್ದರು. ಸಮನ್ವಯದ ಸ್ಥಾಪಕ ಅಧ್ಯಕ್ಷ ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಉಳ್ಳಾಲ ಘಟಕದ ಕಾರ್ಯದರ್ಶಿ ರಸೂಲ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಬಾಮಿ ಶಾಲೆಯ ಮುಖ್ಯ ಶಿಕ್ಷಕ ನಾಸಿರ್ ವಂದಿಸಿದರು.
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಸರ್ಕಾರದ ಪ್ರಯತ್ನಗಳು ಮುಂದುವರಿದಿದ್ದು, ಇದರ ಭಾಗವಾಗಿ ಭಾನುವಾರ ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ಅನಕ್ಷರಸ್ಥ ಕಲಿಕಾರ್ಥಿಗಳಿಗೆ ಮೂಲ ಸಾಕ್ಷರತಾ ಪರೀಕ್ಷೆಗಳು ನಡೆದಿದ್ದು ತಾಲೂಕಿನ 687 ಅಕ್ಷರ ವಂಚಿತರು ಪರೀಕ್ಷೆ ಬರೆದಿದ್ದಾರೆ. ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 777 ಕಲಿಕಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ವಿವಿಧ ಕಾರಣಗಳಿಗಾಗಿ 90 ಮಂದಿ ಗೈರಾಗಿದ್ದರು. ತಾಲೂಕಿನ ಕೊಯಿಲ, ಬರಿಮಾರು, ಪೊಳಲಿ , ಮೂರ್ಜೆ, ಬಡಗಕಜೆಕಾರು, ತೆಂಕಕಜೆಕಾರು, ಚೆನ್ನೈತ್ತೋಡಿ, ಬಡಗಬೆಳ್ಳೂರು, ಕುಕ್ಕಿಪ್ಪಾಡಿ, ಆಚಾರಿಪಲ್ಕೆ, ಕುಜಿಲ ಬೆಟ್ಟು, ಬ್ರಹ್ಮರ ಕೂಟ್ಲು, ಬಂಟ್ರಿಂಜ, ಅನಂತಾಡಿ, ಬೋಳಂತೂರು ನರಿಕೊಂಬು, ಶಂಭೂರು ಪ್ರಾಥಮಿಕ , ಮಿತ್ತನಡ್ಕ, ಕುದ್ರೆಬೆಟ್ಟು, ಬಾಳ್ತಿಲ, ನಂದಾವರ, ಸಜಿಪಮುನ್ನೂರು, ಮಾಣಿಲ, ಸಿದ್ದಕಟ್ಟೆ, ಪುದು, ಪುಣಚ, ಪರಿಯಾಲ್ತಡ್ಕ, ಮೂಡುಪಡುಕೋಡಿ, ಕುಳಾಲು, ಉಳಿ, ಕಲ್ಲಡ್ಕ, ಕೆದಿಲ, ಸತ್ತಿಕಲ್ಲು, ಅಳಕೆಮಜಲು, ಬೊಂಡಾಲ, ಅಮ್ಮುಂಜೆ, ಬಡಕೊಟ್ಟು, ಕುಟ್ಟಿಕ್ಕಳ, ಅಜಿಲಮೊಗರು, ಪೆರಾಜೆ, ನಾಟೆಕಲ್ಲು, ಕೊಡಂಗಾಯಿ, ನೇರಳಕಟ್ಟೆ, ಬೋಳಂತೂರು, ನಗ್ರಿ, ಸಜಿಪಮೂಡ,…
ಸುಳ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರ ಸಮ್ಮುಖದಲ್ಲಿ ಸರದ ವಾರಸುದಾರರಾದ ಉಜಿರೆಯ ಸಚಿನ್ ಅವರಿಗೆ ದೇಗುಲದ ಭದ್ರತಾ ಸಿಬ್ಬಂದಿಗಳ ಮುಖ್ಯಸ್ಥ ದಾಮೋದರ ನಾಯರ್ ಅವರು ಹಿಂತಿರುಗಿಸಿದರು. ದೇಗುಲದಲ್ಲಿ ಭಾನುವಾರ ಸರತಿ ಸಾಲಿನಲ್ಲಿ ಬೆಂಗಳೂರಿನ ಭಕ್ತ ಶ್ರೀನಿವಾಸಪ್ಪ ಅವರಿಗೆ ಚಿನ್ನದ ಸರ ಸಿಕ್ಕಿತ್ತು. ಅದನ್ನು ಅವರು ದೇಗುಲದ ಭದ್ರತಾ ಸಿಬ್ಬಂದಿಗಳ ಮುಖ್ಯಸ್ಥ ದಾಮೋದರ ಅವರಿಗೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಸರ ಸಿಕ್ಕ ಬಗ್ಗೆ ದಾಮೋದರ ಅವರು ಧ್ವನಿವರ್ಧಕದ ಮೂಲಕ ಹಲವು ಬಾರಿ ಘೋಷಿಸಿದರು. ಜೊತೆಗೆ ಸರ ದೊರೆತ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿದರು. ಈ ವೇಳೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಚಿನ್ ಅವರಿಗೆ ತನ್ನ ಮಗಳ ಚಿನ್ನದ ಸರ ಕಳೆದುಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ದಾಮೋದರ ಅವರನ್ನು ಸಂಪರ್ಕಿಸಿ, ಸರದ ಗುರುತು ಹೇಳಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸರವನ್ನು ಪಡೆದರು.
ಕೊಣಾಜೆ : ಮಂಚಿ ಸಮೀಪದ ಕುಕ್ಕಾಜೆ ಬಾಕಿಮಾರು ನಿವಾಸಿ ಇಸ್ಮಾಯೀಲ್ ಕುಕ್ಕಾಜೆ (64) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಇರಾ ಅವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರಿಗೆ ಸ್ಪೀಕರ್ ಯು. ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.
ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜಕ್ಕೆ ಒಂದು ಮಹಿಳಾ ಅಲ್ಪಸಂಖ್ಯಾತ ವಸತಿ ಕಾಲೇಜು ಮಂಜೂರಾಗಿದೆ. ಈ ಕಾಲೇಜು ವಿಧಾನ ಸಭಾಧ್ಯಕ್ಷರಾದ ಯು. ಟಿ ಖಾದರ್ ಅವರ ಕ್ಷೇತ್ರವಾದ ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ. ಅಭಿವೃದ್ಧಿಯ ಹರಿಕಾರ ಯು.ಟಿ ಖಾದರ್ ಅವರ ಪ್ರಯತ್ನದ ಫಲವಾಗಿ ಮಂಜೂರಾದ ಈ ಮಹಿಳಾ ವಸತಿ ಕಾಲೇಜು ಸುಮಾರು 17 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಬೇಕಾದ 2 ಎಕರೆ ಭೂಮಿ ಗುರುತಿಸುವ ಕೆಲಸ ಆರಂಭವಾಗಿದ್ದು ಅತೀ ಶೀಘ್ರವೇ ಕಾಮಗಾರಿಯೂ ಆರಂಭವಾಗಲಿದೆ. ಈ ಕಾಲೇಜಿನಲ್ಲಿ ವಸತಿ ರಹಿತ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿದ್ದು ಶೇ 75 ರಷ್ಟು ಸೀಟುಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಟ್ಟರೆ ಉಳಿದ ಶೇ 25 ಇತರೆ ವಿದ್ಯಾರ್ಥಿಗಳಿಗೆ ಮೀಸಲಿರಲಿದೆ.

