Author: UllalaVani

Kannada News From Coastal Karnataka

ಮಂಗಳೂರು: ಮಾದಕವ್ಯಸನಗಳು ಯುವಕರ ಭವಿಷ್ಯ ನಾಶಗೊಳಿಸುವ ಗಂಭೀರ ಸಮಸ್ಯೆಯಾಗಿದೆ. ಇದರಿಂದ ದೂರವಿರುವುದು ಅನಿವಾರ್ಯ. ಸ್ನೇಹಿತರುದ ಮಾದಕ ವಸ್ತುಗಳಿಂದ ದೂರವಿರುವಂತೆ ಎಚ್ಚರಿಕೆ ವಹಿಸಿ. ಈ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಸದಾ ಜನರೊಂದಿಗೆ ಇದೆ ಎಂದು ಉಡುಪಿ ಕರಾವಳಿ ಕಾವಲು ಪಡೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅಭಿಪ್ರಾಯಪಟ್ಟರು.ಅವರು ನಡುಮೊಗೇರು ಗ್ಯಾರೇಜ್ ಮಾಲಕರ ಸಭಾಭವನದಲ್ಲಿ ಜರಗಿದ ಭಾರತ ಸರ್ಕಾರ ಯುವ ಕಾರ‍್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿ.ಎಂ.ಸ್ಪೋರ್ಟ್ಸ್ ಕ್ಲಬ್, ಸಂಗಮ್ ಫ್ರೆಂಡ್ಸ್ ಸರ್ಕಲ್ , ಗ್ಯಾರೇಜು ಮಾಲಕರ ಸಂಘ, ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ತೋಕೂರು ಸಹಕಾರದಿಂದ ಜರಗಿದ ಮಾದಕ ವ್ಯಸನ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಚ್.ಪಿ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೈದ್ಯಾಧಿಕಾರಿ ಸುಜಯ್ ಭಂಡಾರಿ ಮಾದಕವ್ಯಸನದ ದುಷ್ಪರಿಣಾಮಗಳ ವಿವರ ನೀಡಿದರು.ಮುಖ್ಯ ಅತಿಥಿಗಳಾಗಿ ಸುಧಾಕರ್ ಜೆ., ಎಮ್.ದಿವಾಕರ್, ಮುರಳೀಕೃಷ್ಣ, ಎ.ಜನಾರ್ಧನ,…

Read More

ಮುಡಿಪು: ಇಲ್ಲಿನ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿAದ ಜರಗಿತು.ಹಬ್ಬದ ಪ್ರಯುಕ್ತ ಜರಗಿದ ಮೊದಲ ದಿನದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ವಂ. ಡಾ. ಪೀಟರ್ ಪಾವ್ಲ್ ಸಲ್ಡನ್ಹಾ ನೆರವೇರಿಸಿದರೆ, ಭಾನುವಾರ ಮೂರನೇ ದಿನದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಮಂಗಳೂರು ದಕ್ಷಿಣ ವಲಯದ ಪ್ರಧಾನ ಧರ್ಮಗುರುಗಳು, ಪೆರ್ಮನ್ನೂರು ಚರ್ಚಿನ ಧರ್ಮಗುರು ವಂ ಫಾ. ಸಿಪ್ರಿಯನ್ ಪಿಂಟೊ , ವೈಟ್ ಡವ್ಸ್ ಆತ್ಮೀಕ ನಿರ್ದೇಶಕರಾದ ವಂ. ಫಾ. ಆಲ್ವಿನ್ ಡಿಕುನ್ಹಾ, ಬಜಾಲ್ ಚರ್ಚಿನ ಧರ್ಮಗುರು ವಂ. ಫಾ. ಆಂಡ್ರೂö್ಯ ಡಿ,ಸೋಜ, ಮುಡಿಪು ಪುಣ್ಯಕ್ಷೇತ್ರದ ನಿರ್ದೇಶಕ ವಂ. ಫಾ. ಅಸ್ಸಿಸಿ ರೆಬೆಲ್ಲೊ, ವಸತಿ ಧರ್ಮಗುರುಗಳಾದ ವಂ.ಫಾ. ಸಂತೋಷ್ ಮಿನೆಜಸ್ ಬಲಿಪೂಜೆಗೆ ಸಾಕ್ಷಿಯಾದರು.ನೆರೆದ ಸಾವಿರಾರು ಭಕ್ತರು ಹಬ್ಬದ ಸಂಭ್ರಮದಲ್ಲಿ ನೆರೆದು ಅನ್ನಸಂತರ್ಪಣೆ ಸಂತರ್ಪಣೆಯಲ್ಲಿ ಭಾಗಿಯಾದರು.ಗಣ್ಯ ಉಪಸ್ಥಿತಿಯಲ್ಲಿ ವಿಧಾನಸಭಾ ಸಭಾಧ್ಯಕ್ಷ ಯು. ಟಿ. ಖಾದರ್, ಗೇರು ಅಭಿವೃದ್ಧಿ ನಿಗಮದ…

Read More

ಉಳ್ಳಾಲ: ಮಹಿಳೆಯರೇ ಸಂಘಟನಾತ್ಮಕವಾಗಿ, ಒಗ್ಗಟ್ಟಿನಿಂದ ಕೆಲಸ ಮಾಡುವುದು ಸುಲಭವಲ್ಲ, ಇಂತಹ ಸಂದರ್ಭದಲ್ಲಿ ನಿರಂತರ ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಾ, ಸ್ವಂತ ಕಟ್ಟಡದ ಮೂಲಕ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ದುರ್ಗಾವಾಹಿನಿ ಮಹಿಳಾ ಮಂಡಲದ ಮಹಿಳೆಯರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಜರಗಿದ ದುರ್ಗಾವಾಹಿನಿ ಮಹಿಳಾ ಮಂಡಲ ಕುತ್ತಾರು ಇದರ ಬೆಳ್ಳಿಹಬ್ಬ ಮತ್ತು ಸ್ವಂತ ಕಟ್ಟಡದ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲವನ್ನೂ ಮೀರಿ ಸಮಾಜದಲ್ಲಿ ಕೆಲಸವನ್ನು ನಿರ್ವಹಿಸುವುದು ನಾಯಕತ್ವ. ಅಂತಹ ನಾಯಕತ್ವವನ್ನು ದುರ್ಗಾವಾಹಿನಿಯ ಬಹುತೇಕ ಸದಸ್ಯರು ಪೂರೈಸಿದ್ದಾರೆ. ರಾಜಕೀಯ, ಸಾಂಸ್ಕೃತಿಕ, ದೇವಸ್ಥಾನ, ಉತ್ಸವ ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ನಾಯಕತ್ವವನ್ನು ಬೆಳೆಸಿಕೊಂಡು ದುರ್ಗಾವಾಹಿನಿ ಮಂಡಲ ಆದರ್ಶವಾದ ಸಂಘಟನಾತ್ಮಕ ಕೆಲಸವನ್ನು ಮಾಡಿದೆ ಎಂದರುಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ, ಸರಕಾರ ಪಂಚ ಗ್ಯಾರಂಟಿ ಯೋಜನೆಯನ್ನು…

Read More

ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ ೬೬ರ ಕೋಟೆಕಾರು ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ  ಅನಿಲ ಟ್ಯಾಂಕರಿನಿಂದ ಹೈಡ್ರಾಲಿಕ್‌ ಆಸಿಡ್‌  ಸೋರಿಕೆ ಆರಂಭವಾಗಿದ್ದು, ಸ್ಥಳದಲ್ಲಿ  ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದು,  ಎಂಆರ್‌ ಪಿಎಲ್‌ ತಂಡ ಮತ್ತು  ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.ಕಾರವಾರದಿಂದ ಕೊಚ್ಚಿಗೆ  ಹೈಡ್ರಾಲಿಕ್‌ ಆಸಿಡ್‌ ಕೊಂಡೊಯ್ಯುವ ಟ್ಯಾಂಕರಿನಲ್ಲಿ ಘಟನೆ ನಡೆದಿದೆ.  ಟ್ಯಾಂಕರಿನಿಂದ ಅನಿಲ ಸೋರಿಕೆಯಾಗುವುದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ. ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಎಂಆರ್‌ ಪಿಎಲ್‌ ಮತ್ತು ಅಗ್ನಿ ಶಾಮಕ ತಂಡದವರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಸೂಚನೆಗಳನ್ನು ಇಲಾಖೆ ಈವರೆಗೆ ಸ್ಥಳೀಯರಿಗೆ, ವಾಹನಸವಾರರಿಗೆ ನೀಡಿಲ್ಲ.

Read More

ಉಳ್ಳಾಲ: ಮಹಿಳಾ ಬಲ, ಧಾರ್ಮಿಕ, ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿಗಳಿರುವಲ್ಲಿ ದೈವಸಂಕಲ್ಪದಂತೆ ಯಾವುದೇ ಕಾರ್ಯಗಳು ಸಾಂಗವಾಗಿ ನೆರವೇರುವುದು. ಉಳ್ಳಾಲದ ಹನುಮಾನ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಮಂದಿರದ ಆರಂಭದ ಕಾರ್ಯಗಳಲ್ಲಿ ಎಲ್ಲಾ ರೀತಿಯ ಶುಭ ಲಕ್ಷಣಗಳಿರುವುದರಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರದಂತೆಯೇ , ಭವ್ಯ ಮಂದಿರದ ಕೆಲಸವೂ ಪೂರ್ಣಗೊಳ್ಳಲಿದೆ ಎಂದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣೆ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ಹನುಮಾನ್ ನಗರ ಸುಂದರಿಬಾಗ್ ಇಲ್ಲಿನ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಇಲ್ಲಿ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಮಂದಿರದ ನೀಲನಕ್ಷೆಯ ಅನಾವರಣ ಮತ್ತು ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಕಷ್ಟಗಳು ಜಾಸ್ತಿ. ಆದರೆ ಮುಖ್ಯಪ್ರಾಣನೆಂದಲ್ಲಿ ಉಸಿರು. ಆ ಉಸಿರಿಗಾಗಿ ಎಲ್ಲರೂ ಸೇರಿಕೊಂಡು ಜ್ಯೋತಿಯನ್ನು ಬೆಳಗಿಸಿದಾಗ ಹಿರಿಯರಿಗೆ ಗೌರವ ಹಾಗೂ ಪುಣ್ಯ ಕಾರ್ಯವನ್ನು ನೆರವೇರಿಸಿದಂತಾಗುವುದು. ದುಡಿದ ಆದಾಯದ ಒಂದು ಪಾಲನ್ನು ತಿರುಪತಿಗೇ…

Read More

ಉಳ್ಳಾಲ: ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಹಜ. ಈ ಕುರಿತು ಹೆತ್ತವರಲ್ಲಿ, ವೈದ್ಯರ ಜೊತೆಗೆ ಸಮಾಲೋಚಿಸಿದಾಗ ಪರಿಹಾರಗಳು ಸಿಗಲು. ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಾದರಿ ಶಾಲೆ ಹರೇಕಳದ ವಿದ್ಯಾರ್ಥಿನಿಯರಿಗೆ ವೈದ್ಯರ ಜೊತೆಗೆ ಸಮಾಲೋಚನೆಗೆ ವೇದಿಕೆ ಕಲ್ಪಿಸಿಕೊಟ್ಟ ಲೈಫ್ ನೆಸ್ಟ್ ಸಂಸ್ಥೆಯ ಕಾರ್ಯ ಆರೋಗ್ಯಯುತ ಸಮಾಜಕ್ಕೆ ಪೂರಕ ಎಂದು ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ಸರಕಾರದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದ್ದಾರೆ. ಅವರು ಲೈಫ್ ನೆಸ್ಟ್ ಟ್ರಸ್ಟ್ ಮಂಗಳೂರು , ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ , ಸಂಯುಕ್ತಾಶ್ರಯದಲ್ಲಿ ಹರೇಕಳದ ಶ್ರೀ ರಾಮಕೃಷ್ಣ ಹೈಸ್ಕೂಲ್ ನಲ್ಲಿ ಇವರ ಜಂಟಿ ಆಶ್ರಯ ದಲ್ಲಿ ಶ್ರೀ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿ ನಿಯರಿಗಾಗಿ ಆರೋಗ್ಯ ಜಾಗೃತಿ ಯ ಕಾರ್ಯಕ್ರಮ ಹೆಲ್ತಿ ಹ್ಯಾಬಿಟ್ಸ್ ಮತ್ತು ನಿಶಬ್ಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆರೋಗ್ಯದಲ್ಲಿ ಮುಂಜಾಗ್ರತಕಾ ಕ್ರಮಗಳನ್ನು ಅನುಸರಿಸಿದಾಗ ಆರೋಗ್ಯಯುತ ಜೀವನ ಸಾಧ್ಯ. ಮಾದರಿ ಶಾಲೆಯಾಗಿರುವ ಹರೇಕಳ ಶಾಲೆಯನ್ನು ಆಯ್ಕೆಗೊಳಿಸಿರುವ…

Read More

ಉಳ್ಳಾಲ: ಕಾಸರಗೋಡಿನಿಂದ ಮಲೆನಾಡು ಹೆದ್ದಾರಿ ಮೂಲಕ ಮುಡಿಪು ತನಕ ಅಂತಾರಾಜ್ಯ ಖಾಸಗಿ ಬಸ್ ಸಂಚಾರ ಇಂದಿನಿಂದ ಪ್ರಾರಂಭವಾಯಿತು. ಗ್ರಾಮೀಣ ಪ್ರದೇಶದ ಜನತೆಯ ಬಹುಕಾಲದ ಕನಸು ಇಂದು ಬಸ್ ಸಂಚಾರವಾಗುವುದರೊಂದಿಗೆ ನನಸಾಗಿದೆ. ಕಾಸರಗೋಡು ಜಿಲ್ಲೆಯ ಹೆಸರಾಂತ ಬಸ್ ಕಂಪೆನಿ “ಮಹಾಲಕ್ಷ್ಮೀ ಟ್ರಾವೆಲ್ಸ್” ನ ಅತ್ಯಾಧುನಿಕ ಮಾದರಿಯ ಖಾಸಗಿ ಬಸ್ ಗಳೆರಡು ಇಂದು ಬೆಳಗ್ಗಿನಿಂದ ಸರ್ವಿಸ್ ಆರಂಭಿಸಿವೆ. ಒಂದು ಬಸ್ ಪ್ರತಿನಿತ್ಯ ಬೆಳಗ್ಗೆ 6.25 ಕ್ಕೆ ಪೆರ್ಮುದೆಯಿಂದ ಸೇವೆ ಆರಂಭಿಸಿ ಕಾಸರಗೋಡಿಗೆ 7.23 ಕ್ಕೆ ತಲುಪಲಿದೆ. ಕಾಸರಗೋಡಿನಿಂದ 7.42 ಕ್ಕೆ ಸೇವೆ ಆರಂಭಿಸಿ 9 ಗಂಟೆಗೆ ಪೆರ್ಮುದೆ ದಾರಿಯಾಗಿ 10.30 ಕ್ಕೆ ಮುಡಿಪು ಸೇರಲಿದೆ. ಮುಡಿಪುವಿನಿಂದ 11.30 ಕ್ಕೆ ಹೊರಟು ಮಧ್ಯಾಹ್ನ 12.50 ಕ್ಕೆ ಪೆರ್ಮುದೆ ಮೂಲಕ 1.48 ಕ್ಕೆ ಕಾಸರಗೋಡಿಗೆ ತಲುಪಲಿದೆ. ಅಪರಾಹ್ನ 2.05ಕ್ಕೆ ಕಾಸರಗೋಡಿನಿಂದ ಹೊರಟು 3.03 ಕ್ಕೆ ಪೆರ್ಮುದೆ ಮೂಲಕ ಸಂಜೆ 4.30 ಕ್ಕೆ ಮುಡಿಪು ತಲುಪಲಿದೆ. ಮುಡಿಪಿನಿಂದ 5.05 ಕ್ಕೆ ಹೊರಟು ಪೆರ್ಮುದೆಗೆ 6.25 ಕ್ಕೆ ತಲುಪಿ ಕಾಸರಗೋಡಿಗೆ…

Read More

ಕೈರಂಗಳ: ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಕಳೆದ ಮೂರು ವರುಷಗಳಿಂದ ಕೃಷಿ ಮೇಳವನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕೃಷಿ ಮೇಳದೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಡಿ. 6,7ಮತ್ತು 8ರಂದು ಶಾರದಾ ಗಣಪತಿ ವಿದ್ಯಾಕೇಂದ್ರದ ಮೈದಾನದಲ್ಲಿ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಹಾಗೂ ಕೃಷಿ ಮೇಳವನ್ನು ಸ್ಥಳೀಯರ ಸಹಕಾರದೊಂದಿಗೆ ನಡೆಯಲಿದೆ. ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಲಾ ಸಂಚಾಲ?ಕರಾದ ಟಿ .ಜಿ .ರಾಜಾರಾಮ ಭಟ್ ರಾಜ್ಯಮಟ್ಟದ ಶಿಕ್ಷಣ ,ಉದ್ಯೋಗ ,ಕೃಷಿ ಮೇಳ ದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯ ಬಳಿಕ ಯಾವ ರೀತಿಯ ವಿದ್ಯಾಭ್ಯಾಸ ಮತ್ತು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಶಿಕ್ಷಣ ತಜ್ಞರು ಮತ್ತು ಉದ್ಯೋಗ ತಜ್ಞರು ಮಾಹಿತಿಗಳನ್ನು ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಶ್ರೇಷ್ಠ ಭಾರತ್ ಪರಿಕಲ?್ಪನೆಯ ಹಿನ್ನೆಲೆಯಲ್ಲಿ ಕೃಷಿಯನ್ನು ಯಾವ ರೀತಿಯಲ್ಲಿ ಮುನ್ನಡೆಸಬಹುದೆನ್ನುದರ ಕುರಿತು ಕೃಷಿ ತಜ್ಞರುಗಳು…

Read More

ಉಳ್ಳಾಲ:ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರವು ಪೃಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್ನ ರಿಯಲ್ ಸ್ಟಾರ್ ನಟ ,ನಿರ್ದೇಶಕ ಉಪೇಂದ್ರ ಹೇಳಿದರು. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿ.20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ “UI”ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅವರು ಬಹು ನಿರೀಕ್ಷಿತ “UI”ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ.ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪೃಕೃತಿ ರಮನೀಯವಾಗಿದೆ.ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು.UI ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಲಹರಿ ವೇಲು,ನವೀನ್ ಮನೋಹರ್ ,ರಾಜೇಶ್ ಭಟ್ ಜತೆಗಿದ್ದರು.ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನ ಕ್ಷೇತ್ರದ ಪರವಾಗಿ ಅಭಿನಂದಿಸಿದರು.

Read More

ಉಳ್ಳಾಲ: ಇತ್ತೀಚೆಗೆ ಫಲಾಹ್ ಪ್ರೌಢಶಾಲೆ ತಲಪಾಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಉತ್ಸವದಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಲಾವಣ್ಯ, ದೀಕ್ಷಿತಾ, ಪ್ರಜನ್ಯ, ಸನಿಧ್ಯಾ, ಅನನ್ಯ, ಶಬರಿ, ಪ್ರಜ್ವಲ್,ಸನತ್, ಸುಜನ್, ಪ್ರಣಾಮ್ ಮುಂತಾದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು ಹಾಗೂ ಈ ಸಂದರ್ಭದಲ್ಲಿ ತರಬೇತು ಶಿಕ್ಷಕರುಗಳಾದ ತ್ಯಾಗಮ್ ಹರೇಕಳ, ಸ್ಮಿತಾ, ರವಿಶಂಕರ್ ಇವರುಗಳು ಉಪಸ್ಥಿತರಿದ್ದರು. ಇವರುಗಳಿಗೆ ವಿದ್ಯಾ ಸಂಸ್ಥೆ ಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Read More